ಸುಖ ನಿದ್ರೆಗೆ ಯಾವ ಮ್ಯಾಟ್ರೆಸ್‌ ಬೆಸ್ಟ್? ಇಲ್ಲಿವೆ ಭಾರತದ 3 ಪ್ರೀಮಿಯಂ ಬೆಡ್‌ಗಳು ಇವುಗಳ ವಿಶೇಷತೆ, ಪ್ರಯೋಜನ

ಉತ್ತಮ ನಿದ್ರೆಯು ನಮ್ಮ ದೈಹಿಕ-ಮಾನಸಿಕ ಶಕ್ತಿ, ಏಕಾಗ್ರತೆ, ಸ್ನಾಯುಗಳ ಚೇತರಿಕೆ ಮತ್ತು ದೀರ್ಘಕಾಲೀನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಲಕ್ಸುರಿ ಮ್ಯಾಟ್ರೆಸ್ ಎಂದರೆ ಪ್ರತಿದಿನ ರಾತ್ರಿ ನಿಮ್ಮ ದೇಹ ಎಷ್ಟು ಚೆನ್ನಾಗಿ ಚೇತರಿಸಿಕೊಂಡು ಮರುದಿನದ ಕಾರ್ಯ ಚಟುವಟಿಕೆಗೆ ಸಜ್ಜಾಗುವುದಾಗಿದೆ. ನಮ್ಮ ಆರೋಗ್ಯ, ನೆಮ್ಮದಿ ವಿಚಾರದಲ್ಲಿ ನಾವು ಮಲಗುವ ಮ್ಯಾಟ್ರೆಸ್‌ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಅನೇಕರು ತಿಳಿದಿರುವುದಿಲ್ಲ. ನೀವು ಆಕರ್ಷಕೆ ಬೆಲೆಯಲ್ಲಿ ಪ್ರೀಮಿಯಂ ಮ್ಯಾಟ್ರೆಸ್ ಹುಡುಕುತ್ತಿದ್ದರೆ ನಿಮಗಿದೆ ಗುಡ್‌ನ್ಯೂಸ್.

ಇಂದಿನ ಪ್ರೀಮಿಯಂ ಮ್ಯಾಟ್ರೆಸ್‌ಗಳಲ್ಲಿ ಬೆನ್ನುಹುರಿಗೆ ಉತ್ತಮ ನೆರವು, ದೇಹದ ಮೇಲಿನ ಒತ್ತಡ ಕಡಿಮೆ ಮಾಡಲಿದೆ. ದೇಕ್ಕೆ ತಂಪು ಹಾಗೂ ಆರಾಮದಾಯಕತೆ ಅನುಭವ ಒದಗಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ 3 ಅದ್ಭುತ ಲಕ್ಸುರಿ ಮ್ಯಾಟ್ರಸ್ (ಗಾದಿ) ತಯಾರಿಸಲಾಗಿದೆ. ವಿಶಿಷ್ಟ ವೈಶಿಷ್ಟ್ಯಗಳಿರುವ 'ಡ್ಯುರೊಫ್ಲೆಕ್ಸ್‌ ಏರ್‌ಬೂಸ್ಟ್‌, ಸಿಯಲಿ ಪೊಸ್ಚರ್‌ಸೆನ್ಸ್‌ ಮೆಮೊರಿ ಮತ್ತು ಟೆಂಪರ್‌ ಅಡಾಪ್ಟ್' ಮ್ಯಾಟ್ರಸ್‌ ಬಳಕೆದಾರರ ಮನ ಗೆದ್ದಿದೆ.

