• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ಅಂದ ಹಾಗೆ ಹೊಸವರ್ಷಕ್ಕೆ ನಿಮ್ಮ ಸಂಕಲ್ಪಗಳೇನು?

By ರೇಖಾ ಬೆಳವಾಡಿ, ಆಪ್ತಸಲಹೆಗಾರರು
|
Google Oneindia Kannada News

ಸಾರಾ ಹಾಗೂ ಸಮೀರ್ ಇಬ್ಬರೂ ಗುಲಾಬಿ ಹೂವಿನ ಸಸಿಗಳನ್ನು, ಬಹಳ ದಿನಗಳು ಹುಡುಕಿ ಮೆಚ್ಚಿದಂಥ ಫಳಗುಟ್ಟುವ ಎರಡು ಬೇರೆ ಬೇರೆ ಕುಂಡದೊಳಗೆ ನೆಟ್ಟು ಕಣ್ಣಿಗೆ ಕಾಣುವಂತಹ ಜಾಗದಲ್ಲಿ ಇಡುತ್ತಾರೆ.

ಸಾರಾ ಉತ್ಸಾಹದಿಂದ ಕಾಲ ಕಾಲಕ್ಕೆ ನೀರು ಹಾಗು ಗೊಬ್ಬರವನ್ನೂ ಹಾಕುತ್ತಾ, ಆಗಾಗ ಗಿಡವನ್ನು ಬಿಸಿಲಿನಲ್ಲಿ ಇಟ್ಟು, ಮಣ್ಣನ್ನು ಬದಲಿಸುತ್ತಾ, ಕಾಳಜಿ ಇಂದ ನೋಡಿಕೊಳ್ಳುತ್ತಾಳೆ. ಗಿಡದಲ್ಲಿ ಹೂ ಬಿಡಲು ಬಹಳ ಕಾಲ ಹಿಡಿಯುತ್ತದೆ. ಆದರೆ ಅವಳು ಸಂಯಮದಿಂದ ಹಾಗು ಮೊದಲಿನ ಉತ್ಸಾಹದಿಂದಲೇ ಗಿಡದ ಪೋಷಣೆಯಲ್ಲಿ ತೊಡಗಿದ್ದಾಳೆ.

ಗಮನಿಸಿ: ಹೊಸ ವರ್ಷದಲ್ಲಿ ಈ ಪ್ರಮುಖ ಹಣಕಾಸು ಬದಲಾವಣೆಗಳು ಆಗಲಿದೆ.. ಗಮನಿಸಿ: ಹೊಸ ವರ್ಷದಲ್ಲಿ ಈ ಪ್ರಮುಖ ಹಣಕಾಸು ಬದಲಾವಣೆಗಳು ಆಗಲಿದೆ..

ಸಮೀರ್ ಗಿಡ ತಂದ ಹೊಸತರಲ್ಲಿ ಬಹಳ ಹುರುಪಿನಿಂದ ದಿನವೂ ಆರೈಕೆ ಮಾಡುತ್ತಾನೆ. ಬಹಳ ದಿನವಾದರೂ ಗಿಡವು ಹೂ ಬಿಡುವುದು ತಡವಾದಾಗ ನಿರಾಶನಾಗುತ್ತಾನೆ‌.

ಸಹನೆಗೆಟ್ಟು ಗೊಬ್ಬರವನ್ನು ಹೆಚ್ಚಾಗಿಯೇ ಹಾಕುತ್ತಾನೆ. ಅಂತೆಯೇ ಗಿಡವು ಬಹಳ ವೇಗವಾಗಿ ಬೆಳೆದು ಒಮ್ಮೆಲೇ ಹೆಚ್ಚು ಹೂಗಳು ಸಹ ಬಿಡಲು ಪ್ರಾರಂಭಿಸುತ್ತದೆ. ಒಮ್ಮೆ ಹೂ ಬಿಟ್ಟ ನಂತರ ಗಿಡದ ಬಗೆಗಿನ ಆಸಕ್ತಿಯಾಗಲೀ, ಕಾಳಜಿಯಾಗಲೀ ಕ್ಷೀಣಿಸುತ್ತಾ ಬರುತ್ತದೆ. ನೀರು ಹಾಕಿದರಾಯಿತು, ಮಣ್ಣು ಬದಲಿಸಿದರಾಯಿತು ಆಮೇಲೆ ನೋಡಿಕೊಳ್ಳೋಣ ಹೇಗೂ ಹೂ ಬಿಡಲು ಶುರುವಾಗಿದೆ ಎಂಬ ಉದಾಸೀನತೆ ಆವರಿಸಿಬಿಡುತ್ತದೆ‌. ಗಿಡಕ್ಕೆ ಕೆಲವೊಮ್ಮೆ ಅತಿ ಹೆಚ್ಚು ಗೊಬ್ಬರ ಕೂಡ ಗಿಡಕ್ಕೆ ಹಾನಿ ಉಂಟುಮಾಡುತ್ತದೆ. ಕೆಲವೊಮ್ಮೆ ಬಹಳ ದಿನಗಳ ಕಾಲ ನೀರೇ ಕಾಣದೆ ಕೆಲವೇ ದಿನಗಳಲ್ಲಿ ಗಿಡ ಬತ್ತುಹೋಗುತ್ತದೆ.

