ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾವುಕತೆ ಓಕೆ! ಭ್ರಮೆ ಯಾಕೆ?

By Staff
|
Google Oneindia Kannada News

;?
ವಾಸ್ತವಕ್ಕೆ ಅಪಚಾರವಾಗದಂತೆ ಅನುಭವಿಸಿದಷ್ಟೇ ಭಾವುಕವಾಗಿ ಬರೆದರೆ ತಪ್ಪೇನಿಲ್ಲ ತಾನೇ ಸಾರ್‌?

  • ವಿಕ್ರಮ ಹತ್ವಾರ, ನ್ಯೂಜೆರ್ಸಿ, ಯುಎಸ್‌ಎ
    [email protected]
Vikram Hathwarಶ್ಯಾಮ್‌ ಸುಂದರ್‌ ಅವರಿಗೆ ನಮಸ್ಕಾರ,

ನಿಮ್ಮದೇ ಮಾತಿನ ಪ್ರಕಾರ ನೀವು ಪತ್ರಕರ್ತರು ಮತ್ತು ಭಾವುಕರು. ಭ್ರಮೆ ಕಳಚಿ ಆಗುಹೋಗುಗಳನ್ನು ವಸ್ತುನಿಷ್ಠವಾಗಿ ಗ್ರಹಿಸಿ ಬರೆಯಬೇಕು ಎಂದೂ ಹೇಳಿದ್ದೀರಿ.

ನಾನು ಓದಿದ್ದು ಬರೆದದ್ದು ಬಹಳ ಕಡಿಮೆ. ಅನುಭವಿಯೂ ಅಲ್ಲ. ಆದರೂ ಭಾವುಕತೆಗೂ ಭ್ರಮೆಗೂ ವ್ಯತ್ಯಾಸವಿದೆ ಎಂದು ತಿಳಿದಿದ್ದೇನೆ. ಒಂದು ಕತೆಯನ್ನು ವಾಸ್ತವದ ನೆಲೆಯಲ್ಲಿ ಕಲ್ಪನಾ ಸಾಮರ್ಥ್ಯದ ಸಹಾಯದೊಂದಿಗೆ ವಸ್ತುನಿಷ್ಠವಾಗಿ ವಿಸ್ತರಿಸಿ, ಭ್ರಮೆಯ ಹಂಗಿಲ್ಲದೆ ಭಾವುಕವಾಗಿ ತಲುಪಿಸಬಹುದು ಎಂದು ನಂಬಿರುತ್ತೇನೆ.

ಭಾವುಕವಾದುದು ವಸ್ತುನಿಷ್ಠವಲ್ಲ ಎನ್ನುವುದು ನಿಮ್ಮ ಅಭಿಪ್ರಾಯವೂ ಇರಲಾರದು. ಒಂದು ಉದಾಹರಣೆಯಾಗಿ ಸಾಹಿತ್ಯಾಂಜಲಿಯಲ್ಲಿ ಪ್ರಕಟವಾಗಿರುವ ನನ್ನ ಕತೆ(http://www.sahityanjali.org/?q=node/22). ಇದು ನಿಮಗೆ ಹೇಗೆ ಕಂಡೀತೋ.

ನಾನು ಕೆಲವು ತಿಂಗಳುಗಳ ಹಿಂದೆ ‘ನೀ ಮಾಯೆಯೊಳಗೋ....’ ಎನ್ನುವದೊಂದು ಕತೆ ಕಳುಹಿಸಿಕೊಟ್ಟಿದ್ದೆ. ಅದು ಪ್ರೇಮ/ವಿರಹ ಪತ್ರಗಳೊಂದಿಗೆ ಆರಂಭವಾಗುವ ಕತೆ. ಎಲ್ಲರೂ ಪ್ರೇಮಿಗಳೇ ಎಲ್ಲರೂ ವಿರಹಿಗಳೇ, ಅದು ನನ್ನದೇ ಕತೆ ಎನ್ನುವುದಾದರೆ......

ನಾನು ವಿರಹಿಯಲ್ಲ, ಭಗ್ನಪ್ರೇಮಿಯಂತು ಮೊದಲೇ ಅಲ್ಲ. ಆದರೂ ಈ ಕತೆ ನನ್ನದೇ ಕತೆಯಾಗಿ ಕಂಡರೆ ತಪ್ಪೇನಿಲ್ಲ. ನಾನು ಬರೆದ ಕತೆ ನನ್ನದೇ ಕತೆ ಅಂತ ಅನ್ನಿಸದಿದ್ದ ಮೇಲೆ ಅದಿನ್ನೆಂಥ ಕತೆ?.....ಕಾಡದಿದ್ದ ಮೇಲೆ ಅದಿನ್ನೆಂಥ ಕವಿತೆ?

ಎಲ್ಲರೂ ವಾಸ್ತವವನ್ನು ವಸ್ತುನಿಷ್ಠವಾಗಿಯೇ ಗಮನಿಸಿ ಅನುಭವಿಸಿರುತ್ತಾರೆ ಮತ್ತು ಯಾವುದೇ ಅನುಭವದಲ್ಲಿ ಕೊಂಚವಾದರೂ ಭಾವುಕತೆ ಇದ್ದೇ ಇದೆ. ಹಾಗೆಯೇ ವಾಸ್ತವದ ಆಧಾರವಿಲ್ಲದೆ ಯಾವ ಭಾವುಕತೆಯೂ ಇಲ್ಲ. ಹಾಗೇನಾದರು ಇರುವುದಾದರೆ ಅದು ಭ್ರಮೆ.

ವಾಸ್ತವಕ್ಕೆ ಅಪಚಾರವಾಗದಂತೆ ಅನುಭವಿಸಿದಷ್ಟೇ ಭಾವುಕವಾಗಿ ಬರೆದರೆ ತಪ್ಪೇನಿಲ್ಲ ತಾನೇ ಸಾರ್‌?.


ಪೂರಕ ಓದಿಗೆ :
ವಿರಹಿಗಳ ಶೃಂಗಾರ


ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X