FIA: ಅಮೆರಿಕದಲ್ಲಿ ಭಾರತೀಯ ಸಂಸ್ಕೃತಿಯ ಅನಾವರಣ: ನ್ಯೂಜೆರ್ಸಿಯಲ್ಲಿ 42ನೇ 'ಡ್ಯಾನ್ಸ್ ಪೆ ಚಾನ್ಸ್' ನೃತ್ಯ ವೈಭವ
ನ್ಯೂಜೆರ್ಸಿ: ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (FIA-NY-NJ-CT-NE) ಫೆಬ್ರವರಿ 7 ರಂದು ಶನಿವಾರ ತನ್ನ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮ 'ಡ್ಯಾನ್ಸ್ ಪೇ ಚಾನ್ಸ್' (DPC) ಸ್ಪರ್ಧೆಯ 42 ನೇ ಆವೃತ್ತಿಯನ್ನು ನಡೆಸಿತು. ನ್ಯೂಜೆರ್ಸಿಯ ಟ್ರೆಂಟನ್ನಲ್ಲಿನ 'ವಾರ್ ಮೆಮೋರಿಯಲ್ ಪೇಟ್ರಿಯಾಟ್ಸ್ ಥಿಯೇಟರ್' ನಲ್ಲಿ ನಡೆಸಿದ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿತು.
ಭಾರತದ 77 ನೇ ಗಣರಾಜ್ಯೋತ್ಸವ ಮತ್ತು 'ವಂದೇ ಮಾತರಂ' ಹಾಡಿನ 150 ನೇ ವಾರ್ಷಿಕೋತ್ಸವವನ್ನು ಇದೇ ವೇಳೆ ಆಚರಿಸಲಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಾಸಿಸುವ ಭಾರತೀಯರಿಗೆ ಇದು ಬಹುದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ನೃತ್ಯ ಸ್ಪರ್ಧೆಗಳಲ್ಲಿ ಒಂದಾಗಿದ್ದು, ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು.

ಎಫ್ಐಎ ಡ್ಯಾನ್ಸ್ ಪೇ ಚಾನ್ಸ್ 2026 ಮುಖ್ಯಾಂಶಗಳು
* ಈ ಬೃಹತ್ ಕಾರ್ಯಕ್ರಮದಲ್ಲಿ 18 ಪ್ರಮುಖ ನೃತ್ಯ ಶಾಲೆಗಳಿಂದ ಸುಮಾರು 870 ಕಲಾವಿದರು ಪಾಲ್ಗೊಂಡಿದ್ದರು.
* ಪ್ರೇಕ್ಷಕರು: ಸುಮಾರು 2,200 ಜನರು ಭಾಗವಹಿಸಿ ಪ್ರದರ್ಶನವನ್ನು ಆನಂದಿಸಿದರು.
* ನೃತ್ಯ ಶೈಲಿಗಳು: ಭಾರತೀಯ ಶಾಸ್ತ್ರೀಯ ನೃತ್ಯ, ಜಾನಪದ ಕಲೆಗಳು, ಬಾಲಿವುಡ್ ಮತ್ತು ಸಮಕಾಲೀನ ನೃತ್ಯ ಶೈಲಿಗಳು ಸೇರಿದಂತೆ 31 ವೈವಿಧ್ಯಮಯ ಕಲಾತ್ಮಕ ತಂಡಗಳು ಪ್ರದರ್ಶನ ನೀಡಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿತು.
* ಮೈನರ್, ಜೂನಿಯರ್, ಸೀನಿಯರ್ ಮತ್ತು ವಯಸ್ಕರು ಎಂಬ ನಾಲ್ಕು ವಿಭಾಗದಲ್ಲಿ ಸ್ಪರ್ಧೆಗಳು ನಡೆದಿದ್ದು ವಿಶೇಷವಾಗಿತ್ತು.
ವಿಶೇಷ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಭಾರತೀಯ ರಾಯಭಾರಿ ಬಿನಯಾ ಎಸ್. ಪ್ರಧಾನ್ ಮತ್ತು ಬಾಲಿವುಡ್ ನಟಿ ಪದ್ಮಿನಿ ಕೊಲ್ಹಾಪುರೆ ಅವರು ಆಗಮಿಸಿದ್ದರು. ನಟಿ ಪದ್ಮಿನಿ ಕೊಲ್ಹಾಪುರೆ, ನರ್ತಕಿ ಸುಪ್ರಿಯಾ ದೋಷಿ ಮತ್ತು ಅಂತ್ಯ ಚಕ್ರವರ್ತಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ರಾಯಭಾರಿ ಬಿನಯಾ ಎಸ್. ಪ್ರಧಾನ್ ಅವರು 2026 ರ ಎಫ್ಐಎ ಕಾರ್ಯ ನಿರ್ವಾಹಕ ಸಮಿತಿಗೆ ಪ್ರಮಾಣ ವಚನ ಬೋಧಿಸಿದರು. ಯುಎಸ್ನಲ್ಲಿರುವ ಭಾರತೀಯ ವಲಸಿಗರಿಗೆ ರಾಯಭಾರ ಕಚೇರಿ ಒದಗಿಸುತ್ತಿರುವ ನಿರಂತರ ಹಾಗೂ ಪ್ರಮುಖ ಸೇವೆಗಳು ಹಾಗೂ ಸ್ಪಂದನೆಗಳ ಮಾಹಿತಿ ನೀಡಿದರು. ಇದಕ್ಕೆ ನೆರೆದ ಭಾರತೀಯರು ಚಪ್ಪಾಳೆಗಳ ಸುರಿಮಳೆ ಸುರಿಸಿದರು. ಹರ್ಷೋದ್ಘಾರವು ಮೊಳಗಿತು.

