2011 ಡಿಸೆಂಬರ್ ಒಳಗೆ ಚುನಾವಣೆ ಭವಿಷ್ಯ ನಿಜವಾಗುವುದೇ?

Kodimutt Seer Prediction
"ನೀಚನಿಗೆ ದೊರೆತನ, ಹೇಡಿಗೆ ಹಿರಿತನ, ಅವಿವೇಕಿಗೆ ಮಠಾಧಿಪತಿ ಸ್ಥಾನ ಸಿಕ್ಕರೆ ನಾಡು ಹೇಗಿರುತ್ತೋ ನಮ್ಮ ನಾಡು ಕೂಡಾ ಹಾಗೆ ಇದೆ". 2011ರ ಡಿಸೆಂಬರ್ ಒಳಗೆ ಚುನಾವಣೆ ನಡೆಯಲಿದೆ ಎಂದು ಈ ಹಿಂದೆ ಸ್ವಾಮೀಜಿಗಳು ಹೇಳಿದ್ದರು. ಅದರ ಬಗ್ಗೆ ಕಾದು ನೋಡಬೇಕಿದೆ. ಜಲಪ್ರಳಯ, ಅಡ್ವಾಣಿಗೆ ಪ್ರಧಾನಿ ಹುದ್ದೆ ಸೇರಿದಂತೆ ಅನೇಕ ರಾಷ್ಟ್ರನಾಯಕರ ಭವಿಷ್ಯ ಬಗ್ಗೆ ಹೇಳಿರುವ ಕೋಡಿಮಠದ ತಾಳೆಗರಿಯ ಮತ್ತೊಮ್ಮೆ ನಿಜವಾಗಿದೆ.

ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಗಮನಿಸಿದರೆ, ಯಡಿಯೂರಪ್ಪ ಅವರು ವಿಧಾನಸಭೆ ವಿಸರ್ಜನೆ ಮಾಡಲು ಸಾಧ್ಯವಿಲ್ಲ. ಆದರೆ, ತಮ್ಮ ಆಪ್ತರನ್ನು ಕರೆದುಕೊಂಡು ಮುಂಬರುವ ಸಿಎಂಗೆ ಮುಳುವಾಗಬಹುದು. ಕರ್ನಾಟಕದಲ್ಲಿ ಬಿಜೆಪಿಗೆ ಯಡಿಯೂರಪ್ಪ ಅವರೇ ಕಟಂಕವಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದ್ದು, ಅವಧಿಗೂ ಮುನ್ನ ಚುನಾವಣೆ ನಡೆದರೆ ಇದರಲ್ಲಿ ಆಶ್ಚರ್ಯವಿಲ್ಲ.

ಕರ್ನಾಟಕ ರಾಜ್ಯ ಸರ್ಕಾರದ ಅಸ್ಥಿರತೆ, ಯಡಿಯೂರಪ್ಪ ಅವರ ಭಂಡತನದ ಫಲದ ಬಗ್ಗೆ ಕೋಡಿಮಠದ ಸ್ವಾಮೀಜಿಗಳು ತಮ್ಮ ಉತ್ತರ ಕರ್ನಾಟಕ ಪ್ರವಾಸದ ಸಮಯದಲ್ಲಿ ಹೇಳಿದ ಭವಿಷ್ಯ ಸತ್ಯವಾಗಿದೆ. ಆದರೆ, ಸರ್ಕಾರ ಅಳಿವು ಉಳಿವಿನ ಬಗ್ಗೆ ಸ್ಪಷ್ಟನೆ ನೀಡದ ಸ್ವಾಮೀಜಿ ಕಾದು ನೋಡಿ ಎಂದಿದ್ದಾರೆ.

ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡಿದ ಆರೋಪ ಹೊತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದರು.

ಕೆಲ ತಿಂಗಳ ಹಿಂದೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಶಿಫಾರಸು ಮಾಡಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ತಮ್ಮನ್ನು ಅವರ ನಿವಾಸಕ್ಕೆ ಆಹ್ವಾನಿಸಿ ಭವಿಷ್ಯ ಕೇಳಿದ್ದರು. ಈಗ ನೀವು ಬಚಾವಾದ್ರೂ, ಮುಂದೆ ಸಿಎಂ ಗಾದಿ ಉಳಿಸಿಕೊಳ್ಳುವುದು ಕಷ್ಟ ಎಂದು ಹೇಳಿದ್ದೆ. ಅದರಂತೆ ನಡೆಯಲಿದೆ ಎಂದು ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠದಲ್ಲಿ ಶ್ರೀಗಳು ಹೇಳಿದ್ದು ಈಗ ನಿಜವಾಗಿದೆ.

ಕಾಲ ಮಿಂಚಿ ಹೋದ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವೆ ಶೋಭಾ ಕರಂದ್ಲಾಜೆ ನಮ್ಮನ್ನು ಸಂಪರ್ಕಿಸಿದ್ದಾರೆ. ಹಲವಾರು ಅಕ್ರಮಗಳನ್ನು ಮಾಡಿದ ಮೇಲೆ ಅದರ ಫಲವನ್ನು ಉಣ್ಣಲೇ ಬೇಕು ಎಂದರು. ಬಿಜೆಪಿ ಸರ್ಕಾರ ಉಳಿಯಲಿದೆಯೇ ಇಲ್ಲವೇ, ಮಧ್ಯಂತರ ಚುನಾವಣೆ ನಡೆಯಲಿದೆಯೇ ಎಂಬುದನ್ನು ಸಂಕ್ರಾಂತಿವರೆಗೆ ಕಾದು ನೋಡಿ ಎಂದು ಸ್ವಾಮೀಜಿ ನುಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+