ಮಧ್ಯಪ್ರದೇಶದ ಕೈಮೋರ್‌ನಲ್ಲಿ 15,000 ಅದಾನಿ ಸಿಮೆಂಟ್ ಚೀಲಗಳಲ್ಲಿ ಅರಳಿದ ದುರ್ಗಾಮಾತೆ ಕಲಾಕೃತಿ

ಮಧ್ಯಪ್ರದೇಶ: 2026ರ ನವರಾತ್ರಿ ಹಾಗೂ ದುರ್ಗಾಪೂಜೆಯ ಸಂಭ್ರಮವನ್ನ ಇಮ್ಮಡಿಗೊಳಿಸಲು ಅದಾನಿ ಸಿಮೆಂಟ್ ವಿನೂತನ ಪ್ರಯತ್ನವೊಂದಕ್ಕೆ ಕೈಹಾಕಿದೆ. ಮಧ್ಯಪ್ರದೇಶದ ಕೈಮೋರ್‌ನಲ್ಲಿರುವ ತನ್ನ ಘಟಕದಲ್ಲಿ ಬರೋಬ್ಬರಿ 15,000 ಸಿಮೆಂಟ್ ಚೀಲಗಳನ್ನ ಬಳಸಿ ತಾಯಿ ದುರ್ಗಾಮಾತೆಯ ವೈಮಾನಿಕ ಕಲಾಕೃತಿಯನ್ನ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ.

ಅದಾನಿ ಸಿಮೆಂಟ್‌ ಬ್ರ್ಯಾಂಡ್‌ನ ನಂಬಿಕೆ, ಶಕ್ತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನ ಬೆಸೆಯುವ ಈ ವಿಶಿಷ್ಟ ಅಭಿಯಾನವು ಸಾಮೂಹಿಕ ಪ್ರಯತ್ನ ಹಾಗೂ ಭಕ್ತಿಯ ಪ್ರತೀಕವಾಗಿ ಹೊರಹೊಮ್ಮಿದೆ.

Adani Cement Creates Aerial Tribute to Maa Durga With 15 000 Bags at Kymore Plant for Navratri 2026

'ಜಹಾನ್ ವಿಶ್ವಾಸ್, ವಹಾನ್ ಶಕ್ತಿ' ಎಂಬ ಹೆಸರಿನ ಈ ಅಭಿಯಾನದಲ್ಲಿ ಅಂಬುಜಾ ಸಿಮೆಂಟ್ ಮತ್ತು ಎಸಿಸಿ ಸಿಮೆಂಟ್‌ನ 15,000 ಚೀಲಗಳನ್ನ ಬಳಸಿಕೊಳ್ಳಲಾಗಿದೆ. ಒಟ್ಟು 750 ಟನ್ ತೂಕದ ಈ ಸಿಮೆಂಟ್ ಚೀಲಗಳನ್ನ 70 ಅಡಿ ಉದ್ದ ಹಾಗೂ 70 ಅಡಿ ಅಗಲದ ದೊಡ್ಡ ಕ್ಯಾನ್ವಾಸ್ ಮೇಲೆ ಕಲಾತ್ಮಕವಾಗಿ ಜೋಡಿಸಲಾಗಿದೆ. ಈ ಅದ್ಭುತ ಕಲಾಕೃತಿಯನ್ನು ಪೂರ್ಣಗೊಳಿಸಲು ಕಾರ್ಮಿಕರು ಸುಮಾರು 12,600 ಗಂಟೆಗಳ ಶ್ರಮವನ್ನ ಹಾಕಿದ್ದಾರೆ.

ಸಿಮೆಂಟ್ ಕಂಪನಿಯೊಂದು ಪ್ಯಾಕ್ ಮಾಡಿದ ಸಿಮೆಂಟ್ ಚೀಲಗಳನ್ನ ಬಳಸಿ ದುರ್ಗಾಮಾತೆಗೆ ಇಂತಹದೊಂದು ಬೃಹತ್ ವೈಮಾನಿಕ ನಮನ ಸಲ್ಲಿಸಿರುವುದು ಇದೇ ಮೊದಲು ಎಂದು ಕಂಪನಿ ಹೆಮ್ಮೆಯಿಂದ ಹೇಳಿಕೊಂಡಿದೆ.

ವೈಮಾನಿಕ ನೋಟದಲ್ಲಿ ಅರಳಿದ ದುರ್ಗಾಮಾತೆ

ಈ ಕಲಾಕೃತಿಯನ್ನ ನೆಲ ಮಟ್ಟದಿಂದ ನೋಡಿದಾಗ, ಕೇವಲ ನಿರ್ದಿಷ್ಟ ಮಾದರಿಯಲ್ಲಿ ಜೋಡಿಸಲಾದ ಸಾವಿರಾರು ಸಿಮೆಂಟ್ ಚೀಲಗಳು ಮಾತ್ರ ಕಾಣಿಸುತ್ತವೆ. ಆದರೆ, ಕ್ಯಾಮೆರಾವನ್ನ ಮೇಲಕ್ಕೆ ಕೊಂಡೊಯ್ದು ಡ್ರೋನ್ ಮೂಲಕ ವೈಮಾನಿಕವಾಗಿ ವೀಕ್ಷಿಸಿದಾಗ, ತಾಯಿ ದುರ್ಗಾಮಾತೆಯ ಕಿರೀಟ, ಕಣ್ಣುಗಳು, ಹತ್ತು ಕೈಗಳ ಭವ್ಯ ದರ್ಶನವಾಗುತ್ತದೆ.