ಸಾರಾಳ ಸತತ ಕಾಳಜಿ ಹಾಗು ನೈಸರ್ಗಿಕ ಪೋಷಣೆ ಇಂದ ಗುಲಾಬಿ ಗಿಡವು ಸ್ವಲ್ಪ ತಡವಾಗಿ ಹೂ ಬಿಟ್ಟರೂ ಸಹ ಇಂದಿನ ತನಕ ಹಸುರಾಗಿ ಆರೋಗ್ಯಕರವಾಗಿದೆ. ಬಣ್ಣದ ಹೂಗಳು ಮನಸ್ಸಿಗೆ ಮುದ ನೀಡುತ್ತದೆ.

ಜೀವನದಲ್ಲಿ ''ಸಿಲುಕಿ ಹಾಕಿಕೊಂಡ'' ಭಾವನೆ, ಹೊರಬರೋದು ಹೇಗೆ? ಜೀವನದಲ್ಲಿ ''ಸಿಲುಕಿ ಹಾಕಿಕೊಂಡ'' ಭಾವನೆ, ಹೊರಬರೋದು ಹೇಗೆ?

ಕೆಲವೇ ದಿನಗಳ ಹಿಂದೆ ಹೊಸ ವರ್ಷವನ್ನು ಅತ್ಯಂತ ಖುಷಿ ಇಂದ ಸ್ವಾಗತಿಸಿದ್ದೇವೆ. ಹೊಸ ವರ್ಷದಲ್ಲಿ ಹೊಸ ಹೊಸ ಸಂಕಲ್ಪಗಳನ್ನು ತೆಗೆದುಕೊಳ್ಳುವುದು ಸಹಜ. ನಮ್ಮಲ್ಲೂ ಹೀಗೆ ಹೊಸ ವರ್ಷದಲ್ಲಿ ಹಲವರು ಸಂಕಲ್ಪಗಳನ್ನು (resolution) ಮಾಡಿಕೊಂಡಿರಬಹುದು.

 ಉದಾಹರಣೆಗೆ, ಈ ವರ್ಷದ ಸಂಕಲ್ಪ

ಉದಾಹರಣೆಗೆ, ಈ ವರ್ಷದ ಸಂಕಲ್ಪ

* ದೈಹಿಕ ಹಾಗು ಮಾನಸಿಕ ಆರೋಗದ ಕಡೆ ಗಮನ ಹರಿಸುವುದು
* ಉತ್ತಮ ಆಹಾರ ಪದ್ದತಿ ಬೆಳೆಸಿಕೊಳ್ಳುವುದು
* ಪ್ರತಿನಿತ್ಯ ವ್ಯಾಯಾಮ ಮಾಡುವುದು
* ಹೆಚ್ಚು ಪುಸ್ತಕಗಳನ್ನು ಓದುವುದು
* ದಿನಚರಿಯಲ್ಲಿ ಶಿಸ್ತನ್ನು ಮೂಡಿಸಿಕೊಳ್ಳುವ ಪ್ರಯತ್ನ
* ಟಿವಿ/ಎಲೆಕ್ಟ್ರಾನಿಕ್ ಉಪಕರಣಗಳಬಳಕ್ಕೆ ಸಮಯವನ್ನು ಕಡಿಮೆ ಮಾಡುವುದು
* ದಿನಚರಿ ಬರೆಯುವುದು
* ಹೆಚ್ಚು ಪ್ರವಾಸ ಕೈಗೊಳ್ಳುವುದು
* ಪ್ರೀತಿ, ಸ್ನೇಹ ಕುಟುಂಬ -ಸಂಬಂಧಗಳಿಗೆ ಹೆಚ್ಚಿನ ಸಮಯ ಕೊಡುವುದು.
* ಅಗತ್ಯವಾದ ವಸ್ತುಗಳನ್ನು ಮಾತ್ರ ಖರೀದಿ ಮಾಡದಿರುವುದು
* ಉಪಯೋಗಿಸದೇ ಹಾಗೆಯೇ ಇಟ್ಟ ಅನೇಕ ವಸ್ತುಗಳನ್ನು, ಅಗತ್ಯ ವಿರುವವರಿಗೆ ಕೊಡುವುದು
* ಪರಿಸರ ಸ್ನೇಹಿಯಾಗಿರುವುದು
* ಅಗತ್ಯವಾದ ದಾಖಲೀಕರಣ ಪತ್ರಗಳು ಹಾಗು ಆರ್ಥಿಕ ಅರಿವನ್ನುಹೆಚ್ಚಿಸಿಕೊಳ್ಳುವುದು (documentation and financial awareness)
* ಹೊಸ ಹವ್ಯಾಸ, ಕ್ರೀಡೆ ಅಥವಾ ಇತರ ಆಸಕ್ತಿಯನ್ನು ಬೆಳೆಸಿಕೊಳ್ಳುವುದು
* ಆರಾಮವಲಯದಿಂದ (comfort zone) ಆಚೆ ಬಂದು ಹೊಸ ಪ್ರಯತ್ನ ...ಇತ್ಯಾದಿ

ವರ್ಷದ ಆರಂಭದಲ್ಲಿ, ತೆಗೆದುಕೊಂಡ ಸಂಕಲ್ಪದತ್ತ ಗಮನ ಹರಿಸುತ್ತೇವೆ, ಹುರುಪಿನಿಂದ ಕೆಲಸ ಕೂಡ ಮಾಡುತ್ತೇವೆ. ಆದರೆ ಅನೇಕ ಬಾರಿ ಸಂಕಲ್ಪಗಳನ್ನು ಮುಂದುವರೆಸಲಾಗುವುದಿಲ್ಲ. ಕೆಲವೇ ದಿನಗಳು ಅಥವಾ ತಿಂಗಳುಗಳು ಅನುಸರಿಸಿ ನಂತರ ನಿಲ್ಲಿಸಿಬಿಡುತ್ತೇವೆ. ಆಸಕ್ತಿ ಕಡಿಮೆಯಾಗುತ್ತಾ ಬರುತ್ತದೆ. ಕೆಲವೊಮ್ಮೆ ಅಲ್ಪ ಫಲಿತಾಂಶದಲ್ಲಿಯೇ ತೃಪ್ತಿ ಹೊಂದುವ ಕಾರಣ ಸಂಕಲ್ಪ ಮುಂದುವರೆಸುವ ಪ್ರಯತ್ನ ಮುಂದುವರೆಸುವುದಿಲ್ಲ. ಆದರೆ ನಂತರ ಅತೃಪ್ತ ಭಾವನೆ ಇಂದ ನಮ್ಮ ಮೇಲೆ ನಮಗೆ ನಿರಾಶೆಯಾಗುತ್ತದೆ. ನನ್ನಿಂದ ಯಾವುದೇ ಕೆಲಸ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂಬ ನಕಾರಾತ್ಮಕತೆ ಹೆಚ್ಚುತ್ತದೆ. ಆತ್ಮವಿಶ್ವಾಸ ಕುಗ್ಗುತ್ತದೆ.

 ಸಂಭವನೀಯ ಕಾರಣಗಳು

ಸಂಭವನೀಯ ಕಾರಣಗಳು

ಇದಕ್ಕೆ ಸಂಭವನೀಯ ಕಾರಣಗಳನ್ನು ತಿಳಿಯೋಣ.

1) ಕಡಿಮೆ ಸಮಯದಲ್ಲಿ ಅತಿಯಾದ ವಾಸ್ತವವಲ್ಲದ ಗುರಿ ಹಾಗು ನಿರೀಕ್ಷೆ (over and unrealistic expectation in the limited time period)

ಇಂದಿನ ಪ್ರಪಂಚದಲ್ಲಿ ಎಲ್ಲವೂ ತ್ವರಿತ (fast). ಜೀವನ, ಆಹಾರ, ಕಲಿಕೆ, ಹೀಗೆ (Fast food, fast life, fast learning etc) ತಂತ್ರಜ್ಞಾನ ಬಳಕೆ ಇಂದ ಬೆರಳ ತುದಿ ಹಾಗು ಕೆಲವೇ ನಿಮಿಷಗಳಲ್ಲಿ ಕಠಿಣ ಶ್ರಮವಿರದೆ ಕುಳಿತಲ್ಲಿಯೇ ಬಹುತೇಕ ಕೆಲಸಗಳನ್ನು ಮಾಡಬಹುದು. ಯಾವುದೂ ಸಹ ಹೆಚ್ಚಿನ ಸಮಯ ತೆಗೆದುಕೊಳ್ಳುವಂತಿಲ್ಲ.

