ಭವಿಷ್ಯದ ಶಿಕ್ಷಣಕ್ಕೆ ಇಂದೇ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದೆ ರೇವಾ ವಿಶ್ವವಿದ್ಯಾನಿಲಯ
ಬೆಂಗಳೂರು, ಮೇ 14: ರೇವಾ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಯಿತು. ಮುಂಬರುವ ಶೈಕ್ಷಣಿಕ ವರ್ಷಕ್ಕಾಗಿ ಈ ವೇಳೆ ಹಲವು ಶೈಕ್ಷಣಿಕ ಉಪಕ್ರಮಗಳ ಸರಣಿಯನ್ನು, ಬಹುಶಿಸ್ತೀಯ ಪ್ರೋಗ್ರಾಂಗಳು, ಉದ್ಯಮ ಸಂಯೋಜಿತ ಕಲಿಕೆ ಅವಕಾಶಗಳನ್ನು ಮತ್ತು ವಿದ್ಯಾರ್ಥಿವೇತನ ಉಪಕ್ರಮಗಳನ್ನು ಘೋಷಣೆ ಮಾಡಲಾಯಿತು. ಭಾರತದಲ್ಲಿ ಪರಿವರ್ತನೆಯು ತುಂಬ ವೇಗವಾಗಿ ಕಾಣಿಸುತ್ತಾ ಇದೆ. ಅದರಲ್ಲೂ ಸೆಮಿಕಂಡಕ್ಟರ್ಸ್, ಏರೋಸ್ಪೇಸ್, ಎಲೆಕ್ಟ್ರಿಕ್ ಮೊಬಿಲಿಟ್, ಸ್ವಚ್ಛ ಇಂಧನ, ಆಟೋಮೆಷನ್, ಡಿಜಿಟಲ್ ಮೂಲಸೌಕರ್ಯ, ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಹೀಗೆ ವಿವಿಧ ಕ್ಷೇತ್ರಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ, ಅತ್ಯುತ್ತಮ ಕೌಶಲ ಹಾಗೂ ಬಹುಶಿಸ್ತೀಯ ವೃತ್ತಿಪರರನ್ನು ಭವಿಷ್ಯದ ಉದ್ಯಮಕ್ಕೆ ಅಗತ್ಯ ಇರುವಂತೆ ರೂಪಿಸುವುದಕ್ಕೆ ರೇವಾ ವಿ.ವಿ. ಒತ್ತು ನೀಡುತ್ತಾ ಬಂದಿದೆ.
ಈಗಲೂ ರೇವಾ ವಿಶ್ವವಿದ್ಯಾಲಯವು ಉದ್ಯಮಿಗಳಾಗಲು ಶಿಕ್ಷಣ ಎಂಬ ಸಿದ್ಧಾಂತದ ಮಾರ್ಗದಲ್ಲಿ ಸಾಗುತ್ತಿದ್ದು, ಪ್ರಾಯೋಗಿಕ ಕಲಿಕೆ, ಸಂಶೋಧನಾ ಉತ್ಕೃಷ್ಟತೆ, ನಾವೀನ್ಯತೆ, ಉದ್ಯಮ ಸಂಯೋಜನೆ ಹಾಗೂ ಸಮಗ್ರ ಬೆಳವಣಿಗೆ ಕಡೆಗೆ ತನ್ನ ಬದ್ಧತೆಯನ್ನು ಬಲಗೊಳಿಸುತ್ತಿದೆ.

