ಅಕ್ರಮ ಎಲ್ ಪಿಜಿ: ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ?

LPG connection Chaos in Udupi
ಅಕ್ರಮ ಎಲ್.ಪಿ.ಜಿ. ಸಂಪರ್ಕ ತಡೆಯಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವುದು ವಿಪರ್ಯಾಸ. ಅಕ್ರಮಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಮೂಡುವುದು ಸಹಜ!

ಪ್ರತ್ಯಕ್ಷವಾಗಿ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯೇ ನೇರ ಹೊಣೆ ಹೊತ್ತು ಕೊಳ್ಳಬೇಕು. ಇಲ್ಲದಿದ್ದರೆ ಜನತೆಯನ್ನು ತೊಂದರೆಗೆ ಸಿಲುಕಿಸಿರುವ ಕಾನೂನು ರೂಪಿಸಿದ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರೇ ಇದರ ಹೊಣೆ ಹೊರಬೇಕು.

ಆಹಾರ ಇಲಾಖೆಯವರು ಗ್ರಾಹಕ ನೀಡಿದ ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೇ ಅನಿಲ ಸಂಪರ್ಕ ನೀಡಿರುವುದು (ಲಂಚದ ಕರಾಮತ್ತು ಕೆಲಸ ಮಾಡಿರಲು ಸಾಕು) ಇನ್ನು ಸರ್ಕಾರ ಅನಿಲ ಸಂಪರ್ಕ ಪೂರೈಕೆ ಮಾಡಲು ಬೇಕಾಬಿಟ್ಟಿಯಾಗಿ ತಮ್ಮ ಆಪ್ತರಿಗೆ (ಶಾಸಕರಿಗೆ/ಅವರ ಆಪ್ತರಿಗೆ) ನೀಡಿರುವುದು ಕೂಡ ಕಾರಣ.

ಪಾಪ ಶ್ರೀ ಸಾಮಾನ್ಯ ಈ ಒಂದು ಅನಿಲ ಸಂಪರ್ಕಕಕ್ಕೆ ಎಷ್ಟೊಂದು ಸಮಸ್ಯೆ ಎದುರಿಸಿರಬಹುದು. ಎಷ್ಟು ವರ್ಷಗಳಿಂದ ಹಣಕ್ಕಾಗಿ ಕಷ್ಟಪಟ್ಟಿರಬಹುದು. ಅಲ್ಲದೆ ಎಷ್ಟು ದಿನಗಳಿಂದ ಆ ಇಲಾಖೆ, ಈ ಇಲಾಖೆ ಎಂದು ಅಲೆದಾಟದ ಶಿಕ್ಷೆ ಬೇರೆ ಅನುಭವಿಸಿರಬೇಕು. ಈಗ ಮತ್ತೊಮ್ಮೆ ಈ ಶಿಕ್ಷೆಗೆ ಒಳಗಾಗಿರಬೇಕು.

ಇದು ಜನಪರ ಸರ್ಕಾರ ಕೊಡುಗೆಗೆ ಒಂದು ಉದಾಹರಣೆ ಅಷ್ಟೇ. ಆದರೆ ಈ ಅಕ್ರಮಕ್ಕೆ ಕಾರಣರಾದ ಇಲಾಖೆಯ ಸರಕಾರಿ ಅಧಿಕಾರಿಗಾಗಲಿ, ಅನಿಲ ಹಂಚಿಕೆದಾರರಿಗೆ ಮಧ್ಯವರ್ತಿಗಳಿಗೆ ಶಿಕ್ಷೆ ಆಗದಿರುವುದು ಪ್ರಜಾಪ್ರಭುತ್ವದ ಅಣಕವೇ ಸರಿ. ಅನಿಲ ಸಂಪರ್ಕ ಅಕ್ರಮ ವಾಗಿದ್ದರೆ ಅದಕ್ಕೆ ಗ್ಯಾಸ್ ಏಜೆನ್ಸಿ ನೇರ ಕಾರಣ. ಅಡುಗೆ ಅನಿಲ ಬಳಕೆ ಇನ್ನೂ ಎಲ್ಲೆಡೆ ಲಭ್ಯವಿಲ್ಲ. ಹಂಚಿಕೆಯಲ್ಲೂ ಮೋಸ ನಡೆದಿರಲಿಕ್ಕೆ ಸಾಕು.

ಇಲಾಖೆ, ಏಜೆನ್ಸಿ ಹಾಗೂ ಸರ್ಕಾರ ಮೊದಲು ತಪ್ಪುಗಳನ್ನು ತಿದ್ದುಕೊಂಡು ನಂತರ ಜನರ ಬಳಿಗೆ ಬಂದರೆ ಗೊಂದಲ ಶೀಘ್ರವೇ ಪರಿಹಾರವಾಗುತ್ತದೆ. ಇಲ್ಲದಿದ್ದರೆ. ಆಹಾರ ವೆಬ್ ಸೈಟ್ ನ ದೋಷಗಳಂತೆ ದಿನಕ್ಕೊಂದು ಮಾಹಿತಿ ನ್ಯೂನ್ಯತೆ ಅನುಭವಿಸಿ, ಕಡೆಗೆ ಎಲ್ ಪಿ ಜಿ ಸಂಪರ್ಕವೇ ಬೇಡ ಎನಿಸುವಷ್ಟು ಹಿಂಸೆ ಆಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+