ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನಸಿಕ ಆರೋಗ್ಯದ ಬಗ್ಗೆ ತಿಳಿಯುವುದು ಹೇಗೆ; ಕಾರುಗಳ ಈ ಉದಾಹರಣೆ ನೋಡಿ...

By ರೇಖಾ ಬೆಳವಾಡಿ, Art Therapist
|
Google Oneindia Kannada News

ಆರೋಗ್ಯವೇ ಭಾಗ್ಯ ಎಂದು ದಿನನಿತ್ಯ ಓದುತ್ತಲೇ ಇರುತ್ತೇವೆ ಹಾಗೂ ಕೇಳುತ್ತಲೇ ಇರುತ್ತೇವೆ‌. ಆದರೆ ಆರೋಗ್ಯ ಎನ್ನುವುದು ಬರೀ ದೇಹಕ್ಕೆ ಸೀಮಿತವೇ? ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯ ಪ್ರಕಾರ ''ಒಂದು ಜೀವಿಯ ದೇಹ - ಮನಸ್ಸು ಸಂಪೂರ್ಣವಾಗಿ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ'' ಎಂದು ಕರೆಯಬಹುದು.

ಆರೋಗ್ಯ ಎಂದರೆ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸುಸ್ಥಿತಿ. ಒಬ್ಬ ವ್ಯಕ್ತಿ ದೈಹಿಕವಾಗಿ ರೋಗ ರುಜಿನಗಳಿಂದ ಹೊರತಾಗಿದ್ದರೆ ಅದು ಆ ವ್ಯಕ್ತಿಯ ದೈಹಿಕ ಆರೋಗ್ಯದ ಬಗ್ಗೆ ತಿಳಿಸುತ್ತದೆ. ವ್ಯಕ್ತಿಯು ದಿನನಿತ್ಯದ ಸಾಮಾಜಿಕ ಸವಾಲುಗಳನ್ನು ಎದುರಿಸುವ ರೀತಿ, ತನ್ನ ಸುತ್ತಮುತ್ತಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ರೀತಿ, ಯೋಚನಾ ಹಾಗೂ ಕಾರ್ಯ ನಿರ್ವಹಣಾ ಸಾಮರ್ಥ್ಯ ಅವನ ಸಾಮಾಜಿಕ, ಮಾನಸಿಕ ಆರೋಗ್ಯವನ್ನು ತಿಳಿಸುತ್ತದೆ. ದೇಹದ ಆರೋಗ್ಯ ಏರುಪೇರಾದರೆ ಕಣ್ಣಿಗೆ ಕಾಣುವುದು, ಅನುಭವಕ್ಕೆ ಬರುವುದು. ವ್ಯತ್ಯಾಸ ಕಂಡುಹಿಡಿಯುವುದು ಔಷಧೋಪಚಾರ ಮಾಡಬಹುದು. ಆದರೆ ಮಾನಸಿಕ ಆರೋಗ್ಯ ಹಾಗಲ್ಲ... ಮುಂದೆ ಓದಿ...

 ಮನಸ್ಸಿನ ಆರೋಗ್ಯ ಸುಸ್ಥಿತಿಯಲ್ಲಿದೆ ಎಂದು ತಿಳಿಯುವುದು ಹೇಗೆ?

ಮನಸ್ಸಿನ ಆರೋಗ್ಯ ಸುಸ್ಥಿತಿಯಲ್ಲಿದೆ ಎಂದು ತಿಳಿಯುವುದು ಹೇಗೆ?

