ಇದ್ದು ಇಲ್ಲದಂತೆ ಅವಿತಿರುವೆ ನಿರೀಕ್ಷೆಗಳಲಿ

ಕದವ ತಟ್ಟಿ
ಸುಮ್ಮನಿರದೆ ಆಗಾಗ್ಗೆ
ಬಂದು ಮೆಟ್ಟಿ
ಸುಳ್ಳು ಆಶ್ವಾಸನೆಗಳ
ನೀಡಿ
ಅಂತರಾಳವ ಹೆಪ್ಪುಗಟ್ಟಿವಂತೆ
ಮಾಡಿ
ಇಲ್ಲಸಲ್ಲದ ನೆಪಗಳ
ಹೂಡಿ
ಮನದ ಭಾವನೆಗಳೊಂದಿಗೆ
ಆಟವಾಡಿ
ಶೂನ್ಯದಲ್ಲಿದ್ದಾಗ
ಆಸರೆಯಾಗಿ,
ಇದ್ದು ಇಲ್ಲದಂತೆ
ಮಾಯವಾಗಿ
ನೀನವಿತು ಕೊಂಡಿರುವೆ
ನನ್ನಲ್ಲಿನ ನಿರೀಕ್ಷೆಗಳಲ್ಲಿ
ಹೊಂದಬೇಕೆನ್ನುವ ಅಚಲ
ಪರೀಕ್ಷೆಗಳಡಿಯಲ್ಲಿ












Click it and Unblock the Notifications