ಇಂತಹ ಫಾಸ್ಟ್ ಜೀವನಕ್ಕೆ ಒಗ್ಗಿಕೊಂಡಿರುವ ನಮಗೆ ಅತಿ ಶೀಘ್ರದಲ್ಲಿ ನಾವು ಅಂದುಕೊಂಡಂತೆ ಬದಲಾವಣೆಗಳು ಹಾಗು ಫಲಿತಾಂಶ ಕಾಣದಿದ್ದಾಗ ಬಹಳ ಬೇಗ ಆಸಕ್ತಿ ಕಳೆದುಕೊಂಡುಬಿಡುತ್ತೇವೆ. ಪ್ರಯತ್ನವನ್ನೇ ಬಿಟ್ಟುಬಿಡುತ್ತೇವೆ.

ಉದಾಹರಣೆಗೆ:
ಹೆಚ್ಚುತ್ತಿರುವ ನೈಸರ್ಗಿಕ ವಸ್ತುಗಳ ಬೇಡಿಕೆಯ ಕಾರಣ ಮಡಿಕೆ (earthen clay pots) ವ್ಯಾಪಾರ ಪ್ರಾರಂಭಿಸುವ ಯೋಚನೆ ಬರುತ್ತದೆ ನಿಮಗೆ ಎಂದಿಟ್ಟುಕೊಳ್ಳೋಣ. ಆದಷ್ಟು ಬೇಗ ಕಲೆಯನ್ನು ಕರಗತ ಮಾಡಿಕೊಂಡು ಬಿಡಬೇಕು ಎಂಬುದು ನಿಮ್ಮ ಆಸೆ.
ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಮಡಿಕೆಗಳ ಪ್ರದರ್ಶನ (exhibition) ಇದೆ ಎಂದು ತಿಳಿಯುತ್ತದೆ. ಉತ್ಸಾಹದಲ್ಲಿ ಪ್ರದರ್ಶನದಲ್ಲಿ ಭಾಗಿಯಾಗಲು ಇಚ್ಛಿಸುತ್ತೀರಿ. ಹೆಸರೂ ಕೂಡ ನೊಂದಾಯಿಸುತ್ತೀರಿ ಕೂಡ.
ಬೇಕಾದ ಮಾಹಿತಿ, ಕಲಿಕೆ, ಕಚ್ಚಾವಸ್ತುಗಳು, ನುರಿತ ಕೆಲಸಗಾರರು, ಸಮಯ ಎಲ್ಲವೂ ಕಡಿಮೆ ಇದೆ. ಆದರೂ ನಿಮ್ಮ ನಿರೀಕ್ಷೆ ಹೆಚ್ಚು ಆಗಿಯೇ ಇದೆ.

* ಜೇಡಿ ಮಣ್ಣನ್ನು, ಹದ ಮಾಡಿಕೊಳ್ಳಬೇಕು
* ಹದವಾದ ಮಣ್ಣನ್ನು ಚಕ್ರ ದಲ್ಲಿ ಸುತ್ತಬೇಕು
* ಜೇಡಿಮಣ್ಣಿಗೆ ಆಕಾರ ಕೊಡಬೇಕು.
* ಸರಿಯಾದ ಆಕಾರ ಹಾಗು ಬೇಕಾದ ಚೆಂದನ ಗುರುತುಗಳನ್ನು ಮಾಡಿದ ನಂತರ ಬಹಳ ಸಮಯ ಗಾಳಿ, ಬಿಸಿಲಿನಲ್ಲಿ ಆರಿ ಗಟ್ಟಿಯಾಗಲು ಬಿಡಬೇಕು.

ತರಾತುರಿಯಲ್ಲಿ ತಯಾರಾದ ಮಡಿಕೆಗಳ ಗುಣಮಟ್ಟ ಚೆನ್ನಾಗಿಲ್ಲದ ಕಾರಣ ಪ್ರದರ್ಶನದಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಇದರಿಂದ ನಿಮಗೆ ನಿರಾಶೆಯುಂಟಾಗುತ್ತದೆ. ಸಮಯ, ಶ್ರಮ ಹಾಗು ಕಚ್ಚಾ ವಸ್ತುಗಳು ವ್ಯರ್ಥವಾಗುತ್ತದೆ. ಯೋಜನೆ ಕೈಬಿಡಲಾಗುತ್ತದೆ.

 ಯೋಜನೆ ಕೈಬಿಡಲು ಕಾರಣವೇನು?

ಯೋಜನೆ ಕೈಬಿಡಲು ಕಾರಣವೇನು?

