ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇತಾಳ ಪ್ರಶ್ನೆಗಳು?

By Super
|
Google Oneindia Kannada News

VIKKARAMAA
ಉತ್ತರಗಳನ್ನು ಕೇಳಿದ ಬೇತಾಳವು ಅಂತಾರಾಜ್ಯ ಹೈವೇ-95ರಲ್ಲಿ ಟೋಲ್‌ ಸಹ ಕೊಡದೆ ಶತಮೈಲುವೇಗದಲ್ಲಿ ಓಡುವ ಸ್ಪೋರ್ಟ್ಸ್‌ ಕಾರ್‌ಗಿಂತಲೂ ವೇಗವಾಗಿ ಹಾರಿಹೋಗಿ ಓಕ್‌ ಟ್ರೀ ಕೊಂಬೆಯಾಂದಕ್ಕೆ ನೇತಾಡತೊಡಗಿತು!!

ದಿನೇಶ್‌ ನೆಟ್ಟರ್‌, ನ್ಯೂಜೆರ್ಸಿ

'ವಿಚಿತ್ರಾನ್ನ'ದ ಇತ್ತೀಚಿನ ಸಂಚಿಕೆಯಲ್ಲಿ ಬಂದ 'ಡಾ।ಹೊವರ್ಡ್‌ ಕೆಲ್ಲಿ ಮತ್ತು ಒಂದು ಲೋಟ ಬಿಸಿಬಿಸಿ ಹಾಲು' ಕತೆಯನ್ನು ಒಂದುವೇಳೆ ಬೇತಾಳ ಪಂಚವಿಂಶತಿ ಕಥೆಗಳಲ್ಲಿ ಅಳವಡಿಸಿದರೆ, ಬೇತಾಳವು ಕಥೆಯನ್ನು ಹೇಳಿದ ನಂತರ ರಾಜಾ ತ್ರಿವಿಕ್ರಮನಿಗೆ ಎಸೆಯಬಹುದಾದ ಪ್ರಶ್ನೆಗಳು ಹೀಗಿರಬಹುದೇ?

ಇನ್ನೂ ಛಲವನ್ನು ಬಿಡದ ರಾಜನೇ,

1. ಆಗಿನ ಕಾಲದಲ್ಲಿ 10 ಸೆಂಟ್ಸ್‌ ಗೆ ಒಂದು ಪೀಜ್ಜಾ ಸ್ಲೈಸ್‌ ಸಿಗುತ್ತಿತ್ತಲ್ಲ? ಬಾಲಕ ಕೆಲ್ಲಿ ಅದನ್ನು ಯಾಕೆ ಕೊಳ್ಳಲಿಲ್ಲ? ಅವನಿಗೆ ಚೀಸ್‌ ಇಷ್ಟವಿರಲಿಲ್ಲವೇ? ಅಥವಾ ಆ ಮನೆಯಲ್ಲಿ ಸುಂದರಿ ಹುಡುಗಿ ಇದ್ದಾಳೆ ಎಂದು ಮೊದಲೇ ಅವನಿಗೆ ಗೊತ್ತಿತ್ತೇ?

2. ಆ ಹುಡುಗಿಯು ಕೆಲ್ಲಿಗೆ ಹೋಲ್‌ ಮಿಲ್ಕ್‌ಅನ್ನೇ ಕೊಟ್ಟಳೇ? ಅಲ್ಲ , ಫ‚ಾ್ಯಟ್‌ ಫಿ‚್ರೕ ಮಿಲ್ಕ್‌ ಕೊಟ್ಟಳೇ?

3. ಆಗಂತುಕರು ಬಂದಾಗ ಬಾಗಿಲು ತೆರೆಯಬೇಡ ಎಂದು ಅವಳ ತಂದೆ-ತಾಯಿ ಅವಳಿಗೆ ಹೇಳಿರಲಿಲ್ಲವೇ?

4. ಅವನ, ಅವಳ ಹಿಂದಿನ ಜನ್ಮದಲ್ಲಿ ಅವನು ಅವಳಿಗೆ ಮಾಡಿದ ಉಪಕಾರದ ಹೆಸರೇ ಇಲ್ಲ, ಯಾಕೆ?

ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ತಿಳಿದೂ ಹೇಳದಿದ್ದರೆ, ನಿನ್ನ ತಲೆ ಬೇಗಲ್‌ನಂತೆ ನಡುವೆ ಟೊಳ್ಳಾದೀತು !!

ಬೇತಾಳನ ಈ ಪ್ರಶ್ನೆಗಳಿಗೆ ರಾಜಾ ತ್ರಿವಿಕ್ರಮನ ಉತ್ತರಗಳು ಹೀಗಿರುತ್ತಿದ್ದುವು ಎಂದುಕೊಳ್ಳೋಣವೇ?

