ಮನಸನ್ನು ಗಟ್ಟಿಯಾಗಿ ಜೋಡಿಸಿದ್ದ ಭಾವರಸ ಹುಳಿಯಾದದು ಹೇಗೆ?
ಆತ್ಮೀಯ ಗೆಳೆತನ ಹೇಗೆ ಹುಟ್ಟುತ್ತದೆ, ಯಾಕೆ ಗಟ್ಟಿಯಾಗುತ್ತದೆ ಎನ್ನುವ ಪ್ರಶ್ನೆಗಳಿಗೆ ಖಚಿತ ವಿವರಣೆಗಳು ಇರಲಾರವು. ಒಂದೊಂದು ಆತ್ಮೀಯ ಗೆಳೆತನದಲ್ಲಿಯೂ ಒಂದೊಂದು ವಿಶೇಷವಿರುತ್ತದೆ. ನೆರೆಹೊರೆ, ಶಾಲೆ, ಕೆಲಸದ ಜಾಗ, ಪ್ರಯಾಣದಂತಹ ಸಾಮಾಜಿಕ ಸನ್ನಿವೇಶಗಳು ಗೆಳೆತನ ಮೂಡುವುದಕ್ಕೆ ಪ್ರಶಸ್ತ ಸನ್ನಿವೇಶ. ಹಾಗೆಯೇ ಆತ್ಮೀಯ ಗೆಳೆತನ ಗಟ್ಟಿಯಾಗಲೂ ವಿಶ್ವಾಸ, ವಾತ್ಸಲ್ಯದಂತಹ ಮನೋಬಲಗಳು ಅತ್ಯಗತ್ಯ.
ಅಚ್ಚರಿಯ ಸಂಗತಿ ಎಂದರೆ, ಗೆಳೆತನದ ಭಾವ ಎಲ್ಲರಲ್ಲಿ ಇರುವುದಾದರೂ ಎಲ್ಲರೂ ಎಲ್ಲರೊಂದಿಗೆ ಗೆಳೆಯರಾಗುವುದು ಅಸಾಧ್ಯ. ದಿನನಿತ್ಯವೂ ಸಂಭವಿಸುವ ಪರಸ್ಪರ ಭೇಟಿಗಳು ಗೆಳೆತನಕ್ಕೆ ಅವಕಾಶ ಕಲ್ಪಿಸಿದರೂ ಭೇಟಿಯಾದವರೆಲ್ಲ ಆತ್ಮೀಯ ಗೆಳೆತನ ಮೂಡಿಸರು. ಶಾಲೆಯುದ್ದಕ್ಕೂ ಸಹಪಾಠಿಗಳು ನೂರಾರಿದ್ದರೂ ಆಪ್ತರಾಗುವುದು ಬೆರಳೆಣಿಕೆಯಷ್ಟು ಮಾತ್ರ. ಅವರಲ್ಲಿಯೂ ಒಬ್ಬರೋ ಇಬ್ಬರೋ ಬದುಕಿನುದ್ದಕ್ಕೂ ಗೆಳೆಯರಾಗಿಯೇ ಉಳಿಯುತ್ತಾರೆ. ಸಂತೋಷವಿರಲೀ ದುಃಖವಿರಲೀ ಅದರೊಂದಿಗೆಯೇ ಅವರು ಇರುತ್ತಾರೆ. ಅಂತಸ್ತು, ಅವಕಾಶ, ವಯಸ್ಸು, ಅಂದ ಚೆಂದದಂತಹ ಗುಣಗಳ ಪ್ರಭಾವಕ್ಕೆ ಗೆಳೆತನ ಮುಲಾಜು ನೋಡದು. ಹೀಗಾಗಿಯೇ ಗೆಳೆತನವೆನ್ನುವ ಮಾನವ ಸಂಬಂಧವನ್ನು ಅಮೂಲ್ಯವೆನ್ನುವುದು.

ಆಪ್ತವೆನ್ನುವ ಗೆಳೆತನವೇ ಹಗೆಯಾದಾಗ...
ಆದರೂ ಅದೆಷ್ಟೋ ಸಲ ಆಪ್ತವೆನ್ನುವ ಗೆಳೆತನವೇ ಹಗೆತನ, ರೋಷಗಳಿಗೂ ಕಾರಣವಾಗಿರುವುದನ್ನು ನಮ್ಮ ಪುರಾಣದ ಕತೆಗಳಲ್ಲಿ ಕಾಣಬಹುದು. ಬಾಲ್ಯದಲ್ಲಿ ಉತ್ತಮ ಗೆಳೆತನ ಹೊಂದಿದ್ದ ದ್ರುಪದ ದ್ರೋಣರ ವೈಶಮ್ಯದ ಪರಿಣಾಮ ಏನಾಯಿತು ಎನ್ನುವುದನ್ನು ಮಹಾಭಾರತದಲ್ಲಿ ಕಾಣಬಹುದು. ಒಮ್ಮೆ ಗಟ್ಟಿಯಾಗಿ ನಿಂತಿದ್ದು ಸಡಿಲಗೊಂಡಾಗ ಆಗುವ ನೋವು, ಜಿಗುಪ್ಸೆಗಳನ್ನು ಅರ್ಥಮಾಡಿಕೊಳ್ಳುವುದು, ವಿವರಿಸುವುದು ಸುಲಭದ ವಿಷಯವಲ್ಲ. ಆತ್ಮೀಯ ಗೆಳೆತನ ಕಡಿದು ಬಿದ್ದ ಪ್ರಸಂಗಗಳೆಷ್ಟೋ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಿರುತ್ತದೆ.

