ನಾವಿಕ ಜ್ಯೋತಿ ಬೆಳಗಲಿರುವ 'ಮುಖ್ಯಮಂತ್ರಿ'

Mukhyamantri Chandru, KDA president
ನಾರ್ತ್ ಅಮೆರಿಕ ವಿಶ್ವ ಕನ್ನಡಿಗರ ಆಗರ(ನಾವಿಕ)ದ ಪ್ರಥಮ ವಿಶ್ವ ಕನ್ನಡ ಸಮ್ಮೇಳನಕ್ಕೆ ಶುಕ್ರವಾರ, ಜುಲೈ 2ರಂದು ಭರ್ಜರಿ ಚಾಲನೆ ದೊರೆತಿದೆ. ಎರಡನೇ ದಿನ ಶನಿವಾರ ಬೆಳಿಗ್ಗೆ 9 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 9.30ಕ್ಕೆ), ಕರ್ನಾಟಕದಿಂದ ಆಗಮಿಸಿರುವ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಸಮ್ಮೇಳನವನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಗುತ್ತಿದೆ.

ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಅನುಪಸ್ಥಿತಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ 'ಮುಖ್ಯಮಂತ್ರಿ' ಚಂದ್ರು ಅವರು ಜ್ಯೋತಿ ಬೆಳಗುವ ಮೂಲಕ ಉದ್ಗಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಜಯರಾಮರಾಜೇ ಅರಸ್ ಮತ್ತು ನಿರ್ದೇಶಕ ಮನು ಬಳಿಗಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಲ್ಲೂರ್ ಪ್ರಸಾದ್, ದಲಿತ ಕವಿ ಸಿದ್ದಲಿಂಗಯ್ಯ, ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ವೇದಿಕೆಯನ್ನು ಅಲಂಕರಿಸಲಿದ್ದಾರೆ. ನಾವಿಕ ಅದ್ಯಕ್ಷ ಡಾ. ಶ್ರೀ ಅಯ್ಯಂಗಾರ್, ಡಾ. ರಾಮಪ್ಪ ಮತ್ತು ಡಾ. ಕೇಶವ ಬಾಬು ಅವರು ಕೂಡ ವೇದಿಕೆ ಮೇಲ ಉಪಸ್ಥಿತರಿರಲಿದ್ದಾರೆ.

ಇತರ ಕಾರ್ಯಕ್ರಮಗಳ ವಿವರ ಕೆಳಗಿನಂತಿದೆ

ನಾವಿಕ ರಂಗಮಂದಿರ, ಸಿವಿಕ್ ಸೆಂಟರ್ ವೇದಿಕೆ

ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30

* ನಾದಸ್ವರ - ಚಂದ್ರಶೇಖರ ಮತ್ತು ತಂಡ
* ಅಮೆರಿಕ ಮತ್ತು ಭಾರತದ ರಾಷ್ಟ್ರಗೀತೆ ಗಾಯನ
* ವೇದಘೋಷ - ಲಾಸ್ ಏಂಜಲಿಸ್ ನ ಶೀಲಾ ಪ್ರಭಾಕರ್ ಮತ್ತು ತಂಡ
* ಹಚ್ಚೇವು ಕನ್ನಡದ ದೀಪ - ವೀಣಾ ಕೃಷ್ಣ ಮತ್ತು ತಂಡ
* ನೃತ್ಯ - ವೈಜಯಂತಿ ಕಾಶಿ ಮತ್ತು ಸಂಗಡಿಗರು
* ಸಮ್ಮೇಳನದ ಉದ್ಘಾಟನೆ
* ನಾವಿಕ ಸಂಚಿಕೆ ಬಿಡುಗಡೆ ಮತ್ತು ಬಿವಿ ಜಗದೀಶ್ ಅವರ ಆಶಯ ಭಾಷಣ
* ವೀಣಾ ವಾದನ - ಸುಮಾ ಸುಧೀಂದ್ರ
* ಕೈಲಾಸಂ ಅವರ ಅಮ್ಮಾವ್ರ ಗಂಡ ನಾಟಕ - ಸುಕುಮಾರ್ ಮತ್ತು ತಂಡ
* ತುತ್ತುತ್ತು ತುತ್ತುತ್ತಾರಾ - ರಘು ಹಲೂರ್ ತಂಡದಿಂದ ಪ್ರಹಸನ
* ಪ್ರೊ ಪುತ್ತೂರಾಯರ ಹಾಸ್ಯ ಲಹರಿ

