ನಾಗರಿಕರ ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ಡೈಲಿಹಂಟ್, ಒನ್‌ಇಂಡಿಯಾ ಜೊತೆ ಕೈ ಜೋಡಿಸಿದ ದೆಹಲಿ ಪೊಲೀಸರು

ನವದೆಹಲಿ, ಜೂನ್ 13: ಭಾರತದ ನಂಬರ್ 1 ಸ್ಥಳೀಯ ಸುದ್ದಿಗಳ ಹಂಚಿಕೆಯ ವೇದಿಕೆಯಾಗಿರುವ ಡೈಲಿಹಂಟ್ ಮತ್ತು ಭಾರತದ ನಂಬರ್ 1 ದೇಶೀಯ ಡಿಜಿಟಲ್ ಪೋರ್ಟಲ್ ಆಗಿರುವ ಒನ್‌ ಇಂಡಿಯಾ, ದೆಹಲಿ ಪೊಲೀಸರೊಂದಿಗೆ ಕಾರ್ಯತಂತ್ರದ ಪಾಲುಗಾರಿಕೆಯನ್ನು ಘೋಷಣೆ ಮಾಡಿದೆ.

ಎರಡು ವರ್ಷಗಳ ಕಾಲ ದೆಹಲಿ ಪೊಲೀಸ್ ಇಲಾಖೆ ಜೊತೆಗೂಡಿ ಡೈಲಿ ಹಂಟ್ ಮತ್ತು ಒನ್‌ ಇಂಡಿಯಾ ಕಾರ್ಯ ನಿರ್ವಹಿಸಲಿದ್ದು, ಸೈಬರ್ ಭದ್ರತೆ, ಮಹಿಳೆಯರ ಸುರಕ್ಷತೆ, ಮಾದಕ ವ್ಯಸನದ ಬಗ್ಗೆ ಜಾಗೃತಿ ಮತ್ತು ಇತರೆ ಸಾಮಾಜಿಕ ಸಮಸ್ಯೆಗಳನ್ನು ಕಡಿಮೆ ಮಾಡಲು ಕೆಲಸ ಮಾಡಲಿವೆ. ದೆಹಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಸಂಪರ್ಕ ವೇದಿಕೆಯಾಗಿ ಡೈಲಿಹಂಟ್ ಮತ್ತು ಒನ್‌ ಇಂಡಿಯಾ ಕೆಲಸ ಮಾಡಲಿದೆ.

Dailyhunt, Oneindia And Delhi Police Collaborate To Empower Citizens And Enhance Public Safety

ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ನೀಡುವ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಈ ಪಾಲುದಾರಿಕೆ ಹೊಂದಿದೆ. ಡೈಲಿಹಂಟ್ ವೇದಿಕೆಯಲ್ಲಿ ದೆಹಲಿ ಪೊಲೀಸ್ ಇಲಾಖೆಯ ಪ್ರೊಫೈಲ್ ಅನ್ನು ಪ್ರಾರಂಭಿಸುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ವಿಶೇಷವಾಗಿ ಯುವಕರನ್ನು ಪೊಲೀಸ್ ಇಲಾಖೆ ಜೊತೆ ತೊಡಗಿಸಿಕೊಳ್ಳುವಂತೆ ಮಾಡಲು, ವಿಡಿಯೋಗಳು, ಶೇರ್ ಕಾರ್ಡ್, ಮಾಹಿತಿ ಕಾರ್ಡ್‌ಗಳನ್ನು, ಲೈವ್‌ ಸ್ಟ್ರೀಮ್‌ಗಳನ್ನು ಆರಂಭಿಸುತ್ತದೆ.

