keyboard_backspace

ಹರಿದ ನೋಟನ್ನು ಬದಲಾಯಿಸುವುದು ಹೇಗೆ? ಇಲ್ಲಿದೆ ವಿವರ

Google Oneindia Kannada News

ನವದೆಹಲಿ, ಏಪ್ರಿಲ್ 05: ಭಾರತದಲ್ಲಿ ನಾವು ಎಲ್ಲಾ ಹಣಕಾಸು ವಹಿವಾಟುಗಳಿಗೆ ವಿವಿಧ ಮುಖಬೆಲೆಯ ನೋಟುಗಳು ಮತ್ತು ನಾಣ್ಯಗಳನ್ನು ಬಳಸುತ್ತೇವೆ. ನಾಣ್ಯಗಳ ಮೌಲ್ಯವು ಕಡಿಮೆ ಇರುವುದರಿಂದ, ನಾವು ಹೆಚ್ಚಿನ ಬಾರಿ ದೊಡ್ಡ ವಹಿವಾಟುಗಳಿಗೆ ನೋಟುಗಳನ್ನು ಬಳಸುತ್ತೇವೆ. ಈ ನೋಟುಗಳನ್ನು ವಿಶೇಷ ರೀತಿಯ ಕಾಗದದಿಂದ ತಯಾರಿಸಲಾಗುತ್ತದೆ. ಅದು ಸ್ವಲ್ಪ ಸಮಯದಲ್ಲಿ ಹರಿದು ಹೋಗುವ ಸಾಧ್ಯತೆಗಳು ಇದೆ.

ಹೀಗೆ ನಿಮ್ಮಲ್ಲಿ ಹರಿದು ನೋಟುಗಳನ್ನು ಹೊಂದಿದ್ದರೆ ಅದನ್ನು ಬದಲಾವಣೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ಇರಬಹುದು. ಆದರೆ ನೀವು ಹರಿದ ನೋಟು ಬದಲಾವಣೆ ಮಾಡುವುದಕ್ಕೆ ಚಿಂತಿಸಬೇಕಾಗಿಲ್ಲ. ಏಕೆಂದರೆ ಹರಿದ ನೋಟುಗಳನ್ನು ಬದಲಾವಣೆ ಮಾಡುವ ಸೌಲಭ್ಯವನ್ನು ಸರ್ಕಾರ ಒದಗಿಸುತ್ತದೆ.

Digital rupee ಚಲಾವಣೆ ಹೇಗಿರಲಿದೆ?, ಆರ್‌ಬಿಐನಿಂದ ಸುಳಿವುDigital rupee ಚಲಾವಣೆ ಹೇಗಿರಲಿದೆ?, ಆರ್‌ಬಿಐನಿಂದ ಸುಳಿವು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತದಲ್ಲಿ 5, 10, 50, 100, 500 ರೂಗಳ ವಿವಿಧ ಮುಖಬೆಲೆಯ ನೋಟುಗಳನ್ನು ಪರಿಚಯಿಸಿದೆ. 2017 ರಲ್ಲಿ ನೋಟು ಅಮಾನ್ಯೀಕರಣದ ನಂತರ ಹೊಸ 200, 500 ಮತ್ತು 2000 ರೂ ನೋಟುಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಆದರೆ ಈ ಸಂದರ್ಭದಲ್ಲೇ 1000 ರೂಪಾಯಿ ನೋಟು ಚಲಾವಣೆ ಸ್ಥಗಿತ ಮಾಡಲಾಗಿದೆ. ಹಳೆಯ 500 ಮತ್ತು 1000 ರೂ ನೋಟುಗಳನ್ನು ಹೊರತುಪಡಿಸಿ, ಇತರ ಎಲ್ಲಾ ಹರಿದ ನೋಟುಗಳನ್ನು ಪ್ರತಿಯಾಗಿ ನೀವು ಕೊಂಚ ಕಡಿಮೆ ಮೌಲ್ಯದ ಹಣವನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ನಿಮ್ಮಲ್ಲಿ ಹರಿದ ನೋಟುಗಳು ಇದ್ದರೆ ಹೇಗೆ ಬದಲಾವಣೆ ಮಾಡುವುದು ಎಂದು ಇಲ್ಲಿ ವಿವರಿಸಲಾಗಿದೆ. ಮುಂದೆ ಓದಿ....

