Gautam Adani: 26,000 ಯುವ ಪ್ರತಿಭೆಗಳ ಪೈಪೋಟಿ: ಗೌತಮ್ ಅದಾನಿ ‘ವಂದೇ ಭಾರತಂ’ ಅಭಿಯಾನಕ್ಕೆ ಚಾಲನೆ
ದೇಶದ ಮೂಲೆ ಮೂಲೆಗಳಲ್ಲಿ ಎಲೆಮರೆಕಾಯಿಯಂತೆ ಇರುವ ಯುವ ಪ್ರತಿಭಾನ್ವಿತರನ್ನು ವಿಶ್ವಮಟ್ಟದಲ್ಲಿ ಕೊಂಡೊಯ್ಯಲು ಅದಾನಿ ಗ್ರೂಪ್ ಚೇರ್ಮನ್ ಗೌತಮ್ ಅದಾನಿ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಭಾರತ ಯುವ ಪೀಳಿಗೆಯಲ್ಲಿ ಇರುವ ಸೃಜನಶೀಲತೆ ಪ್ರೋತ್ಸಾಹಿಸುವ ಸಲುವಾಗಿ ಅದಾನಿ ಅವರು 'ವಂದೇ ಭಾರತಂ' ಎಂಬ ಅತ್ಯುತ್ತಮ ಕಾರ್ಯಕ್ರಮ ಪ್ರಾರಂಬಿಸಿದ್ದಾರೆ. ಸಂಪನ್ಮೂಲಗಳ ಕೊರತೆಯಿಂದ ಮರೆಯಾಗುತ್ತಿರುವ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸೂಕ್ತ ರಾಷ್ಟ್ರೀಯ ವೇದಿಕೆ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಈ ಕಾರ್ಯಕ್ರಮವು ಒಂದು ರೀತಿಯ ರಾಷ್ಟ್ರಮಟ್ಟದ ಅಭಿಯಾನವಾಗಿದೆ. ಈ ಕಾರ್ಯಕ್ರಮಕ್ಕೆ ಬಹುತೇಕ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು ಸುಮಾರು 26,000 ಕ್ಕೂ ಹೆಚ್ಚು ಉತ್ಸಾಹಿ ಯುವಕರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಪರಿಸರ ಸಂರಕ್ಷಣೆ, ನವೀನ ತಂತ್ರಜ್ಞಾನ, ಕೃಷಿ, ರಕ್ಷಣೆ, ವೈದ್ಯಕೀಯ ಹಾಗೂ ಶಿಕ್ಷಣ ವಲಯಕ್ಕೆ ಸಂಬಂಧಿಸಿದ ಅತ್ಯದ್ಭುತ ವಿಚಾರಧಾರೆ ಹೊಂದಿದವರನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ. ಅವರೆಲ್ಲರನ್ನು ಪ್ರತಿಭಾವಂತ ಯುಕವರೆಂದು ಅದಾನಿ ಸಂಸ್ಥೆ ಗುರುತಿಸಿದೆ.

ಪ್ರತಿಭೆಗೆ ಇಲ್ಲ ಪಿನ್‌ಕೋಡ್ ಮಿತಿ: ಗೌತಮ್ ಅದಾನಿ
'ವಂದೇ ಭಾರತಂ' ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿರುವ ಗೌತಮ್ ಅದಾನಿ ಅವರು, ಪ್ರತಿಭೆಗೆ ಯಾವುದೇ ಪ್ರಾದೇಶಿಕ ವಾದ ಮಿತಿ, ಇಂಥದ್ದೇ ಎಂಬ ಪರ್ಟಿಕ್ಯುಲರ್ ಪಿನ್‌ಕೋಡ್ ಇರುವುದಿಲ್ಲ ಎಂದು ತಿಳಿಸಿದರು. ಈ ದೇಶದಲ್ಲಿ ಕನಸು ಕಾಣಲು ಮತ್ತು ಕಂಡ ಕನಸನ್ನು ನಸಾಗಿಸಲು ಸಾಕಷ್ಟು ಅವಕಾಶಗಳು ಇವೆ. ಭಾರತ ಮಾತೆಯ ಋಣವನ್ನು ತೀರಿಸಲು, ಯುವ ಶಕ್ತಿಯಲ್ಲಿ ಭಾರತದ ಉಜ್ವಲ ಭವಿಷ್ಯಕ್ಕಾಗಿ ವೇದಿಕೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸಂಬಂದಿಸಿದಂತೆ ಮೊದಲ ಹಂತದಲ್ಲಿ ಅದಾನಿ ಸಂಸ್ಥೆ ಶಾರ್ಟ್‌ಲಿಸ್ಟ್ ಮಾಡಿರುವ ಯುವಕರು 'ವಂದೇ ಭಾರತಂ ಇಮ್ಮರ್ಸಿವ್ ವೀಕ್' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ತರಬೇತಿಯಲ್ಲಿ ದೇಶದ ಪ್ರಮುಖ ಉದ್ಯಮಿಗಳು ಹಾಗೂ ಮಾರ್ಗದರ್ಶಕರು ಯುವಕರಿಗೆ ಮಾರ್ಗದರ್ಶನ ಮಾಡಿ ಬೆಂಬಲಿಸುತ್ತಾರೆ. ಹೊಸ ಹೊಸ ಆಲೋಚನೆಗಳ ಸಾರ್ಥಕತೆಗೆ, ಸ್ವಾವಲಂಬಿ ವ್ಯವಹಾರಗಳ ರೂಪಿಸಲು ಈ ಬೆಂಬಲ ಸಹಾಯವಾಗಲಿದೆ. 2026ರ ಆಗಸ್ಟ್ 14 ರಂದು ನಡೆಯಲಿರುವ ಗ್ರಾಂಡ್ ಫಿನಾಲೆಯಲ್ಲಿ ಸಾಧಕರಿಗೆ 'ವಂದೇ ಭಾರತಂ ಟ್ರೋಫಿ' ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
'ವಂದೇ ಭಾರತಂ' ಕೇವಲ ಒಂದು... ಸ್ಪರ್ಧೆಯಲ್ಲ. ಇದು ಯುವ ಸಮೂಹದಲ್ಲಿ ಅಡಗಿರುವ ಹೊಸ ಐಡಿಯಾಗಳಿಗೆ ಅಗತ್ಯ ಬಂಡವಾಳ ತೆರೆದಿಡುವ, ಸೂಕ್ತ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಆಂದೋಲನವಾಗಿದೆ. ಗ್ರಾಮೀಣ ಭಾರತದ ಸೃಜನಶೀಲತೆಯನ್ನು ಮುನ್ನೆಲೆಗೆ ತಂದು, ಸ್ವಾವಲಂಬಿ ನವ ಭಾರತ ನಿರ್ಮಾಣಕ್ಕೆ ಅಗತ್ಯವಿರುವ ಉದ್ಯಮಿಗಳನ್ನು ಸೃಷ್ಟಿಸಲು ಇದೆಲ್ಲ ಕಾರ್ಯಕ್ರಮ ಪೂರಕವಾಗಲಿವೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.


Click it and Unblock the Notifications
