ನಾವಿಕ ಸಮ್ಮೇಳನಕ್ಕೆ ಆನ್ ಲೈನ್ ನೊಂದಣಿ ಆರಂಭ
ಅಮೆರಿಕಾ ಪಶ್ಚಿಮ ಕರಾವಳಿ ತೀರದ ಲಾಸ್ ಏಂಜಲಿಸ್ ನಗರ ವಿಶ್ವ ಕನ್ನಡಿಗರನ್ನು ಕನ್ನಡ ನಿಮಿತ್ತ ಕೈಬೀಸಿ ಕರೆಯುತ್ತಿದೆ. ನಾವಿಕ ಕನ್ನಡ ಸಂಸ್ಥೆ ಈ ನಗರದ ಪಸಡೀನ ಸಭಾಂಗಣದಲ್ಲಿ ಜುಲೈ 2ರಿಂದ ಮೂರು ದಿವಸಗಳ ಕಾಲ ಹಮ್ಮಿಕೊಂಡಿರುವ ಪ್ರಥಮ ವಿಶ್ವ ಕನ್ನಡ ಶಿಖರ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ನಡೆಸುತ್ತಿದ್ದು ಸಮ್ಮೇಳನದ ಹಲವು ಆಕರ್ಷಣೆಗಳನ್ನು ಪ್ರಕಟಿಸಲಾಗಿದೆ.
ಸಮ್ಮೇಳನದ ಪ್ರಮುಖ ಗುರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳನ್ನು ಆಕರ್ಷಿಸುವುದಾಗಿದೆ. ಈ ದಿಕ್ಕಿನಲ್ಲಿ ನಾವಿಕದ ಅಂತರ್ಜಾಲತಾಣದಲ್ಲಿ ಆನ್ ಲೈನ್ ನೊಂದಣಿ ವಿಭಾಗ ಇಂದಿನಿಂದ ತೆರೆಯಲಾಗಿದೆ.
ನೊಂದಣಿ ದರಗಳು ಕೆಳಕಂಡಂತಿವೆ
* ಮಾರ್ಚ್ 1ನೇ ತಾರೀಖಿಗೆ ಮುಂಚೆ ನಿಮಗೆ $175; ವಿದ್ಯಾರ್ಥಿಗಳಿಗೆ $100; 6ರಿಂದ 18ರವರೆಗಿನ ಮಕ್ಕಳಿಗೆ $75.
* ಮೇ 1ನೇ ತಾರೀಖಿಗೆ ಮುಂಚೆ, ಅನುಕ್ರಮವಾಗಿ $200, $100, $75
* ಜೂನ್ 1ನೇ ತಾರೀಖಿನ ನಂತರದಲ್ಲಿ ಅನುಕ್ರಮವಾಗಿ $225, $100, $75
* ಅಮೆರಿಕಾದ ಹೊರಗಡೆಯಿಂದ ನೊಂದಣಿ ಮಾಡುವ ಪ್ರತಿನಿಧಿಗಳಿಗೆ ಸದಾಕಾಲ $150
ಸಮ್ಮೇಳನ ನಡೆಯುವುದು ಬೇಸಿಗೆಯ ಕಾಲದಲ್ಲಿ. ಹೇಳಿಕೇಳಿ ಈ ಋತುವಿನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ರಜೆಯ ವಾತಾವರಣ. ಎಲ್ಲಿ ನೋಡಿದರೂ ಪ್ರವಾಸಿಗರೇ. ಹಾಗಾಗಿ ಸಮಾವೇಶದಲ್ಲಿ ಭಾಗವಹಿಸಲು ದೂರ ರಾಜ್ಯಗಳಿಂದ ಮತ್ತು ಕರ್ನಾಟಕದಿಂದ ಆಗಮಿಸುವ ಪ್ರತಿನಿಧಿಗಳಿಗೆ ಪ್ರವಾಸಾನುಕೂಲಗಳನ್ನು ಆತಿಥೇಯ ನಾವಿಕ ಸಂಸ್ಥೆ ವ್ಯವಸ್ಥೆ ಮಾಡುತ್ತಿದೆ. ಇದು ಅತಿ ಕಡಿಮೆ ದರಗಳಲ್ಲಿ ಲಭ್ಯವಾಗುವ ಸೈಟ್ ಸೀಯಿಂಗ್.