Best Luxury Mattresses

ನಿತ್ಯ ಜನರು ಮಲಗಲು, ಸುಖ ನಿದ್ರೆಗೆ, ಆರಾಮದಾಯಕ ಅನುಭವ ನೀಡಲು ಮ್ಯಾಟ್ರೆಸ್‌ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಗಮನಿಸುತ್ತಾರೆ. ಸರಿಯಾದ ಮ್ಯಾಟ್ರಸ್ ನಿಮ್ಮ ಇಡೀ ದಿನವನ್ನು ಸುಂದರಗೊಳಿಸುತ್ತದೆ. ನಿಮ್ಮ ನಿದ್ರೆ ಮತ್ತು ಆರೋಗ್ಯಕ್ಕೆ ಯಾವ ಪ್ರೀಮಿಯಂ ಮ್ಯಾಟ್ರೆಸ್‌ ಹೆಚ್ಚು ಸೂಕ್ತ ಮತ್ತು ಉತ್ತಮ ಮೌಲ್ಯ ನೀಡುತ್ತದೆ ಎಂಬುದನ್ನು ನಿರ್ಧರಿಸಲು ಇಲ್ಲಿವೆ ಪ್ರಮುಖ ಆಯ್ಕೆಗಳು.

ಪ್ರಮುಖ ಮೂರು ಆಯ್ಕೆಗಳು

1. ಡ್ಯುರೊಫ್ಲೆಕ್ಸ್‌ ಏರ್‌ಬೂಸ್ಟ್‌ 6.10 (Duroflex Airboost 6.10)

* ಮಧ್ಯಮ ದೃಢತೆ, ಸ್ಪಂದಿಸುವಿಕೆ, ಸಮತೋಲಿತ ಅನುಭವ ನೀಡುತ್ತದೆ.
* ಯಾರಿಗೆ ಹೆಚ್ಚು ಸೂಕ್ತ: ಮಲಗುವಾಗ ಹೆಚ್ಚು ಬೆವರುವವರು, ದಂಪತಿಗಳು, ಬೆನ್ನುನೋವು ಹೊಂದಿರುವವರು ಮತ್ತು ವಿವಿಧ ಭಂಗಿಗಳಲ್ಲಿ ಮಲಗುವವರಿಗೆ ಸೂಕ್ತವಾಗಿದೆ.

ತಂತ್ರಜ್ಞಾನ ಯಾವುದು?

ಏರ್‌ಬೂಸ್ಟ್‌ ಎನ್ನುವುದು ಡ್ಯುರೊಫ್ಲೆಕ್ಸ್‌ನ ಒಡೆತನದಲ್ಲಿರುವ ಓಪನ್‌ ಮ್ಯಾಟ್ರಿಕ್ಸ್‌ ಮ್ಯಾಟ್ರೆಸ್‌ ತಂತ್ರಜ್ಞಾನವಾಗಿದೆ. ಇದು ಒಂದು ಲಕ್ಷಕ್ಕೂ ಹೆಚ್ಚು ಸ್ವತಂತ್ರವಾಗಿ ಸ್ಪಂದಿಸುವ ಫೈಬರ್‌ಗಳಿಂದ ತಯಾರಾಗಿದೆ. ಉತ್ತಮ ರೀತಿಯಲ್ಲಿ ಗಾಳಿಯ ಚಲನೆ, ಚಲನವಲನಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತದೆ. ಮಲಗುವ ಭಂಗಿಗೂ ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ವಿಶ್ವದಾದ್ಯಂತ ಕ್ರೀಡಾಪಟುಗಳು ನಂಬಿರುವ ಈ ನಿದ್ರಾ ತಂತ್ರಜ್ಞಾನ (ಸ್ಲೀಪ್‌ ಟೆಕ್ನಾಲಜಿ) ವನ್ನು ಡ್ಯುರೊಫ್ಲೆಕ್ಸ್‌ ಮೊದಲ ಬಾರಿಗೆ ಭಾರತಕ್ಕೆ ಪರಿಚಯಿಸಿದೆ. ಏರ್‌ಬೂಸ್ಟ್‌ಗೆ ಭಾರತದ ನಿದ್ರೆ ಸಂಶೋಧನಾ ಸಂಸ್ಥೆಯ (ಐಎಸ್‌ಎಸ್‌ಆರ್‌) ಮಾನ್ಯತೆ ದೊರೆತಿದ್ದು, ರಾಷ್ಟ್ರೀಯ ಆರೋಗ್ಯ ಅಕಾಡೆಮಿಯ (ಎನ್‌ಎಚ್‌ಎ) ವೈದ್ಯರು ಇದನ್ನು ಶಿಫಾರಸು ಮಾಡಿದ್ದಾರೆ.

