ಈ ಅಮ್ಮಗಳು : ನಾಗೇಶ ಮೈಸೂರು ಕವನ

By: ನಾಗೇಶ ಮೈಸೂರು, ಸಿಂಗಾಪುರ
Subscribe to Oneindia Kannada
My beloved mother
ತನ್ನ ತಪ್ಪಿಗೆ ತನ್ನನೆ ಬೈದಾಡುತೊಂದೇ ಸಮನೆ
ಹಾಳು ಮರೆವಿಗೆ ಶಾಪ ಧಮಕಿ ಹಾಕಿ ಸುಮ್ಮನೆ
ದೇವಕೋಟಿ ರಾಕ್ಷಸ ವಾಚಾಮಗೋಚರ ದಮನೆ
ಬೇರಿನ್ನಾರಿಗೆ ಸಾಧ್ಯ ಈ ಧೈರ್ಯಕೆ ನಮ್ಮಮ್ಮನೆ!

ಮುಲಾಜಿಲ್ಲದೆ ಮುಖದ ಮೇಲ್ಹೊಡೆದಂತೆ ಮಾತೆ
ಎದ್ದು ಬಂದಂತೆ ನೇರ ರಾಮಾಯಣದಿಂದ ಸೀತೆ
ಹಗಲಿರುಳು ಕಟ್ಟಿ ನೊಗ ಮೂಗೆತ್ತಿನ ಹಾಗೆ ಜಗ
ಗಂಡ ಮನೆ ಮಕ್ಕಳ ಸುತ್ತೆ ಬುಗುರಿಯಾಡಿ ಜಾಗ!

ಕತ್ತಲಡುಗೆ ಮನೆಯ ಮಂಕು ದೀಪವೆ ಅರಮನೆ
ಹಚ್ಚಿದೊಲೆ ಬೆಂಕಿ ಬೆಳಕಲ್ಲೆ ಜಗಮಗಿಸಿತೆ ಕರುಣೆ
ದಿನರಾತ್ರಿ ಹಗಲಿರುಳು ಸುಟ್ಟು ಬೇಯಿಸುತದನೆ
ಮಾಡಿದ್ದೆ ಮಾಡಿ ಬೇಸರವಿರದೆ ರುಚಿಯಾಗಮನೆ!

ಸುತ್ತಾಡಿದ ಪ್ರಪಂಚ ನೆರೆಹೊರೆಯಲಾಡಿ ಉವಾಚ
ವಠಾರ ಬೀದಿ ಹೆಂಗಳೆಯರಾ ಒಡನಾಟವೆ ಕವಚ
ಅಗ್ರಹಾರದಾ ಸುತ್ತೆ ಮಿಕ್ಕರೆ ದೇವಸ್ಥಾನಕೆ ಹೊತ್ತೆ
ಸ್ನಾನ ಪೂಜೆ ಪುನಸ್ಕಾರ ತುಳಸಿ ಕಟ್ಟೆಗಳೆ ಸಂಪತ್ತೆ!

ಮದುವೆ ಮುಂಜಿ ನಾಮಕರಣ ರೇಷ್ಮೆ ಚಿನ್ನಾಭರಣ
ಕಾಲಾಯಾಪನೆಗಷ್ಟೂ ಅವರಿವರಾ ರಾಮಾಯಣ
ಕೆಂಚಿ ಸಿದ್ದಿ ಕರಿಯಮ್ಮನ ಹರಟೇ ಲೋಕಾಭಿರಾಮ
ನೀರಿಟ್ಟೊಲೆ ಮರೆಸಿಬಿಟ್ಟ ನೆನಪ ಬೈದೊಡುವಳಮ್ಮ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
My beloved mother. Kannada poem by Nagesh Mysore from Singapore on Mother's Day. If possible send a beautiful gift to your beautiful mother.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