ಮಧ್ಯಾಹ್ನ 1.30ರಿಂದ ಸಂಜೆ 6.30

* ರಾಗ ಆರ್ಕೆಸ್ಟ್ರಾ - ಸೋಮಶೇಖರ್ ಮತ್ತು ತಂಡ
* ರಾಶಿ, ಕನ್ನಡ ನಾಟಕ - ಯಶವಂತ ಸರದೇಶಪಾಂಡೆ
* ರಾಧೇಯ, ಪೌರಾಣಿಕ ನಾಟಕ - ರವಿ ಹರಪನಹಳ್ಳಿ, ವಾಷಿಂಗ್ಟನ್
* ಯಕ್ಷಗಾನ - ಮಂಟಪ ಪ್ರಭಾಕರ್
* ಸೂರ್ಯ ನಮಸ್ಕಾರ, ನೃತ್ಯ - ಆಶಾ ಗೋಪಾಲ್, ಫಿನಿಕ್ಸ್

ಸಂಜೆ 7.30ರಿಂದ 11.30

* ಫ್ಯಾಷನ್ ಶೋ - ಭವಾನಿ ರಾವ್ ಮತ್ತು ತಂಡ, ಲಾಸ್ ಏಂಜಲಿಸ್
* ಕೊಳಲು ವಾದನ - ಪ್ರವೀಣ್ ಗೋಡ್ಖಿಂಡಿ
* ಹಾಸ್ಯ ಚಟಾಕಿ - ಪ್ರೊ. ಕೃಷ್ಣೇಗೌಡ
* ಸುಗಮ ಸಂಗೀತ - ಎಂಡಿ ಪಲ್ಲವಿ ಮತ್ತು ತಂಡ

ಮೈಸೂರು ರಂಗಮಂದಿರ

ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30 ಸ್ವರ ನಾವಿಕ - ಇಂಚರ ಶೋಧ ಸ್ಪರ್ಧೆ (ಪ್ರಾಥಮಿಕ ಹಂತ)

ಮಧ್ಯಾಹ್ನ 1.30ರಿಂದ ಸಂಜೆ 6.30

* ಹಾಸ್ಯ - ಪ್ರೊ. ಪುತ್ತೂರಾಯ
* ಕಥಕ್ ನೃತ್ಯ - ದಿವ್ಯಾ ಪಾಟೀಲ್
* ಜನಪದ ಮತ್ತು ರಂಗಗೀತೆ - ಬಾನಂದೂರು ಕೆಂಪಯ್ಯ, ಜನಾರ್ಧನ, ಬಿ ಹಿರೇಮಠ
* ವಚನ ಮತ್ತು ದಾಸರಪದ - ಮೃತ್ಯುಂಜಯ ಶೆಟ್ಟರ್
* ಹಾಸ್ಯ - ಪ್ರೊ. ಕೃಷ್ಣೇಗೌಡ
* ಸ್ವರ ನಾವಿಕ - ಇಂಚರ ಶೋಧ ಸ್ಪರ್ಧೆ (ಕ್ವಾರ್ಟರ್ ಫೈನಲ್)

ಕೋಲಾರ ರಂಗ ಮಂದಿರ

ಬೆಳಿಗ್ಗೆ 10ರಿಂದ 12.30ರವರೆಗೆ ಮತ್ತು ಮಧ್ಯಾಹ್ನ 1.30ರಿಂದ ಸಂಜೆ 6.30ವರೆಗೆ ಕನ್ನಡ ಕಲಿ, ಮಕ್ಕಳಿಗೆ ಕಲಿಕಾ ಶಿಬಿರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+