Adani: ಜಾಗತಿಕ ಇಂಧನ ಸಂಗ್ರಹ ಕ್ಷೇತ್ರದಲ್ಲಿ ಬಿಗ್ ಡೀಲ್: 5 ಯುರೋಪಿಯನ್ ರಾಷ್ಟ್ರಗಳಲ್ಲಿ ಅದಾನಿ ಉದ್ಯಮ ವಿಸ್ತರಣೆ
ವಿಶ್ವದಲ್ಲಿ ಈಗಾಗಲೇ ಐದು ದೇಶಗಳಲ್ಲಿ ಎಂಟು ಬಂದರು-ಆಧಾರಿತ ಟರ್ಮಿನಲ್ ಹೊಂದಿರುವ 'ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್' (APSEZ) ಕಂಪನಿಯು ಪ್ರಮುಖ ಯುರೋಪಿಯನ್ ದ್ರವ (ಲಿಕ್ವಿಡ್) ಸಂಗ್ರಹ ವೇದಿಕೆ ಸ್ಥಾಪಿಸುತ್ತದೆ. ಅದಕ್ಕಾಗಿ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಇದು ಕಳೆದ ವರ್ಷದ 2025 (CY25) ಇವಿ/ಇಬಿಐಟಿಡಿಎ (EV/EBITDA) ಗಿಂತ 11.7 ಪಟ್ಟು ಅಧಿಕ ಮೌಲ್ಯದ್ದಾಗಿದೆ ಎಂದು ಕಂಪನಿ ತಿಳಿಸಿದೆ.
ಇಂಧನ ಸಂಗ್ರಹಣಾ 'ಇವೋಸ್' (Evos) ಸಂಸ್ಥೆಯು 2025 ರಲ್ಲಿ €392 ಮಿಲಿಯನ್ ಆದಾಯ ಮತ್ತು €219 ಮಿಲಿಯನ್ EBITDA ದಾಖಲಾಗಿದೆ. ಈ ಮೂಲಕ ಶೇ.56ರಷ್ಟು EBITDA ವರದಿ ಆಗಿದ್ದು, ಇದೆಲ್ಲವು ವಹಿವಾಟು ನಿಯಂತ್ರಕ ಮತ್ತು ಇತರ ಅನುಮೋದನೆಗಳಿಗೆ ಹಾಗೂ ಕಾರ್ಯ ಮಂಡಳಿಯ ಸಮಾಲೋಚನೆ ಪ್ರಕ್ರಿಯೆಗೆ ಒಳಪಟ್ಟಿರುತ್ತದೆ. ಅದೇ ರೀತಿ ವಿಶ್ವದ ನೆದರ್ ಲ್ಯಾಂಡ್ಸ್, ಜರ್ಮನಿ, ಸ್ಪೇನ್, ಬೆಲ್ಜಿಯಂ ಮತ್ತು ಮಾಲ್ಟಾದಾದ್ಯಂತ ಎಂಟು ಕಾರ್ಯತಂತ್ರದ ಟರ್ಮಿನಲ್‌ಗಳನ್ನು ನಿರ್ವಹಿಸುತ್ತದೆ. ಒಟ್ಟು 6.3 ಮಿಲಿಯನ್ ಘನ ಮೀಟರ್ ಸಂಗ್ರಹ ಸಾಮರ್ಥ್ಯದೊಂದಿಗೆ. 2025 ರ ಸಮಯದಲ್ಲಿ ಕಂಪನಿಯು 37 ಮಿಲಿಯನ್ ಮೆಟ್ರಿಕ್ ಟನ್ (MMT) ಥ್ರೋಪುಟ್ ಅನ್ನು ನಿರ್ವಹಿಸಿತ್ತು.