ಕಾರ್ಯ ನಿರ್ವಹಣೆ ಹೇಗಿದೆ?

ಏರ್‌ಬೂಸ್ಟ್‌ ನಿದ್ರೆಯ ಪ್ರತಿಯೊಂದು ಹಂತದಲ್ಲೂ ಸ್ಥಿರವಾದ ಕಾರ್ಯಕ್ಷಮತೆ ನೀಡುತ್ತದೆ. ಇದರ ಝೋನ್ಡ್‌ ಸಪೋರ್ಟ್‌ ಸಿಸ್ಟಮ್‌ ಬೆನ್ನುಹುರಿಯು ಸರಿಯಾದ ಹೊಂದಾಣಿಕೆಯಲ್ಲಿ ಇರುವಂತೆ ನೆರವಾಗುತ್ತದೆ. ಇಂಡಿಪೆಂಡೆಂಟ್‌ ಫೈಬರ್‌ಗಳು ದೇಹದ ತೂಕವನ್ನು ಸಮವಾಗಿ ಹಂಚುವುದರಿಂದ ದೇಹದ ನಿರ್ದಿಷ್ಟ ಭಾಗಗಳ ಮೇಲಿನ ಒತ್ತಡ ಕಡಿಮೆಯಾಗುವಂತೆ ಮಾಡುತ್ತವೆ. ಇದರ ಓಪನ್‌ ಏರ್‌ ಕನ್‌ಸ್ಟ್ರಕ್ಷನ್‌ ನೆರವಿನಿಂದ ಮ್ಯಾಟ್ರೆಸ್‌ ಒಳಗೆ ಉಷ್ಣತೆ ಹೆಚ್ಚಾಗುವುದನ್ನು ತಡೆಯುತ್ತದೆ. ಹೀಗಾಗಿ ಬಿಸಿಯಾದ ಹವಾಮಾನದಲ್ಲಿಯೂ ಇದು ಹೆಚ್ಚು ಆರಾಮದಾಯಕ ಅನುಭವ ಕೊಡುತ್ತದೆ.

ಪ್ರಮುಖ ವೈಶಿಷ್ಟ್ಯಗಳು

* ಬ್ರಿದೇಬಲ್‌ ಏರ್‌ಬೂಸ್ಟ್‌ ಲೇಯರ್‌ ಮತ್ತು ನಿಯೊ ಲೇಟೆಕ್ಸ್‌ ಲೇಯರ್ ರಿವರ್ಸಿಬಲ್‌ ಲೇಟೆಕ್ಸ್‌ ಟಾಪರ್
* ದೇಹದ ನಿರ್ದಿಷ್ಟ ಭಾಗಗಳ ಮೇಲಿನ ಒತ್ತಡ ಕಡಿಮೆ ಮಾಡಲು 5-ಝೋನ್ ಸಹಕಾರಿ

ಬಳಕೆಯ ಪ್ರಯೋಜನಗಳು

* ಕಂಫರ್ಟ್‌ ಲೆವೆಲ್‌ ಅನ್ನು ಹೆಚ್ಚಿಸುತ್ತದೆ.
* ಬೆವರು ಮತ್ತು ಉಷ್ಣತೆಗೆ ಅವಕಾಶ ನೀಡುವುದಿಲ್ಲ.
* ಶೇಕಡ 30ರಷ್ಟು ಹೆಚ್ಚು ಡೀಪ್‌ ಸ್ಲೀಪ್‌ಗಾಗಿ ʼಐಎಸ್‌ಎಸ್‌ಆರ್‌ʼ ಸಹಕಾರಿ
* ಝಿಪ್ಪರ್‌ ಕವರ್‌ ಅನ್ನು ಮಷಿನ್‌ ವಾಶ್‌ ಮಾಡಬಹುದು
* 100-ರಾತ್ರಿಗಳ ಪ್ರಾಯೋಗಿಕ ಬಳಕೆ ಮತ್ತು 10 ವರ್ಷಗಳ ವಾರಂಟಿ ಇದೆ.

