ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸ್ವರ ನಾವಿಕ' ಇಂಚರ ಶೋಧ ಸ್ಪರ್ಧೆ

By * ವಲ್ಲೀಶ ಶಾಸ್ತ್ರಿ
|
Google Oneindia Kannada News

Voice of Navika, music competition
ನಾವಿಕ ಪ್ರಥಮ ವಿಶ್ವ ಕನ್ನಡ ಸಮಾವೇಶದ ಸಮಯದಲ್ಲಿ “ಸ್ವರ ನಾವಿಕ" (Voice Of Navika) ಇಂಚರ ಶೋಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಸಮಾವೇಶದಲ್ಲಿ ಜುಲೈ 4ರಂದು ನಡೆಯಲಿರುವ 'ಹರಿಕೃಷ್ಣ ಲೈವ್' ಕಾರ್ಯಕ್ರಮದಲ್ಲಿ ಕರ್ನಾಟಕದ ಚಲನಚಿತ್ರ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರ ತಂಡದ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ನೀಡಲಾಗುವುದು.

ನೊಂದಾಯಿಸಲು ಕಡೆಯ ದಿನ : ಜೂನ್ 15, 2010
ವಯೋಮಿತಿ : 18 ವರ್ಷ ಅಥವಾ ಅದಕ್ಕಿಂತ ಮೇಲು

ಸ್ಪರ್ಧೆಯ ನೀತಿ ನಿಯಮಾವಳಿಗಳು ಕೆಳಗಿನಂತಿವೆ

ಮೊದಲ ಸುತ್ತು:

* ಪ್ರತಿ ಅಭ್ಯರ್ಥಿಯೂ 2 ನಿಮಿಷಗಳ 2 ಹಾಡುಗಳನ್ನು ಹಾಡಲು ಅವಕಾಶವಿರುತ್ತದೆ.
* ಒಂದು ಹಾಡು (2 minutes) – ಕನ್ನಡ ಚಿತ್ರ ಗೀತೆ.
* ಎರಡನೇ ಹಾಡು (2 minutes) – ಭಾವಗೀತೆ ಅಥವಾ ದೇವರನಾಮ ಅಥವಾ ಜಾನಪದ ಗೀತೆಯಾಗಿರಬೇಕು.
* ಈ ಸುತ್ತಿನಲ್ಲಿ Karaoke tracksಗೆ ಅವಕಾಶವಿಲ್ಲ, ಆದರೆ electronic ಶೃತಿ ಪೆಟ್ಟಿಗೆ ಮತ್ತು electronic ತಬಲ ಉಪಯೋಗಿಸಬಹುದು.
* ಮೊದಲ ಸುತ್ತಿನಲ್ಲಿ ಒಬ್ಬರು ಹಾಡಿದ ಹಾಡನ್ನು ಇನ್ನೊಬ್ಬರು ಹಾಡಬಹುದು.
* ಶ್ರೇಷ್ಠ ಹತ್ತು ಅಭ್ಯರ್ಥಿಗಳನ್ನು ಆರಿಸಲಾಗುವುದು.

ಎರಡನೇ ಸುತ್ತು:

* ಇದು ಕನ್ನಡ ಚಲನಚಿತ್ರ ಗೀತೆಗಳ ಸುತ್ತು.
* ನಾಲ್ಕು ನಿಮಿಷ ಅವಧಿಯಲ್ಲಿ ಒಂದು ಹಾಡಿಗೆ ಅವಕಾಶವಿರುತ್ತದೆ.
* ಇದು karaoke round. ಹಾಗೆಂದರೆ ಅಭ್ಯರ್ಥಿಗಳು ತಮ್ಮ ಹಾಡಿನ trackಗಳನ್ನು ಸ್ಪರ್ಧೆಗೆ ಮುಂಚೆಯೇ ಒದಗಿಸಬೇಕು.
* 6 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
* ಈ ಸುತ್ತಿನಲ್ಲಿ ಒಬ್ಬರು ಹಾಡಿದ ಹಾಡನ್ನು ಇನ್ನೊಬ್ಬರು ಹಾಡುವಂತಿಲ್ಲ.

ಮೂರನೇ ಸುತ್ತು:

* ಈ ಸುತ್ತೂ ಸಹ ಕನ್ನಡ ಚಲನಚಿತ್ರ ಗೀತೆಯಾಗಿರಬೇಕು.
* ನಾಲ್ಕು ನಿಮಿಷ ಅವಧಿಯಲ್ಲಿ ಒಂದು ಹಾಡಿಗೆ ಅವಕಾಶವಿರುತ್ತದೆ.
* ಇದು karaoke round. ಹಾಗೆಂದರೆ ಅಭ್ಯರ್ಥಿಗಳು ತಮ್ಮ ಹಾಡಿನ track ಗಳನ್ನು ಸ್ಪರ್ಧೆಗೆ ಮುಂಚೆಯೇ ಒದಗಿಸಬೇಕು.
* 3 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
* ಈ ಸುತ್ತಿನಲ್ಲೂ ಸಹ ಒಬ್ಬರು ಹಾಡಿದ ಹಾಡನ್ನು ಇನ್ನೊಬ್ಬರು ಹಾಡುವಂತಿಲ್ಲ.