ಒನ್‌ ಇಂಡಿಯಾದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಪಟ್ಟಂತೆ ಲೇಖನಗಳು, ಇನ್ಫೋಗ್ರಾಫಿಕ್ಸ್ ಮತ್ತು ವಿಡಿಯೋಗಳನ್ನು ಹಲವು ಭಾಷೆಗಳಲ್ಲಿ ಪ್ರಕಟಿಸಲಾಗುವುದು ಮತ್ತು ಪ್ರಾದೇಶಿಕ ಪ್ರೇಕ್ಷಕರಿಗೂ ಈ ಮಾಹಿತಿ ಪರಿಣಾಮಕಾರಿಯಾಗಿ ತಲುಪುವಂತೆ ಮಾಡಲಾಗುತ್ತದೆ. ಈ ಸಹಯೋಗದ ಮೂಲಕ ದೆಹಲಿ ಪೊಲೀಸರು ನಾಗರಿಕರ ಜೊತೆ ಸಂಪರ್ಕ ಹೆಚ್ಚಿಸಿಕೊಳ್ಳಲಿದ್ದಾರೆ, ಹೆಚ್ಚಿನ ಜಾಗೃತಿ ಮೂಡಿಸುತ್ತಾರೆ ಮತ್ತು ಹಲವು ಮಹತ್ವದ ವಿಚಾರಗಳ ಬಗ್ಗೆ ಪ್ರೇಕ್ಷಕರ ಜೊತೆ ಚರ್ಚೆಗಳನ್ನು ಮಾಡಲು ಅನುಕೂಲವಾಗುತ್ತದೆ.

Dailyhunt, Oneindia And Delhi Police Collaborate To Empower Citizens And Enhance Public Safety

ಸಂತಸ ವ್ಯಕ್ತಪಡಿಸಿದ ರಾವಣನ್

ಎಟರ್ನೊ ಇನ್ಫೋಟೆಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾವಣನ್ ಎನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, "ನಮ್ಮ ವೇದಿಕೆಗಳಲ್ಲಿ ದೆಹಲಿ ಪೊಲೀಸರ ಜೊತೆ ಕೈಜೋಡಿಸಲು ನಾವು ಹೆಮ್ಮೆಪಡುತ್ತೇವೆ ಮತ್ತು ನಮ್ಮ ಸಹಯೋಗವನ್ನು ಬಲಪಡಿಸಲು ಎದುರು ನೋಡುತ್ತಿದ್ದೇವೆ. ದೆಹಲಿ ಪೊಲೀಸರು ಮತ್ತು ಸಮುದಾಯದ ನಡುವಿನ ಬಾಂಧವ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ನಿರ್ಣಾಯಕ ಮಾಹಿತಿಯ ಎಲ್ಲರಿಗೂ ಸಿಗುವಂತೆ ಮಾಡುತ್ತೇವೆ. ಈ ಪಾಲುಗಾರಿಕೆಯು ನಾಗರಿಕರನ್ನು ಸಶಕ್ತಗೊಳಿಸಲು ಮತ್ತು ತೊಡಗಿಸಿಕೊಳ್ಳುವ ಮೂಲಕ ಮೂಲಕ ಸುರಕ್ಷಿತ ಮತ್ತು ಹೆಚ್ಚು ತಿಳುವಳಿಕೆಯುಳ್ಳ ಸಮಾಜವನ್ನು ಬೆಳೆಸಲು ಡೈಲಿಹಂಟ್ ಮತ್ತು ಒನ್‌ಇಂಡಿಯಾಗೆ ಇರುವ ಬದ್ದತೆಯನ್ನು ತೋರಿಸುತ್ತದೆ" ಎಂದು ಹೇಳಿದರು.

ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯ

ದೆಹಲಿ ಪೊಲೀಸ್ ಇಲಾಖೆಯ ಡಿಸಿಪಿ, ಪಿಆರ್‍‌ಒ ಸುಮನ್ ನಲ್ವಾ ಮಾತನಾಡಿ, "ಈ ಪಾಲುದಾರಿಕೆ ಮೂಲಕ ನಾಗರಿಕರು ಅದರಲ್ಲೂ ಯುವ ಜನತೆ ಜೊತೆ ದೆಹಲಿ ಪೊಲೀಸರ ನಡುವೆ ಸಹಯೋಗ ಬಲಪಡಿಸುವುದಾಗಿದೆ. ಡೈಲಿಹಂಟ್ ಮತ್ತು ಒನ್‌ಇಂಡಿಯಾ ವೇದಿಕೆ ಮೂಲಕ ಹೊಸ ಮಾದರಿಯಲ್ಲಿ ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯ ಹೊಂದಲು ಪ್ರಯತ್ನಿಸುತ್ತೇವೆ, ಪರಿಣಾಮಕಾರಿ ಸಂದೇಶಗಳನ್ನು ನೀಡುವುದು, ನಮ್ಮ ಡಿಜಿಟಲ್ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸುತ್ತೇವೆ. ನಿರ್ಣಾಯಕ ಮಾಹಿತಿಗಳನ್ನು ನಾಗರಿಕರು ಸುಲಭವಾಗಿ ಪಡೆಯುವಂತೆ ಆಗಲು ಮತ್ತು ನಾಗರೀಕರ ಜೊತೆ ಅರ್ಥಪೂರ್ಣ ಚರ್ಚೆಗಳನ್ನು ಮಾಡಲು ಈ ವೇದಿಕೆಗಳು ಬೆಂಬಲ ನೀಡಲಿವೆ" ಎಂದು ಹೇಳಿದರು.

ದೆಹಲಿ ಪೊಲೀಸ್, ಡೈಲಿಹಂಟ್ ಮತ್ತು ಒನ್ಇಂಡಿಯಾ ನಡುವಿನ ಸಹಯೋಗವು ನಾಗರಿಕರನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಗಣನೀಯ ಪರಿಣಾಮ ಬೀರುವ ಬಗ್ಗೆ ವಿಶ್ವಾಸ ಹೊಂದಿದೆ.

ಡೈಲಿಹಂಟ್ ಕುರಿತು:

ಡೈಲಿಹಂಟ್ ಭಾರತದ ನಂಬರ್ 1 ಸ್ಥಳೀಯ ಭಾಷೆಯ ವಿಷಯ ವೇದಿಕೆಯಾಗಿದ್ದು, ಪ್ರತಿದಿನ 15 ಭಾಷೆಗಳಲ್ಲಿ 1 ಮಿಲಿಯನ್‌ಗೂ ಹೆಚ್ಚು ಹೊಸ ವಿಷಯಗಳನ್ನು ನೀಡುತ್ತದೆ. 50,000ಕ್ಕೂ ಹೆಚ್ಚು ಸಹಭಾಗಿತ್ವವನ್ನು ಹೊಂದಿದೆ, 50 ಸಾವಿರಕ್ಕೂ ಹೆಚ್ಚು ಕಂಟೆಂಟ್ ಕ್ರಿಯೇಟರ್ಸ್ ಗಳಿಂದ ಮಾನ್ಯತೆ ಪಡೆದುಕೊಂಡಿದೆ. "ಒಂದು ಬಿಲಿಯನ್ ಭಾರತೀಯರಿಗೆ ಸುದ್ದಿಗಳನ್ನು ತಿಳಿಸುವ, ಸಮೃದ್ಧಗೊಳಿಸುವ ಮತ್ತು ಮನರಂಜನೆ ನೀಡುವ ವಿಷಯವನ್ನು ಅನ್ವೇಷಿಸಲು, ಅರಿಯಲು ಮತ್ತು ಬೆರೆಯಲು ಅವಕಾಶ ಒದಗಿಸುವ ಭಾರತೀಯ ವೇದಿಕೆಯಾಗಿರುವುದು ನಮ್ಮ ಧ್ಯೇಯವಾಗಿದೆ. ಡೈಲಿಹಂಟ್ ಪ್ರತಿ ತಿಂಗಳು 350 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರಿಗೆ (MAUs) ಸೇವೆ ಒದಗಿಸುತ್ತದೆ. ಪ್ರತಿ ದಿನ ಸಕ್ರಿಯ ಬಳಕೆದಾರರು (DAU) 30 ನಿಮಿಷಗಳ ಸಮಯವನ್ನು ಕಳೆಯುತ್ತಿದ್ದಾರೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಎಂಎಲ್‌ ತಂತ್ರಜ್ಞಾನದ ಸಹಾಯದಿಂದ ಓದುಗರ ಆಸಕ್ತಿಗೆ ತಕ್ಕಂತೆ ವಿಷಯ ಮತ್ತು ಅಧಿಸೂಚನೆಗಳನ್ನು ತಲುಪಿಸಲಾಗುತ್ತದೆ.

