• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿದ್ರೆ ಹಾಗೂ ವಿಶ್ರಾಂತಿ ಎಷ್ಟು ವಿಧ? ಉತ್ತಮಗೊಳಿಸುವುದು ಹೇಗೆ?

By ರೇಖಾ ಬೆಳವಾಡಿ
|
Google Oneindia Kannada News

ಸ್ನೇಹಿತರೆಲ್ಲರೂ ವಾರಾಂತ್ಯದ ಪ್ರವಾಸಕ್ಕೆ ತಯಾರಿ ನಡೆಸುತ್ತಿರುವಾಗಲೇ, ವಾರವಿಡೀ ಬಹಳ ಕೆಲಸ ಹಾಗು ಓಡಾಟವಿದ್ದ ಕಾರಣ ಬಹಳ ದಣಿವಾಗಿದೆ, ಚೈತನ್ಯವಿಲ್ಲ. ಪ್ರವಾಸಕ್ಕೆ ಬರಲಾಗುವುದಿಲ್ಲ. ಚೆನ್ನಾಗಿ ನಿದ್ರಿಸಬೇಕು ವಿಶ್ರಾಂತಿ ಪಡೆಯಬೇಕು ಎಂದು ರಮ್ಯ ಸ್ನೇಹಿತರಿಗೆ ಕರೆ ಮಾಡುತ್ತಾಳೆ. ಶನಿವಾರ ಹಾಗು ಭಾನುವಾರ ಚೆನ್ನಾಗಿ ನಿದ್ರಿಸುತ್ತಾಳೆ ಕೂಡಾ. ಆದರೆ ನಂತರವೂ ದಣಿವಿನ ಭಾವನೆ ಅನುಭವಿಸುತ್ತಿರುತ್ತಾಳೆ. ಏಕೆ ಹೀಗಾಗುತ್ತದೆ ಎಂದು ಚಿಂತೆಗೆ ಒಳಗಾಗುತ್ತಾಳೆ.

ನಿಮಗೂ ಹೀಗೆ ಅನ್ನಿಸುತ್ತದೆಯೇ? ಹೆಚ್ಚಿನ ಸಮಯ ನಿದ್ರಿಸಿದ್ದರೂ ಸಹ ದಣಿವು ಹಾಗೆಯೇ ಇರುತ್ತದೆಯೇ?
ನಿದ್ರೆ ಹಾಗೂ ವಿಶ್ರಾಂತಿ ಎರಡೂ ಬೇರೆ ಬೇರೆ ವಿಷಯಗಳು. ಕೆಲವೊಮ್ಮೆ ಅವುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ಸಾಕಷ್ಟು ನಿದ್ರಿಸುವುದರಿಂದ , ವಿಶ್ರಾಂತಿ ಪಡೆದಿದ್ದೇವೆ ಎಂದು ಎಣಿಸುತ್ತೇವಿ. ಆದರೆ ವಾಸ್ತವವಾಗಿ ನಾವು ವಿಶ್ರಾಂತಿ ಪಡೆದಿರುವಿದಿಲ್ಲ. ಹಾಗಾಗಿ ಎಷ್ಟೇ ಹೊತ್ತು ನಿದ್ರಿಸಿದರೂ ಸಹ ದೀರ್ಘಕಾಲದ ದಣಿವನ್ನು ಅನುಭವಿಸುತ್ತೇವೆ‌. ವಿವಿಧ ರೀತಿಯ ವಿಶ್ರಾಂತಿಯ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.
ಕೆಲವು ಪ್ರಮುಖ ವಿಶ್ರಾಂತಿಗಳ ಬಗ್ಗೆ ತಿಳಿದುಕೊಳ್ಳೋಣ.

ದೈಹಿಕ ವಿಶ್ರಾಂತಿ

ದೈಹಿಕ ವಿಶ್ರಾಂತಿ

ಇದನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು. ಸಕ್ರಿಯ ದೈಹಿಕ ವಿಶ್ರಾಂತಿ - ಯೋಗ, ದೇಹದ ಭಾಗಗಳನ್ನು ಹಿಗ್ಗಿಸುವುದು (body stretching) ಮಸಾಜ್ ಥೆರಪಿ ಹಾಗು ಸರಳ ದೈಹಿಕ ಚಟುವಟಿಕೆಗಳಿಂದ ದೇಹದಲ್ಲಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗು ದೇಹ ಪುನಃಚೈತನ್ಯಕಾರಿಯಾಗುತ್ತದೆ. ದೇಹ ನಮ್ಯವಾಗುತ್ತದೆ (flexible) ನಿಷ್ಕ್ರಿಯ ದೈಹಿಕ ವಿಶ್ರಾಂತಿ- ಸರಿಯಾದ, ಸಂತೃಪ್ತವಾಗಿ ನಿದ್ರಿಸುವುದು. ದೇಹ ಹಾಗು ಮನಸ್ಸನ್ನು ಉಲ್ಲಾಸಕರವಾಗಿಸುತ್ತದೆ ಮುಂದಿನ ಚಟುವಟಿಕೆಗಳಿಗೆ ನಮ್ಮನ್ನು ಸಿದ್ದಪಡಿಸುತ್ತದೆ.

