ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡ ಹಬ್ಬಕೆ ್ಕ‘ಅಕ ್ಕ’ಪಕ ್ಕ ಸೇರಿರುವ ಅಮೆರಿಕನ ್ನಡಿಗರು

By Staff
|
Google Oneindia Kannada News

ಅಮೆರಿಕ ನೆಲದಲ್ಲಿ ಪುಟ್ಟ ಕರ್ನಾಟಕ ತೆರೆದುಕೊಳ್ಳುತ್ತಿದೆ. ಎಲ್ಲೆಡೆ ಕರ್ನಾಟಕವನ್ನು ನೆನಪಿಸುವ ದೃಶ್ಯಗಳು ಸಮ್ಮೇಳನದ ಆವರಣವನ್ನು ಅಲಂಕರಿಸಿವೆ. ಹಲವು ಕನ್ನಡಗಳ ಅಪೂರ್ವ, ಅನನ್ಯ ಸಂಗಮಕ್ಕೆ ಈ ಸಮಾವೇಶ ಅನಾವರಣಗೊಂಡಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಉಪಮುಖ್ಯಮಂತ್ರಿ ಯಡಿಯೂರಪ್ಪ, ಸಮಾವೇಶದಲ್ಲಿ ಸರಕಾರದ ಪರವಾಗಿ ಭಾಗವಹಿಸಲಿದ್ದಾರೆ. ಅಲ್ಲದೆ ಸಚಿವರಾದ ಎಂ.ಪಿ. ಪ್ರಕಾಶ್‌, ಕಟ್ಟಾ ಸುಬ್ರಹ್ಮಣ್ಯನಾಯ್ಡು, ಶಿವಾನಂದ ನಾಯ್ಕ ಹಾಗೂ ಎಚ್‌.ಕೆ. ಕುಮಾರಸ್ವಾಮಿ ಈಗಾಗಲೇ ಆಗಮಿಸಿದ್ದಾರೆ. ಐವರು ಐಎಎಸ್‌ ಅಧಿಕಾರಿಗಳು ಸಹ ಅವರೊಂದಿಗೆ ಬಂದಿದ್ದಾರೆ.

ವಾಣಿಜ್ಯ, ವ್ಯಾಪಾರ ಕ್ಷೇತ್ರ ಪ್ರತಿನಿಧಿಸುವ ಹನ್ನೆರಡು ಸದಸ್ಯರ ಸರಕಾರಿ ನಿಯೋಗ ಆಗಮಿಸಿದ್ದು, ಬಹು ನಿರೀಕ್ಷಿತ ವಾಣಿಜ್ಯ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಲ್ಲದೇ ಸರಕಾರದ ವತಿಯಿಂದ ಕನ್ನಡ -ಸಂಸ್ಕೃತಿಯ ನಾನಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಕಲಾವಿದರ ತಂಡ ಸಹ ಇಲ್ಲಿಗೆ ಆಗಮಿಸಿದೆ.

ಇಲ್ಲಿನ ಸುಸಜ್ಜಿತ ಹಾಗೂ ಹೆಸರಾಂತ ಸಮ್ಮೇಳನ ಭವನದಲ್ಲಿ ಆಯೋಜಿತವಾಗಿರುವ ಈ ಚಾರಿತ್ರಿಕ ಕನ್ನಡ ಹಬ್ಬಕ್ಕೆ ಎರಡು ಭವ್ಯ ವೇದಿಕೆಗಳನ್ನು ನಿರ್ಮಿಸಲಾಗಿದೆ. ರಾಜಕುಮಾರ್‌ ಹಾಗೂ ಕಾವೇರಿ ಸಭಾಂಗಣವೆಂದು ನಾಮಕರಣ ಮಾಡಿರುವ ಈ ತಾಣದಲ್ಲಿ ಮೂರು ದಿನಗಳ ಕಾಲ ಬಿಡುವಿಲ್ಲದೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ. ಭಾಷೆ, ಸಾಹಿತ್ಯ, ಸಂಸ್ಕೃತಿ, ಸಿನಿಮಾ, ಸಂಗೀತ, ಕಲೆ ಅಧ್ಯಾತ್ಮ, ಮಾಧ್ಯಮ, ಜನಪದ ಹಾಗೂ ಕನ್ನಡ ಸಮುದಾಯ ಪ್ರತಿಬಿಂಬಿಸುವ ವಿನೂತನ ಕಾರ್ಯ ಕ್ರಮಗಳು ಕನ್ನಡ ಪ್ರೇಮಿಗಳನ್ನು ಆಕರ್ಷಿಸಲಿವೆ.

ಕರ್ನಾಟಕದ ಪ್ರತಿಜಿಲ್ಲೆಯನ್ನು ಪ್ರತಿನಿಧಿಸುವ ಸಾಂಕೇತಿಕ ಸ್ತಬ್ಧ ಚಿತ್ರಗಳ ಮೆರವಣಿಗೆ ಈ ಸಮಾವೇಶದ ಪ್ರಮುಖ ಆಕರ್ಷಣೆಗಳಲ್ಲೊಂದು ಇದರ ಯಶಸ್ಸು ವರುಣನ ಕೃಪೆಯನ್ನು ಅವಲಂಬಿಸಿದೆ.