ಅಂತಿಮ ಸುತ್ತು:

* ಇದೂ ಸಹ ಕನ್ನಡ ಚಲನಚಿತ್ರ ಗೀತೆಯ ಸುತ್ತಾಗಿರುತ್ತದೆ.
* ನಾಲ್ಕು ನಿಮಿಷ ಅವಧಿಯಲ್ಲಿ ಒಂದು ಹಾಡಿಗೆ ಅವಕಾಶವಿರುತ್ತದೆ.
* ಇದು karaoke round. ಹಾಗೆಂದರೆ ಅಭ್ಯರ್ಥಿಗಳು ತಮ್ಮ ಹಾಡಿನ trackಗಳನ್ನು ಸ್ಪರ್ಧೆಗೆ ಮುಂಚೆಯೇ ಒದಗಿಸಬೇಕು.
* ಈ ಸುತ್ತಿನಲ್ಲೂ ಸಹ ಒಬ್ಬರು ಹಾಡಿದ ಹಾಡನ್ನು ಇನ್ನೊಬ್ಬರು ಹಾಡುವಂತಿಲ್ಲ.

ಈ ಸ್ಪರ್ಧೆಯಲ್ಲಿ ಭಾಗವಹಿಸುವವರು [email protected]ಗೆ ನಿಮ್ಮ ವಿವರಗಳೊಂದಿಗೆ ಈ-ಮೈಲ್ ಕಳುಹಿಸಿ.

ಏಕ ಪಾತ್ರಾಭಿನಯ ಸ್ಪರ್ಧೆ

* ಸ್ಪರ್ಧೆ ಮೂರು ಸುತ್ತಿನಲ್ಲಿ ನಡೆಯುತ್ತದೆ.
* ಮೊದಲ ಸುತ್ತಿನಲ್ಲಿ ಪೌರಾಣಿಕ ಹಾಗೂ ಎರಡನೇ ಸುತ್ತಿನಲ್ಲಿ ಸಾಂಸಾರಿಕ ಅಥವಾ ಹಾಸ್ಯ ಏಕಪಾತ್ರಾಭಿನಯವನ್ನು ಮಾಡಿ ತೋರಿಸಬೇಕು.
* ಪ್ರತಿ ಅಭಿನಯಕ್ಕೆ 5ರಿಂದ 8 ನಿಮಿಷಗಳ ಕಾಲಾವಕಾಶವಿರುತ್ತದೆ.
* ಎರಡನೇ ಸುತ್ತಿನ ನಂತರ ಮೂರು ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುವುದು.
* ಮೂರನೇ ಸುತ್ತಿನಲ್ಲಿ ಪೌರಾಣಿಕ ಅಭಿನಯ ಮಾಡಿ ತೋರಿಸಬೇಕು.
* ಒಂದು ಸುತ್ತಿನಲ್ಲಿ ಮಾಡಿದ ಅಭಿನಯವನ್ನು ಇನ್ನೊಂದು ಸುತ್ತಿನಲ್ಲಿ ಮಾಡುವ ಹಾಗಿಲ್ಲ.
* ಸ್ಪರ್ಧೆಗಳಲ್ಲಿ ಅಬ್ಬರದ ರಂಗ ಸಜ್ಜಿಕೆಗೆ ವೇಳೆಯಿಲ್ಲ.
* ಪಾತ್ರಕ್ಕೆ ತಕ್ಕಂತೆ ಉಡಿಗೆ ತೊಡಿಗೆಗಳನ್ನು ಉಪಯೋಗಿಸಬಹುದು.

ಕಡೆ ಸುತ್ತಿನಲ್ಲಿ ಗೆದ್ದ ಅಭ್ಯರ್ಥಿಗೆ “ರಂಗ ನಾವಿಕ"ನೆಂಬ ಬಿರುದು ಕೊಡಲಾಗುವುದು ಹಾಗೂ Civic Auditoriumನಲ್ಲಿ 10 ನಿಮಿಷಗಳ ಅಭಿನಯಕ್ಕೆ ಅವಕಾಶ ಕೊಡಲಾಗುವುದು.

ನೊಂದಾಯಿಸಲು ಕಡೆಯ ದಿನ : ಜೂನ್ 15, 2010.
ವಯೋಮಿತಿ : 18 ವರ್ಷ ಅಥವಾ ಅದಕ್ಕಿಂತ ಮೇಲು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X