ಮೇಷದಿಂದ ಮೀನದವರೇ ಎಚ್ಚರ! ಏಕೆಂದರೆ, ಇದು ನಿದ್ದೆಯ ವಿಚಾರಮೇಷದಿಂದ ಮೀನದವರೇ ಎಚ್ಚರ! ಏಕೆಂದರೆ, ಇದು ನಿದ್ದೆಯ ವಿಚಾರ

ಮಾನಸಿಕ ವಿಶ್ರಾಂತಿ

ಮಾನಸಿಕ ವಿಶ್ರಾಂತಿ

ನೀವು ನಿಮ್ಮ ಸುತ್ತಮುತ್ತ ಚಡಪಡಿಸುವ ಅನೇಕರನ್ನು ಕಾಣಬಹುದು, ಪ್ರತಿ ವಿಷಯಕ್ಕೂ ಬಹಳ ಬೇಗ ಕೆರಳುತ್ತಿರುತ್ತಾರೆ (irritation) ಸಮಾಧಾನ ಕಡಿಮೆ, ಕೇಂದ್ರೀಕರಿಸಿ ಕೆಲಸ ಮಾಡಲಾಗುವುದಿಲ್ಲ, ಇತರರ ಮೇಲೆ ರೇಗುತ್ತಿರುತ್ತಾರೆ, ರಾತ್ರಿ ವೇಳೆ ಸರಿಯಾಗಿ ನಿದ್ದೆ ಮಾಡುವುದಿಲ್ಲ, ಪದೇ ಪದೇ ಏಳುತ್ತಿರುತ್ತಾರೆ, ಅನೇಕ ವಿಚಾರಗಳು, ಅಂದಿನ ದಿನದ ಆಗು ಹೋಗುಗಳು, ಮುಂದಿನ ದಿನದ ಬಗ್ಗೆ ಯೋಚನೆಗಳು ಆವರಿಸಿರುತ್ತದೆ. ಎಂಟು ಗಂಟೆಗಳು ಮಲಗಿದ್ದರೂ, ನಿದ್ದೆ ಮಾಡಿದಂತಾಗಿರುವುದಿಲ್ಲ. ಮಾನಸಿಕ ಬಳಲಿಕೆ ಇದ್ದೇ ಇರುತ್ತದೆ.

ಹೀಗಿರುವಾಗ ಕೆಲಸದ ಮಧ್ಯೆ ಸಣ್ಣ ಸಣ್ಣ ವಿರಾಮ ತೆಗೆದುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. (Planning and organizing) ಆ ದಿನದ ಕೆಲಸದ ಬಗ್ಗೆ ಸರಳವಾದ ಸಣ್ಣ ಯೋಜನೆ ಹಾಕಿಕೊಳ್ಳುವುದರಿಂದ ಒತ್ತಡ ಕಡಿಮೆಯಾಗುತ್ತದೆ. ವಿಷಯಗಳನ್ನು ಬರೆದಿಡುವುದರಿಂದ ಮರೆತು ಹೋಗುವ ಆತಂಕ ದೂರವಾಗುತ್ತದೆ. ಮಾನಸಿಕ ಆರೋಗ್ಯ ಸುಧಾರಿಸುತ್ತದೆ.