2 ಸಿಯಲಿ ಪೋಸ್ಚರ್‌ಸೆನ್ಸ್‌ ಮೆಮೊರಿ

ಈ ಮ್ಯಾಟ್ರಸ್ ಸಾಫ್ಟ್‌-ಮಧ್ಯಮ ರೀತಿಯಲ್ಲಿದ್ದು, ಮ್ಯಾಟ್ರಸ್ ಬದಿಯಲ್ಲಿ ಮಲಗುವವರು, ದಂಪತಿಗಳು ಮತ್ತು ಪ್ಲಷ್‌ ಕಂಫರ್ಟ್‌ ಇಷ್ಟಪಡುವವರಿಗೆ ಪೂರಕವಾಗಿ ತಂತ್ರಜ್ಞಾನ ಸಹಿತ ಈ ಸಿಯಲಿ ಪೋಸ್ಚರ್‌ಸೆನ್ಸ್‌ ಮೆಮೊರಿ ಬೆಡ್ ತಯಾರಿಸಲಾಗಿದೆ. ಇದು ಬೆನ್ನುಹುರಿ ಸರಿಯಾದ ಅಲೈನ್‌ಮೆಂಟ್‌ನಲ್ಲಿ ಇರಲು ಸಹಾಯ ಮಾಡುತ್ತದೆ. ಅರ್ಥೊಪೆಡಿಕ್‌ ಸಪೋರ್ಟ್‌ ಸಿಸ್ಟಮ್‌ ಹೊಂದಿದ್ದು, ಮೆಮೊರಿ ಫೋಮ್‌ ದೇಹದ ಆಕಾರಕ್ಕೆ ಅನುಗುಣವಾಗಿ ಹೊಂದಿಕೊಂಡು ಒತ್ತಡ ಹೆಚ್ಚಾಗುವ ಭಾಗಗಳಿಗೆ ಕುಷನಿಂಗ್‌ ನೀಡುತ್ತದೆ.

ಕಾರ್ಯ ನಿರ್ವಹಣೆ

ಈ ಮ್ಯಾಟ್ರೆಸ್‌ ದೇಹವನ್ನು ಮೃದುವಾಗಿ ಆವರಿಸುವಂತಹ ಆರಾಮದಾಯಕ ಅನುಭವ ನೀಡುತ್ತದೆ. ಮ್ಯಾಟ್ರೆಸ್‌ನ ಮೇಲ್ಭಾಗದಲ್ಲಿ ಮಲಗಿರುವ ಅನುಭವಕ್ಕಿಂತ, ಮ್ಯಾಟ್ರೆಸ್‌ನ ಒಳಗೆ ದೇಹವು ಸ್ವಲ್ಪ ಮುಳುಗಿ ಮಲಗುವ ಅನುಭವವನ್ನು ಇಷ್ಟಪಡುವವರಿಗೆ ಈ ಮ್ಯಾಟ್ರಸ್ ಆಯ್ಕೆ ಸರಿ ಹೊಂದುತ್ತದೆ. ಭುಜಗಳು ಮತ್ತು ಸೊಂಟದ ಸುತ್ತಲಿನ ಒತ್ತಡ ಕಡಿಮೆ ಮಾಡುತ್ತದೆ.