ಸಮ್ಮೇಳನದ ಸುವಿಹಾರಿ ಬಸ್ಸುಗಳಲ್ಲಿ ಪ್ರಖ್ಯಾತ ಪ್ರವಾಸಿ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವ ವ್ಯವಸ್ಥೆ ಇರುತ್ತದೆ. ಎಲ್ಲರಿಗೂ ಅನುಕೂಲವಾಗಬೇಕೆಂಬ ಉದ್ದೇಶದಿಂದ ಹೊರಸಂಚಾರಗಳನ್ನು ಬೇರೆ ಬೇರೆ ದಿನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಹಾಲಿವುಡ್, ಡಿಸ್ನಿ ಲ್ಯಾಂಡ್, ಸ್ಯಾಂಡಿಯಾಗೋಗಳಿಗೆ ಒಂದೊಂದು ದಿವಸದ ಪಿಕ್ನಿಕ್ ಇದ್ದರೆ, ಲಾಸ್ ವೇಗಸ್ ಮತ್ತು ಗ್ರ್ಯಾಂಡ್ ಕ್ಯಾನ್ಯನ್ ಗಳಿಗೆ ಮೂರು ದಿವಸಗಳಪ್ರವಾಸ ವ್ಯವಸ್ಥೆ ಇರುತ್ತದೆ.
ಕರ್ನಾಟಕದಿಂದ ಇಲ್ಲೀತನಕ ಬರುವವರಿಗೆ ವಿಶೇಷ ಪ್ರೀತಿ ಮತ್ತು ಆದರ. ಸಮ್ಮೇಳನ ಕಾರ್ಯಕ್ರಮ ಮುಗಿಸಿಕೊಂಡ ನಂತರ ಕೆಲವು ದಿನಗಳ ರಜೆಯನ್ನು ಮುಂದುವರಿಸಿ, ಸ್ಥಳೀಯ ಕನ್ನಡದ ಜನರೊಂದಿಗೆ ಪ್ರವಾಸ ಮಾಡುವ ಅವಕಾಶ ಕಲ್ಪಿಸಲಾಗಿದೆ. ಬಸ್ಸಿನಲ್ಲಿ ಕನ್ನಡಿಗರೊಂದಿಗೆ ಕನ್ನಡದ ಹಾಡುಗಳನ್ನು ಹೇಳಿಕೊಂಡು, ಕೇಳಿಕೊಂಡು, ಕನ್ನಡ ಚಲನಚಿತ್ರಗಳನ್ನು ನೋಡಿಕೊಂಡು ಕನ್ನಡದ ಜೋಕುಗಳನ್ನು ಹೇಳಿಕೊಂಡು ಅಮೆರಿಕೆಯಲ್ಲಿನ ಪ್ರವಾಸಿ ಸ್ಥಳಗಳನ್ನು ನೋಡುವ ಅವಕಾಶ ಯಾರಿಗೆ ಉಂಟು ಯಾರಿಗಿಲ್ಲ! ಇನ್ನೂ ಹೆಚ್ಚಿನ ವಿವರಗಳಿಗೆ www.navika2010.org ಅಂತರ್ಜಾಲಕ್ಕೆ ಭೇಟಿ ನೀಡಿ.
ಲಾಸ್ ಏಂಜಲಿಸ್ ಸುತ್ತ ಮುತ್ತ ನಗರಗಳಿಂದ ಬರುವ ಕನ್ನಡಿಗರ ಅನುಕೂಲಕ್ಕಾಗಿ ಅತಿ ಕಡಿಮೆ ದರದಲ್ಲಿ ಸಿಲಿಕಾನ್ ವ್ಯಾಲಿ ಪ್ರದೇಶದಿಂದ, ಸ್ಯಾಕ್ರಮೇಂಟೊ, ಫೀನಿಕ್ಸ್ ಹಾಗೂ ಸ್ಯಾಂಡಿಯಾಗೋ ನಗರಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ನೇರವಾಗಿ ಸಮಾವೇಶ ನಡೆಯುವ ಸ್ಥಳಕ್ಕೆ ಬಿಟ್ಟು ಅಲ್ಲಿಂದಲೇ ತಮ್ಮ ತಮ್ಮ ಊರಿಗೆ ವಾಪಸ್ಸು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ. ದರಗಳ ವಿವರಕ್ಕೆ www.navika2010.org ಭೇಟಿಕೊಡಿ. ಡ್ರೈವಿಂಗ್ ಜಂಜಾಟ ಇಲ್ಲ, ಟೋಲು ಫೀ, ಪಾರ್ಕಿಂಗ್ ಗೆ ಶುಲ್ಕ ಕೊಡಬೇಕಾಗಿಲ್ಲ. ನೆನಪಿಡಿ, ಇದು ತಮ್ಮವರು ನಮ್ಮವರೊಡನೆ ಸುಖಾಸೀನಗಳಲ್ಲಿ ಹೊರಡುವ ಆಹ್ಲಾದಕರ ಪ್ರವಾಸ ಅನುಭವ.
ಬನ್ನಿ, ಒಂದು ಚರಿತ್ರಾರ್ಹ ಸಮಾವೇಶದಲ್ಲಿ ಭಾಗವಹಿಸಿ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ













Click it and Unblock the Notifications