ಸಚಿವೆ ಶೋಭಾ ಕರಂದ್ಲಾಜೆ ಆಸ್ತಿ ತನಿಖೆಯಾಗಲಿ

ಕೆಐಎಡಿಬಿ ಹಗರಣ, ಹವಾಲಾ, ಸ್ವಜನ ಪಕ್ಷಪಾತ, ಹಣದ ಅಕ್ರಮ ಚಲಾವಣೆ (ಮನಿ ಲಾಂಡರಿಂಗ್) ಸೇರಿದಂತೆ ಹಲವು ಹಗರಣದಲ್ಲಿ ಯಡಿಯೂರಪ್ಪ ಅವರ ಜೊತೆ ಸಹಭಾಗಿಯಾಗಿರು ಆರೋಪ ಶೋಭಾ ಅವರ ಮೇಲಿದೆ.
ಬಡಪಾಯಿ ಪ್ರಜೆಯೊಬ್ಬ ಅಕ್ರಮವಾಗಿ ಎರಡು ಸಾವಿರ ಬೆಲೆಯ ಗ್ಯಾಸ್ ಸಿಲಿಂಡರನ್ನು ತನ್ನ ಮನೆಯಲ್ಲಿ ಅನ್ನ ಬೇಯಿಸಲು ಉಪಯೋಗ ಮಾಡುವುದು ಶೋಭಾಗೆ ಬಹುದೊಡ್ಡ ಅಕ್ರಮವಾಗಿ ಕಂಡರೆ, ಈ ರಾಜ್ಯದ ಜನತೆಯ
ತೆರಿಗೆಯ ಹಣವನ್ನು ಲೂಟಿ ಮಾಡಿ ಈ ರೀತಿ ಬೇನಾಮಿ ಸಂಪತ್ತನ್ನು ಸಂಪಾದಿಸಿರುವುದು ಎಷ್ಟು ಸಮಂಜಸ ? ಇಂಥವರು ಮಂತ್ರಿಯಾಗಿ ಮುಂದುವರಿಯಲು ಅರ್ಹರೆ ?
ರಾಜಕಾರಣಿಗಳೆಂದರೆ ಅಸಹ್ಯ ಪಡುವ ಈ ಕಾಲಘಟ್ಟದಲ್ಲಿ ಪ್ರಾಮಾಣಿಕವಾಗಿ ಶ್ರದ್ದೆಯಿಂದ ಕೆಲಸ ಮಾಡುವ ನನ್ನ ಬಗ್ಗೆ ಹಗುರವಾಗಿ, ಅವಹೇಳನಕಾರಿಯಾಗಿ ಸಂಶಯ ಮೂಡುವ ರೀತಿಯಲ್ಲಿ ಬಿಂಬಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಮಾಧ್ಯಮಗಳಿಗೆ ಬಹಿರಂಗ ಪತ್ರ ಕಳಿಸಿದ್ದರು.
ಆದರೆ, ತಮಗೆ ಆಪ್ತರಾದ ಎಂಎಲ್ ಸಿ ಭಾರತಿ ಶೆಟ್ಟಿ ಸಂಗಡ ಅನೇಕ ಭೂ ಖರೀದಿ, ಹಂಚಿಕೆ ಅವ್ಯವಹಾರ ನಡೆಸಿದ್ದರ ಫಲವೇ ಮೈಸೂರು ಉಸ್ತುವಾರಿ ಕಳೆದುಕೊಳ್ಳಲು ಕಾರಣ ಎನ್ನಲಾಗಿದೆ.
ಶೋಭಾ ಬಂದ ಮೇಲೆ ವಿದ್ಯುತ್ ಬೆಲೆ ಇಳಿದಿಲ್ಲ, ಗ್ಯಾಸ್ ಟ್ರಬಲ್ ಗೆ ಸಿಕ್ಕು ಜನತೆ ನರಳದ ದಿನಗಳಿಲ್ಲ. ಶಿಸ್ತಿಗೆ ಹೆಸರಾದ ಪಕ್ಷದ ನಾಯಕಿಯೊಬ್ಬರು ತಾವು ಎಲ್ಲ ರೀತಿಯಿಂದಲೂ ಸರಿ ಇದ್ದೇನೆ ಎನಿಸಿದರೆ ಆಸ್ತಿ ವಿವರ ಬಹಿರಂಗಗೊಳಿಸಲಿ. ಇಲ್ಲವೇ ಲೋಕಾಯುಕ್ತರು ಈ ಬಗ್ಗೆ ತನಿಖೆ ಕೈಗೊಳ್ಳಲಿ.












Click it and Unblock the Notifications