* ಈ ನಿರಾಸೆಗೆ ಹಾಗು ಹೊಸ ಯೋಜನೆ ಕೈಬಿಡಲು ಕಾರಣವೇನು? ಒಮ್ಮೆ ಯೋಚಿಸಿ

ಕಡಿಮೆ ಸಮಯದಲ್ಲಿ ವಾಸ್ತವವಲ್ಲದ ನಿರೀಕ್ಷೆಗಳು, ಗುರಿಗಳು ಎಂದರೆ ತಪ್ಪಿಲ್ಲ.
ಮಾಹಿತಿ, ಸಮಯ ಹಾಗು ಕೆಲಸಗಾರರು, ಕೌಶಲತೆಯ ಕೊರತೆಯ ಕಾರಣ ಮಡಿಕೆಗಳ ಗುಣಮಟ್ಟದಲ್ಲಿ ವ್ಯತ್ಯಾಸವಾಗುತ್ತದೆ. ಸರಿಯಾಗಿ ಮಣ್ಣು ಹದವಾಗದ ಕಾರಣ, ಸರಿಯಾಗಿ ಮಡಿಕೆ ಒಣಗದ ಕಾರಣ ಪುಡಿ ಪುಡಿಯಾಗುತ್ತದೆ. ಇದರಿಂದ ನೋವುಂಟಾಗುತ್ತದೆ ನಿರಾಶೆ ಯಾಗುತ್ತದೆ. ಈ ಕೆಲಸ ನಮಗೆ ಸರಿ ಬರುತ್ತಿಲ್ಲ ಎಂದು ಆಸಕ್ತಿ ಕುಂದುತ್ತದೆ.

ವಾಸ್ತವತೆಯ ಅರಿವಿದ್ದು ಸರಿಯಾದ ಪೂರ್ವ ತಯಾರಿ ಹಾಗು ಸಮಯ ನೀಡಿದ್ದರೆ ಇಂತಹ ನಿರಾಶೆ ಆಗುತ್ತಿರಲಿಲ್ಲ. ಯಾವುದೇ ಕಲೆಯಾಗಲೀ ಕರಗತವಾಗುವುದಕ್ಕೆ ಸಮಯ ಹಿಡಿಯುತ್ತದೆ.ಸಂಯಮ- ಸತತ ಪ್ರಯತ್ನ ಕೂಡಾ ಬೇಕು.

ಹಾಗಾಗಿ ಯಾವುದೇ ಹೊಸತನ ಅಥವಾ ಬದಲಾವಣೆಯ- ಸಂಕಲ್ಪಗಳ ಬಗ್ಗೆ ವಾಸ್ತವಿಕ ನಿರೀಕ್ಷೆಗಳು ಹಾಗು ಮಾಹಿತಿ ಅಗತ್ಯ. ಸಂಯಮ ಕೂಡ. ಇದರಿಂದ ಹೆಚ್ಚಿನ ನಿರಾಶೆಯಾಗುವುದಿಲ್ಲ.

 ಕ್ರಮಗಳನ್ನು ಅನುಸರಿಸದೇ ಇರುವುದು

ಕ್ರಮಗಳನ್ನು ಅನುಸರಿಸದೇ ಇರುವುದು

2) ಸರಿಯಾದ ಕ್ರಮಗಳನ್ನು ಅನುಸರಿಸದೇ ಇರುವುದು (following false steps)

ಉದಾಹರಣೆಗೆ:
* ದೇಹದ ತೂಕದಲ್ಲಿ ಬದಲಾವಣೆ ತರಬೇಕು ಎಂದುಕೊಂಡಾಗ (ತೂಕ ಹೆಚ್ಚು ಮಾಡುವುದು ಅಥವಾ ತೂಕದಲ್ಲಿ ಇಳಿಕೆ) ನಮ್ಮ ದೇಹಕ್ಕೆ, ದಿನಚರಿಗೆ ಹೊಂದುವ ಆಹಾರ ಕ್ರಮ, ದೈಹಿಕ ವ್ಯಾಯಾಮದ ಬಗ್ಗೆ ಸರಿಯಾದ ಮಾಹಿತಿ ಪಡೆದು ಕ್ರಮ ಅನುಸರಿಸಬೇಕು.
ಆಹಾರ ಮತ್ತು ವ್ಯಾಯಾಮದಲ್ಲಿ ಸಮತೋಲನ ಅಗತ್ಯ. ಹಾಗು ಇದು ಪ್ರತಿ ದಿನ ಅನುಸರಿಸಬೇಕು.
ಎಲ್ಲೋ ಕೇಳಿದ, ಮತ್ಯಾರಿಗೋ ಹೊಂದಿಕೆಯಾದಂತಹ ಆಹಾರ ವ್ಯಾಯಾಮ ಕ್ರಮ ನಾವು ಅನುಸರಿಸಿದಾಗ, ಸಹಜವಾಗಿ ನಮ್ಮ ನಿರೀಕ್ಷೆಗೆ ತಕ್ಕಂತ ಫಲಿತಾಂಶ ಸಿಗುವುದಿಲ್ಲ. ಕಾರಣ ನಮಗೆ ಹೊಂದಿಕೆಯಾಗದೇ ಇರಬಹುದು. ತಪ್ಪು ಕ್ರಮ ಅನುಸರಿಸಿ ಡಯಟ್ ಮಾಡುತ್ತಿದ್ದೇನೆ, ವ್ಯಾಯಾಮ ಸಹ ಮಾಡುತ್ತಿದ್ದೇನೆ ಆದರೂ ಸಹ ಫಲಿತಾಂಶ ಸಿಗುತ್ತಿಲ್ಲ ಎಂದು ಬೇಸರವಾಗಬಹುದು. ಸಮಯವೂ ಶ್ರಮವಹಿಸಿದ್ದರೂ ಕ್ರಮ ಸರಿ ಇಲ್ಲದೆ ಇರಬಹುದು.

