Get Updates
Get notified of breaking news, exclusive insights, and must-see stories!

ಸಿಡಿ ಪ್ರಕರಣ: ಎಸ್ಐಟಿ ಮುಖ್ಯಸ್ಥ ಹುದ್ದೆಯಿಂದ ಸೌಮೇಂದು ಮುಖರ್ಜಿ ನಿರ್ಗಮನ ಯಾಕೆ?

ಬೆಂಗಳೂರು, ಆ. 13: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಪ್ರಕರಣದ ತನಿಖೆ ನಡೆಸಲು ಸರ್ಕಾರ ರಚಿಸಿದ್ದ ತನಿಖಾ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ ತಮ್ಮ ಮುಖ್ಯಸ್ಥ ಸ್ಥಾನದಿಂದ ನಿರ್ಗಮಿಸಿದ್ದಾರೆ. ಮುಖ್ಯಸ್ಥರ ಜವಾಬ್ದಾರಿಯನ್ನು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಹಸ್ತಾಂತರಿಸಿದ್ದಾರೆ.

ಈ ಮೂಲಕ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣದಲ್ಲಿ ದಾಖಲಾಗಿರುವ ಎರಡು ಪ್ರಕರಣ ಅಂತಿಮ ತನಿಖಾ ವರದಿ ಸಲ್ಲಿಸಲು ಎದುರಾಗಿದ್ದ ತೊಡಕು ನಿವಾರಣೆಯಾದಂತಿದೆ. ಈ ಎರಡೂ ಪ್ರಕರಣದಲ್ಲಿ ತನಿಖಾ ತಂಡದ ಮುಖ್ಯಸ್ಥರ ಸಹಿ ಇಲ್ಲದೇ ಸಲ್ಲಿಸಿದ್ದ ಅಂತಿಮ ವರದಿ ಸ್ವೀಕರಿಸಲು ಹೈಕೋರ್ಟ್ ಗರಂ ಆಗಿತ್ತು. ತನಿಖಾ ತಂಡದ ಮುಖ್ಯಸ್ಥರ ಸಹಿಯೇ ಇಲ್ಲದ ವರದಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸೂಚಿಸಿತ್ತು. ವೈಯಕ್ತಿಕ ರಜೆ ಮೇಲೆ ಹೋಗಿದ್ದ ತನಿಖಾ ತಂಡದ ಮುಖ್ಯಸ್ಥರು ಸಹಿ ಹಾಕಿರಲಿಲ್ಲ.

ಅನಾರೋಗ್ಯ ಕಾರಣದಿಂದ ನಾನು ಏಪ್ರಿಲ್ 28 ರಿಂದ ರಜೆಯಲ್ಲಿದ್ದೇನೆ. ಹಾಗಾಗಿ ವೈಯಕ್ತಿಕ ಕಾರಣದಿಂದ ನಾನು ಪ್ರಕರಣದ ತನಿಖಾ ಮಾಹಿತಿ ಪಡೆಯಲಾಗಿಲ್ಲ. ತನಿಖೆ ಹೇಗೆ ನಡೆದಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಅನುಪಸ್ಥಿತಿಯಲ್ಲಿ ತನಿಖೆ ನಡೆದಿದ್ದು, ಇದರ ತನಿಖಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಬಹುದು. ತನಿಖಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲು ಎಸ್ಐಟಿ ತಂಡದ ಅಧಿಕಾರಿಗೆ ಅಧಿಕಾರ ವಹಿಸಿದ್ದೇನೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ತನಿಖಾ ವರದಿ ಸಲ್ಲಿಸಲು ಅನುಮತಿ ನೀಡಿರುವ ಪತ್ರ ಮಾಧ್ಯಮಗಳಿಗೆ ಲಭ್ಯವಾಗಿದೆ.

