ಕೋಲ್ಕತ್ತಾದಲ್ಲಿ ₹4,000 ಕೋಟಿ ವೆಚ್ಚದಲ್ಲಿ 2,000 ಹಾಸಿಗೆಗಳ ಅದಾನಿ ಆರೋಗ್ಯ ಮಂದಿರಕ್ಕೆ ಶಂಕುಸ್ಥಾಪನೆ

Adani arogya mandir: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಬುಧವಾರ ಕೋಲ್ಕತ್ತಾದ ನ್ಯೂ ಟೌನ್‌ನಲ್ಲಿರುವ ಬೆಂಗಾಲ್ ಸಿಲಿಕಾನ್ ವ್ಯಾಲಿ ಟೆಕ್ ಹಬ್‌ನಲ್ಲಿ 2,000 ಹಾಸಿಗೆಗಳ 'ಅದಾನಿ ಆರೋಗ್ಯ ಮಂದಿರ'ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇದು ರಾಜ್ಯದಲ್ಲಿ ಘೋಷಿಸಲಾದ ಅತಿದೊಡ್ಡ ಖಾಸಗಿ ಆರೋಗ್ಯ ಕ್ಷೇತ್ರದ ಹೂಡಿಕೆಗಳಲ್ಲಿ ಒಂದಾಗಿದೆ.

ಅದಾನಿ ಫೌಂಡೇಶನ್‌ನಿಂದ ಕೈಗೆತ್ತಿಕೊಳ್ಳಲಾಗುವ ಈ ಯೋಜನೆಯು 51.75 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿದ್ದು, 4,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಯನ್ನು ಒಳಗೊಂಡಿರಲಿದೆ. ಈ ಆಸ್ಪತ್ರೆ ಕಾರ್ಯಾರಂಭ ಮಾಡಿದ ನಂತರ, ವರ್ಷಕ್ಕೆ 2 ಲಕ್ಷಕ್ಕೂ ಹೆಚ್ಚು ಒಳರೋಗಿಗಳು ಹಾಗೂ 20 ಲಕ್ಷಕ್ಕೂ ಹೆಚ್ಚು ಹೊರರೋಗಿಗಳಿಗೆ ಸೇವೆ ನೀಡುವ ನಿರೀಕ್ಷೆಯಿದೆ. ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಸುಮಾರು 10,000 ಉದ್ಯೋಗಗಳನ್ನು ಸೃಷ್ಟಿಸಲಿದೆ.

Adani arogya mandir Rs 4 000 Crore 2 000-Bed Hospital to Come Up in West Bengal Know details

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು, 'ಈ ಸೌಲಭ್ಯವನ್ನು ವಿಶ್ವದರ್ಜೆಯ, ಲಾಭರಹಿತ ವೈದ್ಯಕೀಯ ಸಂಸ್ಥೆ,' ಎಂದು ಹೇಳಿದರು. ಅಲ್ಲದೆ, ಇಲ್ಲಿನ 2,000 ಹಾಸಿಗೆಗಳಲ್ಲಿ ಅರ್ಧದಷ್ಟು (1,000 ಹಾಸಿಗೆಗಳನ್ನು) ರಾಜ್ಯ ಮತ್ತು ಕೇಂದ್ರ ಸರ್ಕಾರದ ಆರೋಗ್ಯ ವಿಮಾ ಯೋಜನೆಗಳಿಗೆ ಅರ್ಹರಾಗಿರುವ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿ ಕಾಯ್ದಿರಿಸಲಾಗುವುದು,' ಎಂದು ತಿಳಿಸಿದರು.

