ಈಗ ಟೋಟಲ್ ಮಾಲ್ನಲ್ಲಿ ಕನ್ನಡ ಕೇಳಿಸಿ!

Kannada Songs Total Mall, Bengaluru
ಕಳೆದ ತಿಂಗಳು ಸಂಪಿಗೆ ಶ್ರೀನಿವಾಸ್ ಅವ್ರು ಬೆಂಗಳೂರು ಸೆಂಟ್ರಲ್ ಮಾಲ್ ನಲ್ಲಿ ಕನ್ನಡ ಹಾಡು ಕೇಳಿಸಿ! ಅನ್ನೋ ಲೇಖನವನ್ನ ಬರೆದಿದ್ರು.ಈಗ ನನ್ನ ಸರದಿ ಬಂತು.ಇದೆಂತಾ ಕರ್ಮ ರೀ ನಮ್ದು?ಕರ್ನಾಟಕದ ರಾಜಧಾನಿಯಲ್ಲೇ ಕನ್ನಡ-ಕನ್ನಡ ಅಂತ ಇನ್ನು ಎಷ್ಟು ದಿನ ಬಡ್ಕೊಬೇಕು?,ಎಲ್ಲಿ ನೋಡಿದರು ಹಿಂದಿ ,ಇಂಗ್ಲೀಷಿನ ಕಾರು-ಬಾರು ನೋಡಿ ಸಾಕಾಗಿದೆ.ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ಮಾಲುಗಳಲ್ಲಿ ಬಹುತೇಕ ಜನ ಮಾತಾಡುವುದು ಇಂಗ್ಲೀಶ್ ಇಲ್ಲ ಹಿಂದಿಯಲ್ಲೇ."ಮಾತೃ" ಭಾಷೆಗೆ ಬೆಲೆ ಕೊಡದ ಜನ ಇನ್ನೆಂತಕ್ಕೆ ಬೆಲೆ ಕೊಟ್ಟಾರು?

ಮೊನ್ನೆ ಸರ್ಜಾಪುರ ರಸ್ತೆಯ ಟೋಟಲ್ ಮಾಲ್ಗೆ ಹೋಗಿದ್ದೆ.ಅಲ್ಲಿದ್ದ ಹುಡುಗಿ ಇಂಗ್ಲೀಷಿನಲ್ಲಿ ಮಾತಾಡಲು ಶುರು ಹಚ್ಚಿಕೊಂಡಳು, ನಾನ್ ಹೇಳ್ದೆ 'ನಂಗ್ ಕನ್ನಡ ಬರುತ್ತಮ್ಮ ಕನ್ನಡದಲ್ಲೇ ಮಾತಾಡಿ ಈ ಪರಭಾಷೆ ಕೇಳಿ ಕೇಳಿ ಸಾಕಾಗಿದೆ'. ಅಲ್ಲಿದ್ದ ಕೆಲಸದ ಹುಡುಗರು 'ಸಾರ್,ಇಷ್ಟು ದಿನಕ್ಕೆ ನೀವೊಬ್ರೆ ಕೇಳಿದ್ದು ಸರ್ ಹೀಗೆ,ಮಾತಾಡೋಕೆ ನಮಗೂ ಇಷ್ಟನೇ ಆದ್ರೆ ಬಂದೊವ್ರು ಯಾರು ಕನ್ನಡದಲ್ಲಿ ಮಾತಾಡೋದೇ ಇಲ್ಲ' ಅಂದ್ರು.