ಇಂದ್ರಿಯ ವಿಶ್ರಾಂತಿ

ಇಂದ್ರಿಯ ವಿಶ್ರಾಂತಿ

ಬಹಳ ಹೊತ್ತು, ಟಿವಿ, ಕಂಪ್ಯೂಟರ್, ಟ್ಯಾಬ್, ಮೊಬೈಲ್ ಉಪಯೋಗ ದಿಂದ ಹೆಚ್ಚಿನ ಪ್ರಕಾಶಮಾನವಾದ ಬೆಳಕಿನಿಂದ ಕಣ್ಣು , ಜೂಮ್ ಕಾಲ್ಗಳು, ಮೀಟಿಂಗ್‌ಗಳು, ಬಹಳ ಹೊತ್ತು ear phone, head phone ಬಳಕೆ ಇಂದ ಹಾಗು ಶಬ್ದದಿಂದ ಕಿವಿ ದಣಿವನ್ನು ಅನುಭವಿಸುತ್ತವೆ. ಆದ್ದರಿಂದ ಆಗಾಗ ಪ್ರಜ್ಞಾಪೂರ್ವಕವಾಗಿ electronic gadgets ಗಳ ಬಳಕೆಯನ್ನು ಕಡಿಮೆ ಮಾಡುವುದರಿಂದ ಅತಿಯಾದ ಇಂದ್ರಿಯ ಪ್ರಚೋದನೆ ಇಂದ ಆಗುವ ಹಾನಿಯನ್ನು ಕಡಿಮೆಗೊಳಿಸಬಹುದು. ಇಂದ್ರಿಯ ವಿಶ್ರಾಂತಿ ಪಡೆಯಬಹುದು.

ನಿದ್ರಾಹೀನತೆ ಗುಣಲಕ್ಷಣಗಳೇನು, ನೆಮ್ಮದಿ ನಿದ್ರೆಗೆ ಸಲಹೆ ಏನು?ನಿದ್ರಾಹೀನತೆ ಗುಣಲಕ್ಷಣಗಳೇನು, ನೆಮ್ಮದಿ ನಿದ್ರೆಗೆ ಸಲಹೆ ಏನು?

ಸೃಜನಶೀಲ ವಿಶ್ರಾಂತಿ

ಸೃಜನಶೀಲ ವಿಶ್ರಾಂತಿ

ಸಮಸ್ಯೆ ಪರಿಹರಿಸುವ, ಸೃಜನಶೀಲ ರಂಗದಲ್ಲಿ ತೊಡಗಿಸಿಕೊಂಡಿರುವವರಿಗೆ (brainstorm new ideas) ವಿಶ್ರಾಂತಿಯ ಮುಖ್ಯ ವಾಗಿದೆ. ಸೃಜನಶೀಲ ವಿಶ್ರಾಂತಿ ಯು ಹೊಸತನಕ್ಕೆ ದಾರಿಮಾಡಿಕೊಡುತ್ತದೆ. ಪ್ರಕೃತಿ ವಿಶ್ರಾಂತಿ ನೀಡುವುದಲ್ಲದೇ ಹೊಸ ಆಲೋಚನೆಗಳಿಗೆ, ಬರವಣಿಗೆಗೆ, ಸುತ್ತಮುತ್ತಲ ಪರಿಸರ ಗ್ರಹಿಸುವ ರೀತಿಯಲ್ಲಿ ಹೊಸತನ ತರುತ್ತದೆ. ಪುನಃ ಚೈತನ್ಯದಾಯಕವಾಗುತ್ತದೆ. ಸ್ಫೂರ್ತಿದಾಯಕ ಸ್ಥಳಗಳಿಗೆ, ಪ್ರಶಾಂತವಾದ ಸ್ಥಳಗಳಿಗೆ ಭೇಟಿ ಕೊಡುವುದು ಸಹಕಾರಿ.

ಆರೋಗ್ಯಕರ ಬದುಕಿಗೆ ನಿದ್ದೆ ಅತಿಮುಖ್ಯ..!ಆರೋಗ್ಯಕರ ಬದುಕಿಗೆ ನಿದ್ದೆ ಅತಿಮುಖ್ಯ..!

ಭಾವನಾತ್ಮಕ ವಿಶ್ರಾಂತಿ

ಭಾವನಾತ್ಮಕ ವಿಶ್ರಾಂತಿ

ಇಲ್ಲಿ ಆಯಾಸಗೊಳಿಸುವ ಅಥವಾ ನಕಾರಾತ್ಮಕ ಭಾವನೆಗಳನ್ನು ಹುಟ್ಟುಹಾಕುವ ಪರಿಸರ ಹಾಗು ಸನ್ನಿವೇಶಗಳಿಂದ ಕೊಂಚ ವಿರಾಮ ಅಗತ್ಯ. ಮುಕ್ತ ಸಂವಹನ, ಧನಾತ್ಮಕ ಭಾವನೆಗಳನ್ನು ಹುಟ್ಟಿಹಾಕುವ, ನಿಮ್ಮ ಚಟುವಟಿಕೆಗಳನ್ನು ಬೆಂಬಲಿಸುವ, ನಿಮ್ಮ ಒಳ್ಳೆಯ ಅಂಶಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಉತ್ತಮ ಜೀವನ ನಡೆಸಲು ಸಹಕಾರಿಯಾಗುವ ಜನ ಹಾಗು ಪರಿಸರವು ಭಾವನಾತ್ಮಕ ವಿಶ್ರಾಂತಿ ಪಡೆಯುವಲ್ಲಿ ಸಹಕಾರಿ. ಇದು ಆತ್ಮ ವಿಶ್ವಾಸವನ್ನು ಹೆಚ್ಚಿಸುವುದಲ್ಲದೇ ಸಂಬಂಧಗಳನ್ನು ಉತ್ತಮಗೊಳಿಸಿತ್ತದೆ.