ಹೆಚ್ಚಿನ ಮೆಮೊರಿ ಫೋಮ್‌ ಮ್ಯಾಟ್ರೆಸ್‌ಗಳಂತೆ, ಚಲನೆಗೆ ಪ್ರತಿಕ್ರಿಯಿಸಲು ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಓಪನ್‌-ಸ್ಟ್ರಕ್ಚರ್ಡ್‌ ಪರ್ಯಾಯಗಳಿಗೆ ಹೋಲಿಸಿದರೆ ದೇಹದ ಉಷ್ಣತೆಯನ್ನು ಹೆಚ್ಚು ಉಳಿಸಿಕೊಳ್ಳುವ ಸಾಧ್ಯತೆಯೂ ಇದೆ. ವಿಶೇಷವಾಗಿ ಬಿಸಿಯಾದ ಹವಾಮಾನದಲ್ಲಿ ಇದು ಹೆಚ್ಚು ಗಮನಕ್ಕೆ ಬರಬಹುದು.

ಇದು ಕೂಡ ಪ್ರೀಮಿಯಂ ಮ್ಯಾಟ್ರಸ್

* ಬಹು-ಪದರದ ಮೆಮೊರಿ ಫೋಮ್‌ ಕನ್‌ಸ್ಟ್ರಕ್ಷನ್‌ ಹೊಂದಿದೆ.
* ಅರ್ಥೊಪೆಡಿಕ್‌ ಸಪೋರ್ಟ್‌ ಡಿಸೈನ್‌ ಇದರಲ್ಲಿದೆ
* ಪ್ರೀಮಿಯಂ ನಿಟ್‌ ಫ್ಯಾಬ್ರಿಕ್‌ ಕವರ್‌ ಒಳಗೊಂಡಿದೆ.

ಬಳಕೆಯ ಪ್ರಯೋಜನಗಳು

* ಈ ಬೆಡ್ ದೇಹದ ಆಕಾರಕ್ಕೆ ಅನುಗುಣವಾಗಿ ಹೊಂದಿಕೊಳ್ಳುತ್ತದೆ
* ದೇಹದಲ್ಲಿನ ಒತ್ತಡವನ್ನು ಉತ್ತಮ ರೀತಿಯಲ್ಲಿ ತಗ್ಗಿಸುತ್ತದೆ
* ಮಲಗುವ ಭಂಗಿ ಬದಲಾಯಿಸುವಾಗ ನಿಧಾನವಾಗಿ ಹೊಂದಿಕೊಳ್ಳುತ್ತದೆ.

3. ಟೆಂಪರ್‌ ಅಡಾಪ್ಟ್‌ (Tempur Adapt)

ಡೀಪ್‌ ಕಾಂಟೂರಿಂಗ್‌, ಮಿನಿಮಲ್‌ ಬೌನ್ಸ್‌ ಅನುಭವ ನೀಡುವ ಬೆಡ್ ಇದಾಗಿದೆ. ಮ್ಯಾಟ್ರಸ್ ಬದಿಯಲ್ಲಿ ಮಲಗುವವರು, ದಂಪತಿಗಳು ಮತ್ತು ಒತ್ತಡ ನಿವಾರಣೆ ಬಯಸುವವರು ಅನುಕೂಲವಾಗಲೆಂದು ಈ ಟೆಂಪರ್‌ ಅಡಾಪ್ಟ್‌ (Tempur Adapt) ತಯಾರಿಸಲಾಗಿದೆ.