ಮುಖರ್ಜಿ ನಿಷ್ಠಾವಂತ ತನಿಖೆಗೆ ಅಡ್ಡಗಾಲು

ಮುಖರ್ಜಿ ನಿಷ್ಠಾವಂತ ತನಿಖೆಗೆ ಅಡ್ಡಗಾಲು

ಐಪಿಎಸ್ ವಲಯದಲ್ಲಿ ಸೌಮೇಂದು ಮುಖರ್ಜಿ ಅವರಿಗೆ ಉತ್ತಮ ಹೆಸರಿದೆ. ಸರ್ಕಾರಕ್ಕೆ ತಲೆನೋವು ತರುವಂತಹ ಕ್ಲಿಷ್ಟ ಪ್ರಕರಣಗಳನ್ನು ಸಮರ್ಥವಾಗಿ ಪತ್ತೆ ಮಾಡಿ ತನಿಖೆ ನಡೆಸುವ ವಿಚಾರಕ್ಕೆ ಮುಖರ್ಜಿ ಹೆಸರಾಗಿದ್ದರು. ಜಾರಕಿಹೊಳಿ ಸಿಡಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಸೌಮೇಂದು ಮುಖರ್ಜಿಯನ್ನು ತನಿಖಾ ತಂಡದ ಮುಖ್ಯಸ್ಥರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು. ನಂತರ ಸಿಡಿ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು. ರಮೇಶ್ ಜಾರಕಿಹೊಳಿ ನೀಡಿದ್ದ ಬ್ಲಾಕ್ ಮೇಲ್ ದೂರು ತನಿಖೆ ನಡೆಯುವ ಹಂತದಲ್ಲಿಯೇ ತಲೆ ಮರೆಸಿಕೊಂಡಿದ್ದ ಸಂತ್ರಸ್ತ ಯುವತಿ ಕೆಲಸದ ಅಮಿಷ ಒಡ್ಡಿ ಸಚಿವರು ನನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಳು. ಇದಾದ ಕೆಲವೇ ದಿನದಲ್ಲಿ ಪ್ರಕರಣ ನಾನಾ ಆಯಾಂಗಳನ್ನು ಪಡೆದುಕೊಂಡಿತು.

ಮುಖರ್ಜಿ ನಿರ್ಗಮನ

ಮುಖರ್ಜಿ ನಿರ್ಗಮನ

ರಮೇಶ್ ಜಾರಕಿಹೊಳಿ ಅಶ್ಲೀಲ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿತು. ಇದೇ ಅವಧಿಯಲ್ಲಿ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಸೌಮೇಂದು ಮುಖರ್ಜಿ ಅವರು ಅನಾರೋಗ್ಯ ಕಾರಣ ನೀಡಿ ಅನಿರ್ಧಿಷ್ಟಾವಧಿ ರಜೆ ಮೇಲೆ ತೆರಳಿದರು. ಆನಂತರ ಪ್ರಕರಣವನ್ನು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆಯಿತು. ಮುಖರ್ಜಿ ಅವರನ್ನು ಸರ್ಕಾರವೇ ಉದ್ದೇಶ ಪೂರ್ವಕವಾಗಿ ರಜೆ ಮೇಲೆ ಕಳಿಸಿತ್ತು ಎಂಬ ಮಾತುಗಳು ಕೂಡ ಕೇಳಿ ಬಂದವು. ಇತ್ತೀಚೆಗೆ ಅವರು ವಾಪಸು ಕರ್ತವ್ಯಕ್ಕೆ ಮರಳಿದ್ದರು.

ಅಂತಿಮ ವರದಿಯನ್ನು ಸ್ವೀಕರಿಸಿರಲಿಲ್ಲ

ಅಂತಿಮ ವರದಿಯನ್ನು ಸ್ವೀಕರಿಸಿರಲಿಲ್ಲ

ಈ ಮಧ್ಯೆ ಹೈಕೋರ್ಟ್ ತನಿಖಾ ತಂಡದ ಅಂತಿಮ ವರದಿಯನ್ನು ಸ್ವೀಕರಿಸಿರಲಿಲ್ಲ. ಶಂಕಿತ ಇಬ್ಬರು ಆರೋಪಿಗಳೂ ಷರತ್ತ ಬದ್ಧ ಜಾಮೀನು ಪಡೆದುಕೊಂಡಿದ್ದರು. ಎರಡೂ ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸಲು ಎಸ್ಐಟಿ ಸಿದ್ಧತೆ ಮಾಡಿಕೊಂಡಿದ್ದು ತನಿಖಾ ತಂಡದ ಮುಖ್ಯಸ್ಥರಾಗಿ ಸಹಿ ಹಾಕಲು ಸಂದೀಪ್ ಪಾಟೀಲ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಗಿದೆ. ಶೀಘ್ರದಲ್ಲಿಯೇ ಎಸ್ಐಟಿ ಅಂತಿಮ ವರದಿಯನ್ನು ಸಲ್ಲಿಸಿ ಹೈಕೋರ್ಟ್ ಗೆ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ.

ಸಚಿವ ಸ್ಥಾನಕ್ಕೆ ಲಾಬಿ

ಸಚಿವ ಸ್ಥಾನಕ್ಕೆ ಲಾಬಿ

ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಬಳಿಕ ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್ ಜಾರಕಿಹೊಳಿಗೆ ಹೊಸ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ನಮ್ಮ ಕುಟುಂಬಕ್ಕೆ ಇದೇ ಮೊದಲ ಬಾರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿಗೆ ಹೋಗಿ ಲಾಬಿ ಮಾಡಿದ್ದು, ಪ್ರಕರಣದ ಅಂತಿಮ ವರದಿ ಸಲ್ಲಿಕೆ ತೊಡಕಾಗಿದೆ. ಎಸ್ಐಟಿ ಅಂತಿಮ ವರದಿ ಸಲ್ಲಿಸಿದ ಬಳಿಕ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಅಲಂಕರಿಸಿದರೂ ಅಚ್ಚರಿ ಪಡಬೇಕಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+