ಸಂತೋಷ , ದುಃಖ, ಉದ್ವೇಗ, ಆತಂಕ, ಕೋಪ ಹೀಗೆ ಸಮಯಕ್ಕೆ, ಸಂದರ್ಭಕ್ಕೆ ಸ್ಪಂದಿಸಿ ಭಾವನೆಗಳನ್ನು ವ್ಯಕ್ತಪಡಿಸುವ ಪ್ರತಿಕ್ರಿಯೆಗಳು ಮಾನವ ಸಹಜವಾದುದ್ದು. ಆದರೆ ಪ್ರತಿಕ್ರಿಯೆಗಳು ತೀವ್ರ ಸ್ವರೂಪ ಪಡೆದು ಅವರ ದೈನಂದಿನ ಚಟುವಟಿಕೆಗಳನ್ನು ನಿಭಾಯಿಸುವುದರಲ್ಲಿ ಸಮಸ್ಯೆ, ಅತಿಯಾದ ಭಯ, ತಮ್ಮ ಸಾಮರ್ಥ್ಯದ ಮೇಲೆ ಅಪನಂಬಿಕೆ, ನಿರಂತರವಾಗಿ ದುಃಖದ ಭಾವನೆಗಳು, ಅಸಹಜ ಆತಂಕ ಎಲ್ಲವೂ ಮಾನಸಿಕ ಆರೋಗ್ಯದ ಬಗ್ಗೆ ತಿಳಿಸುತ್ತದೆ. ಅದು ಅವರ ಸಾಮಾಜಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ತಮ್ಮದೇ ಗೊಂದಲದ ಬದುಕು ನಡೆಸುತ್ತಿರುತ್ತಾರೆ. ತಮ್ಮ ಗೊಂದಲಗಳಿಗೆ ಪರಿಹಾರ ಹುಡುಕಲು ಯಾರ ಸಹಾಯ ಪಡೆಯಬೇಕು? ತನ್ನ ಗೊಂದಲಗಳನ್ನು ಹೇಳಿಕೊಂಡರೆ ಎಲ್ಲಿ ಸುತ್ತಮುತ್ತಲಿನವರು ನಗುತ್ತಾರೋ ಎಂಬ ಭಯ ಆವರಿಸುತ್ತದೆ. ತನ್ನ ಈ ಸಮಸ್ಯೆಗಳನ್ನು ಹೊರ ಪ್ರಪಂಚ ಗುರುತಿಸಿಬಿಡುವುದೋ ಎಂಬ ಭಯದಿಂದ, ಸಮಾಜದಿಂದ ದೂರವಾಗಿ ಒಂಟಿಯಾಗಿ ಬಿಡುತ್ತಾರೆ.

ಪದೇ ಪದೇ ಅದೇ ಸೋಲು... ಸೋಲು ಕಾಡುವುದೇಕೆ?ಪದೇ ಪದೇ ಅದೇ ಸೋಲು... ಸೋಲು ಕಾಡುವುದೇಕೆ?

