• search

'ಅಣ್ಣಾಬಾಂಡ್' ಗೆ ಕನ್ನಡದ ಕೋಟ್ಯಾಧಿಪತಿಗಳ ಲಗ್ಗೆ

By * ಶಂಭೋ ಶಂಕರ
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  kannadada-kotyadipathi-viewers-to-watch-annabond
  ಕಠಾರಿ ವೀರರು, ಗಾಡ್ ಫಾದರುಗಳು ತಮ್ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುವ ಭರದಲ್ಲಿ ಕಾಲೆಳೆದಾಟ ಆಡುತ್ತಿರುವಾಗ ಕನ್ನಡ ಚಿತ್ರೋದ್ಯಮದ 'ಉಕ್ಕಿನ ಮಹಿಳೆ' ಪಾರ್ವತಮ್ಮ ರಾಜ್ ಕುಮಾರ್ 'ಯಾರೇ ಕೂಗಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ' ಎನ್ನುತ್ತಾ ತಮ್ಮ ಮುದ್ದಿನ ಕಂದ ಪುನೀತ್ ರಾಜ್ ಕುಮಾರ್ ಅಭಿನಯದ 'ಅಣ್ಣಾಬಾಂಡ್' ಸಿನಿಮಾವನ್ನು ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ಸ್ವಾಗತಾರ್ಹ.

  ಪುನೀತ್ ಅಭಿನಯದ 'ಅಣ್ಣಾಬಾಂಡ್' ನಿಜಕ್ಕೂ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ನಾಯಕನಟ ಪುನೀತ್ ಗೆ ಈ ಬಾರಿ ಅಪಾರ ಸಂಖ್ಯೆಯಲ್ಲಿ ಹೊಸ ಅಭಿಮಾನಿಗಳೂ ಸೇರ್ಪಡೆಯಾಗಿದ್ದಾರೆ. ಯಾರಪ್ಪ ಅವರು ಎಂದು ಆಶ್ಚರ್ಯಚಕಿತರಾದಿರಾ!? ಅವರೇ ಸ್ವಾಮಿ, ಕನ್ನಡದ ಕೋಟ್ಯಾಧಿಪತಿಗಳು. ಅದೇ ಸ್ವಾಮಿ, ಪುನೀತ್ ರಾಜ್ ಕುಮಾರ್ ಅವರು ಸುವರ್ಣ ಚಾನೆಲಿನಲ್ಲಿ ನಡೆಸಿಕೊಡುವ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಅಪಾರ ವೀಕ್ಷಕ ವರ್ಗ.

  ಇಲ್ಲಿ ಇನ್ನೂ ಯಾರೂ ಕೋಟ್ಯಾಧಿಪತಿ ಆಗಿಲ್ಲವಾದರೂ ಕಾರ್ಯಕ್ರಮ ನೋಡುತ್ತಿರುವವರ ಪೈಕಿ ಕನಿಷ್ಠ ಶೆ. 90ರಷ್ಟು ಮಂದಿ ಅದಾಗಲೇ ಪುನೀತ್ ನಡೆಸಿಕೊಡುತ್ತಿರುವ ರೀತಿನೀತಿಗೆ ಫಿದಾ ಆಗ್ಬಿಟ್ಟಿದ್ದಾರೆ. ಪುನೀತ್ ಜತೆ ನಮ್ದೂಕೆ ಪ್ಯಾರ್ಗೆ ಆಗ್ಬುಟೈತೆ ಅಂತಿದ್ದಾರೆ. ಅಷ್ಟೊಂದು ಸೊಗಸಾಗಿ ಅವರು 'ಕನ್ನಡದ ಕೋಟ್ಯಾಧಿಪತಿ' ಸಾದರಪಡಿಸುತ್ತಿದ್ದಾರೆ. ಇನ್ನು ಈ ಶೇ. 90ರಷ್ಟು ಮಂದಿ 'ಅಣ್ಣಾಬಾಂಡ್'ಗೆ ಮನಸೋಲುತ್ತಾರಾ? 'ಅಣ್ಣಾಬಾಂಡ್' ಸಿನಿಮಾ ನೋಡಲು ಥಿಯೇಟರ್ ವರೆಗೂ ಹೋಗುತ್ತಾರಾ? ಅಂದರೆ ಖಂಡಿತಾ ಎಂಬ ಉತ್ತರ ಸಿಗುತ್ತದೆ.

  ಹಾಗಾಗಿ ಇವರೇ ಆ ಹೊಸ ವೀಕ್ಷಕರು. ಸೋ, ಇವರೆಲ್ಲ ಥಿಯೇಟರ್ ಗೆ ಲಗ್ಗೆ ಹಾಕಿದರೆ 'ಅಣ್ಣಾಬಾಂಡ್' ಖಂಡಿತ ಯಶಸ್ವಿಯಾಗುತ್ತದೆ ಎಂಬುದು ನನ್ನ ವಿಶ್ವಾಸ. ಅಷ್ಟೇ ಅಲ್ಲ. ಮೊದಲ ನೋಟದಲ್ಲೇ ಪ್ಯಾರ್ಗೆ ಆಗ್ಬುಟೈತೆ ಅನ್ನೋ ಹಾಗೆ ಕನ್ನಡದ ಕೋಟ್ಯಾಧಿಪತಿ ಮೊದಲ ವರ್ಷದಲ್ಲೇ ಪುನೀತ್ ಹೈ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದಾರೆ. ಮುಂದಿನ ವರ್ಷಗಳಲ್ಲಿ ಕನ್ನಡದ ಕೋಟ್ಯಾಧಿಪತಿ ಮನೆ ಮಾತಾಗುವುದಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಕನ್ನಡದ ಕೋಟ್ಯಾಧಿಪತಿ ನೋಡುಗರು ಪುನೀತ್ ಸಿನಿಮಾಭಿಮಾನಿಗಳಾಗಿ convert ಆಗುವುದಂತೂ ಖಂಡಿತ. ಅಷ್ಟರಮಟ್ಟಿಗೆ ಪುನೀತ್ ಸಿನಿ ಪಯಣಕ್ಕೆ ಕನ್ನಡದ ಕೋಟ್ಯಾಧಿಪತಿ ಇಂಬು ನೀಡಲಿದೆ. ಅವರ ಜೈತ್ರ ಯಾತ್ರೆಗೆ ಅಣ್ಣಾಬಾಂಡ್ ಮುನ್ನುಡಿ ಬರೆಯಲಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Power Star Puneeth Rajkumar's movie 'Annabond' will release on tomarrow (May1). At this juncture Puneeth Rajkumar is blessed with new fans aka Kannadada Kotyadipathi viewers says our reader Shambho Shankara from Basavangudi, Bangalore.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more