ಸಿನಿಮಾ ತಾರೆಯರಾದ ಉಪೇಂದ್ರ, ರಮ್ಯಾ, ತಾರಾ, ಗುರುಕಿರಣ್‌, ಬಿ. ಜಯಶ್ರೀ, ನಾಗತಿಹಳ್ಳಿ ಚಂದ್ರಶೇಖರ್‌, ಎಸ್‌.ಪಿ. ಬಾಲಸುಬ್ರಹ್ಮಣ್ಯಂ; ಅಧ್ಯಾತ್ಮ ನಾಯಕರಾದ ಶ್ರೀ ರವಿಶಂಕರ್‌, ಡಾ. ವೀರೇಂದ್ರ ಹೆಗ್ಗಡೆ, ಸಿದ್ಧೇಶ್ವರ ಸ್ವಾಮಿ, ಸಾಹಿತಿಗಳಾದ ಚೆನ್ನವೀರ ಕಣವಿ, ಡಾ. ಎಸ್‌.ಎಲ್‌. ಭೈರಪ್ಪ, ಚಂಪಾ, ವಿವೇಕ್‌ ರೈ, ಅ.ರಾ. ಮಿತ್ರ; ಪ್ರಸಿದ್ಧ ಗಾಯಕ ವಿದ್ಯಾಭೂಷಣ, ಪುತ್ತೂರು ನರಸಿಂಹ ನಾಯಕ, ಎಂ. ಪಲ್ಲವಿ, ಪ್ರವೀಣ್‌ ಗೋಡ್ಖಿಂಡಿ, ರವೀಂದ್ರ ಯಾವಗಲ್‌; ಯಕ್ಷಗಾನ ಕಲಾವಿದರಾದ ಕೆರೆಮನೆ ಶಂಭು ಹೆಗಡೆ, ನೆಬ್ಬೂರು ನಾರಾಯಣ ಭಾಗವತ, ಪ್ರಸಿದ್ಧ ಜ್ಯೋತಿಷಿ ಸೋಮಯಾಜಿ ಸಮ್ಮೇಳನದಲ್ಲಿ ಕಣ್ಸೆಳೆಯಲಿದ್ದಾರೆ.

ಅಮೆರಿಕ ಕನ್ನಡ ಸಂಘಗಳ ನೂರಾರು ಮಂದಿ ಹವ್ಯಾಸಿ ಕಲಾವಿದರು, ಗಾಯಕರು ಆಗಮಿಸಿದ್ದು, ಗ್ರೀನ್‌ರೂಮ್‌ ಚಟುವಟಿಕೆಗಳು ಮೇಳಕ್ಕೆ ಕಳೆ ಕಟ್ಟುತ್ತಿವೆ.

ನಾಲ್ಕು ಸಾವಿರ ಮಂದಿಗೆ ಕಾಲಕಾಲಕ್ಕೆ ಊಟ, ತಿಂಡಿ, ಉಪಚಾರಗಳಿಗೆ ಅಡುಗೆ ಭಟ್ರು, ಪಾಕ ಅಣಿಗೊಳಿಸಿದ್ದಾರೆ. ಕರ್ನಾಟಕದ ಎಲ್ಲ ಪ್ರಾದೇಶಿಕ ತಿಂಡಿತಿನಿಸುಗಳ ರುಚಿ ಉಣಬಡಿಸುವ ಭಕ್ಷ್ಯ-ಭೋಜನಗಳು ಸಿದ್ಧವಾಗುತ್ತಿವೆ. ಈ ಪ್ರತಿಷ್ಠಿತ ಸಮಾವೇಶದ ಯಶಸ್ಸಿಗೆ ಸಂಘಟಕರು ಹಗಲಿರುಳೂ ಶ್ರಮಿಸುತ್ತಿದ್ದು, ಕೊನೆ ಕ್ಷಣದ ಓರೆಕೋರೆಗಳಿಗೆ ಎಡೆಮಾಡಿಕೊಡದಂತೆ ಎಲ್ಲ ಎಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಮುಖ್ಯ ಸಭಾಂಗಣದ ಆಸುಪಾಸಿನಲ್ಲಿರುವ ಮೂರು ಭವ್ಯ ಹೋಟೆಲ್‌ಗಳಲ್ಲಿ ಅತಿಥಿಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

‘‘ಇದು ನಮ್ಮ ಮನೆಯ ಕಾರ್ಯಕ್ರಮ. ನಾವೆಲ್ಲರೂ ಸೇರಿ ಯಶಸ್ಸುಗೊಳಿಸಬೇಕು. ಅಂತಿಮವಾಗಿ ಗೆಲ್ಲುವುದು ಕನ್ನಡ. ಹೀಗಾಗಿ ಕನ್ನಡಕ್ಕಾಗಿ ಎಲ್ಲರೂ ಶ್ರದ್ಧೆಯಿಂದ ಶ್ರಮಿಸೋಣ’’ ಎಂದವರು ಸಮಾವೇಶದ ಸಂಚಾಲಕರಲ್ಲೊಬ್ಬರಾದ ರವಿ ಡಂಕಣಿಕೋಟೆ.

ಕಳೆದ ಎರಡು ದಿನಗಳಿಂದ ಬಾಲ್ಟಿಮೋರ್‌ ಆಗಸ ಕಪ್ಪಿಟ್ಟಿದೆ. ಆಗಾಗ ಬದಲಾಗುತ್ತಿರುವ ವಾತಾವರಣ ಸಮಾವೇಶದ ನೆತ್ತಿಯಮೇಲೆ ಆತಂಕದ ಕ್ಷಣಗಳನ್ನು ಕೇಂದ್ರೀಕರಿಸಿದೆ.

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004

ಪೂರ್ವ ಸಿದ್ಧತೆ Be a patronate! Use .in e-mail Post Your Views

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X