ಅಕ್ಕ ನೋಂದಾವಣಿ ವಿಶೇಷ ದರ ಮಾ.15ರಂದು ಕೊನೆ

Posted By:
Subscribe to Oneindia Kannada

ಅಮೆರಿಕಾದ ಉದ್ಯಾನ ರಾಜ್ಯವೆನಿಸಿರುವ ನ್ಯೂಜೆರ್ಸಿಯ ಅಟ್ಲಾಂಟಾ ಸಿಟಿಯಲ್ಲಿ 9ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿದ್ದು, ನೋಂದಾವಣಿ ಭರದಿಂದ ಸಾಗಿದೆ. ಅಮೆರಿಕ ಮಾತ್ರವಲ್ಲ ಕರ್ನಾಟಕವೂ ಸೇರಿದಂತೆ ವಿಶ್ವದ ಇತರ ಖಂಡಗಳಿಂದಲೂ ಕನ್ನಡ ಪ್ರೇಮಿಗಳು ಭಾಗವಹಿಸಲಿದ್ದಾರೆ.

ಎರಡು ವರ್ಷಗಳಿಗೊಮ್ಮೆ ಜರುಗುವ ಕನ್ನಡ ನುಡಿಹಬ್ಬ ಈ ಬಾರಿ ವೈಭವ ನಗರಿ ಎಂದೇ ಖ್ಯಾತಿ ಗಳಿಸಿರುವ ಅಟ್ಲಾಂಟಿಕ್ ಸಿಟಿನಲ್ಲಿ ಸೆಪ್ಟೆಂಬರ್ 2, 3 ಮತ್ತು 4ರಂದು ನಡೆಯಲಿದ್ದು, ಈಗಲೇ ನೋಂದಾವಣಿ ಮಾಡಿಕೊಂಡವರಿಗೆ ಭಾರಿ ರಿಯಾಯಿತಿ ಸಿಗಲಿದೆ. ಮಾರ್ಚ್ 15ಕ್ಕೆ ಅರ್ಲಿ ಬರ್ಡ್ ರಿಜಿಸ್ಟ್ರೇಷನ್ ಮುಕ್ತಾಯವಾಗಲಿದೆ.

9th AKKA WKC : Early bird registration ends on 15th March

ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವರು ಈ ಸುವರ್ಣ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅಕ್ಕ ಸಮ್ಮೇಳನಾರ್ಥಿಗಳಲ್ಲಿ ವಿನಂತಿಸಿಕೊಂಡಿದೆ. ಆರಂಬಿಕ ಮುಂಜಾವಿನ ಹಕ್ಕಿ (early bird) ನೊಂದಾವಣಿ ದರಗಳು ಭಾರಿ ರಿಯಾಯಿತಿಯಿಂದ ಕೂಡಿದ್ದು ಈ ಕೆಳಕಂಡಂತೆ ಇರುತ್ತವೆ. [ಅಕ್ಕ ಸಮ್ಮೇಳನದ ವಿಶೇಷಗಳು]
9th AKKA WKC : Early bird registration ends on 15th March

ದೊಡ್ಡವರಿಗೆ - $150

6-17 ವರ್ಷದ ಮಕ್ಕಳಿಗೆ - $75
ವಿದ್ಯಾರ್ಥಿಗಳಿಗೆ - $100
ಪ್ರವಾಸಿಗರಿಗೆ - $100
6 ವರ್ಷಕ್ಕಿಂತ ಸಣ್ಣ ಮಕ್ಕಳಿಗೆ - ಸಂಪೂರ್ಣ ಉಚಿತ