11 ಭಾಷೆಗಳಲ್ಲಿ ಒನ್ಇಂಡಿಯಾ ಛಾಪು

Oneindia.com ಬಹುಭಾಷಾ ಸುದ್ದಿ ವೇದಿಕೆಯಾಗಿದ್ದು, 2006 ರಲ್ಲಿ ಸ್ಥಾಪಿತವಾಗಿದ್ದು, ಜನರನ್ನು ಅವರ ಭಾಷೆಯಲ್ಲೇ ಸಂಪರ್ಕಿಸುವ ಗುರಿ ಹೊಂದಿದೆ. ಕಳೆದ ಎರಡು ದಶಕಗಳಿಂದ ಆನ್‌ಲೈನ್‌ ಪಬ್ಲಿಷರ್ ಆಗಿ, ಇಂಗ್ಲಿಷ್, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ, ಗುಜರಾತಿ, ಪಂಜಾಬಿ, ಮರಾಠಿ ಮತ್ತು ಒಡಿಯಾ ಸೇರಿ ಒಟ್ಟು 11 ಭಾಷೆಗಳಲ್ಲಿ ಪ್ರತಿದಿನ ಲಕ್ಷಾಂತರ ಓದುಗರಿಗೆ ಸುದ್ದಿಗಳನ್ನು ನೀಡುತ್ತಿದೆ.

ಭಾರತದಲ್ಲಿನ ಇಂಗ್ಲಿಷ್ ಹೊರತು ಪಡಿಸಿ ಇತರೆ ಭಾಷೆಗಳನ್ನು ಮಾತನಾಡುವ ದೊಡ್ಡ ಆನ್‌ಲೈನ್ ಸಮುದಾಯಕ್ಕೆ ಸೇವೆ ಸಲ್ಲಿಸುವ ಏಕೈಕ ಉದ್ದೇಶದಿಂದ ಒನ್‌ಇಂಡಿಯಾವನ್ನು ಪ್ರಾರಂಭಿಸಲಾಗಿದೆ. ಕಾಮ್‌ಸ್ಕೋರ್ ಪ್ರಕಾರ, ಪ್ರತಿ 5 ಡಿಜಿಟಲ್ ಬಳಕೆದಾರರಲ್ಲಿ ಒಬ್ಬರು ಒನ್ ಇಂಡಿಯಾ ವೇದಿಕೆಯನ್ನು ಬಳಸಿ ವಿಷಯ ತಿಳಿದುಕೊಳ್ಳುತ್ತಿದ್ದಾರೆ. ನಮ್ಮಆರಂಭ, ಕ್ರಿಯಾಶೀಲತೆ, ಉತ್ಸಾಹ ಮತ್ತು ದೂರದೃಷ್ಟಿಯು ಒಂದು ಮುಂಚೂಣಿಯನ್ನು ಒದಗಿಸುತ್ತದೆ ಮತ್ತು ಒನ್ಇಂಡಿಯಾವನ್ನು ಭಾರತದಲ್ಲಿ ಎಲ್ಲರಿಗಿಂತ ಮುಂದೆ ಇರುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+