ಬಹಳ ಬೇಗ ಬದಲಾವಣೆ ನಿರೀಕ್ಷಿಸಿ ಅತಿಯಾಗಿ ದೇಹ ದಂಡಿಸಿ, ಪೌಷ್ಟಿಕ ಆಹಾರ ಸೇವಿಸಿದರೂ, ಸೇವಿಸದಿದ್ದರೂ ಸಹ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಹಾರ, ವ್ಯಾಯಾಮದ ಸಮತೋಲನದಿಂದ ಆರೋಗ್ಯಕರ ಬದಲಾವಣೆಯು ಸಾಧ್ಯ.

ತಪ್ಪಾದ ಕ್ರಮವನ್ನು ಬಿಟ್ಟು ನಿಮಗೆ ಹೊಂದಿಕೆಯಾಗುವಂತಹ ವಿಧಾನದ ಮೇಲೆ ಕೆಲಸಮಾಡಿದರೆ ಫಲಿತಾಂಶ ಧನಾತ್ಮಕ ವಾಗಿರುತ್ತದೆ. ಆಸಕ್ತಿ ಹಾಗು ಆತ್ಮವಿಶ್ವಾಸವೂ ಹೆಚ್ಚುತ್ತದೆ.

 ನಿರಂತರತೆಯ ಕೊರತೆ

ನಿರಂತರತೆಯ ಕೊರತೆ

3) ಪರಿಶ್ರಮ ಹಾಗು ನಿರಂತರತೆಯ ಕೊರತೆ (lack of perseverance)

ಪರಿಶ್ರಮವು - ಸತತ ಪ್ರಯತ್ನ ಕಾಲಾಂತರದಲ್ಲಿ ಗುರಿ ಅಥವಾ ಉತ್ಸಾಹವನ್ನು ಮುಂದುವರೆಸುವ ನಮ್ಮ ಸಾಮರ್ಥ್ಯವನ್ನು ಸೂಚಿಸುತ್ತದೆ. ಜೀವನದಲ್ಲಿ ಗುರಿ ಮುಟ್ಟುವಲ್ಲಿ ಹಾಗು ಯಶಸ್ಸಿಗೆ ಪರಿಶ್ರಮವು ಅಗತ್ಯವಾದ ಗುಣವಾಗಿದೆ.

ಉದಾಹರಣೆಗೆ:
Wild life Photography - ವನ್ಯ ಜೀವಿ ಛಾಯಾಚಿತ್ರಣ ಎಂದರೆ ಅನೇಕರಿಗೆ ಆಸಕ್ತಿ. ವನ್ಯ ಜೀವಿಗಳ ಛಾಯಾಚಿತ್ರಗಳನ್ನು ನೋಡಿ ಬಹಳ ಆನಂದಿಸುತ್ತೇವೆ. ಆ ಒಂದು ಸಂದರ್ಭವನ್ನು ಜೀವಿಸುತ್ತೇವೆ ಕೂಡಾ.

ಯಾವುದೋ ಒಂದು ಉತ್ತಮ ಘಳಿಗೆ, ರೋಮಾಂಚಕ ಸಂದರ್ಭವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು, ಹಲವಾರು ದಿನಗಳು, ವಾರಗಳು, ತಿಂಗಳುಗಳು, ವರ್ಷಗಳು ಕಾದಿರುತ್ತಾರೆ. ಆದರೆ ಪ್ರಯತ್ನ ನಿರಂತರವಾಗಿ ಸಾಗುತ್ತದೆ. ಬಿಸಿಲು, ಮಳೆ, ಚಳಿ ಎನ್ನದೆ ಕಾಡಿನ ಸಂಕುಲದಲ್ಲಿ ತಾವೂ ಒಬ್ಬರಾಗಿ ಬದುಕಿರಬೇಕಾಗುತ್ತದೆ.