'ಅದ್ಸರಿ ಅದ್ಯಾಕ್ ನಿಮ್ಮ ಮಾಲ್ನಲ್ಲಿ ಕನ್ನಡ ಹಾಡು ಹಾಕೊದಿಲ್ವಾ? ಬರಿ ಹಿಂದಿ,ಇಂಗ್ಲೀಶ್ ಹಾಡು ಮಾತ್ರ ಕೇಳ್ತಾ ಇದೆ' ಅಂದೆ. 'ಇಲ್ಲ ಸರ್, ಕಡೆ ಪಕ್ಷ ರಾಜ್ಯೋತ್ಸವದ ದಿನವು ಕನ್ನಡ ಹಾಡು ಹಾಕಲಿಲ್ಲ!' ಅನ್ನೋದಾ!? , ಸರಿ ಎಲ್ರಿ ನಿಮ್ಮ ಮ್ಯಾನೇಜರನ ಕರೀರಿ ಅಂದೆ, ಆ ವೇಳೆಗಾಗಲೇ ಅವ್ನು ಹೊರಟೋಗಿದ್ದ.ಅವನ ನಂಬರ್ ತಗೊಂಡು ಅವನಿಗೆ ಕಾಲ್ ಮಾಡಿದೆ. ನಮ್ಮ ನಡುವಿನ ಸಂಭಾಷಣೆಯನ್ನ ಓದಿದರೆ ಈ ಹೊರ ರಾಜ್ಯದ ಜನ ಅದ್ಹೇಗೆ ಕನ್ನಡವನ್ನ ಕಡೆಗಣಿಸುತ್ತಾರೆ ಅನ್ನುವುದು ಬಹುಷಃ ಗೊತ್ತಾಗಬಹುದು.

ಏನ್ರಿ ನಿಮ್ಮ ಮಾಲ್ನಲ್ಲಿ ಕನ್ನಡ ಹಾಡು ಯಾಕ್ ಹಾಕೋದಿಲ್ಲ?,ಯಾವಾಗ ಬಂದ್ರು ಬರಿ ಹಿಂದಿ ಮತ್ತು ಇಂಗ್ಲೀಶ್ ಹಾಡು ಮಾತ್ರ ಕೇಳುತ್ತೆ ಇಲ್ಲಿ.ಯಾಕೆ?
ನೀವಿದನ್ನ ಯಾವ ಕಾರಣಕ್ಕೆ ಕೇಳ್ತಾ ಇದ್ದೀರಾ? ನೀವ್ಯಾರು?
ನಾನು ನಿಮ್ಮ ಗ್ರಾಹಕ,ನನಗೆ ಕೇಳುವ ಹಕ್ಕಿದೆ ಹೇಳಿ,ಯಾಕ್ ಹಾಕೋದಿಲ್ಲ?
ಯಾಕೆ ಅಂದ್ರೆ (ದರ್ಪದ ದನಿಯಲ್ಲಿ) ಈ ಏರಿಯಾದಲ್ಲಿ ಇರೋ ಹೆಚ್ಚಿನ ಜನ ಕನ್ನಡೇತರರು,ಈ ಮಾಲಿಗೆ ಬರೋರು ಅವ್ರೆ,ಅದಿಕ್ಕೆ ಹಾಕೋದಿಲ್ಲ!'
'ಓಹೋ! ಕರ್ನಾಟಕದಲ್ಲಿ ಕನ್ನಡ ಹಾಕೋದಿಲ್ಲ ಅಂದ್ರೆ ಒಪ್ಪೋಕಗೋಲ್ಲ ರೀ'
ಆಗ ವರಸೆ ಬದಲಾಯಿತು
'ಇಲ್ಲ ಸರ್, ನಾವು ಬೆಳಿಗ್ಗೆ ಕನ್ನಡ ಹಾಡು ಹಾಕ್ತಿವಿ'
'ಅಂದ್ರೆ ಏನ್ರಿ, ಕನ್ನಡ ಹಾಡು ಕೇಳೋಕೆ ನಾನು ಬೆಳಿಗ್ಗೆ ಕೆಲಸ ಬಿಟ್ಟು ಇಲ್ಲಿ ಬರ್ಬೇಕ?,ಸಂಜೆ ಹಾಕೋಕೆ ಏನ್ ತೊಂದ್ರೆ ನಿಮ್ಗೆ?'
ಮತ್ತೊಂದು ವರಸೆ ತೆಗೆದ
'ಹಾಗಲ್ಲ ಸರ್, ನಮ್ ಕಂಪೆನಿಯವರು ಕೊಡೊ CD ಲಿ ಕನ್ನಡ ಹಾಡುಗಳಿಲ್ಲ'
'ಇದು ಜಾಸ್ತಿ ಆಯ್ತು, ನಿಮ್ಮ CEO ನಂಬರ್ ಇಲ್ಲ ಮಿಂಚೆ ವಿಳಾಸ ಕೊಡ್ರಿ, ನಾನ್ ಅವ್ರ ಜೊತೆ ಮಾತಾಡ್ತೀನಿ'
'ನಂದೇ ಬರ್ಕೊಳ್ಳಿ'
'ನಿಂದ ತಗೊಂಡು ಏನಪ್ಪಾ ಮಾಡ್ಲಿ,ಈಗ ಮಾತಾಡಿ ಆಯ್ತಲ್ಲ ನಿನ್ ಜೊತೆ'
'ಇಲ್ಲ ನೀವ್ ಕಳ್ಸಿ ನಂಗೆ, ನಾನ್ ಅವ್ರಿಗೆ ಕಳಿಸ್ತೀನಿ' ಅಂದ. ಅಲ್ಲಿಗೆ ಮಾತು ಮುಗಿಸಿ ಮರುದಿನ ಬೆಳಿಗ್ಗೆ ಅವನಿಗೆ ಮಿಂಚೆ ಕಳಿಸಿದೆ.ಕಳಿಸಿ ಎರಡು ದಿನವಾಯ್ತು, ಆಸಾಮಿ ಇನ್ನ ಉತ್ತರ ಕೊಟ್ಟಿಲ್ಲ.ಇದು ಇಂತ ದಪ್ಪ ಚರ್ಮದ ಜನರ ಕನ್ನಡದೆಡೆಗಿನ ಉದಾಸೀನ,ನಿರ್ಲಕ್ಷತೆಯನ್ನ ತೋರಿಸುತ್ತದೆ.