ದಿಢೀರ್ ಹುಟ್ಟು, ಭಯಂಕರ ಬ್ರೇಕಪ್
ಇತ್ತೀಚಿನ ದಿನಗಳಲ್ಲಂತೂ ಮೊಬೈಲು, ಅಂತರ್ಜಾಲದ ನೆಲೆಗಳೂ ಆತ್ಮೀಯ ಗೆಳೆತನದ ದಿಢೀರ್ ಹುಟ್ಟು, ಭಯಂಕರ "ಬ್ರೇಕಪ್" ಗಳಿಗೆ ಕಾರಣವಾಗಿರುವುದರ ಹಲವು ನಿದರ್ಶನಗಳಿವೆ. ಈ "ಬ್ರೇಕಪ್" ಗಳು ಹೊರತರುವ ಮಾನಸಿಕ ಸಮಸ್ಯೆಗಳು ಅಷ್ಟಿಷ್ಟಲ್ಲ. ಪ್ರೇಮಿಯ ಮನಸು ಬದಲಾದುದರಿಂದ ಬೇಸತ್ತವರು ಸಾವಿಗೆ ಶರಣಾಗುವುದು ಸಂಭವಿಸುತ್ತಲೇ ಇವೆ. ಇವೆಲ್ಲವನ್ನು ಗಮನಿಸಿದಾಗ ತಿಳಿದುಬರುವ ಸಂಗತಿ ಎಂದರೆ, ಸಂಬಂಧಗಳು ಎಷ್ಟೇ ನಿಕಟವಾಗಿದ್ದರೂ ಹಳಸುವ ಸಾಧ್ಯತೆಗಳು ಇರುತ್ತದೆ. ಅಂತಹ ಸನ್ನಿವೇಶ ಬಂದಾಗ ಉಂಟಾಗುವ ಹತಾಶೆ, ಅಪನಂಬಿಕೆ, ಅಶಾಂತಿ, ಕೆಟ್ಟ ಆಲೋಚನೆಗಳ ಹಿಡಿತಕ್ಕೆ ಸಿಕ್ಕಿಕೊಂಡರೂ ನುಣುಚಿಕೊಳ್ಳಲು ಸಾಧ್ಯತೆಯಿದೆ ಎಂಬುದೂ ನಿಜ.

ಮತ್ತೆ ಗೆಳೆತನ ಗಟ್ಟಿಗೊಳಿಸಲು ಸಾಧ್ಯವಿದೆ
ಕೆಟ್ಟ ಆಲೋಚನೆಗಳಿಂದ ಹೊರಬಂದು ಗೆಳೆತನವನ್ನು ಮತ್ತೆ ಗಟ್ಟಿಗೊಳಿಸಲು ಸಾಧ್ಯವಿದೆ. ಅದಕ್ಕೆ ಒಂದಿಷ್ಟು ಸಲಹೆ ಇಲ್ಲಿದೆ...
* ಮಾತು ತಪ್ಪುವುದು, ಮಾತು ಮರೆಸುವ ಸ್ವಭಾವ ನಿಮ್ಮಲ್ಲಿ ಇದ್ದ ಪಕ್ಷದಲ್ಲಿ ಅದನ್ನು ಆತ್ಮೀಯ ಸಂಬಂಧಗಳಲ್ಲಿ ತರದಿರಿ.
* ನಾನಾ ಕಾರಣಗಳಿಂದ ಅಧಿಕಾರ, ಅಂತಸ್ತಿನ ಸ್ಥಿತಿಗಳಲ್ಲಿ ಮಾರ್ಪಾಡುಗಳಾದಾಗ ಆತ್ಮೀಯ ಗೆಳೆಯರೆದುರಿಗೆ ಇದರ ಪ್ರದರ್ಶನ ಮಾಡುವುದು ಸೂಕ್ತವಲ್ಲ.
* ನಿಮ್ಮ ಹೊಣೆಗಾರಿಗೆ, ನೈತಿಕ ನಿಲುವುಗಳ ಮೂಲಕ ಗೆಳೆತವನ್ನು ಹತೋಟಿಯಲ್ಲಿ ಇರಿಸಿಕೊಳ್ಳುವ ಪ್ರಯತ್ನ ಬೇಡ.
* ಉದಾಸೀನ ಮಾಡುವುದು, ಅಹಂಕಾರದ ಪ್ರದರ್ಶನ, ಗೆಳೆಯರ ಸಹಜ ಮಿತಿಗಳನ್ನು ಕೆದಕುವುದರಿಂದ ಸಂಬಂಧ ಹಾಳಾಗುವುದರಲ್ಲಿ ಸಂದೇಹವಿಲ್ಲ.
-ಗೆಳೆತನ್ನು ನಿಮ್ಮ ಮಿತಿ, ಆತಂಕಗಳನ್ನು ಹೊರುವಂತಹ ಸರಕು ವಾಹನವಾಗಿಸಿದಿರಿ.
-ಗೆಳೆತನ ಹಳಸಿದಾಗಲೂ ಸ್ವನಿಂದನೆ, ಪರನಿಂದನೆ ದೂಷಿಸುವುದರತ್ತ ಹೆಚ್ಚು ಗಮನಹರಿಸದಿರಿ.
* ಹಳಸಿದ ಸಮಯದಲ್ಲಿ ಮನಸು ಕೆಟ್ಟು ಜಿಗುಪ್ಸೆ, ನಿರಾಸೆಗಳು ಸಹಜ. ಅಂತಹ ಸಂದರ್ಭದಲ್ಲಿ ತಜ್ಞರ ನೆರವು ನಿಮ್ಮ ಮನಸಿಗೆ ಸಕಾರಾತ್ಮಕ ಶಕ್ತಿ ತುಂಬಿಸಬಲ್ಲದ್ದಾಗಿರುತ್ತದೆ.
* "ಬ್ರೇಕ್‌ಅಪ್" ಕಾರಣದಿಂದ ನಿಮ್ಮ ಆಸಕ್ತಿ, ಕುತೂಹಲ, ಕರ್ತವ್ಯಗಳನ್ನು ಕಡೆಗಾಣಿಸುವುದು ಸಲ್ಲದು.