ಅದಾನಿ ಕಂಪನಿಯ ಸದ್ಯ ಟರ್ಮಿನಲ್‌ಗಳು ಆಮ್ಸ್ಟರ್‌ಡ್ಯಾಮ್-ರೋಟರ್‌ಡ್ಯಾಮ್-ಆಂಟ್‌ವರ್ಪ್ (ARA) ಪ್ರದೇಶ, ಹ್ಯಾಂಬರ್ಗ್ ಹಾಗೂ ಮೆಡಿಟರೇನಿಯನ್ ಸೇರಿದಂತೆ ಪ್ರಮುಖ ಯುರೋಪಿಯನ್ ಇಂಧನ ಮತ್ತು ಕೈಗಾರಿಕಾ ಕೇಂದ್ರಗಳಲ್ಲಿವೆ. ಈ ಎಲ್ಲ ಕೇಂದ್ರಗಳಲ್ಲಿ 452 ದ್ರವ ಸಂಗ್ರಹ ಟ್ಯಾಂಕ್‌ಗಳು, 63 ಹಡಗು ಮತ್ತು ಬಾರ್ಜ್ ಬರ್ತ್‌ಗಳು, ಶಿಫೋಲ್ ವಿಮಾನ ನಿಲ್ದಾಣ, ಮಧ್ಯ ಯುರೋಪ್ ಪೈಪ್‌ಲೈನ್ ವ್ಯವಸ್ಥೆಗೆ ಸಂಪರ್ಕ ಸಾಧಿಸಿದೆ.
ಹೊಸ ಬಂದರುಗಳ ಸ್ವಾಧೀನದ ಬಳಿಕ ಐದು ಇದ್ದ APSEZ ಕಂಪನಿಯು ಜಾಗತಿಕ ಬಂದರು ಜಾಲವು 10 ದೇಶಗಳಿಗೆ ವಿಸ್ತರಣೆ ಆದಂತಾಗಿದೆ. ಹಚ್ಚಿನ ಸ್ಥಳಾವಕಾಶ, ದೀರ್ಘಾವಧಿಯ ಒಪ್ಪಂದಗಳು ಇವೋಸ್ ವ್ಯವಹಾರ ಪ್ರೋತ್ಸಾಹಿಸಿದೆ. ಇವೋಸ್ ಸಾಂಪ್ರದಾಯಿಕ, ಪರಿವರ್ತಿಸಬಹುದಾದ ವೈವಿಧ್ಯಮಯ ದ್ರವ ಸಂಗ್ರಹ ವ್ಯವಹಾರ ನೋಡಿಕೊಳ್ಳುತ್ತದೆ. ಅದರಿಂದ ಗ್ಯಾಸೋಲಿನ್, ಗ್ಯಾಸೋಯಿಲ್, ಸಾಗರ ಇಂಧನಗಳು ಹಾಗೂ ಜೆಟ್ ಇಂಧನ, ಸುಸ್ಥಿರ ವಾಯುಯಾನ ಇಂಧನ (SAF), ಜೈವಿಕ ಇಂಧನಗಳು, ಮೆಥನಾಲ್ ಮತ್ತು ಬಯೋಇಥೆನಾಲ್ ಗಳನ್ನು ಉತ್ಪಾದಿಸಬಹುದಾಗಿದೆ.
ಬಂದರು ಜಾಲ ವಿಸ್ತರಿಸಿದ್ದು, ಪೂರಕವಾಗಿ ಈಗಾಗಲೇ ಅದಾನಿ ಕಂಪನಿಯು ಜಾಗತಿಕ ಇಂಧನ ಗ್ರಾಹಕರು, ಕೈಗಾರಿಕಾ ಮತ್ತು ರಾಸಾಯನಿಕ ಕಂಪನಿಗಳು, ಸರಕು ವ್ಯಾಪಾರಿಗಳ ದೊಡ್ಡ ಗ್ರಾಹಕನ್ನು ಹೊಂದಿದೆ. ದೀರ್ಘಾವಧಿ ಗ್ರಾಹಕ ಸಂಬಂಧಗಳು ಇವೆ. ಸರಾಸರಿ ವಾಣಿಜ್ಯ ಒಡೆತನ ಶೇ. 99 ಮತ್ತು ಟೇಕ್-ಆರ್-ಪೇ ಒಪ್ಪಂದಗಳು ಮತ್ತು ಗ್ರಾಹಕ ಬೆಲೆ ಸೂಚ್ಯಂಕ (CPI)-ಸಂಬಂಧಿತ ಒಪ್ಪಂದಗಳ ಮೂಲಕ ಉತ್ಪತ್ತಿಯಾಗುವ ಆದಾಯಕ್ಕಿಂತಲೂ ಅಧಿಕವಾಗಿದೆ.