ಈ ದೃಷ್ಟಿಕೋನದ ಬಗ್ಗೆ ಮಾತನಾಡಿದ ರೇವಾ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಶ್ಯಾಮ ರಾಜು, "ಭಾರತವು ಬಹಳ ಪ್ರಮುಖ ತಾಂತ್ರಿಕ ಹಾಗೂ ಕೈಗಾರಿಕೆ ಪರಿವರ್ತನೆ ಹಾದಿಯಲ್ಲಿದೆ. ಸೆಮಿಕಂಡಕ್ಟರ್ಸ್, ಏರೋಸ್ಪೇಸ್, ಎಲೆಕ್ಟ್ರಿಕ್ ಮೊಬಿಲಿಟಿ, ಆಟೋಮೆಷನ್, ಸ್ವಚ್ಛ ಇಂಧನ ಹಾಗೂ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಬಹಳ ವೇಗವಾಗಿ ವಿಸ್ತರಣೆ ಆಗುತ್ತಿದೆ. ಈ ವಲಯಗಳಲ್ಲಿ ತುಂಬ ಪ್ರಮುಖವಾದ ಪ್ರತಿಭೆಗಳ ಕೊರತೆ ಮುಂದುವರಿದಿದೆ. ರೇವಾ ವಿಶ್ವವಿದ್ಯಾಲಯದಲ್ಲಿ ನಾವು ಇದನ್ನು ಸವಾಲಿನ ರೀತಿ ನೋಡುವುದಿಲ್ಲ. ಇದು ಭವಿಷ್ಯದ ವೃತ್ತಿಪರರಾಗಿ ಮುಂದಿನ ತಲೆಮಾರು ಸಿದ್ಧಗೊಳ್ಳುವುದಕ್ಕೆ ಬೇಕಾದ ಅವಕಾಶವಾಗಿ ಕಾಣಬೇಕು. ಬಹುಶಿಸ್ತೀಯ ಕಲಿಕೆ ಮೂಲಕ ಎಐ ಸಂಯೋಜಿತ ಪಠ್ಯಕ್ರಮ, ಸೆಂಟರ್ಸ್ ಆಫ್ ಎಕ್ಸಲೆನ್ಸ್, ಉದ್ಯಮ ಸಹಯೋಗ, ಪ್ರಾಯೋಗಿಕತೆ ಹಾಗೂ ಸ್ಕಾಲರ್ ಷಿಪ್ ಉಪಕ್ರಮಗಳ ಮೂಲಕವಾಗಿ ನಾವೊಂದು ಎಕೋಸಿಸ್ಟಮ್ ನಿರ್ಮಿಸುತ್ತಿದ್ದೇವೆ. ಅದರ ಮೂಲಕವಾಗಿ ನೈಜ ಜಗತ್ತಿನ ಕೌಶಲ, ನಾವೀನ್ಯತೆ ಸಾಮರ್ಥ್ಯ ಹಾಗೂ ಜಾಗತಿಕ ಹೊರನೋಟದೊಂದಿಗೆ ವಿದ್ಯಾರ್ಥಿಗಳನ್ನು ಬಲಗೊಳಿಸುತ್ತೇವೆ. ನಮ್ಮ ದೃಷ್ಟಿಕೋನ ಏನೆಂದರೆ, ಜವಾಬ್ದಾರಿಯುತ ನಾಯಕರನ್ನು ಪೋಷಣೆ ಮಾಡುವುದು ಹಾಗೂ ಉದ್ಯಮಿಗಳಾಗಲು ಶಿಕ್ಷಣ ಸಿದ್ಧಾಂತಕ್ಕೆ ಪೂರಕವಾದ ನಾಯಕರನ್ನು ರೂಪಿಸುವುದಾಗಿದೆ," ಎಂದು ಹೇಳಿದರು.
ಇನ್ನು ರೇವಾ ಬಿಜಿನೆಸ್ ಸ್ಕೂಲ್ ಹಾಗೂ ಕಾಮರ್ಸ್ ಮ್ಯಾನೇಜ್ ಮೆಂಟ್ ಫ್ಯಾಕಲ್ಟಿ ಡೀನ್ ಡಾ ಶುಭಾ ಎ. ಅವರು ರೇವಾ ಯೂನಿವರ್ಸಿಟಿಯಲ್ಲಿ ನಾವೀನ್ಯತೆಯ, ಉದ್ಯಮ ಪ್ರಸ್ತುತತೆಯ ಹಾಗೂ ಭವಿಷ್ಯದ ಮೇಲೆ ದೃಷ್ಟಿ ನೆಟ್ಟ ಪಠ್ಯಕ್ರಮದ ಅಳವಡಿಕೆ ಮೂಲಕ ಬೋಧನೆ ಸಾಗುತ್ತಿದೆ ಮತ್ತು ಅದು ಹೇಗೆ ವಿಶಿಷ್ಟವಾದದ್ದು ಎಂಬ ಬಗ್ಗೆ ತುಂಬ ವಿವರವಾಗಿ ಮಾತನಾಡಿದರು. ಅಡ್ಮಿಷನ್- ನಿರ್ದೇಶಕರಾದ ಗೌರವ್ ಯಾದವ್ ಅವರು ಮಾತನಾಡಿ, ತುಂಬ ಸ್ಥಿರವಾಗಿ ರೇವಾ ಯೂನಿವರ್ಸಿಟಿ ಬಹುಶಿಸ್ತೀಯ ಕಲಿಯ ಆಚೆಗೆ ಟ್ರಾನ್ಸ್ ಡಿಸಿಪ್ಲೀನರಿ ಕಲಿಕೆ ಮಾದರಿಗೆ ಕಡೆಗೆ ಸಾಗುತ್ತಿರುವ ಬಗ್ಗೆ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ರೇವಾ ಯೂನಿವರ್ಸಿಟಿ ರಿಜಿಸ್ಟ್ರಾರ್ ಡಾ. ಎಂ. ಧನಂಜಯ ಅವರು ಸಹ ಮಾತನಾಡಿದರು.
