ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ-ಕಾವೇರಿಯ ಅಕ್ಕರೆಯ ಕರೆಯೋಲೆ!

By Staff
|
Google Oneindia Kannada News

ವಿಶ್ವಕನ್ನಡಿಗರೆಲ್ಲರಿಗೂ ನಮಸ್ಕಾರಗಳು!

ಬೃಹತ್‌ ವಾಷಿಂಗ್ಟನ್‌ ಮೆಟ್ರೊ ಪ್ರದೇಶದ (ಡಿಸಿ, ಮೇರಿಲ್ಯಾಂಡ್‌, ವರ್ಜೀನಿಯಾ) ಕಾವೇರಿ ಕನ್ನಡ ಸಂಘ ಮತ್ತು ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) - ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ 4ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ನಿಮಗೆಲ್ಲರಿಗೂ ಆದರದ, ಅಭಿಮಾನದ ಮತ್ತು ಆತ್ಮೀಯ ಆಹ್ವಾನ!

ಸಮ್ಮೇಳನ ಕುರಿತ ವಿವರಗಳು :

ಯಾವಾಗ?

2006 ಸೆಪ್ಟೆಂಬರ್‌ 1, 2, ಮತ್ತು 3

ಎಲ್ಲಿ?

ಬಾಲ್ಟಿಮೋರ್‌ ಕನ್ವೆನ್ಷನ್‌ ಸೆಂಟರ್‌
One West Pratt Street
Baltimore, Maryland 21201
USA

ಭವ್ಯವಾದ ಈ ಸಭಾಂಗಣವು ಬಾಲ್ಟಿಮೋರ್‌ನ ಪ್ರಖ್ಯಾತ ಬಂದರಿನಿಂದ ಕೂಗಳತೆಯ ದೂರದಲ್ಲಿದೆ. ಬಾಲ್ಟಿಮೋರ್‌-ವಾಷಿಂಗ್ಟನ್‌ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (BWI)ದಿಂದ ಸಭಾಂಗಣಕ್ಕೆ 15 ನಿಮಿಷಗಳ ಡ್ರೈವ್‌. BWI ವಿಮಾನನಿಲ್ದಾಣವು Southwest Airlines ನ ಪ್ರಮುಖ ಕೇಂದ್ರವಾಗಿದ್ದು ಪ್ರತ್ಯೇಕ ಟರ್ಮಿನಲ್‌ ಸಹ ಇದೆ. BWI ನಿಂದ/ಗೆ ವಿಮಾನಯಾನ ದರಗಳು ಇನ್ನುಳಿದ ಎರಡು ನಿಲ್ದಾಣಗಳಾದ ರೇಗನ್‌ ನ್ಯಾಷನಲ್‌ (DCA) ಮತ್ತು ವಾಷಿಂಗ್ಟನ್‌ ಡಾಲಸ್‌ (IAD) ವಿಮಾನನಿಲ್ದಾಣಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತವೆ.

ವಸತಿ ವ್ಯವಸ್ಥೆ :

The Wyndham Hotel (Inner Harbor) ಬಾಲ್ಟಿಮೊರ್‌ ಕನ್ವೆನ್ಷನ್‌ ಸೆಂಟರ್‌ನಿಂದ ಅನತಿದೂರದಲ್ಲಿದ್ದು ಇದನ್ನು ಸಮ್ಮೇಳನದ ಅ-ಧಿ-ಕೃತ ವಸತಿವ್ಯವಸ್ಥೆಯಾಗಿ ಗುರುತಿಸಿದ್ದೇವೆ. ಸಮ್ಮೇಳನಾರ್ಥಿಗಳ ವಸತಿಗೋಸ್ಕರ ಬಹುಸಂಖ್ಯೆಯಲ್ಲಿ ಕೊಠಡಿಗಳನ್ನು ಕಾದಿರಿಸಲಾಗಿದ್ದು ಆಕರ್ಷಕ ರಿಯಾಯಿತಿಯ ಬಾಡಿಗೆದರವನ್ನೂ ಗೊತ್ತುಪಡಿಸಲಾಗಿದೆ (ಮಾರ್ಚ್‌ 15ರೊಳಗೆ ಮುಂಗಡ ಬುಕಿಂಗ್‌ ಮಾಡಿದರೆ ದಿನವಹಿ 99ಡಾಲರ್‌; ಏಪ್ರಿಲ್‌ 30ರೊಳಗೆ ಬುಕಿಂಗ್‌ ಮಾಡಿದರೆ ದಿನವಹಿ 115 ಡಾಲರ್‌; ಜುಲೈ 31ರೊಳಗೆ ಕಾದಿರಿಸಿದರೆ ದಿನವಹಿ 125 ಡಾಲರ್‌; ತದನಂತರ ದಿನಕ್ಕೆ 150 ಡಾಲರ್‌; ತೆರಿಗೆಗಳು ಪ್ರತ್ಯೇಕ).