ಆಸ್ಪತ್ರೆ ಆವರಣದಲ್ಲಿ ವೈದ್ಯಕೀಯ ಕಾಲೇಜು ಕೂಡ ಸ್ಥಾಪನೆಯಾಗಲಿದ್ದು, ಪ್ರತಿ ವರ್ಷ 150 ಪದವಿ ವಿದ್ಯಾರ್ಥಿಗಳು, 100ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ 40ಕ್ಕೂ ಹೆಚ್ಚು ಸೂಪರ್-ಸ್ಪೆಷಾಲಿಟಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಸಾಮರ್ಥ್ಯ ಹೊಂದಿರಲಿದೆ. ಇದರ ಜೊತೆಗೆ ನರ್ಸಿಂಗ್ ಕಾಲೇಜು ಹಾಗೂ ಸಹಾಯಕ ಆರೋಗ್ಯ ಸೇವೆಗಳ ತರಬೇತಿ ಸಂಸ್ಥೆಗಳೂ ಇರಲಿವೆ.

ಮೊದಲ ಹಂತದಲ್ಲಿ ಈ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯು ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಿದೆ. ಜೀನೋಮಿಕ್ಸ್, ಪ್ರಿಸಿಷನ್ ಮೆಡಿಸಿನ್, ಬಯೋಮೆಡಿಕಲ್ ಇನ್ಫಾರ್ಮ್ಯಾಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರಗಳನ್ನು ಒಳಗೊಂಡ ಸಂಶೋಧನಾ ವ್ಯವಸ್ಥೆಯೂ ಇಲ್ಲಿ ನಿರ್ಮಾಣವಾಗಲಿದೆ. ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಮತ್ತು ಶೈಕ್ಷಣಿಕ ಪರಿಣತಿಯನ್ನು ಒದಗಿಸಲು ಅದಾನಿ ಫೌಂಡೇಶನ್, ಅಮೆರಿಕದ 'ಮೇಯೊ ಕ್ಲಿನಿಕ್ ಗ್ಲೋಬಲ್ ಕನ್ಸಲ್ಟಿಂಗ್' ಹಾಗೂ ಸಿಂಗಾಪುರದ 'ಸಿಂಗ್‌ಹೆಲ್ತ್ 'ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಈ ಯೋಜನೆಯನ್ನು ಸ್ವಾಗತಿಸಿದ್ದು, 'ಪಶ್ಚಿಮ ಬಂಗಾಳವನ್ನು ಸಮಗ್ರ ಆರೋಗ್ಯ ನಗರವಾಗಿ ಪರಿವರ್ತಿಸುವ ಹಾಗೂ ರಾಜ್ಯದ 'ವಿಕಸಿತ ಭಾರತ 2047' ಕನಸನ್ನು ಸಾಕಾರಗೊಳಿಸುವತ್ತ ಇದೊಂದು ಪ್ರಮುಖ ಹೆಜ್ಜೆಯಾಗಿದೆ,' ಎಂದು ಬಣ್ಣಿಸಿದರು.

ಆರೋಗ್ಯ ಕ್ಷೇತ್ರದ ಹೊರತಾಗಿಯೂ ಗೌತಮ್ ಅದಾನಿ ಅವರು 2035ರ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ₹1 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಮಾಡುವುದಾಗಿ ಎಂದು ಘೋಷಿಸಿದ್ದಾರೆ. ಬಂದರುಗಳು, ಲಾಜಿಸ್ಟಿಕ್ಸ್, ವಿದ್ಯುತ್ ಉತ್ಪಾದನೆ, ರಸ್ತೆಗಳು, ಸೇತುವೆಗಳು, ಗ್ರೀನ್ ಸಿಮೆಂಟ್ ಹಾಗೂ ಹೈಪರ್‌ಸ್ಕೇಲ್ ಡೇಟಾ ಸೆಂಟರ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಿದ್ದಾರೆ. ಪಶ್ಚಿಮ ಭಾರತದಲ್ಲಿ ಅದಾನಿ ಗ್ರೂಪ್‌ನ ಮೊದಲ ಪ್ರಮುಖ ಕೈಗಾರಿಕಾ ನೆಲೆಯಾಗಿ ಗುಜರಾತ್‌ನ ಮುಂದ್ರಾ ಹೇಗೆ ಬೆಳೆಯಿತೋ, ಅದೇ ರೀತಿಯಲ್ಲಿ ಪೂರ್ವ ಭಾರತದಲ್ಲಿ ಪಶ್ಚಿಮ ಬಂಗಾಳವು ಅದಾನಿ ಗ್ರೂಪ್‌ನ ಉದಯೋನ್ಮುಖ 'ಕರ್ಮಭೂಮಿ' ಆಗಲಿದೆ. ಭಾರತದ ಕೈಗಾರಿಕಾ ಹೃದಯಭಾಗ ಹಾಗೂ ಈಶಾನ್ಯ ರಾಜ್ಯಗಳನ್ನು ಆಗ್ನೇಯ ಏಷ್ಯಾದೊಂದಿಗೆ ಸಂಪರ್ಕಿಸುವ ಸಮುದ್ರ ಮತ್ತು ಲಾಜಿಸ್ಟಿಕ್ಸ್ ಪ್ರವೇಶದ್ವಾರವಾಗಿ ಪಶ್ಚಿಮ ಬಂಗಾಳ ಹೊಂದಿರುವ ಕಾರ್ಯತಂತ್ರದ ಸ್ಥಾನದ ಬಗ್ಗೆ ಗೌತಮ್ ಅದಾನಿ ಅವರು ವಿವರಿಸಿದರು.

