ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಕಾಲದಲ್ಲಿ ಚಂದ್ರ ಎಷ್ಟೊಂದು ದೊಡ್ಡದಾಗಿದ್ದ ಗೊತ್ತಾ?!

By Staff
|
Google Oneindia Kannada News

ನಮ್ಮ ಕಾಲದಲ್ಲಿ ಚಂದ್ರ ಎಷ್ಟೊಂದು ದೊಡ್ಡದಾಗಿದ್ದ ಗೊತ್ತಾ?!
ವಾಣಿ ರಾಮದಾಸ್‌ ಅವರ ಲೇಖನ ಚೆನ್ನಾಗಿತ್ತು. ಬದಲಾವಣೆ ನಿರಂತರ ಪ್ರಕ್ರಿಯೆ. ಹಳೆಯದನ್ನು ಒಪ್ಪುವುದು, ಹೊಸತನ್ನು ಅನಗತ್ಯವಾಗಿ ತೆಗಳುವುದು ಸಲ್ಲದು.

Srinath Bhalle, Richmondಮಾನ್ಯರೇ,

ಹಳೆಯದೆಲ್ಲವೂ ಚೆನ್ನ ಎಂಬ ಮನಸ್ಥಿತಿ ಹಿಂದಿನಿಂದಲೂ ಇದೆ. ಕಾಳಿದಾಸನಂತಹ ಕವಿಯೇ ಇಂತಹ ಸಂಕಟಕ್ಕೆ ಸಿಲುಕಿದ್ದ. ಆತ ಒಂದು ನಾಟಕದಲ್ಲಿ ಹೇಳುತ್ತಾನೆ -ಹಿಂದಿನದ್ದೆಲ್ಲ ಒಳ್ಳೆಯದಲ್ಲ. ಇಂದಿನದೆಲ್ಲ ಕೆಟ್ಟದಲ್ಲ. ತನ್ನ ನಾಟಕವನ್ನು ಜನ ಸ್ವೀಕಾರ ಮಾಡುತ್ತಾರೋ ಇಲ್ಲವೋ ಎಂಬ ದ್ವಂದ್ವದಲ್ಲಿ ಕಾಳಿದಾಸ ಈ ಮಾತು ಹೇಳಿರಬಹುದು.

ಹೌದು, ಕಾಲ ಕಾಲಕ್ಕೆ ಬದಲಾವಣೆಗಳು ಬರುತ್ತದೆ. ಅದನ್ನು ಯಥಾರೀತಿ ಸ್ವೀಕರಿಸಬೇಕು. ಈ ಸಂದರ್ಭದಲ್ಲಿ ನನಗೆ ಒಂದು ಹಾಸ್ಯ ಪ್ರಸಂಗ ನೆನಪಿಗೆ ಬರುತ್ತಿದೆ.

ಒಬ್ಬ ಹೀಗೆಯೇ ಪ್ರತಿಯೊಂದಕ್ಕೂ -ಈಗೇನಿದೆ ಬಿಡಿ. ನಮ್ಮ ಕಾಲದಲ್ಲಿ... ಆಗಿತ್ತು ಹೀಗಿತ್ತು ಎನ್ನುತ್ತಿದ್ದ. ಅವನ ಎದುರಿಗೆ ನಿಂತವರು, ಯಾಕಾದರೂ ಇವನ ಮುಂದೆ ಮಾತಾಡಿದೆವೋ ಎಂದು ಮನದಲ್ಲಿ ಕೊರಗುತ್ತಿದ್ದರು. ಹೀಗೆ ಒಮ್ಮೆ ಅವನು ಪೌರ್ಣಿಮೆಯ ದಿನ ಹೊರಗೆ ಹೋಗಿದ್ದಾಗ, ಯಾರೋ ಅವನಿಗೆ ಪೂರ್ಣ ಚಂದ್ರನನ್ನು ತೋರಿಸಿ ಎಷ್ಟು ಚೆನ್ನಾಗಿದೆ ನೋಡಿ ಅಂದರಂತೆ.

ಯಥಾಪ್ರಕಾರ ಅವನು -ಈಗಿನ ಚಂದ್ರ ಏನು ಬಿಡಿ... ನಮ್ಮ ಕಾಲದಲ್ಲಿ ಚಂದ್ರ ಆ ರೀತಿಯಿದ್ದ... ಈ ರೀತಿಯಿದ್ದ... ಎಂದು ಪಿಟೀಲು ಶುರು ಮಾಡಿದ!

ಧನ್ಯವಾದಗಳು.

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X