APSEZ ನ ಹಣಕಾಸು, ವ್ಯವಹಾರ ಇನ್ನಷ್ಟು ಪ್ರಬಲ
ಇಂದಿನ ಬಂದರು ಸ್ವಾಧೀನ ಕಾರ್ಯರಿಂದ ಜಾಗತಿಕವಾಗಿ ವೈವಿಧ್ಯಮಯ ಸಮಗ್ರ ಸಾರಿಗೆ ಜಾಲ ನಿರ್ಮಿಸಲು ಇದು ಪೂರಕವಾಗುತ್ತದೆ. ಇಂದಿನ ಒಪ್ಪಂದವು ಯುರೋಪ್ ರಾಷ್ಟ್ರಗಳಲ್ಲಿ ಅದಾನಿ ಕಂಪನಿಯ ಉಪಸ್ಥಿತಿ ಬಲಗೊಳ್ಳಲಿದೆ. ಅಲ್ಲಿಯೂ ಕೂಡ ದ್ರವ ಸಂಗ್ರಹಣೆ ವ್ಯವಹಾರ ವಿಸ್ತರಣೆ ಆಗಲಿದೆ.
'ಇವೋಸ್' (Evos) ಸಂಸ್ಥೆಯು APSEZ ಕಂಪನಿಯು ಪೋರ್ಟ್‌ಫೋಲಿಯೊಗೆ ವಿದೇಶಿ ಕರೆನ್ಸಿಯಲ್ಲಿ ಹೆಚ್ಚಿನ ಲಾಭಾಂಶ ನೀಡವ ವಿಶ್ವಾಸವಿದೆ. ಅದರ ಶೇ.56 ಇಬಿಐಟಿಡಿಎ ಮಾರ್ಜಿನ್, 2027ನೇ ಆರ್ಥಿಕ ವರ್ಷದ (FY27) ಮೊದಲಾರ್ಧದಲ್ಲಿ APSEZ ನ ಅಂತಾರರಾಷ್ಟ್ರೀಯ ಬಂದರುಗಳ ಶೇ.44.8 ರಷ್ಟು ಇಬಿಐಟಿಡಿಎ ಪ್ರಮಾಣಕ್ಕಿಂತಲೂ ಹೆಚ್ಚಿದೆ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಕರಣ್ ಅದಾನಿ ಅವರು ಹೇಳಿದ್ದಾರೆ.
ಹೊಸ ಬಂದರು ಸ್ವಾಧೀನವು ಒಂದು ಬಿಲಿಯನ್ ಟನ್ ಸರಕುಗಳ ನಿರ್ವಹಿಸುವ ಮತ್ತು ಜಾಗತಿಕ ಮಟ್ಟದ ಸಮಗ್ರ ಸಾರಿಗೆ ವೇದಿಕೆ ಸ್ಥಾಪಿಸಲು ಅನುಕೂಲವಾಗಲಿದೆ. ಬಂದರು ಉದ್ಯಮದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ. 'ಇವೋಸ್' ಸಂಸ್ಥೆಯು ಪ್ರಮುಖ ಜಾಗತಿಕ ದ್ರವ ಸಂಗ್ರಹಣೆ ಮತ್ತು ಇಂಧನ ಕೇಂದ್ರಗಳಲ್ಲಿ ಬಲವಾದ ಉಪಸ್ಥಿತಿ ಒದಗಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
APSEZ ವಿಶ್ವಮಟ್ಟದ ಬಂದರುಗಳ ಕಾರ್ಯ, ವರದಿ
2026-2027ನೇ ಆರ್ಥಿಕ ವರ್ಷದಲ್ಲಿ ಎರಡನೇ ತ್ರೈಮಾಸಿಕದ ಅಂತ್ಯಕ್ಕೆ ಅಂದರೆ ಸೆಪ್ಟೆಂಬರ್ 30ರ ಹೊತ್ತಿಗೆ ಕಂಪನಿಯ ಹತ್ತಿರ 12,502 ಕೋಟಿ ರೂ. ನಗದು ಶಿಲ್ಕು ಇತ್ತು. ಕಂಪನಿಯ ಅಂತಾರಾಷ್ಟ್ರೀಯ ಬಂದರುಗಳ ವ್ಯವಹಾರವು ಎಫ್‌ವೈ27 ರ ಮೊದಲಾರ್ಧದಲ್ಲಿ 3,586 ಕೋಟಿ ರೂ. ಆದಾಯ ಮತ್ತು 1,608 ಕೋಟಿ ರೂ. ಇಬಿಐಟಿಡಿಎ (ಶೇ.44.8) ದಾಖಲಿಸಿತು.
