Tricolor Illuminates Empire State: ಭಾರತ-ಅಮೆರಿಕ ಐತಿಹಾಸಿಕ ಮೈಲಿಗಲ್ಲು: ಎಂಪೈರ್ ಸ್ಟೇಟ್ ಕಟ್ಟಡದಲ್ಲಿ ತ್ರಿವರ್ಣ ದ್ವಜ

ಭಾರತ-ಅಮೆರಿಕದ ಐತಿಹಾಸಿಕ ಮೈಲಿಗಲ್ಲು: ಎಂಪೈರ್ ಸ್ಟೇಟ್ ಕಟ್ಟಡದಲ್ಲಿ ಪ್ರಕಾಶಿಸಿದ ತ್ರಿವರ್ಣ ಧ್ವಜ

ನ್ಯೂಯಾರ್ಕ್: ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (FIA NY-NJ-CT-NE) ವತಿಯಿಂದ ಆಗಸ್ಟ್ 14ರಂದು ನ್ಯೂಯಾರ್ಕ್‌ನ ಪ್ರಸಿದ್ಧ ಎಂಪೈರ್ ಸ್ಟೇಟ್ ಕಟ್ಟಡದಲ್ಲಿ ವಾರ್ಷಿಕ ದೀಪಾಲಂಕಾರ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಟ್ಟಡವು ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ ಕಂಗೊಳಿಸಿತು.

Tricolor Illuminates Empire State

ಈ ಕಾರ್ಯಕ್ರಮವು 44ನೇ ವಾರ್ಷಿಕ ಇಂಡಿಯಾ ಡೇ ಆಚರಣೆಯ ಭಾಗವಾಗಿದ್ದು, ಈ ವರ್ಷದ 'ಹಾರ್ಮೋನಿ ಇನ್ ಹೆರಿಟೇಜ್' (ಪಾರಂಪರ್ಯದಲ್ಲಿ ಸಾಮರಸ್ಯ) ಎಂಬ ಸಂದೇಶವನ್ನು ಒಳಗೊಂಡಿತ್ತು. ಇದೇ ಸಂದರ್ಭದಲ್ಲಿ ಭಾರತದ 80ನೇ ಸ್ವಾತಂತ್ರ್ಯ ವರ್ಷ ಮತ್ತು ಅಮೆರಿಕದ 250ನೇ ವಾರ್ಷಿಕೋತ್ಸವ ಎಂಬ ಎರಡು ಐತಿಹಾಸಿಕ ದಿನಗಳನ್ನು ಒಟ್ಟೊಟ್ಟಿಗೆ ಆಚರಿಸಲಾಯಿತು.

ಕಾರ್ಯಕ್ರಮವು ಕಲಾಶ್ರೀ ಸ್ಕೂಲ್ ಆಫ್ ಆರ್ಟ್ಸ್ ವತಿಯಿಂದ ನಡೆದ ಸಾಂಸ್ಕೃತಿಕ ನೃತ್ಯ ಪ್ರದರ್ಶನದೊಂದಿಗೆ ಆರಂಭವಾಯಿತು. ಬಿನಾ ಮೆನನ್ ಅವರು ನೃತ್ಯ ಸಂಯೋಜನೆ ಮಾಡಿದ್ದರು. FIA ಜಂಟಿ ಕಾರ್ಯದರ್ಶಿ ಸ್ರುಜಲ್ ಪಾರಿಖ್ ಕಾರ್ಯಕ್ರಮವನ್ನು ನಿರೂಪಿಸಿ, ಅತಿಥಿಗಳನ್ನು ಸ್ವಾಗತಿಸಿದರು. 'ವಿಶ್ವದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವ' ರಾಷ್ಟ್ರದ ಇತಿಹಾಸವನ್ನು ಆಧರಿಸಿದ ಈ ವಿಶೇಷ ಸಂಜೆಗೆ ಅವರು ಚಾಲನೆ ನೀಡಿದರು.

ಭಾರತ-ಅಮೆರಿಕ ಬಾಂಧವ್ಯದ ಸಂಕೇತ:

FIA ಅಧ್ಯಕ್ಷ ಅಂಕುರ್ ವೈದ್ಯ ಮಾತನಾಡಿ, ಭಾರತ ಮತ್ತು ಅಮೆರಿಕದ ಎರಡೂ ಐತಿಹಾಸಿಕ ಸಂದರ್ಭಗಳನ್ನು ಒಟ್ಟಿಗೆ ಆಚರಿಸುತ್ತಿರುವುದರ ಸಂತಸ ವ್ಯಕ್ತಪಡಿಸಿದರು. "ಅಮೆರಿಕದ 250 ವರ್ಷಗಳ ಜೊತೆಗೆ ಭಾರತದ 80 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವುದು ಖುಷಿಯನ್ನು ದ್ವಿಗುಣಗೊಳಸಿದೆ. ನಮ್ಮ ಸಮುದಾಯದ ಹೆಮ್ಮೆಯ ಪ್ರತಿನಿಧಿಯಾಗಿರುವ ಮೇಯರ್ ಸ್ಯಾಮ್ ಜೋಶಿ ಅವರಿಂದ ಈ ಸಂಭ್ರಮಕ್ಕೆ ಚಾಲನೆ ದೊರೆತಿರುವುದು ಅತ್ಯಂತ ವಿಶೇಷ," ಎಂದರು. FIA ಅಧ್ಯಕ್ಷ ಶ್ರೀಕಾಂತ್ ಅಕ್ಕಪಲ್ಲಿ ಕೂಡ ಸಭೆಯನ್ನುದ್ದೇಶಿಸಿ ಮಾತನಾಡಿದರು.