ಯಾವ ದಿಕ್ಕಿಗೆ ತಲೆ ಹಾಕಿ ನಿದ್ರಿಸಿದರೆ ಉತ್ತಮ, ಇಲ್ಲಿದೆ ವಾಸ್ತು ಟಿಪ್ಸ್ಯಾವ ದಿಕ್ಕಿಗೆ ತಲೆ ಹಾಕಿ ನಿದ್ರಿಸಿದರೆ ಉತ್ತಮ, ಇಲ್ಲಿದೆ ವಾಸ್ತು ಟಿಪ್ಸ್

ಆಧ್ಯಾತ್ಮಿಕ ವಿಶ್ರಾಂತಿ

ಆಧ್ಯಾತ್ಮಿಕ ವಿಶ್ರಾಂತಿ

ಆಧ್ಯಾತ್ಮಿಕ ವಿಶ್ರಾಂತಿಯು ಆಂತರಿಕ ಸಂತೋಷವನ್ನು ಒಳಗೊಂಡಿದೆ. ನಮಗೆ ಸಂತೋಷದಾಯಕ ಕೆಲಸ ಮಾಡಿದಾಗ, ಖುಷಿಯಾಗಿ ಸದ್ವಿಚಾರ ಮಾತನಾಡುವವರ ಜೊತೆ ವಿಚಾರವಿನಿಮಯವಾದಾಗ, ಮನಸ್ಸು ಶಾಂತ ಸ್ಥಿತಿಯಲ್ಲಿದ್ದಾಗ ನಮಗೆ ನಮ್ಮ ಆಲೋಚನೆಗಳ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಮನಸಿನ ಗೊಂದಲ ಕಡಿಮೆಯಾದಾಗ ಆಧ್ಯಾತ್ಮಿಕ ಉಲ್ಲಾಸ ಹೆಚ್ಚುತ್ತದೆ. ದೈನಂದಿನ ಧ್ಯಾನ, ಪ್ರಾರ್ಥನೆ, ಸಮುದಾಯದ ಒಳಗೊಳ್ಳುವಿಕೆಯನ್ನು ರೂಢಿ ಮಾಡಿಕೊಂಡಾಗ, ಸ್ವೀಕಾರ, ಸ್ನೇಹ, ಪ್ರೀತಿ (sense of belongings) ಹೆಚ್ಚಿಸುತ್ತದೆ.

ನಿದ್ರಾಹೀನತೆಯಲ್ಲಿ ಭಾರತೀಯರು ಮುಂದೆ: ಸಮೀಕ್ಷೆನಿದ್ರಾಹೀನತೆಯಲ್ಲಿ ಭಾರತೀಯರು ಮುಂದೆ: ಸಮೀಕ್ಷೆ

ನಾವು ಸರಿಯಾದ ವಿಶ್ರಾಂತಿಯನ್ನು ಪಡೆದಾಗ ಆರೋಗ್ಯ, ಚೈತನ್ಯ ಮತ್ತು ಆಂತರಿಕ ಶಾಂತಿ ಹೊಂದಬಹುದು. ವಿಶ್ರಾಂತಿಯು ಕೇವಲ "ವಾರಾಂತ್ಯದ" ವಿಚಾರವಾಗಿರದೆ ದೈನಂದಿನ ಚಟುವಟಿಕೆಯ ಭಾಗವನ್ನಾಗಿಸಿಕೊಳ್ಳಬೇಕು. ಆಗ ನಾವು ನಮ್ಮನ್ನು, ಇತರರನ್ನು ಹಾಗು ಸಮಾಜವನ್ನು ಸಂತೋಷವಾಗಿಟ್ಟುಕೊಳ್ಳಲು ಸಾಧ್ಯವಾಗುವುದು, ಆರೋಗ್ಯಕರ ಕೆಲಸ ಹಾಗು ವಿಚಾರಗಳಿಗೆ ಅನೇಕ ಕೊಡುಗೆಗಳನ್ನು ನೀಡಬಹುದು. ಮಾನಸಿಕ ಆರೋಗ್ಯ ಉತ್ತಮಗೊಳಿಸಬಹುದು.

English summary
Psychology: Types of Sleep and Relaxation, disorders caused due to insomnia and steps to reduce it by Rekha Belvadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion