• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಯಾ ಸಿಎಂ ಆಗಿರ್ಬೇಕಾದ್ರೆ ಯಡ್ಡಿ ಯಾಗಾಕ್ಬಾರ್ದು

By * ಯು ವಿಠಲ್ ಮಾಸ್ತರ್, ಬೈಕಂಪಾಡಿ
|
BS Yeddyurappa
ದೇಶದಲ್ಲಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಿಯೇ ಮಾಡುತ್ತೇನೆಂಬ ಹೆಬ್ಬಯಕೆಯಲ್ಲಿದ್ದ ಯಡಿಯೂರಪ್ಪ ಸಿಎಂ ಹುದ್ದೆ ಕಳೆದುಕೊಂಡು ಜೈಲುಪಾಲಾಗಿದ್ದು ಇತಿಹಾಸ. ರಾಜಕಾರಣಿಗಳು ಅಂದ ಮೇಲೆ ಆರೋಪಗಳು ಬರುವುದು ಸರ್ವೇ ಸಾಮಾನ್ಯ.

ಈಗ ರಾಜ್ಯವಾಳುತ್ತಿರುವ ಸರ್ಕಾರದ ಪ್ರಮುಖ ಸಚಿವರೆಲ್ಲರೂ ಆರೋಪ ಹೊತ್ತವರೇ, ಕಳಂಕಿತರೆಂದು ಮಾಧ್ಯಮಗಳಿಂದ ಮಾನ ಕಳೆದುಕೊಂಡವರೇ ಆಗಿದ್ದಾರೆ.

ಜಯಾ, ಚಿದು ಉದಾಹರಣೆ : ಖಾಲಿ ಆರೋಪ ಹೊತ್ತವರೆಲ್ಲರನ್ನು ಕಾಯ್ದೆಯ ಪ್ರಕಾರ ಅಪರಾಧಿಗಳೆಂದು ಪರಿಗಣಿಸಲಾಗುವುದಿಲ್ಲ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೋಟ್ಯಂತರ ರೂಪಾಯಿ ದೊಡ್ಡ ಹಗರಣಗಳಿಗೆ ಸಿಲುಕಿಕೊಂಡಿದ್ದರೂ ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದೆ ಅದೇ ಹುದ್ದೆಯಲ್ಲಿ ಮುಂದುವರಿಯುತ್ತಾ ಇದ್ದಾರೆ. ಜಯಲಲಿತಾರನ್ನು ಅಲ್ಲಿನ ಜನ ಕೂಡಾ ಒಪ್ಪಿಕೊಂಡಿದ್ದಾರೆ

ಕೇಂದ್ರದಲ್ಲಿನ ಗೃಹ ಸಚಿವರಾದ ಚಿದಂಬರಂ 2ಜಿ ಹಗರಣದ ಆರೋಪಗಳಿದ್ದರೂ ಇನ್ನೂ ಕೂಡಾ ಸಚಿವ ಸ್ಥಾನದಲ್ಲಿಯೇ ಮುಂದುವರಿಯುತ್ತಾ ಇದ್ದಾರೆ. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ
ಈಗ ಕೇಂದ್ರದ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ, ಡಿ ನೋಟಿಫಿಕೇಷನ್, ಡಿ ರಿಸರ್ವ ಎಲ್ಲವೂ ಮುಂದೆ ಬಂದ ಸಿಎಂಗಳಿಗೆ ಮಾದರಿಯಾಯಿತು. ಆದರೂ ಕೃಷ್ಣರನ್ನು ಅಲ್ಲಾಡಿಸಲು ಸಾಧ್ಯವಾಗುತ್ತಿಲ್ಲ.

ನಾಳಿನ ಭವಿಷ್ಯ ಅಕ್ರಮ ಅದಿರು ರಫ್ತುಗಳಿಂದಾಗಿ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ನಷ್ಟ ಉಂಟು ಮಾಡಿ ಹಗರಣಗಳ ಆರೋಪಗಳಿಗೆ ಗುರಿಯಾಗಿದ್ದು ಇನ್ನೂ ಸಚಿವ ಸ್ಥಾನ ಬಿಡಲಿಲ್ಲ. ಇವರ್‍ಯಾರಿಗೂ ಇಲ್ಲದ ಶಿಕ್ಷೆ ಕೇವಲ ಬಿಜೆಪಿ ಪಕ್ಷದಲ್ಲಿಯ ಯಡಿಯೂರಪ್ಪ ಮತ್ತು ಅವರ ಸಚಿವ, ಶಾಸಕರಿಗೆ ಮಾತ್ರ ಯಾಕೆ ?

ಅವರ ಆಡಳಿತಾವಧಿಯಲ್ಲಿ ಹಲವಾರು ಉಪಚುನಾವಣೆಗಳು ನಡೆದಾಗಲೂ ಹೆಚ್ಚಿನ ಎಲ್ಲದರಲ್ಲಿಯೂ ಗೆಲುವನ್ನು ಪಡೆಯಲು ಅವರ ನಾಯಕತ್ವವೇ ಕಾರಣ ಎಂಬುದನ್ನು ಯಾರೂ ಮರೆಯುವಂತಿಲ್ಲ. ಜೈಲಿನಿಂದ ಹೊರ ಬಿದ್ದ ನಂತರವೂ ಕೊಪ್ಪಳದಲ್ಲಿ ಬಿಜೆಪಿ ಏಕೆ ಗೆಲುವು ಸಾಧಿಸಿತು, ಬಳ್ಳಾರಿಯಲ್ಲಿ ಏಕೆ ನೆಲಕಚ್ಚಿತು ಎಂಬುದು ಎಲ್ಲರಿಗೂ ತಿಳಿದಿದೆ.

ಈಗ ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಹೊಸತ್ತೇನೂ ಅಭಿವೃದ್ಧಿ ಕಾರ್ಯಕ್ಕೆ ತೊಡಗಿಲ್ಲ. ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ಅನುಭವಿ ರಾಜಕಾರಣಿ ಯಡಿಯೂರಪ್ಪ ನವರ ನಾಯಕತ್ವ ಇದ್ದರೆ ಮಾತ್ರ ಬಿಜೆಪಿಗೆ ಹಾಗೂ ಕರ್ನಾಟಕ ಭವಿಷ್ಯಕ್ಕೆ ಒಳ್ಳೆಯದು.

ಇಲ್ಲದಿದ್ದರೆ, ಅತಂತ್ರ ವಿಧಾನಸಭೆ, ಆಂತರಿಕ ಕಿತ್ತಾಟ, ಕುದುರೆ ವ್ಯಾಪಾರ, ಪುಡಿ ಪಕ್ಷಗಳ ದರ್ಬಾರಿನಲ್ಲಿ ಕರ್ನಾಟಕ ನಲುಗಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಯಡಿಯೂರಪ್ಪ ಸುದ್ದಿಗಳುView All

English summary
If you list out tainted politicians in India, one can see many accused in illegal activities. Like Jayalalithaa all tainted CM are continuing their service except Yeddyurappa. why Yeddyurappa is made Scapegoat by BJP asks citizen reporter Sridhar Kedlaya, Udupi,

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more