ಎಲೈ ಬೇತಾಳವೆ, ಇದೋ ನೋಡು ನಿನ್ನ ಪ್ರಶ್ನೆಗಳಿಗಿಲ್ಲಿ ಉತ್ತರಗಳು :

1: ಬಾಲಕ ಕೆಲ್ಲಿಗೆ ಪಿಜ‚ಾ್ಜ ಎಂದರೆ ಎಲರ್ಜಿ ಇತ್ತಂತೆ! ಸುಂದರಿ ಹುಡುಗಿಯನ್ನು ಅವನು ಈ ಮೊದಲೂ ಒಂದೆರಡು ಸಲ ಕಿಟಕಿಯಲ್ಲಿ ನೋಡಿದ್ದನಂತೆ ಎಂದು ಆ ಊರಿನವರು 'ಗುಸು ಗುಸು' ಮಾತಾಡುತ್ತಿರುತ್ತಾರೆ :-)

2: ಅವತ್ತು ಅವಳ ಮನೆಯಲ್ಲಿ ಅಸಲಿಗೆ ಹಾಲೇ ಇರಲಿಲ್ಲ, ಅಮುಲ್‌ ಮಿಲ್ಕ್‌ ಪೌಡರ್‌ ಇದ್ದದ್ದಂತೆ (ಯಾರೋ ಭಾರತೀಯ ಸ್ನೇಹಿತರು, ''ನೋಡಿ ನಮ್ಮ ದೇಶದಲ್ಲಿ ದನದ ಹಾಲು ಮತ್ತು ಧನದ ಹಾಲು ಅಂತ ಎರಡು ಇವೆ, ಇದು ಧನದ ಹಾಲು...'' ಅಂತ ಪರಿಚಯಿಸಲು ಕೊಟ್ಟದ್ದಂತೆ) ಅದನ್ನು ಬಿಸಿನೀರಿಗೆ ಹಾಕಿ ಅವಳು ಕೆಲ್ಲಿಗೆ ಕುಡಿಯಲು ಕೊಟ್ಟದ್ದಾಗಿತ್ತು.

3: ಉತ್ತರವನ್ನು ಒಂದನೇ ಪ್ರಶ್ನೆಯ ಉತ್ತರದಲ್ಲೇ ಹೇಳಿದೆನಲ್ಲ? 'ಕಿಟಕಿಯ ಮೂಲಕ ಕಣ್ಣೋಟ' ಮೊದಲೇ ಆಗಿದ್ದರಿಂದ ಅವನು ಆಗಂತುಕ ಅಲ್ಲ ಎಂದು ಹುಡುಗಿಗೆ ಗೊತ್ತಿತ್ತು!

4: ಅವರಿಬ್ಬರದೂ ಅದೇ ಮೊದಲ ಜನ್ಮ. ಈಗ ಇಬ್ಬರೂ ತಲಾ ಎರಡನೇ ಜನ್ಮದಲ್ಲಿ ಭಾರತ ದೇಶದಲ್ಲಿ ಹುಟ್ಟಿದ್ದಾರೆ! ಆ ಹೆಂಗಸು, ಕ್ಷೀರಕ್ರಾಂತಿ ಪ್ರಖ್ಯಾತ ಅಹಮದಾಬಾದ್‌ ಸಮೀಪ ಹುಟ್ಟಿದ್ದರೆ ಕೆಲ್ಲಿ ಬಂಗಾಳ ಕೊಲ್ಲಿಯ ತಟದ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿದ್ದಾನೆ!

*

ಉತ್ತರಗಳನ್ನು ಕೇಳಿದ ಬೇತಾಳವು ಅಂತಾರಾಜ್ಯ ಹೈವೇ-95ರಲ್ಲಿ ಟೋಲ್‌ ಸಹ ಕೊಡದೆ ಶತಮೈಲುವೇಗದಲ್ಲಿ ಓಡುವ ಸ್ಪೋರ್ಟ್ಸ್‌ ಕಾರ್‌ಗಿಂತಲೂ ವೇಗವಾಗಿ ಹಾರಿಹೋಗಿ ಓಕ್‌ ಟ್ರೀ ಕೊಂಬೆಯಾಂದಕ್ಕೆ ನೇತಾಡತೊಡಗಿತು!!

Post your views

ಜ್ಞಾನ ರಂಜನೆ ಮನೋಲ್ಲಾಸಗಳ ಅದ್ಭುತ ಮಿಕ್ಸ್‌ - ಕಾಮಿಕ್ಸ್‌!

English summary
New Jersey, responds to Srivathsa Joshis Gratitude is Hearts Memory article
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X