ಗೆಳೆಯರಿಗೆ ಗೆಳೆಯರಾಗಿಯೇ ಉಳಿದುಕೊಳ್ಳಿ...
* ಗೆಳೆಯನಿಗೆ ಹಿಂಸೆ ಉಂಟುಮಾಡುವ ಉದ್ದೇಶದಿಂದಲೇ ಸ್ಪರ್ಧೆ, ಪೈಪೋಟಿಗಳು ಇರದಿರಲಿ.
* ನಿಮ್ಮ ಸ್ವಾಭಿಮಾನವನ್ನು ರಕ್ಷಿಸಿಕೊಳ್ಳುವಂತಯೇ ಗೆಳೆಯನದ್ದನ್ನು ಆದರಿಸುವ ಮನಸು ಇರಲಿ .
* ಸಿಟ್ಟು, ತಾಪಗಳು ಮನುಷ್ಯರಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವುದು ಸಹಜ, ಅವುಗಳನ್ನೇ ಶಾಶ್ವತ ಸತ್ಯ ಎಂದುಕೊಂಡು ಆತ್ಮೀಯತೆ ಕಳೆದುಕೊಳ್ಳುವುದು ಬೇಡ.
* ನಿಮ್ಮ ಆತ್ಮೀಯ ಗೆಳೆಯನಿಗೂ ಇತಿಮಿತಿಗಳಿರುತ್ತವೆ, ಅವುಗಳ ಬಗ್ಗೆ ನಿಮ್ಮ ಗೌರವ ಇರಲಿ.
* ಆತ್ಮೀಯ ಗೆಳೆಯರ ಮೇಲೆ ಹಕ್ಕು ಚಲಾಯಿಸದಿರಿ.
* ಗೆಳೆತನ ಹಳಸಿದಾಗ್ಯೂ ಮಾನವೀಯತೆ ಮರೆಯದಿರಿ.
* ದೂರ ಸರಿದ ಆತ್ಮೀಯ ಗೆಳೆತನದ ಬಗ್ಗೆ ನಕಾರಾತ್ಮಕ ಭಾವಗಳನ್ನು ಹೊರಗೆಡುವುದರಿಂದ ಪ್ರಯೋಜನವಿಲ್ಲ.
* ಮಾನಸಿಕ ಗೊಂದಲಗಳು ಹೆಚ್ಚಿ ಅತಿ ಜಿಗುಪ್ಸೆ, ನಿರಾಸಕ್ತಿ ಕಂಡುಬಂದಲ್ಲಿ ತಜ್ಞರನ್ನು ಸಂಪರ್ಕಿಸುವುದನ್ನು ಮರೆಯದಿರಿ.
* ಈ ಮಾದರಿಯ ಮಾನಸಿಕ ಸ್ಥಿತಿಯಿಂದ ಹೊರಬರಲು ಬೃಹನ್ಮತಿ ಮನೋತಂತ್ರಗಳ ಅಭ್ಯಾಸ ಹಿತಕೊಡಬಲ್ಲದು.
-
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ












Click it and Unblock the Notifications