ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ವಿರೋಧ ಬೇಡ

By * ಡಾ.ಎಂ.ಚಿದಾನಂದಮೂರ್ತಿ, ಬೆಂಗಳೂರು.
|
Google Oneindia Kannada News

Dr. Chimu Letter on Bhuvaneshwari Statue
ಅಮೆರಿಕದ ನ್ಯೂಯಾರ್ಕ್ ಬಂದರಿನ ಸ್ವಾತಂತ್ರ್ಯ ದ್ವೀಪದಲ್ಲಿರುವ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಒಂದು ಅತಿಭವ್ಯ ರಾಷ್ಟ್ರೀಯ ಸ್ಮಾರಕ. ವಿಶ್ವದ ಅತಿದೊಡ್ಡ ಆ ಸ್ವಾತಂತ್ರ್ಯ ಸ್ತ್ರೀ ವಿಗ್ರಹವು ರಾಷ್ಟ್ರಪ್ರೇಮದ ಸಂಕೇತ. ಅಮೆರಿಕನ್ನರ ಹೆಮ್ಮೆಯನ್ನು ಉಕ್ಕಿಸುವ ಅದನ್ನು ನಾನು ನೋಡಿ ಪುಳಕಿತನಾಗಿದ್ದೆ. ಈಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕನ್ನಡ ಭುವನೇಶ್ವರಿ ಮೂರ್ತಿಯನ್ನು ರಾಜಧಾನಿಯಲ್ಲಿ ಸ್ಥಾಪಿಸಲು ಇಪ್ಪತ್ತೈದು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಕೆಲವರು ಅದನ್ನು ವಿರೋಧಿಸಿದ್ದಾರೆ.

ಈಗಾಗಲೇ ಬೆಂಗಳೂರಿನಲ್ಲಿ ಹಲವು ಪ್ರತಿಮೆಗಳು ಸ್ಥಾಪನೆಗೊಂಡು ಆಯಾ ಪ್ರದೇಶದ ಸೊಬಗನ್ನು ಅರ್ಥವಂತಿಕೆಯನ್ನು ಹೆಚ್ಚಿಸಿವೆ. ಹೀಗಿರುವಾಗ ಕರ್ನಾಟಕ ಮಾತೆಯ ಸಂಕೇತವಾದ ಭುವನೇಶ್ವರಿ ಬೃಹತ್ ಪ್ರತಿಮೆಯನ್ನು ಜ್ಞಾನಭಾರತಿ ಆವರಣದಲ್ಲಿ ಸ್ಥಾಪಿಸುವ ಸೂಚನೆಯೂ ಕೂಡ ಸ್ವಾಗತಾರ್ಹ.

ಬೆಂಗಳೂರು ಮೈಸೂರು ಮಧ್ಯದ ಎರಡು ಹೆದ್ದಾರಿಗಳ ಮಧ್ಯೆ ಇರುವ ಜ್ಞಾನಭಾರತಿ ಒಳ್ಳೆಯ ಪ್ರಶಾಂತವಾದ ಜಾಗ. ಬೆಂಗಳೂರು ವಿವಿಯ ಪ್ರವೇಶದ್ವಾರದ ಎಡಕ್ಕೆ ಹಿಂಭಾಗದ ದೊಡ್ಡ ದಿಬ್ಬದ ಮೇಲೆ ಆ ಪ್ರತಿಮೆ ಸ್ಥಾಪನೆ ಮಾಡಲು ಯೋಚಿಸಬಹುದು. ಜ್ಞಾನಭಾರತಿ ಬಿಟ್ಟು ಬೇರೆ ಸೂಕ್ತ ಕಡೆ ಅದನ್ನು ಸ್ಥಾಪಿಸಿದರೆ ಅದೂ ಸ್ವಾಗತಾರ್ಹವೇ, ಕನ್ನಡಿಗರ ಅಭಿಮಾನದ ಸಂಕೇತವಾದ ಕಂಚಿನ ಭುವನೇಶ್ವರಿ ಭವ್ಯ ಪ್ರತಿಮೆ ಅರ್ಥಪೂರ್ಣವಾಗಿ ರೂಪುಗೊಂಡು ಆದಷ್ಟು ಬೇಗ ಸ್ಥಾಪಿತವಾಗಲಿ.

English summary
Kannada scholar M Chidananda Murthy has welcomed Kannada Sahitya Parishat decision to install deity Bhuvaneshwari Statue in Karnataka. He also thanked CM BS Yeddyurappa for releasing Rs. 25 Cr for installation. Dr. Chimu suggested Jnana Bharathi campus is best place to install deity statue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X