ನೋಟು ವಿನಿಮಯಕ್ಕೆ ಆರ್‌ಬಿಐ ಷರತ್ತು ಅನ್ವಯ

ನೋಟು ವಿನಿಮಯಕ್ಕೆ ಆರ್‌ಬಿಐ ಷರತ್ತು ಅನ್ವಯ

ನೋಟು ಕೆಟ್ಟದಾಗಿದ್ದಾಗಿದ್ದರೆ, ಅದರ ಮೌಲ್ಯವು ಕೂಡಾ ಕಡಿಮೆ ಆಗಲಿದೆ. ಒಬ್ಬ ವ್ಯಕ್ತಿಯು 20 ಕ್ಕಿಂತ ಹೆಚ್ಚು ಹಾನಿಗೊಳಗಾದ ನೋಟುಗಳನ್ನು ಹೊಂದಿದ್ದರೆ ಮತ್ತು ಅವುಗಳ ಒಟ್ಟು 5,000 ರೂ.ಗಿಂತ ಹೆಚ್ಚಿದ್ದರೆ, ಅದಕ್ಕೆ ವಹಿವಾಟು ಶುಲ್ಕವನ್ನು ವಿಧಿಸಲಾಗುತ್ತದೆ. ವಿನಿಮಯಕ್ಕೆ ಹೋಗುವ ಮೊದಲು ನೋಟು ಭದ್ರತಾ ಚಿಹ್ನೆಗಳನ್ನು ತೋರಿಸುತ್ತದೆಯೇ ಎಂದು ನೋಡುವುದು ಮುಖ್ಯವಾಗಿದೆ.

ಪ್ರತಿ ನೋಟಿಗೂ ನಿಯಮ ಬದಲಾವಣೆ!

ಪ್ರತಿ ನೋಟಿಗೂ ನಿಯಮ ಬದಲಾವಣೆ!

ಇನ್ನು ಬಹಳ ಮುಖ್ಯವಾಗಿ ಪ್ರತಿ ನೋಟಿಗೂ ನಿಯಮ ಬದಲಾವಣೆ ಆಗಲಿದೆ. ಹರಿದ ನೋಟಿಗೆ ಬದಲಾಗಿ ಎಷ್ಟು ಮೊತ್ತವನ್ನು ಪಡೆಯಲಾಗುತ್ತದೆ ಎಂಬುವುದನ್ನು ನೋಟಿನ ಬೆಲೆ ಮತ್ತು ಅದರಲ್ಲಿ ಎಷ್ಟು ಹರಿದಿದೆ ಎಂಬುವುದನ್ನು ನೋಡಿಕೊಂಡು ನಿರ್ಧಾರ ಮಾಡಲಾಗುತ್ತದೆ. ಉದಾಹರಣೆಗೆ, ರೂ 2000 ನೋಟಿನ 88 ಚದರ ಸೆಂ. ಮೀಟರ್ ಮಾತ್ರ ಸರಿಯಾಗಿದ್ದರೆ ಪೂರ್ಣ ಪಾವತಿ ದೊರೆಯಲಿದೆ. 44 ಚದರ ಸೆಂ. ಮೀಟರ್‌ ಮಾತ್ರ ಸರಿಯಾಗಿದ್ದರೆ ಅರ್ಧ ಮೌಲ್ಯ ದೊರೆಯಲಿದೆ. ಅಂದರೆ 2000 ರೂಪಾಯಿ ನೋಟಿಗೆ ಒಂದು ಸಾವಿರ ರೂಪಾಯಿ ದೊರೆಯಲಿದೆ. 2000 ರೂಪಾಯಿಯ ಪೂರ್ಣ ನೋಟು 109.56 ಚದರ ಸೆಂ.ಮೀ. ಆಗಿದೆ. ಮತ್ತೊಂದೆಡೆ, 200 ರೂಪಾಯಿಯ ಹರಿದ ನೋಟಿನ 78 ಚದರ ಸೆಂ.ಮೀ ಭಾಗವನ್ನು ನೀಡಿದರೆ ಪೂರ್ಣ ಮೌಲ್ಯವನ್ನು ಪಡೆಯಬಹುದು 200 ರೂಪಾಯಿ ನೋಟಿನ 39 ಚದರ ಸೆಂ.ಮೀ. ಸರಿಯಾಗಿದ್ದರೆ ಅರ್ಧ ಮೌಲ್ಯ ನೀಡಲಾಗುತ್ತದೆ.

ಯಾವ ನೋಟನ್ನು ಬದಲಾವಣೆ ಮಾಡಬಹುದು?

ಯಾವ ನೋಟನ್ನು ಬದಲಾವಣೆ ಮಾಡಬಹುದು?

ಆರ್‌ಬಿಐ ನಿಯಮಗಳ ಪ್ರಕಾರ ಮೂರು ಬಗೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಮೊದಲನೆಯದಾಗಿ, ಒದ್ದೆಯಾದ ಕಾರಣದಿಂದಾಗಿ ಅಥವಾ ಅನೇಕ ಜನರ ಕೈಯಲ್ಲಿ ಚಲಾವಣೆಯಾದ ಕಾರಣ ಬಣ್ಣವು ಮಸುಕಾಗಿದ್ದರೆ ನೋಟನ್ನು ಬದಲಾವಣೆ ಮಾಡಬಹುದು. ಎರಡನೆಯದಾಗಿ ಹರಿದು ಹೋದ ಮತ್ತು ಅವುಗಳ ತುಂಡುಗಳು ಇದ್ದರೆ ಎರಡನೆ ವಿಧದ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಇನ್ನು ಮೂರನೇಯದಾಗಿ ನೋಟಿನ ಎರಡು ವಿಭಿನ್ನ ತುಣುಕುಗಳನ್ನು ಸೇರಿಸಿ ಒಂದು ನೋಟನ್ನಾಗಿ ಮಾಡಿದ್ದರೆ ಅದನ್ನು ಕೂಡಾ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಬ್ಯಾಂಕುಗಳು ತುಂಬಾ ಕೆಟ್ಟ ಸ್ಥಿತಿಯಲ್ಲಿ ಇರುವ ನೋಟುಗಳನ್ನು ಬದಲಾಯಿಸಲು ನಿರಾಕರಿಸಬಹುದು. ಅದರ ಸಂಖ್ಯೆಯೂ ಕೂಡಾ ಕಾಣದಿದ್ದರೆ ಬ್ಯಾಂಕುಗಳು ನೋಟನ್ನು ಬದಲಾವಣೆ ಮಾಡಲು ಹಿಂದೇಟು ಹಾಕಬಹುದು.