FIA ಆಹ್ವಾನದ ಮೇರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಡಿಸನ್ ಮೇಯರ್ ಸ್ಯಾಮ್ ಜೋಶಿ, ಅಮೆರಿಕದ ಮೂರು ರಾಜ್ಯಗಳ ಪ್ರದೇಶದಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ಮಹತ್ವದ ಕೊಡುಗೆಗಳನ್ನು ವಿವರಿಸಿದರು. ಆರೋಗ್ಯ ಕ್ಷೇತ್ರ, ವ್ಯಾಪಾರ, ತಂತ್ರಜ್ಞಾನ ಮತ್ತು ಮನರಂಜನೆ ಸೇರಿ ಹಲವು ಕ್ಷೇತ್ರಗಳಲ್ಲಿ ಭಾರತೀಯ ಸಮುದಾಯದ ಕೊಡುಗೆಯನ್ನು ಅವರು ಶ್ಲಾಘಿಸಿದರು.

ಭಾರತದ ಅತ್ಯಂತ ದೀರ್ಘಕಾಲ ಪ್ರಸಾರವಾಗುತ್ತಿರುವ ದೂರದರ್ಶನ ಧಾರಾವಾಹಿ 'ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ' (TMKOC) ತಂಡದ ಕಲಾವಿದರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನೀಲಾ ಫಿಲ್ಮ್ ಪ್ರೊಡಕ್ಷನ್ಸ್‌ನ ಈ ಧಾರಾವಾಹಿಯ ದಿಲೀಪ್ ಜೋಶಿ, ಮುನ್ಮುನ್ ದತ್ತಾ, ಮಂದಾರ್ ಚಾಂದ್ವಾಡ್ಕರ್, ಸೋನಾಲಿಕಾ ಜೋಶಿ, ಬಲ್ವಿಂದರ್ ಸಿಂಗ್ ಮತ್ತು ನಿತೇಶ್ ಭಲೂನಿ ಸೇರಿದಂತೆ ಹಲವು ಕಲಾವಿದರು ಉಪಸ್ಥಿತರಿದ್ದರು. ಇವರೊಂದಿಗೆ ಸೇಶ್ ಅವರು ಸಮಾರಂಭದ ಬಟನ್ ಒತ್ತಿ ಎಂಪೈರ್ ಸ್ಟೇಟ್ ಕಟ್ಟಡವನ್ನು ಭಾರತದ ತ್ರಿವರ್ಣ ಬಣ್ಣಗಳಲ್ಲಿ ಬೆಳಗಿಸುವ ಗೌರವಕ್ಕೆ ಪಾತ್ರರಾದರು.

ನೂರಾರು ಮಂದಿ ಈ ವಿಶೇಷ ದೀಪಾಲಂಕಾರವನ್ನು ನೇರವಾಗಿ ವೀಕ್ಷಿಸಿದರು. FIAಯ ಡಿಜಿಟಲ್ ವೇದಿಕೆಗಳ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಜನರು ಕಾರ್ಯಕ್ರಮವನ್ನು ಲೈವ್ ಆಗಿ ವೀಕ್ಷಿಸಿದರು. ದೀಪಾಲಂಕಾರದ ನಂತರ ಎಂಪೈರ್ ಸ್ಟೇಟ್ ಕಟ್ಟಡದ ಪ್ರತಿನಿಧಿಗಳು ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿದರು. ಬಳಿಕ ಗ್ರ್ಯಾಂಡ್ ಸ್ಟೇರ್‌ಕೇಸ್‌ನಲ್ಲಿ ಫೋಟೋಗಳನ್ನು ತೆಗೆಸಿಕೊಂಡ ಅತಿಥಿಗಳು ಕಟ್ಟಡದ ವೀಕ್ಷಣಾ ಸ್ಥಳಗಳಿಗೆ ತೆರಳಿ ಸಂಭ್ರಮವನ್ನು ಮುಂದುವರಿಸಿದರು.

ಸಮಾರಂಭದ ಅಂತ್ಯದಲ್ಲಿ ಮೇಯರ್ ಸ್ಯಾಮ್ ಜೋಶಿ ಅವರು ಎಲ್ಲಾ ಗೌರವಾನ್ವಿತ ಅತಿಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ, ಸಮುದಾಯವನ್ನು ಒಗ್ಗೂಡಿಸುವಲ್ಲಿ FIA ನಿರಂತರವಾಗಿ ವಹಿಸುತ್ತಿರುವ ಪ್ರಮುಖ ಪಾತ್ರಕ್ಕೆ ಧನ್ಯವಾದ ಅರ್ಪಿಸಿದರು.

FIA ಕುರಿತು

ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (FIA) ಅಮೆರಿಕದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸಿ, ಉತ್ತೇಜಿಸುವ ಉದ್ದೇಶ ಹೊಂದಿರುವ ಲಾಭರಹಿತ ಸಂಸ್ಥೆ. ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ನಾಗರಿಕ ಕಾರ್ಯಕ್ರಮಗಳ ಮೂಲಕ ಭಾರತೀಯ-ಅಮೆರಿಕನ್ ಸಮುದಾಯ ಮತ್ತು ಅಮೆರಿಕದ ಇತರ ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+