ಸಂಪೂರ್ಣ ಮಾಹಿತಿ ಮತ್ತು ನೋಂದಣಿಗೆ ಇಲ್ಲಿ ಕ್ಲಿಕ್ಕಿಸಿ

9th AKKA WKC : Early bird registration ends on 15th March

ಈ ಬಾರಿಯ ಅಕ್ಕ ಸಮ್ಮೇಳನ ವಿಶೇಷ ಕಾರ್ಯಕ್ರಮಗಳಿಂದ ಕೂಡಿದ್ದು ಕನ್ನಡ ನಾಡಿನ ಹೆಸರಾಂತ ಚಲನಚಿತ್ರ ನಟರು, ಹಿರಿಯ ಸಾಹಿತಿಗಳು, ಪ್ರಖ್ಯಾತ ಕಲಾವಿದರ ದಂಡೇ ಭಾಗವಹಿಸಲಿದೆ. ಸುಮಾರು ಏಳು ಸಾವಿರಕ್ಕೂ ಹೆಚ್ಚು ಕನ್ನಡಾಭಿಮಾನಿಗಳು ಸೇರುವ ನಿರೀಕ್ಷೆಯಿದೆ. ಇಂದೇ ನೊಂದಾಯಿಸಿಕೊಳ್ಳಿ... ಹಿಂದೆಂದೂ ಕಂಡು ಕೇಳಿರದ ವೈಭವದ ಅಕ್ಕ ಜಾತ್ರೆಯಲ್ಲಿ ಭಾಗವಹಿಸಿ.

ಕನ್ನಡ ನಾಡಿನ ಜನಪದ, ಕಲೆ, ಸಾಹಿತ್ಯ, ಸಂಸ್ಕೃತಿ ಸಂಭ್ರಮದಲ್ಲಿ ಭಾಗವಹಿಸುವವರಿಗಾಗಿ ಈ ವರ್ಷ ಮಕರ ಸಂಕ್ರಾಂತಿಯಂದು, ಜನವರಿ 15ರಿಂದ ನೋಂದಾವಣಿ ಪ್ರಕ್ರಿಯೆ ಆರಂಭವಾಗಿತ್ತು. ರಿಯಾಯಿತಿ ದರದ ಕೊಡುಗೆ ಕೊನೆಗೊಳ್ಳಲು (ಮಾರ್ಚ್ 15) ಇನ್ನು ಕೇವಲ 1 ದಿನ ಮಾತ್ರ ಬಾಕಿಯಿದೆ. ಮಾರ್ಚ್ 16ರಿಂದ ಹೆಚ್ಚಿನ ದರಗಳು ಅನ್ವಯವಾಗಲಿವೆ.

9th AKKA WKC : Early bird registration ends on 15th March

ಅಟ್ಲಾಂಟಿಕ್ ಸಿಟಿ ಕನ್ವೆನ್ಷನ್ ಸೆಂಟರ್ ಭೇಟಿ ಮತ್ತು ಭಾರಿ ಸಿದ್ದತೆ:

ಅಕ್ಕ ಕಾರ್ಯಕಾರಿ ಸಮಿತಿಯ ಪದಾದಿಕಾರಿಗಳು, ಪ್ರತಿ ಸಮಿತಿಯ ಮುಖ್ಯಸ್ಥ, ಉಪಮುಖ್ಯಸ್ಥರು, ಸದಸ್ಯರು ಅಟ್ಲಾಂಟಿಕ್ ಸಿಟಿ ಕನ್ವೆನ್ಷನ್ ಸೆಂಟರ್ ಗೆ ಇತ್ತೀಚಿಗೆ ಭೇಟಿ ಕೊಟ್ಟು, ಸ್ಥಳ ಪರಿಶೀಲನೆ ನಡೆಸಿದರು. ಕಾರ್ಯಕ್ರಮದ ಮುಂದಿನ ಸಿದ್ದತೆಯ ರೂಪು ರೇಷೆಗಳನ್ನು ಕೂಲಂಕುಶವಾಗಿ ಚರ್ಚಿಸಿ, ಅನೇಕ ನಿರ್ಣಯಗಳನ್ನು ಕೈಗೊಂಡರು. ವೈಭವದ 9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರದಿಂದ ಸಿದ್ದತೆ ನಡೆಯುತ್ತಿದೆ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
9th AKKA World Kannada Conference in Atlanta City in New Jersey in USA from September 2-4, 2016. Early bird registration ends on 15th March. Hurry up and register now to get fabulous offers.
Please Wait while comments are loading...