ರೇವಾ ವಿಶ್ವವಿದ್ಯಾಲಯದ ಮುಖ್ಯವಾದ ಅಂಶ ಏನೆಂದರೆ ಭಾರತದ ಪ್ರಮುಖ ಮೂಲಸೌಕರ್ಯ ಹಾಗೂ ರಿಯಲ್ ಎಸ್ಟೇಟ್ ಡೆವಲಪ್ ಮೆಂಟ್ ಸಂಸ್ಥೆಗಳ ಸಹಯೋಗದಲ್ಲಿ ದಿವ್ಯಶ್ರೀ (DivyaSree) ಎಂಬ ಎಕ್ಸಲೆನ್ಸ್ ಸೆಂಟರ್ಸ್ ಅಭಿವೃದ್ಧಿ ಮಾಡಿರುವುದು. ಈ ಸಹಯೋಗದ ಉಪಕ್ರಮವು ಸಿವಿಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಚರ್ ವಿಭಾಗದ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಒಂದೆಡೆ ತರುತ್ತದೆ ಮತ್ತು ಬಹುಶಿಸ್ತೀಯ ಪ್ರಾಜೆಕ್ಟ್‌ಗಳಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಇದರ ಗಮನವು ಸುಸ್ಥಿರ ಮೂಲಸೌಕರ್ಯ, ಸ್ಮಾರ್ಟ್ ಟೆಕ್ನಾಲಜೀಸ್, ಅರ್ಬನ್ ಇನೊವೇಷನ್ ಮತ್ತು ತ್ರಿಡಿ ಪ್ರಿಂಟಿಂಗ್ ಕಡೆ ಇರುತ್ತದೆ. ಜಿಯೋಪಾಲಿಟಿಕ್ಸ್ ನಿಂದ ಮೊದಲುಗೊಂಡು ಜಾಗತಿಕ ಮಟ್ಟದಲ್ಲಿ ಬಹಳ ಬೇಡಿಕೆ ಇರುವ ಹಲವು ಪ್ರೋಗ್ರಾಮ್ ಗಳನ್ನು ರೇವಾದಲ್ಲಿ ಕಾಣಬಹುದು.