 ಹುಡುಗನೊಬ್ಬನ ಕಾರು ರಿಪೇರಿ ಕಥೆ

ಹುಡುಗನೊಬ್ಬನ ಕಾರು ರಿಪೇರಿ ಕಥೆ

ಹುಡುಗನೊಬ್ಬ ಕಾರು ರಿಪೇರಿ ಮಾಡುವ ಮೆಕಾನಿಕ್ ಆಗಿ ಕೆಲಸಕ್ಕೆ ಸೇರುತ್ತಾನೆ. ಕೈಯಲ್ಲಿ ಸ್ಪ್ಯಾನರ್ ಹಿಡಿದು ಹುಮ್ಮಸ್ಸಿನಿಂದ ಕೆಲಸ ಮಾಡುಲು ತಯಾರಾಗಿರುತ್ತಾನೆ. ಮಾಲೀಕ ಬಂದು ಎರಡು ಗಾಡಿಗಳನ್ನು ತೋರಿಸಿ ಆ ಕಾರುಗಳನ್ನು ರಿಪೇರಿ ಮಾಡಬೇಕಾಗಿ ಹೇಳುತ್ತಾನೆ. ಹುಡುಗ ಕೆಲಸ ಶುರುಮಾಡಲು ಮುಂದಾಗುತ್ತಾನೆ. ಅಷ್ಟರಲ್ಲಿ
ಮಾಲೀಕ: ಮೊದಲು ಯಾವ ಕಾರು ರಿಪೇರಿ ಮಾಡುವೆ? ಯಾವ ಕಾರನ್ನು ತಕ್ಷಣವೇ ರಿಪೇರಿ ಮಾಡಬೇಕು? ಎಂದು ಕೇಳುತ್ತಾನೆ
ಹುಡುಗ ಹೆಡ್ಲೈಟ್ ಮುರಿದು ಬಿದ್ದ, ಹಿಂಭಾಗ ನಜ್ಜುಗುಜ್ಜಾದ ಕಾರಿನ ಕಡೆ ಕೈ ತೋರಿಸುತ್ತಾನೆ.
ಇನ್ನೊಂದು ಕಾರು ಹೊಸತು. ದೂಳಾಗಿದೆ ಅಷ್ಟೇ ನೋಡಿದರೇ ತಿಳಿಯುತ್ತದೆ ಎನ್ನುತ್ತಾನೆ.
ಮಾಲೀಕ: ಅದು ಹೇಗೆ ಹೇಳುವೆ?
ಹುಡುಗ ನಜ್ಜುಗುಜ್ಜಾದ ಕಾರಿನ ಸ್ಥಿತಿ, ಸಮಸ್ಯೆ ವಿವರಿಸುತ್ತಾ... ಇದಕ್ಕೆ ಹೊಸ ಹೆಡ್ ಲೈಟ್ ಹಾಕಬೇಕು, ಕಾರಿನ ಸೀಟ್ ಇಲಿ ಕಡಿದಿದೆ, ಬದಲಿಸಬೇಕು. ಬೇರೇನೋ ಪಾರ್ಟ್ ಬದಲಿಸಬೇಕು. ಒಂದೆರಡು ದಿನಗಳು ಬೇಕು ಇದನ್ನು ಮೊದಲಿನಂತೆ ಮಾಡಲು ಎನ್ನುತ್ತಾನೆ.

ಮಾಲೀಕ ಎರಡೂ ಕಾರುಗಳ ಕೀಲಿಯನ್ನು ಕಂಡುಕೊಂಡು ಹುಡುಗನ ಕೈಯಲ್ಲಿಟ್ಟು ಓಡಿಸಿ ನೋಡುವಂತೆ ಹೇಳುತ್ತಾನೆ. ಹುಡುಗ ಆಕರ್ಷಕ ಬಣ್ಣದ ಕಾರಲ್ಲಿ ಕುಳಿತು ಕೀಲಿ ಹಾಕಿ ಕಾರನ್ನು ಪ್ರಾರಂಭಿಸಲು ಮುಂದಾಗುತ್ತಾನೆ. ಕಾರು ಮುಂದಕ್ಕೆ ಹೋಗುವುದಿಲ್ಲ. ಮತ್ತೆ ಪ್ರಯತ್ನ ಪಡುತ್ತಾನೆ. ಕಾರು ಶುರುವಾಗುವ ಸೂಚನೆಯೇ ಇಲ್ಲ. ಪೆಟ್ರೋಲ್ ಟ್ಯಾಂಕ್ ಕೂಡ ಭರ್ತಿ ಇತ್ತು. ಮತ್ತೊಮ್ಮೆ ಕಾರು ಪ್ರಾರಂಭಿಸಲು ಪ್ರಯತ್ನಿಸುತ್ತಾನೆ. ಆದರೂ ಕಾರು ಮುಂದಕ್ಕೆ ಹೋಗುವುದಿಲ್ಲ.

 ಬಾಹ್ಯ ಸಮಸ್ಯೆಗಳು ಗೋಚರಿಸುವುದು ಸುಲಭ

ಬಾಹ್ಯ ಸಮಸ್ಯೆಗಳು ಗೋಚರಿಸುವುದು ಸುಲಭ

ಮಾಲೀಕ ಮತ್ತೊಂದು ಕಾರನ್ನು ಓಡಿಸುವಂತೆ ತಿಳಿಸುತ್ತಾನೆ. ನಜ್ಜುಗುಜ್ಜಾಗಿದ್ದ ಕಾರು ಕೀಲಿ ಹಾಕಿದಾಗ ಅಷ್ಟೇನೂ ಸಮಸ್ಯೆ ಇಲ್ಲದೆ ಮುಂದಕ್ಕೆ ಹೋಗುತ್ತದೆ. ಮಾಲೀಕ ಹುಡುಗನನ್ನು ಕರೆದು ಈಗ ಹೇಳು ಯಾವ ಕಾರು ದುಃಸ್ಥಿತಿಯಲ್ಲಿದೆ ಎಂದು ಕೇಳುತ್ತಾನೆ. ಹುಡುಗ: ಕಣ್ಣಿಗೆ ಕಾಣುವ ಕಾರಿನ ಬಾಹ್ಯ ಸ್ಥಿತಿ ನೋಡಿ ನಜ್ಜುಗುಜ್ಜಾದ ಕಾರು ದುಃಸ್ಥಿತಿಯಲ್ಲಿದೆ ಎಂದುಕೊಂಡೆ. ಹೊಸತಾಗಿ ಕಂಡ ಮತ್ತೊಂದು ಕಾರಿನ ಆಂತರಿಕ ಸಮಸ್ಯೆಯನ್ನು ಗಮನಿಸದೆ ನಿರ್ಲಕ್ಷಿಸಿಬಿಟ್ಟಿ ಎಂದು ಕ್ಷಮೆ ಕೇಳುತ್ತಾನೆ.
ಮಾಲೀಕ: ಎರಡೂ ಕಾರಿನಲ್ಲಿ ಸಮಸ್ಯೆ ಇದೆ. ಬಾಹ್ಯ ಸಮಸ್ಯೆಗಳು ಸುಲಭವಾಗಿ ಕಾಣುತ್ತವೆ. ಅದಕ್ಕೂ ರಿಪೇರಿ ಬೇಕೇ ಬೇಕು. ಆದರೆ ಆಕರ್ಷಕ ಬಣ್ಣದ ಕಾರಿನ ಸಮಸ್ಯೆ ಬರಿಗಣ್ಣಿಗೆ ಕಾಣದು. ಸೂಕ್ಷ್ಮವಾಗಿ ಗಮನಿಸಬೇಕು. ಕಾರಿನ ಎಂಜಿನ್ ಕೆಟ್ಟಿದೆ. ಬ್ರೇಕ್ ಫೇಲಾಗಿದೆ. ಒಳ ಭಾಗಗಳು ನೀರು ನುಗ್ಗಿ ತುಕ್ಕು ಹಿಡಿದಿವೆ. ಇನ್ನೂ ಗಮನಿಸದೆ ಬಿಟ್ಟಿದ್ದರೆ ಬೆಲೆಬಾಳುವ ಕಾರು ಉಪಯೋಗಕ್ಕೆ ಬಾರದಂತೆ ಆಗುತ್ತಿತ್ತು. ಸಕಾಲದಲ್ಲಿ ಸಮಸ್ಯೆ ಗಮನಿಸಿ ಗುರುತಿಸಿದ್ದರೆ ಸೂಕ್ತ ನೆರವು ಸಿಕ್ಕಿದ್ದರೆ ಕಾರಿನ ಸ್ಥಿತಿ ಇಷ್ಟು ಹದಗೆಟ್ಟುತ್ತಿರಲಿಲ್ಲ... ಬಾಹ್ಯ ಹೊಳಪು ಆಂತರಿಕ ಸಮಸ್ಯೆಯನ್ನು ಮರೆಮಾಚಿದೆ ಎನ್ನುತ್ತಾನೆ‌.

ಚಿತ್ರ 1 : ಈ ಕಾರನ್ನು ನೋಡಿದಾಗ ಕಾಣುವುದು ಅದರ ಆಕರ್ಷಕ ಬಣ್ಣ, ನವಿರಾದ ಕಾರಿನ ಸೀಟ್‌ಗಳು.
ಚಿತ್ರ 2: ಈ ಕಾರನ್ನು ನೋಡಿದಾಗ ಮುರಿದು ಬಿದ್ದ ಹೆಡ್ ಲೈಟ್, ತರಿದು ಗೀಚು ಗೀಚಾದ ಕಾರಿನ ಹಿಂಭಾಗ ಗಮನಕ್ಕೆ ಬರುತ್ತದೆ.
ಈ ಎರಡೂ ಕಾರುಗಳಲ್ಲಿ ಯಾವ ಕಾರು ಸುಸ್ಥಿತಿಯಲ್ಲಿದೆ ಎಂದು ಕೇಳಿದರೆ, ತಕ್ಷಣ ಉತ್ತರ ಸಿಗುವುದು ಸಾಮಾನ್ಯವಾಗಿ ಚಿತ್ರ 1ರ ಕಾರು.

ಇಬ್ಬರನ್ನೂ ಕಾಡುವ, ಕಾಡಿಸುವ ಸಂಶಯ ಪಿಶಾಚಿ...ಇಬ್ಬರನ್ನೂ ಕಾಡುವ, ಕಾಡಿಸುವ ಸಂಶಯ ಪಿಶಾಚಿ...

 ಎಷ್ಟೋ ಮಂದಿ ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿದ್ದಾರೆ

ಎಷ್ಟೋ ಮಂದಿ ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿದ್ದಾರೆ

ನಮ್ಮ ಸುತ್ತಮುತ್ತ ಬಹಳ ಜನರು ನೋಡಲು ಆರಾಮವಾಗಿರುತ್ತಾರೆ. ಆದರೆ ಮನಸ್ಸಿನಲ್ಲಿ ಕೀಳರಿಮೆ, ದುಗುಡ, ದುಮ್ಮಾನಗಳು, ನಕಾರಾತ್ಮಕ ಚಿಂತನೆಗಳು, ಒತ್ತಡಗಳು, ಭಾವನಾತ್ಮಕ ಸಮಸ್ಯೆಗಳು, ನಿರಾಸೆ, ತನ್ನ ಸಾಮರ್ಥ್ಯದ ಮೇಲೆ ಅಪನಂಬಿಕೆಗಳು ದೈನಂದಿನ ಚಟುವಟಿಕೆಗಳನ್ನು ಸರಿಯಾಗಿ ನಿಭಾಯಿಸಲು ಅಡ್ಡಿ ಉಂಟುಮಾಡುತ್ತವೆ. ಮಾನಸಿಕ ಸಮಸ್ಯೆಗಳಿಂದ ಬದುಕುತ್ತಿರುತ್ತಾರೆ. ತಮ್ಮ ಸಮಸ್ಯೆಗಳಿಗೆ ಕಾರಣ ಹಾಗೂ ಪರಿಹಾರ ಹುಡುಕುತ್ತಿರುತ್ತಾರೆ.