ಈ ಸಂಪೂರ್ಣ ಕಲಾಕೃತಿಯ ನಿರ್ಮಾಣದ ಪ್ರಕ್ರಿಯೆಯನ್ನ ಒಳಗೊಂಡ ಆಕರ್ಷಕ ವಿಡಿಯೋವನ್ನ ಕಂಪನಿಯು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ. ಕಾರ್ಮಿಕರು ಶ್ರದ್ಧೆಯಿಂದ ಸಿಮೆಂಟ್ ಚೀಲಗಳನ್ನ ಜೋಡಿಸುತ್ತಿರುವ ದೃಶ್ಯಗಳಿಂದ ಆರಂಭವಾಗುವ ಈ ವಿಡಿಯೋ, ನಂತರ ವೈಮಾನಿಕ ದೃಶ್ಯಕ್ಕೆ ಬದಲಾಗಿ ಸಿಮೆಂಟ್ ಚೀಲಗಳು ಹೇಗೆ ದುರ್ಗಾಮಾತೆಯ ರೂಪ ಪಡೆಯುತ್ತವೆ ಎಂಬುದನ್ನ ಅದ್ಭುತವಾಗಿ ಸೆರೆಹಿಡಿದಿದೆ.

ಕೈಮೋರ್ ಘಟಕದ ಸಾಂಸ್ಕೃತಿಕ ಪರಂಪರೆ

ಅದಾನಿ ಸಿಮೆಂಟ್ ಪೋರ್ಟ್‌ಫೋಲಿಯೊದ ಎರಡು ಪ್ರಮುಖ ಬ್ರ್ಯಾಂಡ್‌ಗಳ ಮೌಲ್ಯವನ್ನ ಈ ಅಭಿಯಾನವು ಒಗ್ಗೂಡಿಸಿದೆ. ಅಂಬುಜಾ ಸಿಮೆಂಟ್ ಶಕ್ತಿಯ ಭರವಸೆಯನ್ನು ನೀಡಿದರೆ, ಎಸಿಸಿ ಸಿಮೆಂಟ್ ನಂಬಿಕೆಯ ಪರಂಪರೆಯನ್ನ ಪ್ರತಿನಿಧಿಸುತ್ತದೆ. ರಕ್ಷಣೆ ಹಾಗೂ ಶಕ್ತಿಯ ಸಂಕೇತವಾಗಿರುವ ದುರ್ಗಾಮಾತೆಯ ಮೂಲಕ ಈ ಬ್ರ್ಯಾಂಡ್ ಮೌಲ್ಯಗಳನ್ನ ಜನರ ನಂಬಿಕೆ, ಸಂಪ್ರದಾಯ ಹಾಗೂ ಸಾಮೂಹಿಕ ಪ್ರಯತ್ನದೊಂದಿಗೆ ಜೋಡಿಸಲಾಗಿದೆ.

ಮಧ್ಯಪ್ರದೇಶದ ಕೈಮೋರ್‌ನಲ್ಲಿರುವ ಎಸಿಸಿ ಸಿಮೆಂಟ್ ಘಟಕವನ್ನು 1923ರಲ್ಲಿ ಸ್ಥಾಪಿಸಲಾಯಿತು. ಇಲ್ಲಿನ ಸ್ಥಳೀಯ ಸಮುದಾಯವು ದಶಕಗಳಿಂದ ರಾಮಲೀಲಾ ಆಚರಣೆಯ ಸಂಪ್ರದಾಯವನ್ನ ಪಾಲಿಸಿಕೊಂಡು ಬಂದಿದೆ. ಈ ಕಲಾಕೃತಿ ಮೂಲಕ ಅದಾನಿ ಸಿಮೆಂಟ್ ಸ್ಥಳೀಯ ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನ ಗೌರವಿಸಿದ್ದು ಮಾತ್ರವಲ್ಲದೆ, ನವರಾತ್ರಿ ಮತ್ತು ದುರ್ಗಾಪೂಜೆಯ ಭಕ್ತಿ ಹಾಗೂ ಸಮುದಾಯದ ಭಾಗವಹಿಸುವಿಕೆಯನ್ನ ಸಂಭ್ರಮಿಸಿದೆ. ಭಕ್ತಿ, ಶಕ್ತಿ ಹಾಗೂ ಒಗ್ಗಟ್ಟಿನ ಅದ್ಭುತ ಸಮಾಗಮವಾಗಿ ಈ ಕಲಾಕೃತಿ ಕಂಗೊಳಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+