ಎಲ್ಲರಿಗೂ ಸಿಗುವ ರೀತಿಯಲ್ಲಿ, ಎಲ್ಲರನ್ನೂ ಒಳಗೊಂಡ ಮತ್ತು ಅರ್ಹತೆ ಆಧಾರಿತ ಶಿಕ್ಷಣಕ್ಕೆ ತನ್ನ ಬದ್ಧತೆಯ ಭಾಗವಾಗಿ, ರೇವಾ ವಿಶ್ವವಿದ್ಯಾಲಯವು ವೈವಿಧ್ಯಮಯ ಹಿನ್ನೆಲೆಯ ಅರ್ಹ ವಿದ್ಯಾರ್ಥಿಗಳನ್ನು ಬೆಂಬಲಿಸಲು ಬಹು ವಿಭಾಗಗಳಲ್ಲಿ ವಿದ್ಯಾರ್ಥಿವೇತನಗಳನ್ನು ನೀಡುತ್ತದೆ. ವಿಶ್ವವಿದ್ಯಾನಿಲಯವು ಶೈಕ್ಷಣಿಕ ಮತ್ತು ಪ್ರವೇಶ ಪರೀಕ್ಷೆಯ ಕಾರ್ಯಕ್ಷಮತೆಯ ಆಧಾರದ ಮೇಲೆ ಮೆರಿಟ್ ವಿದ್ಯಾರ್ಥಿವೇತನಗಳು, ಕ್ರೀಡಾ ವಿದ್ಯಾರ್ಥಿವೇತನಗಳು, NCC ವಿದ್ಯಾರ್ಥಿವೇತನಗಳು, ರಕ್ಷಣಾ, ಅರೆಸೈನಿಕ ಮತ್ತು ಪೊಲೀಸ್ ಸಿಬ್ಬಂದಿ ಕುಟುಂಬಗಳಿಗೆ ವಿದ್ಯಾರ್ಥಿವೇತನಗಳು, ವಿಶೇಷ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳು, ಹಾಗೆಯೇ ಸಿಬ್ಬಂದಿ ಮಕ್ಕಳು, ಒಡಹುಟ್ಟಿದವರು ಮತ್ತು ರೆಫರಲ್ ವಿದ್ಯಾರ್ಥಿವೇತನಗಳನ್ನು ಒದಗಿಸುತ್ತದೆ. ಇದು ಗುಣಮಟ್ಟದ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರವೇಶವನ್ನು ಖಚಿತಪಡಿಸುತ್ತದೆ ಮತ್ತು ಶೈಕ್ಷಣಿಕ ಶ್ರೇಷ್ಠತೆ, ಪ್ರತಿಭೆ ಮತ್ತು ಸಾಧನೆಯನ್ನು ಪ್ರೋತ್ಸಾಹಿಸುತ್ತದೆ.
ರೇವಾ ವಿಶ್ವವಿದ್ಯಾಲಯವು ತನ್ನ ವಿದ್ಯಾರ್ಥಿ ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ. ಇದು ವಿಶ್ವವಿದ್ಯಾಲಯದ ಕ್ರೀಡಾ ಪರಿಸರ ವ್ಯವಸ್ಥೆಗೆ ಹೆಮ್ಮೆಯ ಸಾಧನೆಯಾಗಿದೆ. ಎರಡನೇ ವರ್ಷದ ಎಂಎ ವಿದ್ಯಾರ್ಥಿ ಮತ್ತು ಪ್ರತಿಭಾನ್ವಿತ ಆಲ್‌ರೌಂಡರ್ ಆಗಿರುವ ಮ್ಯಾಕ್ನೀಲ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಆಫ್-ಸ್ಪಿನ್ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅವರು 2024-25 ಸಿ.ಕೆ. ನಾಯುಡು ಟ್ರೋಫಿ ಋತುವಿನಲ್ಲಿ ಅಸಾಧಾರಣ ಪ್ರದರ್ಶನ ನೀಡಿದರು. ಎರಡು ತ್ರಿಶತಕಗಳು ಸೇರಿದಂತೆ 1,000ಕ್ಕೂ ಹೆಚ್ಚು ರನ್ ಗಳಿಸಿದರು ಮತ್ತು ನಂತರ ರೆಸ್ಟ್ ಆಫ್ ಇಂಡಿಯಾ U-23 ತಂಡದ ಉಪನಾಯಕರಾಗಿಯೂ ಒಳ್ಳೆ ಪ್ರದರ್ಶನ ನೀಡಿದ್ದಾರೆ. ಅವರು ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಮಹಾರಾಜ ಟ್ರೋಫಿ KSCA T20 ಟೂರ್ನಮೆಂಟ್‌ನಲ್ಲಿ ಮಂಗಳೂರು ಡ್ರಾಗನ್ಸ್ ಪರ ಆಡಿದ್ದಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಕರ್ನಾಟಕ ಸೀನಿಯರ್ ತಂಡದ ಭಾಗವಾಗಿದ್ದರು.
ಕ್ರಿಕೆಟ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್, ಸ್ಕೇಟಿಂಗ್ ಮತ್ತು ಈಜು ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳ ಮೂಲಕ ಕ್ರೀಡಾ ಶ್ರೇಷ್ಠತೆಯನ್ನು ಪೋಷಿಸುವ ತನ್ನ ನಿರಂತರ ಬದ್ಧತೆಯನ್ನು ವಿಶ್ವವಿದ್ಯಾಲಯವು ಎತ್ತಿ ತೋರಿಸಿದೆ.












Click it and Unblock the Notifications