ಈ ಪ್ರಸ್ತಾವಿತ ಸ್ವಾಧೀನಕ್ಕಾಗಿ, ಎಂಯುಎಫ್‌ಜಿ ಏಕೈಕ ಅಂಡರ್‌ರೈಟರ್ ಆಗಿದೆ. €2.8 ಬಿಲಿಯನ್ (ಯುರೋ) ವರೆಗಿನ ಹಣಕಾಸು ನೆರವಿನ ಭರವಸೆ ಕೊಟ್ಟಿದೆ. APSEZ ಗಾಗಿ 'ಲಿಂಕ್‌ಲೇಟರ್ಸ್' ಅಂತಾರಾಷ್ಟ್ರೀಯ ಕಾನೂನು ಸಲಹೆಗಾರರಾಗಿಯೂ, 'ಸಿರಿಲ್ ಅಮರ್ಚಂದ್ ಮಂಗಲ್‌ದಾಸ್' ದೇಶೀಯ ಕಾನೂನು ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದೆ.
APSEZ ಕಂಪನಿ ಕುರಿತು..
ಸಮಗ್ರ ಸಾರಿಗೆ ನಿರ್ವಾಹಕ ಸಂಸ್ಥೆಯಾದ 'ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್' (APSEZ) ಕಂಪನಿಯು ಅದಾನಿ ಸಮೂಹದ ಭಾಗವಾಗಿದೆ. ಸರಕುಗಳ ಮೂಲ ನಿರ್ವಹಣೆ, ಬಂದರು ಕಾರ್ಯಾಚರಣೆಗಳು, ರೈಲು ಸಾರಿಗೆ, ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳು, ಉಗ್ರಾಣ (warehousing) ಮತ್ತು ರಸ್ತೆ ಸಾರಿಗೆಯಂತಹ ಕ್ಷೇತ್ರಗಳಲ್ಲಿ ಸೇವೆ ಒದಗಿಸುತ್ತಿದೆ.
ಕಂಪನಿಯು ಭಾರತದ ಪಶ್ಚಿಮ, ದಕ್ಷಿಣ ಮತ್ತು ಪೂರ್ವ ಕರಾವಳಿಗಳಲ್ಲಿ 16 ಬಂದರುಗಳು ಮತ್ತು ಟರ್ಮಿನಲ್‌ಗಳನ್ನು ನಿರ್ವಹಿಸುತ್ತದೆ, ಜೊತೆಗೆ ಆಸ್ಟ್ರೇಲಿಯಾ, ಕೊಲಂಬೊ, ಇಸ್ರೇಲ್ ಮತ್ತು ಟಾಂಜಾನಿಯಾದಲ್ಲಿ ನಾಲ್ಕು ವಿಶ್ವಮಟ್ಟದಲ್ಲಿನ ಬಂದರುಗಳನ್ನು ಹೊಂದಿದೆ. ಇದರ ಲಾಜಿಸ್ಟಿಕ್ಸ್ ಜಾಲವು 12 ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳು, 3.1 ಮಿಲಿಯನ್ ಚದರ ಅಡಿ ಗೋದಾಮಿನ ಸ್ಥಳ, 138 ಹಡಗುಗಳ ಸಾಗರ ಫ್ಲೀಟ್ ಮತ್ತು ಅದರ ಸ್ವಾಮ್ಯದ ವೇದಿಕೆಯಲ್ಲಿ ಕಾರ್ಯನಿರ್ವಹಿಸುವ 40,000 ಕ್ಕೂ ಹೆಚ್ಚು ಟ್ರಕ್‌ಗಳನ್ನು ಒಳಗೊಂಡಿದೆ.
ಪ್ರಸ್ತುತ ವರ್ಷಕ್ಕೆ 671 ಮಿಲಿಯನ್ ಟನ್‌ಗಳ ಸರಕು-ನಿರ್ವಹಣಾ ಸಾಮರ್ಥ್ಯದೊಂದಿಗೆ, APSEZ ಭಾರತದ ಒಟ್ಟು ಬಂದರು ಪರಿಮಾಣದ ಸರಿಸುಮಾರು ಶೇ.27ರಷ್ಟು ನಿರ್ವಹಿಸುತ್ತದೆ. 2031ರ ಆರ್ಥಿಕ ವರ್ಷದ ವೇಳೆಗೆ ಒಂದು ಬಿಲಿಯನ್ ಟನ್ ಥ್ರೋಪುಟ್ ಅನ್ನು ತಲುಪುವ ಗುರಿಯನ್ನು ಹೊಂದಿದೆ.


Click it and Unblock the Notifications