ಈ ಮ್ಯಾಟ್ರಸ್‌ನಲ್ಲಿ ಟೆಂಪರ್‌ ಬ್ರ್ಯಾಂಡ್‌ನ ಸ್ವಾಮ್ಯದ ಟೆಂಪರ್‌ ಮಟೇರಿಯಲ್‌ಗಳನ್ನು ಬಳಸಲಾಗಿದೆ. ಈ ತಂತ್ರಜ್ಞಾನವು ಮೂಲತಃ ಬಾಹ್ಯಾಕಾಶ ಪ್ರಯಾಣದ ಸಂದರ್ಭದಲ್ಲಿ ಒತ್ತಡವನ್ನು ಹೀರಿಕೊಳ್ಳಲು ಅಮೆರಿಕದ ನ್ಯಾಷನಲ್‌ ಏರೊನಾಟಿಕ್ಸ್‌ ಆ್ಯಂಡ್‌ ಸ್ಪೇಸ್‌ ಅಡ್ಮಿನಿಸ್ಟ್ರೇಷನ್‌ (ಎನ್‌ಎಎಸ್‌ಎ) ಅಭಿವೃದ್ಧಿಪಡಿಸಿದ ತಂತ್ರಜ್ಞಾನದಿಂದ ರೂಪುಗೊಂಡಿದೆ. ಇದರಲ್ಲಿ ಲೇಯರ್ ದೇಹದ ತೂಕ, ಆಕಾರ ಮತ್ತು ಉಷ್ಣತೆಗೆ ಅನುಗುಣವಾಗಿ ನಿಧಾನವಾಗಿ ಹೊಂದಿಕೊಳ್ಳುತ್ತದೆ. ಇದರಿಂದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಹೊಂದಿಕೊಳ್ಳುವ ಸ್ಲೀಪಿಂಗ್‌ ಸರ್ಫೇಸ್‌ ದೊರೆಯುತ್ತದೆ.

ಕಾರ್ಯ ನಿರ್ವಹಣೆ ಹೇಗೆ?

ಟೆಂಪರ್‌ ಅಡಾಪ್ಟ್‌ ತಂತ್ರಜ್ಞಾನ ನಿಮ್ಮ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಇದರಲ್ಲಿನ ಮಟೇರಿಯಲ್‌ ದೇಹದ ನೈಸರ್ಗಿಕ ವಕ್ರತೆಗಳಿಗೆ ನಿಕಟವಾಗಿ ಹೊಂದಿಕೊಳ್ಳುವುದರಿಂದ ಕೀಲುಗಳು ಮತ್ತು ಒತ್ತಡ ಹೆಚ್ಚಾಗುವ ಭಾಗಗಳ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ದಂಪತಿಗಳಿಗೆ ಅತ್ಯುತ್ತಮ ಮೋಷನ್‌ ಐಸೊಲೇಷನ್‌ ಕೂಡ ನೀಡಲಿದೆ. ಆದರೆ, ಮಲಗುವ ಭಂಗಿಯನ್ನು ಬದಲಾಯಿಸುವಾಗ ಇದು ನಿಧಾನವಾಗಿ ಹೊಂದಿಕೊಳ್ಳುತ್ತದೆ. ಬ್ರಿದೇಬಲ್‌ ಮ್ಯಾಟ್ರೆಸ್‌ ವಿನ್ಯಾಸಗಳಿಗೆ ಹೋಲಿಸಿದರೆ ದೇಹದ ಉಷ್ಣತೆಯನ್ನು ಹೆಚ್ಚು ಉಳಿಸಿಕೊಳ್ಳುವ ಸಾಧ್ಯತೆಯೂ ಇದೆ.

ಪ್ರಿಮೀಯಂ ವೈಶಿಷ್ಟ್ಯಗಳು

* ಪ್ರೊಪ್ರೈಟರಿ ಟೆಂಪರ್‌ ಪ್ರೆಷರ್‌-ರಿಲಿವಿಂಗ್‌ ಮಟೇರಿಯಲ್‌
* ಹೈ-ಡೆನ್ಸಿಟಿ ಪ್ರೀಮಿಯಂ ಕನ್‌ಸ್ಟ್ರಕ್ಷನ್‌
* ಅತ್ಯುತ್ತಮ ಬಾಳಿಕೆ
* ಅಂತಾರಾಷ್ಟ್ರೀಯ ಲಕ್ಸುರಿ ಸ್ಲೀಪ್‌ ಬ್ರ್ಯಾಂಡ್‌

ಬಳಕೆಯ ಅನುಕೂಲತೆಗಳೇನು?