ಒಂದೆಡೆ 'ಕನ್ನಡ ನುಡಿ ತೇರು' ಎಳೆಯುತ್ತಿರೋ ಸರ್ಕಾರ,ಮತ್ತೊಂದೆಡೆ ತಮಿಳರ ಓಲೈಕೆಗೆ 'ತಿರುವಳ್ಳುವರ್ ಜಯಂತಿ' ಮಾಡ್ತಾ ಇರೋ BBMP, ಮಗದೊಂದು ಕಡೆ ನೀತಿ-ನಿಯಮಗಳನ್ನ ಉಲ್ಲಂಘಿಸಿ ಕನ್ನಡವನ್ನ ಕಾಲ ಕಸವನ್ನಗಿಸುತ್ತ ಇರೋ ಮಾಲ್ಗಳು - ಹೋಟೆಲ್ಗಳು! ಸರ್ಕಾರವನ್ನೇ ನಂಬಿ ಕೂತರೆ ಆಗುವುದಿಲ್ಲ, ಇಂತವಕ್ಕೆಲ್ಲ ಕನ್ನಡಿಗರೇ ಮೈ ಕೊಡವಿ ಏಳಬೇಕು. (raghunath_singh@m2sin.ಕಂ) ಇದು ಅವನ ಮಿಂಚೆ ವಿಳಾಸ.ನೀವು ಅವನಿಗೆ ಮಿಂಚೆ ಕಳುಹಿಸಿ ಸ್ವಲ್ಪ ಬುದ್ದಿ ಹೇಳಿ.ಹಾಗೆ ಒಂದು ಪುಟ್ಟ ಮನವಿ ಎಲ್ಲೆಲ್ಲಿ ಕನ್ನಡ ಕೆಳುವುದಿಲ್ಲವೋ ಅಲ್ಲೆಲ್ಲ ಸಣ್ಣದಾಗಿಯಾದರು ದನಿ ಎತ್ತೋಣ, ನಾವು ಬಯಸವ ಬದಲಾವಣೆಗೆ ನಾವೇ ಕಾರಣವಾಗೋಣ.

ಮತ್ತೆ ಸಿಗೋಣ,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+