ಹಸಿದ ಹೃದಯಕೆ ಏನನೆರೆದರೂ ಹಾಲು ಜೇನು!

ಮಾಡಿದಷ್ಟೂ ಮತ್ತಷ್ಟೂ ಮಾಟವನ್ನು ಬೇಡುವರು; ಪಾದ ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುವರು; ಇಂಥ ಮಾಯವ ನೋಡು
ಮೋಡಿ ಮಾಡಿದಷ್ಟೂ ಮರಳು ಮಂಡೆ, ಮೊದ್ದು ಮಂದಿಗೆ ಮತ್ತೆ ಮತ್ತೆ ಬೇಕು; ಕೊಟ್ಟಷ್ಟೂ ಇನ್ನೂ ರೋಷ್ಟು ಬೇಡುವರು
ಮಾಟದ ಮತ್ತು ಬಂದವರಿಗೆ ಕೊನೆಯುಂಟೆ? ಹಸಿದ ಹೃದಯಕೆ ಏನನೆರೆದರೂ ಹಾಲು ಜೇನು ಅಂದು ಉಂಬುವರು
ನಿನ್ನ ತುಟಿಯಿಂದ ಏನೇ ಉದುರಿದರೂ ಅದುವೇ ವೇದ ವಾಕ್ಯ; ಮಣ, ಮಣ ಮಂತ್ರದಂತೆ ತುಟಿಯಿಂದ ತೊದಲಿದರೂ
ಕಾದ ಕಿವಿಗೆ ಕೇಳುವುದೇ ಬೇರೆ: ಅಮರ ಪದ ಪೋಣಿಕೆಗಳು; ಭವಿಷ್ಯವೆಲ್ಲಾ ವಿಶದವಾಗಿ ನುಡಿದೆ ನೀನೆಂದು ನಂಬುವರೋ
ಸ್ವಾಮಿ ನೀನು, ಸಾಧು, ಸಂತ ನೀನು, ನಿನ್ನ ಹೆಸರಿಗೆ 'ಆನಂದ' ಸೇರಿಸಿಕೊ; ನಿನಗಾಗ ಎಂದೂ ಮುಗಿಯದ ಆನಂದ ಪ್ರಾಪ್ತಿ
ನಿನ್ನ ಕಾಲಿನೆಡೆಗೆ ಚೆಲ್ಲುವರು ಹೇರಳ ನಗ, ನಾಣ್ಯ, ಧನ, ಕನಕ, ಹೂವು, ಹಣ್ಣು; ಎಲ್ಲಕ್ಕಿಂತಾ ಅತಿ ಸ್ವಾದ ಪಂಚಾಮೃತದ ತೃಪ್ತಿ












Click it and Unblock the Notifications