ಮೈಸೂರು ವಿಜಯ್ ಪ್ರಕಾಶ್ ಜೈಹೋ

Mysuru Vijay Prakash
ಆಸ್ಕರ್ ನಲ್ಲಿ ವಿಜಯ ಪತಾಕೆ ಹಾರಿದ ಸ್ಲಂಡಾಗ್ ಮಿಲಿಯನೇರ್ ಚಿತ್ರದ ಜೈಹೋ ಹಾಡಿನಲ್ಲಿ ದನಿಗೂಡಿಸಿರುವ ವಿಜಯ್ ಪ್ರಕಾಶ್ ಅಪ್ಪಟ ಕನ್ನಡಿಗ, ಮೈಸೂರಿನ ಹುಡುಗ. ಆದರೆ ಅದೇಕೋ, ಕನ್ನಡಕ್ಕಿಂತ ಹಿಂದಿ ಮತ್ತಿತರ ಬಾಷೆಯ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕರಾಗಿ ಖ್ಯಾತರಾಗಿದ್ದಾರೆ. ಸುವರ್ಣ ಕನ್ನಡ ಚಾನಲ್ಲಿನಲ್ಲಿ ತೀರ್ಪುಗಾರರಾಗಿ ಈಗ ಕನ್ನಡಿಗರಿಗೂ ಮನೆಮಾತಾಗಿದ್ದಾರೆ. ಗಾಳಿಪಟ ಚಿತ್ರದಲ್ಲಿ 'ಕವಿತೆ ನೀನೇಕೆ ಪದಗಳಲಿ ಅವಿತೆ..' ಹಾಡಿಗೆ ಹಿನ್ನೆಲೆ ಗಾಯಕರಾಗಿ ಮಾಧುರ್ಯದ ಸವಿ ಹರಿಸಿದ್ದಾರೆ. ಕನ್ನಡದಲ್ಲಿ ಅವರ ಕಂಠದ ಸಿರಿಸಂಪತ್ತು ಮತ್ತಷ್ಟು ದಕ್ಕಲಿ ಎಂಬ ಆಶಯದೊಂದಿಗೆ ಅವರನ್ನು ಕುರಿತ ಈ ಕವನ ನಿಮಗಾಗಿ.

* ಡಾ. ನಾಗಭೂಷಣ್ ಮೂಲ್ಕಿ, ಇಲಿನಾಯ್

ಜೈಹೋ... ಜಯ ಹೋ...
ಜಯ ಜಯ ... ಜೈಹೋ..

ಜನಮನ ತಣಿಸುವ
ಸುಖ ರಸ ಉಣಿಸುವ
ಗಾಯಕ ಶ್ರೇಷ್ಠನು ನೀನೆ
ಅಮಾಯಕ ಜೇಷ್ಠನು ನೀನೆ ||ಜೈಹೋ||

ಜನ ಮನ ಮೋಹನ
ಮುರಳಿಯ ಆ ಗಾನ
ಸುಳಿ ಸುರುಳಿಯಾಗಿ
ಮರುಕಳಿಸುವಂತಿದೆ ||ಜೈಹೋ||

ಜಯ ಜಯಕಾರ
ವಿಜಯ ಸತ್ಕಾರ
ಬಾಳ ಸಾಕ್ಷಾತ್ಕಾರ
ಪಾರಿತೋಷಕದ ಹಾರ ||ಜೈಹೋ||

ಶುಭ ಕಾಮನೆ ನಿನಗೆ
ಶೋಭಿಸುತಿರುವವಗೆ
ಯುಗ ಯುಗಗಳವರೆಗೆ
ಮೆರೆಯುವುದು ನೀನೆ ||ಜೈಹೋ||

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+