ಶೋಭಾ ಮೊದ್ಲು ಕನ್ನಡಿಯಲ್ಲಿ ಮುಖ ನೋಡ್ಕೊಳ್ಳಿ

ರಾಜ್ಯದಲ್ಲಿ ಶೇ.25 ವಿದ್ಯುತ್ ಸೋರಿಕೆಯಾಗುವುದನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದನ್ನು ಮುಚ್ಚಿಕೊಳ್ಳಲು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಬೇಜವ್ದಾರಿ ಹೇಳಿಕೆಯನ್ನು ನೀಡುತ್ತಿದ್ದಾರೆ.
ರಾಜ್ಯದ ವಿದ್ಯುತ್ ಸಮಸ್ಯೆಗೆ ರಾಜ್ಯ ಸರ್ಕಾರವೇ ನೇರ ಹೋಣೆಯಾಗಿದ್ದು, ಅಲ್ಲದೆ ರಾಜ್ಯಕ್ಕೆ ನೀಡಬೇಕಾದ ಕಲ್ಲಿದ್ದಲನ್ನು ನೀಡದೆ, ಖಾಸಗಿಯವರಿಗೆ ಕೇಂದ್ರ ಮಾರಾಟ
ಮಾಡುತ್ತಿದೆ ಎನ್ನುವುದು ಮತ್ತು ಕುಡಿಯುವ ನೀರು, ನೀರಾವರಿ ಯೋಜನೆ ಅಭಿವೃದ್ಧಿಗೆ ಅಡ್ಡಗಾಲು ಆಗಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು.
ಕೇಂದ್ರ ಸರ್ಕಾರವು ನೀಡಿದ ಎಲ್ಲಾ ಅನುದಾನಗಳ ಸದ್ಬಳಕೆ ಮಾಡದೆ ಇರುವುದು, ಆ ಅನುದಾನ ಬಳಕೆಯಾಗದ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ವಾಪಸಾಗಿರುವುದು ಖಂಡನೀಯ. ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲದೆ ಜನತೆಗೆ ಸರಿಯಾದ ಆಡಳಿತ ನೀಡದೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಇಂತಹ ಹೇಳಿಕೆಗಳನ್ನು ಕರಂದ್ಲಾಜೆ ಮತ್ತು
ಈಶ್ವರಪ್ಪ ನೀಡುತ್ತಿದ್ದಾರೆ.
ಇತರೆ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಸೆಸ್ಸ್‌ಗಳನ್ನು ಕಡಿಮೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ರಾಜ್ಯ ಸರ್ಕಾರ ಸೆಸ್ಸ್‌ನ್ನು ಕಡಿಮೆ ಮಾಡದೆ ಸಾರ್ವಜನಿಕರಿಗೆ ಹೊರೆಯನ್ನು ಹೆಚ್ಚುಮಾಡಿದೆ.
ಈಶ್ವರಪ್ಪನವರು ಇಂತಹ ಹೇಳಿಕೆ ನೀಡುವುದರ ಬದಲು ಸರಿಯಾದ ರೀತಿಗಳಲ್ಲಿ ರಾಜ್ಯದ ಜನತೆಗೆ ವಿದ್ಯುತ್ ಪೂರೈಸುವುದಕ್ಕೆ ತಮ್ಮ ಸರ್ಕಾರಕ್ಕೆ ಸೂಚನೆ ನೀಡಬೇಕು.












Click it and Unblock the Notifications