ಕೈಗಾರಿಕಾ ಮತ್ತು ಆರೋಗ್ಯ ಕ್ಷೇತ್ರದ ಉತ್ತೇಜನದ ಜೊತೆಗೆ, ಅದಾನಿ ಗ್ರೂಪ್ ಪಶ್ಚಿಮ ಬಂಗಾಳ ಸರ್ಕಾರದೊಂದಿಗೆ ಎರಡು ಒಪ್ಪಂದಗಳಿಗೆ ಸಹಿ ಹಾಕಿದೆ. ಇದರಲ್ಲಿ ಒಂದನೆಯದು 'ರೈಟರ್ಸ್ ಬಿಲ್ಡಿಂಗ್' ನವೀಕರಣಕ್ಕಾದರೆ, ಎರಡನೆಯದು 'ಅದಾನಿ ಪೂಜೋ ಪ್ರಿವ್ಯೂ' (Adani Pujo Preview) ಎಂಬ ಉಪಕ್ರಮದ ಮೂಲಕ ಕೋಲ್ಕತ್ತಾದ ದುರ್ಗಾ ಪೂಜೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವುದಾಗಿದೆ. ಇದರ ಜೊತೆಗೆ, ಕೋಲ್ಕತ್ತಾದ ಮೂರ್ತಿ ತಯಾರಿಕಾ ಕಲಾವಿದರ ಕೇಂದ್ರವೆಂದು ಪ್ರಸಿದ್ಧವಾಗಿರುವ 'ಕುಮಾರ್‌ತುಲಿ ಘಾಟ್‌'ನ ಪುನಶ್ಚೇತನಕ್ಕೂ ಸಹಾಯ ಮಾಡುವುದಾಗಿ ಅದಾನಿ ಗ್ರೂಪ್ ಘೋಷಿಸಿದೆ.

ತಮ್ಮ ಭಾಷಣದಲ್ಲಿ ರವೀಂದ್ರನಾಥ ಟ್ಯಾಗೋರ್, ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಸ್ ಚಂದ್ರ ಬೋಸ್ ಮತ್ತು ಜಗದೀಶ್ ಚಂದ್ರ ಬೋಸ್ ಅವರಂತಹ ಬಂಗಾಳದ ಮಹನೀಯರ ಪರಂಪರೆಯನ್ನು ಸ್ಮರಿಸಿದ ಅದಾನಿ ಅವರು, 'ಆಲೋಚನೆಗಳು, ಸಂಸ್ಥೆಗಳು ಮತ್ತು ಮಹಾನ್ ವ್ಯಕ್ತಿಗಳನ್ನು ನೀಡುವ ರಾಜ್ಯದ ಅಸಾಧಾರಣ ಸಾಮರ್ಥ್ಯ ಭಾರತದ ಭವಿಷ್ಯವನ್ನು ನಿರಂತರವಾಗಿ ರೂಪಿಸುತ್ತಿದೆ,' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+