ನೋಟಿನ ಮೇಲೆ ಬರೆಯುವುದು ನಿಷೇಧವೇ?

ನೋಟಿನ ಮೇಲೆ ಬರೆಯುವುದು ನಿಷೇಧವೇ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಗಳ ಪ್ರಕಾರ, ನೋಟಿನ ಮೇಲೆ ಏನಾದರೂ ಬರೆದರೆ ಅದು ಮಾನ್ಯವಾಗಿರುತ್ತದೆ. ಆದರೆ ಅದರಲ್ಲಿ ಬರೆಯಲಾದ ಸಂದೇಶವು ರಾಜಕೀಯ ಪ್ರೇರಿತವಾಗಿದ್ದರೆ, ಅದನ್ನು ಕಾನೂನಾತ್ಮಕವಾಗಿ ಮಾನ್ಯ ಎಂದು ಪರಿಗಣಿಸಲಾಗುವುದಿಲ್ಲ.

ನೋಟನ್ನು ಬದಲಾವಣೆ ಮಾಡುವುದು ಹೇಗೆ?

ನೋಟನ್ನು ಬದಲಾವಣೆ ಮಾಡುವುದು ಹೇಗೆ?

ನಿಮ್ಮ ಬಳಿ ಇರುವ ನೋಟುಗಳು ಹರಿದು ಹೋಗಿದ್ದರೆ, ಯಾವುದೇ ಬ್ಯಾಂಕ್ ಶಾಖೆಯಲ್ಲಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ರಿಸರ್ವ್ ಬ್ಯಾಂಕ್ ಕಚೇರಿಗೂ ಹೋಗಬಹುದು. ಆದರೆ ನೀವು 20 ಅಥವಾ ಹೆಚ್ಚಿನ ನೋಟುಗಳನ್ನು ಬದಲಾಯಿಸಬೇಕಾದರೆ ಮಾತ್ರ ರಿಸರ್ವ್ ಬ್ಯಾಂಕ್ ಕಚೇರಿಗೆ ಹೋದರೆ ಉತ್ತಮ. ಕೆಲವು ಕಡೆಗಳಲ್ಲಿ ಅಂಗಡಿಗಳು ಕೂಡಾ ಹಾನಿಗೊಳಗಾದ ನೋಟನ್ನು ಬದಲಾವಣೆ ಮಾಡುತ್ತದೆ. ಆದರೆ ಅವರು ಹೆಚ್ಚು ಕಮಿಷನ್‌ ಅನ್ನು ಪಡೆಯುತ್ತಾರೆ ಎಂದು ನೆನಪಿನಲ್ಲಿ ಇರಲಿ.

ನಿಯಮಗಳನ್ನು ಬ್ಯಾಂಕ್ ಸಿಬ್ಬಂದಿಗಳೇ ಉಲ್ಲಂಘಿಸಿದರೆ..?

ನಿಯಮಗಳನ್ನು ಬ್ಯಾಂಕ್ ಸಿಬ್ಬಂದಿಗಳೇ ಉಲ್ಲಂಘಿಸಿದರೆ..?

ಬದಲಾವಣೆ ಮಾಡತಕ್ಕುದಾದ ಹರಿದ ನೋಟನ್ನು ಬ್ಯಾಂಕುಗಳು ಬದಲಾವಣೆ ಮಾಡಲು ನಿರಾಕರಿಸಿದರೆ ನೀವು ಅದಕ್ಕಾಗಿ ಬ್ಯಾಂಕುಗಳ ವಿರುದ್ಧ ದೂರು ನೀಡಬಹುದು. ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕ್ ನಿರಾಕರಿಸಿದರೆ ಆನ್‌ಲೈನ್‌ನಲ್ಲಿ ದೂರು ದಾಖಲಿಸಬಹುದು. ಬ್ಯಾಂಕ್ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗ್ರಾಹಕರ ದೂರಿನ ಆಧಾರದ ಮೇಲೆ ಬ್ಯಾಂಕ್ 10,000 ರೂ.ವರೆಗೆ ನಿಮಗೆ ಪರಿಹಾರವನ್ನು ಪಾವತಿಸಬಹುದು.

English summary
RBI guidelines for exchanging torn notes : Here's how to exchange damaged currency notes; Explained in Kannada. Read on.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X