* ಪ್ರೀಮಿಯಂ ಬಿಲ್ಡ್‌ ಕ್ವಾಲಿಟಿ ಇದ್ದು, ಸುಖಕರ ನಿದ್ರೆ ನೀಡುತ್ತದೆ.
* ದೀರ್ಘಕಾಲ ಬಾಳಿಕೆ ಬರುವ ಮಟೇರಿಯಲ್ಸ್‌ ಇದರಲ್ಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಮೂರು ಮ್ಯಾಟ್ರೆಸ್‌ ಪ್ರೀಮಿಯಂ ನಿದ್ರಾ ಅನುಭವ ಒದಗಿಸುತ್ತವೆ. ಮೂರು ವಿಭಿನ್ನ ರೀತಿಯಲ್ಲಿ ಕೆಲಸ ಮಾಡುತ್ತವೆ. ತಯಾರಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಸಿಯಲಿ ಪೋಸ್ಚರ್‌ಸೆನ್ಸ್‌ ಉತ್ತಮ ಗುಣಮಟ್ಟದ ಮೆಮೊರಿ ಫೋಮ್ ಆರಾದಾಯಕ ಅನ್ನಿಸಿದರೆ, ಟೆಂಪರ್‌ ಅಡಾಪ್ಟ್‌ ಒತ್ತಡ ನಿವಾರಿಸುತ್ತದೆ.

ಡ್ಯುರೊಫ್ಲೆಕ್ಸ್‌ ಏರ್‌ಬೂಸ್ಟ್‌ ಒಂದೇ ವಿನ್ಯಾಸದಲ್ಲಿ ಅತ್ಯಂತ ಹೆಚ್ಚು ಪ್ರಯೋಜನೆ ನೀಡುತ್ತದೆ. ಇದರ 5 ಲೇಯರ್ ಅರ್ಥೊಪೆಡಿಕ್‌ ರೀತಿಯಲ್ಲಿ ಸಹಕಾರಿಯಾಗಲಿದೆ. ಓಪನ್‌ ಏರ್‌ ಫೈಬರ್‌ ಸ್ಟ್ರಕ್ಚರ್‌, ಎಕ್ಸ್‌ಲೆಂಟ್‌ ಕೂಲಿಂಗ್‌, ಮೋಷನ್‌ ಐಸೊಲೇಷನ್‌ ಮತ್ತು ರಿಸ್ಪಾನ್ಸಿವ್‌ ಕಂಫರ್ಟ್‌ ಒಳಗೊಂಡಿದ್ದರಿಂದ ಇದು ಮೇಲಿನ ಎರಡಕ್ಕಿಂತ ಬೆಸ್ಟ್ ಆಯ್ಕೆ ಎನ್ನಬಹುದು.

ಕಂಫರ್ಟ್‌, ಸಪೋರ್ಟ್‌ ಮತ್ತು ಡ್ಯುರೆಬಿಲಿಟಿ ಮತ್ತು ದೈನಂದಿನ ಬಳಕೆಯ ಕಾರ್ಯಕ್ಷಮತೆಯ ನಡುವೆ ಅತ್ಯುತ್ತಮ ಸಮತೋಲನ ಒದಗಿಸುವ ಮ್ಯಾಟ್ರೆಸ್‌ಗಾಗಿ ನೀವು ಹುಡುಕಾಟ ನಡೆಸುತ್ತಿದ್ದರೆ, ಡ್ಯುರೊಫ್ಲೆಕ್ಸ್‌ ಏರ್‌ಬೂಸ್ಟ್‌ ಈ ಹೋಲಿಕೆಯಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ ಮತ್ತು ಅತ್ಯುತ್ತಮ ಲಕ್ಸುರಿ ಮ್ಯಾಟ್ರೆಸ್‌ ಆಗಿದೆ ಎಂದು ನಾವು ಶಿಫಾರಸು ಮಾಡುತ್ತೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+