ಭಾರತೀಯ ವಲಸಗಿರನ್ನು ಒಗ್ಗೂಡಿಸುವ ಶಕ್ತಿ 'ಎಫ್ಐಎ'
ಇನ್ನೂ FIA ಅಧ್ಯಕ್ಷ ಶ್ರೀಕಾಂತ್ ಅಕ್ಕಪಲ್ಲಿ ಅವರು ಸ್ವಯಂಸೇವಕರ ಮಹತ್ವ ಸಾರುವ ಜೊತೆಗೆ ಪ್ರಸಕ್ತ ವರ್ಷದಲ್ಲಿ ಮಾಡಿದ ಸಾಧನೆ, ಮೈಲಿಗಲ್ಲುಗಳನ್ನು ವಿವರಿಸಿದರು. ಭಾರತೀಯ ಮೂಲದ ಜನರನ್ನು ಒಗ್ಗೂಡಿಸುವ ಶಕ್ತಿಯಾಗಿ ಎಫ್ಐಎ ಬೆಳೆವಣಿಗೆ ಮೇಲೆ ಕೇಂದ್ರೀಕರಿಸಿ ನೆರೆದವರನ್ನು ಉದ್ದೇಶಿಸಿ ಎಫ್ಐಎ ಮುಖ್ಯಸ್ಥರಾದ ಅಂಕುರ್ ವೈದ್ಯ ಮಾತನಾಡಿದರು.
ಬ್ರಾಡ್ವೇ-ಗುಣಮಟ್ಟದ ಉತ್ಪಾದನಾ ಸೌಲಭ್ಯಗಳನ್ನು ಒಳಗೊಂಡಿದ್ದು ಈ ವರ್ಷದ ಸ್ಪರ್ಧಾ ಕಾರ್ಯಕ್ರಮದ ಪ್ರಮುಖ ವಿಶೇಷತೆಗಳಲ್ಲಿ ಒಂದು. ದೈತ್ಯ ಎಲ್ಇಡಿ ಪರದೆಗಳು, ಅತ್ಯಾಧುನಿಕ ಬೆಳಕಿನ ವ್ಯವಸ್ಥೆಗಳು ಮತ್ತು ಬೆರಗುಗೊಳಿಸುವ ವೇಷ ಭೂಷಣಗಳು ಕಂಡು ಬಂದವು. ಇದೆಲ್ಲ ವ್ಯವಸ್ಥೆಯು ಇಲ್ಲಿನ ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಿತು.
2027ರ 44 ನೇ ಆವೃತ್ತಿಗೆ ಸಿದ್ಧತೆ
ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಅನೇಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ನೃತ್ಯ ಸಂಯೋಜನೆ ಮತ್ತು ವಿಷಯಾಧಾರಿತ ನಾವೀನ್ಯತೆ ಸೇರಿದಂತೆ ವಿವಿಧ ವಿಭಾಗಗಳ ವಿಜೇತರು ಪ್ರಶಸ್ತಿ ಸ್ವೀಕರಿಸಿ ಹರ್ಷ ವ್ಯಕ್ತಪಡಿಸಿದರು. ಮುಮದಿನ ವರ್ಷ 2027 ರಲ್ಲಿ ನಡೆಯಲಿರುವ 44 ನೇ ಆವೃತ್ತಿ/ ಕಾರ್ಯಕ್ರಮಕ್ಕೆ ಈಗಾಗಲೇ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಅಗತ್ಯ ತಯಾರಿ ಶುರುವಾಗಿದೆ. ಆಗಲೂ ಎಫ್ಐಎ ನಾಯಕತ್ವ ವಹಿಸಲಿದೆ ಎಂದು ಅಧ್ಯಕ್ಷರು ಘೋಷಿಸಿದರು.
ಭಾರತೀಯ ಸಂಘಗಳ ಒಕ್ಕೂಟ (FIA)
ಭಾರತೀಯ ಸಂಘಗಳ ಒಕ್ಕೂಟ (FIA) ಇದು ಈಶಾನ್ಯ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಾಸಿಸುವ ಭಾರತೀಯ ಅಮೆರಿಕನ್ನರನ್ನು ಪ್ರತಿನಿಧಿಸುವ ಅತ್ಯಂತ ಹಳೆಯ ಮತ್ತು ದೊಡ್ಡ ಲಾಭರಹಿತ ಸಂಸ್ಥೆಯಾಗಿದೆ. ಇದು ಇಲ್ಲಿನ ಭಾರತೀಯ ವಲಸಿಗರ ಏಳಿಗೆಗೆ ಮತ್ತು ಅಗತ್ಯ ಸೇವೆಗಳ ಒದಗಿಸುವಲ್ಲಿ ಕಾರ್ಯನಿರತ ಸಂಸ್ಥೆಯಾಗಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications