ಸಂಪೂರ್ಣವಾಗಿ ಇ ವಾಹನ ಬಳಕೆಗೆ ಫ್ಲಿಪ್ ಕಾರ್ಟ್‌ನಿಂದ ಸಂಕಲ್ಪ

ಬೆಂಗಳೂರು, ಫೆಬ್ರವರಿ 24: ಭಾರತದ ಸ್ವದೇಶಿ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್, 2030 ರ ವೇಳೆಗೆ ತನ್ನ ಚಟುವಟಿಕೆಗಳಿಗಾಗಿ 25,000 ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದಾಗಿ ಇಂದು ಘೋಷಿಸಿದೆ. ಇದು ಫ್ಲಿಪ್ ಕಾರ್ಟ್ ತನ್ನ ನಗರ ಪ್ರದೇಶಗಳ ಲಾಜಿಸ್ಟಿಕ್ ಫ್ಲೀಟ್ ನಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತನೆಗೊಳ್ಳುವ ಸಾರ್ವಜನಿಕ ಬದ್ಧತೆಗೆ ಅನುಗುಣವಾಗಿ ಮತ್ತು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವುದನ್ನು ವೇಗವಾಗಿ ಪತ್ತೆ ಹೆಚ್ಚಲು ಡೆಲಿವರಿ ತಾಣಗಳು ಮತ್ತು ಕಚೇರಿಗಳ ಸುತ್ತಲೂ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ನೆರವಾಗುತ್ತದೆ.

ಈ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಈಗಾಗಲೇ ಕಾರ್ಯೋನ್ಮುಖವಾಗಿದೆ ಮತ್ತು ದೇಶಾದ್ಯಂತ ಈಗಾಗಲೇ ದೆಹಲಿ, ಬೆಂಗಳೂರು, ಹೈದ್ರಾಬಾದ್, ಕೊಲ್ಕತ್ತಾ, ಗುವಾಹತಿ ಮತ್ತು ಪುಣೆ ಸೇರಿದಂತೆ ಹಲವು ಸ್ಥಳಗಳಲ್ಲಿ ಉತ್ಪನ್ನಗಳ ಡೆಲಿವರಿಗಾಗಿ ದ್ವಿಚಕ್ರ ಮತ್ತು ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡಲು ಆರಂಭಿಸಿದೆ.

ಫ್ಲಿಪ್ ಕಾರ್ಟ್ ನ ಎಲೆಕ್ಟ್ರಿಕ್ ವಾಹನಗಳಲ್ಲಿ ದ್ವಿಚಕ್ರ ವಾಹನಗಳು, ತ್ರಿಚಕ್ರ ಮತ್ತು 4 ಚಕ್ರದ ವಾಹನಗಳು ಸೇರಿವೆ. ಈ ವಾಹನಗಳ ವಿಶೇಷತೆಯೆಂದರೆ ಇವುಗಳನ್ನು ಭಾರತದಲ್ಲಿಯೇ ವಿನ್ಯಾಸ ಮಾಡಿ ಅಸೆಂಬಲ್ ಮಾಡಲಾಗಿದೆ. ಈ ಮೂಲಕ ಫ್ಲಿಪ್ ಕಾರ್ಟ್ ಸ್ಥಳೀಯ ಆವಿಷ್ಕಾರ ಮತ್ತು ಆರ್ಥಿಕತೆಗೆ ನೆರವಾಗುತ್ತಿದೆ. ಈ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ದೇಶದ ಪ್ರಮುಖ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾಗಿ ಹೀರೋ ಎಲೆಕ್ಟ್ರಿಕ್, ಮಹೀಂದ್ರ ಎಲೆಕ್ಟ್ರಿಕ್ ಮತ್ತು ಪಿಯಾಜಿಯೋ. ಈ ಕಂಪನಿಗಳು ಫ್ಲಿಪ್ ಕಾರ್ಟ್ ನ ಮೊದಲ ತಾಣದಿಂದ ಕಟ್ಟಕಡೆಯ ತಾಣಗಳವರೆಗೆ ಉತ್ಪನ್ನಗಳನ್ನು ವಿತರಣೆ ಮಾಡುವ ರೀತಿಯಲ್ಲಿ ವಾಹನಗಳನ್ನು ವಿನ್ಯಾಸಗೊಳಿಸುತ್ತಿವೆ.

Flipkart aim to achieve 100% electric mobility by 2030

ಫ್ಲಿಪ್ ಕಾರ್ಟ್ ದೇಶಾದ್ಯಂತ ಇರುವ ತನ್ನ 1,400 ಕ್ಕೂ ಅಧಿಕ ಪೂರೈಕೆ ಜಾಲಗಳ ಸೌಲಭ್ಯಗಳಿರುವ ಸ್ಥಳಗಳಲ್ಲಿ ಸರ್ವೀಸ್ ಕಾಂಟ್ಯಾಕ್ಟ್ ಗಳು, ಚಾರ್ಜಿಂಗ್ ಸೌಲಭ್ಯಗಳನ್ನು ಅಳವಡಿಸುವ ಬಗ್ಗೆ ಕಂಪನಿಗಳಿಗೆ ಬೇಡಿಕೆಗಳನ್ನು ಸಲ್ಲಿಸಿದೆ. ಅಲ್ಲದೇ, ಎಲೆಕ್ಟ್ರಿಕ್ ವಾಹನಗಳ ಬಳಕೆ ಸಂಬಂಧ ವಿತರಣಾ ಪ್ರತಿನಿಧಿಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಹೀರೋ ಎಲೆಕ್ಟ್ರಿಕ್ ನಿಂದ Nyx ಸರಣಿ: ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಕಂಪನಿಯಾಗಿರುವ ಹೀರೋ ಎಲೆಕ್ಟ್ರಿಕ್ Nyx ಸರಣಿ(ಎಚ್ಎಕ್ಸ್ ಮತ್ತು ಎಲ್ಎಕ್ಸ್ ಎರಡೂ ಶ್ರೇಣಿಯನ್ನು ಪೂರೈಸುತ್ತದೆ)ಯ ವಾಹನಗಳನ್ನು ಪೂರೈಕೆ ಮಾಡುತ್ತದೆ. ಈ ಕಂಪನಿಯು ಒಮ್ಮೆ ಚಾರ್ಜ್ ಮಾಡಿದರೆ 150 ಕಿಲೋಮೀಟರ್ ವರೆಗೆ ಕ್ರಮಿಸುವಂತಹ ದೀರ್ಘ ಬಾಳಿಕೆಯ ಸೇವೆ, ಉನ್ನತೀಕರಿಸಿ ಇಂಧನ ಬಳಕೆ, ವಿಶ್ವಾಸಾರ್ಹವಾದ ವಾಹನಗಳನ್ನು ಪೂರೈಕೆ ಮಾಡುತ್ತದೆ. ಈ ವೈಶಿಷ್ಟ್ಯತೆಗಳನ್ನು ಹೊಂದಿರುವ ಇದರ ವಾಹನಗಳನ್ನು ಕಟ್ಟಕಡೆಯ ಗ್ರಾಹಕನಿಗೆ ಉತ್ಪನ್ನಗಳನ್ನು ವಿತರಣೆ ಮಾಡುವುದು ಮತ್ತು ಇತರೆ ವಾಣಿಜ್ಯ ಬಳಕೆಗಾಗಿ ಅತ್ಯಧಿಕ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ದೇಶಾದ್ಯಂತ ಈ ವಾಹನಗಳನ್ನು ಈಗಾಗಲೇ ಫ್ಲಿಪ್ ಕಾರ್ಟ್ ನ ಲಾಜಿಸ್ಟಿಕ್ ನಿಯೋಜನಾ ಪಾಲುದಾರರು ಬಳಸುತ್ತಿದ್ದಾರೆ. ಕೊಲ್ಕತ್ತಾ, ಗುವಾಹತಿ ಮತ್ತು ಭುವನೇಶ್ವರದಲ್ಲಿ ಈ ವಾಹನಗಳನ್ನು ಹೆಚ್ಚು ಹೆಚ್ಚು ಬಳಸಲಾಗುತ್ತಿದೆ.

Flipkart aim to achieve 100% electric mobility by 2030

ಮಹೀಂದ್ರ ಎಲೆಕ್ಟ್ರಿಕ್ ನ ಟ್ರಿಯೋ ಝೊರ್: ಮಹೀಂದ್ರ ಎಲೆಕ್ಟ್ರಿಕ್ ದೇಶೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ತ್ರಿಚಕ್ರ ವಾಹನ ಇದಾಗಿದೆ. ಸುಧಾರಿತ ಲೀಥಿಯಂ ಐಯಾನ್ ಬ್ಯಾಟರಿಗಳನ್ನು ಹೊಂದಿರುವ ಈ ವಾಹನಗಳು ಫ್ಲೀಟ್ ಮ್ಯಾನೇಜ್ ಮೆಂಟ್ ಅನ್ನು ಸಮರ್ಥವಾಗಿ ಕೈಗೊಳ್ಳಲು ನೆರವಾಗುತ್ತದೆ. ಟ್ರಿಯೋ ಝೊರ್ ಒಂದು ವಿನೂತನ ವಾಹನವಾಗಿದ್ದು, 8kW ವಿಭಾಗದಲ್ಲಿ ಅತ್ಯುತ್ತಮವಾಗಿದೆ. ಇದರಲ್ಲಿ 42Nm ಟಾರ್ಕ್ ಅತ್ಯುತ್ಕೃಷ್ಠವಾಗಿದ್ದು, 550 ಕೆಜಿವರೆಗೆ ಪೇಲೋಡ್ ಅನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಈ ಎಲೆಕ್ಟ್ರಿಕ್ ಕಾರ್ಗೊ ತ್ರಿಚಕ್ರ ವಾಹನಗಳು ಅತ್ಯಂತ ಸ್ಥಿರವಾದ ಮತ್ತು ಸುರಕ್ಷಿತವಾದ ವಾಹನಗಳಾಗಿವೆ.

ಪಿಯಾಜಿಯೋದಿಂದ ಅಪೆ ಇ ಎಕ್ಸ್ಟ್ರಾ ಎಫ್ಎಕ್ಸ್: ಈ ತ್ರಿಚಕ್ರ ವಾಹನವು ತನ್ನ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿಯಾದ ರೀತಿಯಲ್ಲಿ ವಿನ್ಯಾಸಗೊಂಡಿದೆ. ಇದರಲ್ಲಿ ಸುಧಾರಿತವಾದ ಬ್ಯಾಟರಿ ತಂತ್ರಜ್ಞಾನ ಮತ್ತು ಸುಪೀರಿಯರ್ ಕಸ್ಟಮರ್ ಎಕ್ಸ್ ಪೀರಿಯನ್ಸ್ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+