ಕಾಡಿನ ಪ್ರಕೃತಿ ಹಾಗು ವಾತಾವರಣಗಳ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ವನ್ಯ ಜೀವಿಗಳು ದಾಳಿ ಮಾಡುವ ಅನೇಕ ಸಂದರ್ಭಗಳು ಕೂಡ ಇರುತ್ತದೆ. ಇದರಿಂದ ವನ್ಯಜೀವಿಗಳ ಜೀವನ ಕ್ರಮ, ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಾದ ರೀತಿ, ವಿಪತ್ತು ನಿರ್ವಹಣೆ (disaster management) ಅರಿವು ಸಹ ಅಗತ್ಯ ವಾಗಿ ಅಧ್ಯಯನ ಮಾಡಿಕೊಂಡಿರಬೇಕಾಗುತ್ತದೆ. ಎಷ್ಟೇ ಅಡೆತಡೆ ಬಂದರೂ ಸಹ ಅವುಗಳನ್ನು ನಿಭಾಯಿಸಿ ಸತತ ಪ್ರಯತ್ನದಿಂದ ವನ್ಯಜೀವಿ ಛಾಯಾ ಚಿತ್ರಕಾರರು ತಾವು ಅಂದುಕೊಂಡಂತಹ ಗುರಿ ತಲುಪುತ್ತಾರೆ. ಸತತ ಪರಿಶ್ರಮದಿಂದ ಇದು ಸಾಧ್ಯ.

ಈ ಮೇಲಿನ ಉದಾಹರಣೆಗಳಿಂದ ನಮಗೆ ತಿಳಿವುದು ಏನೆಂದರೆ.
* ವಾಸ್ತವಿಕ ಗುರಿ/ ಉದ್ದೇಶ
* ಸರಿಯಾದ ಮಾಹಿತಿ
* ಸರಿಯಾದ ವಿಧಾನ, ಕ್ರಮಗಳ ಅನುಸರಣೆ
* ಶಿಸ್ತು
* ಸಂಯಮ
* ಸತತ ಪರಿಶ್ರಮಗಳು
* ಅರಿವು
***
ಹೊಸವರ್ಷಕ್ಕೆ ನಿಮ್ಮ ಸಂಕಲ್ಪಗಳೇನು?
ಅಲ್ಪಾವಧಿಯ ಗುರಿಗಳು
ತೆಗೆದುಕೊಂಡ ಯಾವುದೇ ಸಂಕಲ್ಪ ಅಥವಾ ನಿರ್ಧಾರಗಳಲ್ಲಿ ಧನಾತ್ಮಕ ಫಲಿತಾಂಶದಿಂದ ಗುರಿ ತಲುಪಲು ಸಾಧ್ಯ. ಅಲ್ಪಾವಧಿಯ ಗುರಿಗಳು (short term goals) ಉತ್ಸಾಹ ಹಾಗು ಆತ್ಮವಿಶ್ವಾಸವನ್ನು ಹೆಚ್ಚಿಸುವುದು.

ತಮ್ಮ ಆರಾಮ ವಲಯದಿಂದ ಆಚೆಯ ಹೊಸ ಕಲಿಕೆ, ಪ್ರಯತ್ನ ಮೊದಮೊದಲು ಕಷ್ಟವೆನಿಸಿದರೂ ಸಹ,‌ ಸ್ವಲ್ಪ ಸ್ವಯಂ ಪ್ರೇರಣೆ ನಮ್ಮ ಹೊಸ ಪಯಣವನ್ನು ಚೈತನ್ಯ ಕಾರಿಯನ್ನಾಗಿಸಬಹುದು.

ಸಮೀರ ಒಮ್ಮೆ ಹೂ ಬಿಟ್ಟ ನಂತರ ಗಿಡದ ಬಗೆಗೆ ಉದಾಸೀನತೆ ತೋರಿದಂತೆ, ನಾವು ನಮ್ಮ ಹೊಸ ಪ್ರಯತ್ನ, ಸ್ನೇಹ, ಸಂಬಂಧ, ಗುರಿ, ಕ್ರೀಡೆಯಲ್ಲಿ ಸ್ವಲ್ಪ ಯಶಸ್ಸನ್ನು ಕಂಡಾಗ, ಅವುಗಳ ಬಗ್ಗೆ ಲಘುವಾಗಿ ಯೋಚಿಸದೆ ಉದಾಸೀನತೆ ತೋರದೆ ಇರೋಣ. ಮೊದಲಿನ ಉತ್ಸಾಹವೇ ಸದಾ ಇರುವಂತೆ ಸತತವಾಗಿ ಪೋಷಿಸೋಣ ಹಸಿರಾಗಿಟ್ಟುಕೊಳ್ಳೋಣ. ಪ್ರಯತ್ನ ಮುಖ್ಯ.

ನಮ್ಮ ಉತ್ಸಾಹ ಭಗ್ಗನೆ ಕೆಲವೇ ಸಮಯ ಉರಿದು ಬೂದಿಯಾಗುವ ಬೆಂಕಿಯಾಗದೇ...