ಇಂತಹ ಸಮಸ್ಯೆಗಳು ಯಾರಿಗಾದರೂ ಯಾವುದೇ ವಯಸ್ಸಿನವರಿಗೂ ಎದುರಾಗಬಹುದು. ದೈಹಿಕ ಆರೋಗ್ಯಕ್ಕಾಗಿ ಹೇಗೆ ವೈದ್ಯಕೀಯ ನೆರವು ಪಡೆಯುತ್ತೇವೋ, ಹಾಗೆಯೇ ಮಾನಸಿಕ ಆರೋಗ್ಯಕ್ಕೆ ಸರಿಯಾದ ಸಮಯದಲ್ಲಿ ನೆರವು ಪಡೆಯುವುದು ಅತ್ಯಗತ್ಯ. ಮಾನಸಿಕವಾಗಿ ಖಿನ್ನರಾಗುವ ಇಂಥವರನ್ನು ಕೈ ಹಿಡಿದು ಎತ್ತುವ, ಸಾಂತ್ವನಗೊಳಿಸುವ ಜನರು ಬೇಕಾಗುತ್ತಾರೆ.
ಆಪ್ತಸಮಾಲೋಚನೆ ಪಡೆಯುವುದರಿಂದ ಸವಾಲುಗಳನ್ನು ಪರಿಣಾಮಕಾರಿಯಾಗಿ, ಅರ್ಥಪೂರ್ಣವಾಗಿ ಎದುರಿಸಬಹುದು.

 ಮುಕ್ತ ಸಂವಹನ ಸಮಸ್ಯೆ ಪರಿಹಾರಕ್ಕೆ ದಾರಿ

ಮುಕ್ತ ಸಂವಹನ ಸಮಸ್ಯೆ ಪರಿಹಾರಕ್ಕೆ ದಾರಿ

ಆಪ್ತಸಮಾಲೋಚನೆ ಪ್ರಕ್ರಿಯೆ, ಸಮಸ್ಯೆಯ ಸ್ವರೂಪ ಹೇಗೇ ಇದ್ದರೂ, ಯಾವುದೇ ತೀರ್ಪು ಇಲ್ಲದಂತಹ ಸುರಕ್ಷಿತವಾದ ವಾತಾವರಣ ಒದಗಿಸುತ್ತದೆ. ವಿಶ್ವಾಸಾರ್ಹ ವ್ಯಕಿಯ (ನುರಿತ ಆಪ್ತಸಮಾಲೋಚಕರ) ಜೊತೆಯ ಮುಕ್ತ ಸಂವಹನ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಅಗತ್ಯವಾದ ಒಳನೋಟವನ್ನು ಒದಗಿಸಲು ನೆರವಾಗುತ್ತದೆ.
* ಸವಾಲುಗಳನ್ನು ಎದುರಿಸುವ ಉತ್ತಮ ಮಾರ್ಗಗಳನ್ನು ಗುರುತಿಸಲು ನೆರವಾಗುತ್ತದೆ.
* ಅಗತ್ಯವಾದ ಉತ್ತಮ ಬದಲಾವಣೆ ತರಲು ನೆರವಾಗುತ್ತದೆ.
* ಉತ್ತಮ ಬದಲಾವಣೆಗಳಿಂದ ಜೀವನಕ್ರಮದಲ್ಲಿ ಚೇತರಿಕೆ ಕಾಣಬಹುದು.
* ಆತ್ಮಗೌರವ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.
* ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಲು ನೆರವಾಗುತ್ತದೆ.

ಹೀಗೆ ಹಂತ ಹಂತವಾಗಿ ಕ್ರಮೇಣ ವ್ಯಕ್ತಿಯು ಸಮಾಧಾನಕರ ಜೀವನ ಸಾಗಿಸಬಹುದು.
ಮಾನಸಿಕ ಸಮಸ್ಯೆ ಎದುರಾದಾಗ ಹಿಂಜರಿಯದೆ ನೆರವು ಪಡೆಯಲು ಜನರು ಮುಂದಾಗುವಂತೆ ಮಾಡುವ ಮುಕ್ತ ವಾತಾವರಣ ಸೃಷ್ಟಿಸುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇರುವುದಲ್ಲವೇ? ಸರಿಯಾದ ಸಮಯಕ್ಕೆ ನೆರವು ಪಡೆದರೆ ಆರೋಗ್ಯಕರ ಜೀವನ ನಡೆಸಬಹುದು. ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಬುನಾದಿ.

English summary
Art Therapist Rekha Belavadi gave tips on how to maintain mental health. Here is few points.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X