ಸಮ್ಮೇಳನಾರ್ಥಿಗಳು ಆದಷ್ಟು ತ್ವರಿತವಾಗಿ ಕೊಠಡಿಗಳನ್ನು ಕಾಯ್ದಿರಿಸಿ ಈ ರಿಯಾಯಿತಿ ದರಗಳ ಸೌಲಭ್ಯ ಪಡೆಯಬೇಕೆಂದು ನಮ್ಮ ಅಪೇಕ್ಷೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಸಮ್ಮೇಳನದ ಮೂರು ದಿನಗಳಲ್ಲೂ ಭೋಜನ ವ್ಯವಸ್ಥೆಯನ್ನು ವಿಂಡ್‌ಹಾಮ್‌ ಹೊಟೆಲ್‌ನ ಬಾಂಕ್ವೆಟ್‌ ಹಾಲ್‌ನಲ್ಲೇ ಆಯೋಜಿಸಲಾಗಿದೆ.

ಹೊಟೆಲ್‌ ವಿಳಾಸ :

101 West Fayette Street
Baltimore, Maryland 21201; United States
Phone: 410-752-1100
1-800-WYNDHAM

ಸಮ್ಮೇಳನದ ಆನ್‌ಲೈನ್‌ ನೋಂದಣಿ :

ಸುರಕ್ಷಿತವಾದ ಮತ್ತು ಆಧುನಿಕ ತಂತ್ರಜ್ಞಾನವನ್ನಳವಡಿಸಿದ ಆನ್‌ಲೈನ್‌ ರಿಜಿಸ್ಟ್ರೇಷನ್‌ ಇದೀಗ ಆರಂಭವಾಗಿದ್ದು ನೋಂದಣಿ ಶುಲ್ಕದಲ್ಲಿ 70 ಡಾಲರ್‌ ತ್ವರಿತಪಕ್ಷಿ ರಿಯಾಯಿತಿ (Earlybird Discount)ಅನ್ನೂ ಪಡೆಯಬಹುದು!

ನೋಂದಣಿ ಮತ್ತು ಸಮ್ಮೇಳನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ.

ಕರ್ನಾಟಕ ಸುವರ್ಣ ಸಂಭ್ರಮದ ಸಂದರ್ಭದಲ್ಲೇ ಆಯೋಜಿತವಾಗಿರುವ ಈ ವಿಶ್ವಕನ್ನಡ ಸಮ್ಮೇಳನದಲ್ಲಿ ವಿಶ್ವಾದ್ಯಂತದ ಕನ್ನಡಿಗರೆಲ್ಲ ಅತ್ಯ-ಧಿ-ಕ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನದ ಯಶಸ್ಸಿಗೆ ಕಾರಣರಾಗಬೇಕೆಂದು ಆದರಪೂರ್ವಕವಾಗಿ ಆಮಂತ್ರಿಸುತ್ತಿದ್ದೇವೆ.

ನೀವೂ ಬನ್ನಿ, ನಿಮ್ಮ ಇಷ್ಟಮಿತ್ರ ಬಂಧುಬಾಂಧವರಿಗೂ ಈ ಕರೆಯೋಲೆಯನ್ನು ರವಾನಿಸಿ ಅವರೆಲ್ಲರನ್ನೂ ಸಮ್ಮೇಳನದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ!

ಜೈ ಕನ್ನಡಾಂಬೆ!!!

- ಸುರೇಶ್‌ ರಾಮಚಂದ್ರ ಮತ್ತು ರವಿ ಡಂಕಣಿಕೋಟೆ (ಸಮ್ಮೇಳನ ಸಂಚಾಲಕರು)
- ಡಾ। ಕುದೂರು ಮುರಳಿ (ಅಧ್ಯಕ್ಷರು, ಅಕ್ಕ)
- ಮಾದೇಶ ಬಸವರಾಜು (ಅಧ್ಯಕ್ಷರು, ಕಾವೇರಿ)
- ಅಮರನಾಥ್‌ ಗೌಡ (ಅಧ್ಯಕ್ಷರು, ಅಕ್ಕ ವಿಶ್ವಸ್ಥ ಮಂಡಳಿ)

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X