ಸಣ್ಣಗೆ ಉರಿದರೂ, ಬೆಳಗುವ ನಂದಾದೀಪವಾಗಲಿ.

ಬದಲಾವಣೆಗೆ, ಸಂಕಲ್ಪಗಳಿಗೆ ಜನವರಿ 1ನೇ ತಾರೀಖು ಮುಖ್ಯವಲ್ಲ. ಇದಕ್ಕೆ ಮುಖ್ಯವಾದುದು ಮನಸ್ಥಿತಿ (mind set). ನವ ವರ್ಷ ನಮ್ಮ ಮನಸ್ಥಿತಿಯಲ್ಲೂ ನವೀನತೆ ತರಲಿ. ನಮ್ಮ ಸಂಕಲ್ಪಗಳು, ಈಡೇರಲಿ.

ಅಲ್ಪಾವಧಿಯ ಗುರಿಗಳು

ಅಲ್ಪಾವಧಿಯ ಗುರಿಗಳು

ಹೊಸವರ್ಷಕ್ಕೆ ನಿಮ್ಮ ಸಂಕಲ್ಪಗಳೇನು? ಅಲ್ಪಾವಧಿಯ ಗುರಿಗಳು ತೆಗೆದುಕೊಂಡ ಯಾವುದೇ ಸಂಕಲ್ಪ ಅಥವಾ ನಿರ್ಧಾರಗಳಲ್ಲಿ ಧನಾತ್ಮಕ ಫಲಿತಾಂಶದಿಂದ ಗುರಿ ತಲುಪಲು ಸಾಧ್ಯ. ಅಲ್ಪಾವಧಿಯ ಗುರಿಗಳು (short term goals) ಉತ್ಸಾಹ ಹಾಗು ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ತಮ್ಮ ಆರಾಮ ವಲಯದಿಂದ ಆಚೆಯ ಹೊಸ ಕಲಿಕೆ, ಪ್ರಯತ್ನ ಮೊದಮೊದಲು ಕಷ್ಟವೆನಿಸಿದರೂ ಸಹ,‌ ಸ್ವಲ್ಪ ಸ್ವಯಂ ಪ್ರೇರಣೆ ನಮ್ಮ ಹೊಸ ಪಯಣವನ್ನು ಚೈತನ್ಯ ಕಾರಿಯನ್ನಾಗಿಸಬಹುದು. ಸಮೀರ ಒಮ್ಮೆ ಹೂ ಬಿಟ್ಟ ನಂತರ ಗಿಡದ ಬಗೆಗೆ ಉದಾಸೀನತೆ ತೋರಿದಂತೆ, ನಾವು ನಮ್ಮ ಹೊಸ ಪ್ರಯತ್ನ, ಸ್ನೇಹ, ಸಂಬಂಧ, ಗುರಿ, ಕ್ರೀಡೆಯಲ್ಲಿ ಸ್ವಲ್ಪ ಯಶಸ್ಸನ್ನು ಕಂಡಾಗ, ಅವುಗಳ ಬಗ್ಗೆ ಲಘುವಾಗಿ ಯೋಚಿಸದೆ ಉದಾಸೀನತೆ ತೋರದೆ ಇರೋಣ. ಮೊದಲಿನ ಉತ್ಸಾಹವೇ ಸದಾ ಇರುವಂತೆ ಸತತವಾಗಿ ಪೋಷಿಸೋಣ ಹಸಿರಾಗಿಟ್ಟುಕೊಳ್ಳೋಣ. ಪ್ರಯತ್ನ ಮುಖ್ಯ. ನಮ್ಮ ಉತ್ಸಾಹ ಭಗ್ಗನೆ ಕೆಲವೇ ಸಮಯ ಉರಿದು ಬೂದಿಯಾಗುವ ಬೆಂಕಿಯಾಗದೇ... ಸಣ್ಣಗೆ ಉರಿದರೂ, ಬೆಳಗುವ ನಂದಾದೀಪವಾಗಲಿ. ಬದಲಾವಣೆಗೆ, ಸಂಕಲ್ಪಗಳಿಗೆ ಜನವರಿ 1ನೇ ತಾರೀಖು ಮುಖ್ಯವಲ್ಲ. ಇದಕ್ಕೆ ಮುಖ್ಯವಾದುದು ಮನಸ್ಥಿತಿ (mind set). ನವ ವರ್ಷ ನಮ್ಮ ಮನಸ್ಥಿತಿಯಲ್ಲೂ ನವೀನತೆ ತರಲಿ. ನಮ್ಮ ಸಂಕಲ್ಪಗಳು, ಈಡೇರಲಿ.

English summary
Psychology: How to identify the right resolution to improve your life, What are the common resolutions.. article by Art therapist Rekha Belvaadi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X