ಸ್ಯಾಂಡಲ್‌ವುಡ್ ಸೆಕ್ಸ್‌ವುಡ್ ಆಗುವ ದಿನ ದೂರದಲ್ಲಿಲ್ಲ!
ಮಾನ್ಯರೇ,
ರೋಮಾಂಚನ’ -ಹೆಸರು ನೋಡಿದರೆ ಇದು ಯಾವ ವಿಭಾಗದ ಚಿತ್ರ? ಯಾರಿಗಾಗಿ ತಯಾರಿಸಲಾದ ಚಿತ್ರ? ಎಂಬುದನ್ನು ಸುಲಭವಾಗಿ ವರ್ಗೀಕರಿಸಬಹುದು. ಹೌದು ಮೇ.25ರಂದು ತೆರೆಕಂಡಿರುವ ಈ ಚಿತ್ರಕ್ಕೆ ಪಡ್ಡೆಗಳು ನುಗ್ಗುತ್ತಿದ್ದಾರೆ.
ಆರು ವರ್ಷಗಳ ಹಿಂದೆ ತಯಾರಾದ ಚಿತ್ರವನ್ನು ಈಗ ಬಿಡುಗಡೆ ಮಾಡಲಾಗಿದೆ. ಸೆಕ್ಸ್ ಬಾಂಬ್ ಶಕೀಲಾ ಅತಿಥಿ ಪಾತ್ರದಲ್ಲಿದ್ದರೂ ‘16-60’ ಎಂಬ ಪೋಲಿ ಚಿತ್ರ ಸ್ಟೇಟ್ಸ್‌ನಲ್ಲಿ ಶತದಿನೋತ್ಸವ ಪೂರೈಸಿದೆ. ಈ ಬೆನ್ನಲ್ಲಿ ಇದೇ ಮಾದರಿಯ ಹತ್ತಾರು ಚಿತ್ರಗಳು ತೆರೆಗೆ ಬರಲು ಸಜ್ಜಾಗಿ ಕೂತಿವೆ.
ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರು ಪೋಲಿ ಚಿತ್ರಗಳ ರೀಲ್ ಸುತ್ತುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೇ, ಸ್ಯಾಂಡಲ್‌ವುಡ್ ಸೆಕ್ಸ್‌ವುಡ್ ಆಗುವ ದಿನಗಳು ದೂರದಲ್ಲಿಲ್ಲ!!
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ಕನ್ನಡ ಹೋರಾಟಗಾರರು ಇನ್ನಾದರೂ ಜಾಣ ಕುರುಡು ಮತ್ತು ಕಿವುಡು ಪ್ರದರ್ಶನವನ್ನು ನಿಲ್ಲಿಸಲಿ.
-ಶೀಲವಂತ ಕನ್ನಡ ಪ್ರೇಕ್ಷಕ












Click it and Unblock the Notifications