ಚೇತನಾ ಅವರ ಕವನ :ನೆನಪು..

ಅಂದು ಮಧ್ಯಾಹ್ನ ಮಳೆಗೇಕೋ ಅರಿವಿಲ್ಲ
ನೆನೆದವರ ಪರವಿಲ್ಲ
ಯಾರೋ ಗುನುಗುತ್ತಿದ್ದ ಪ್ರೇಮಿ
ನನಗೇಕೋ ಚಿತ್ತಚಂಚಲ
ಕಣ್ಣೆಲ್ಲ ಮಂಜು,ಮಳೆಹನಿ
ರೆಪ್ಪೆಯೊಳಗೆ ಹೊರಟು ನಿಂತ ನೀನು..
ಮತ್ತೆ ಭಾವನೆ..
ಅದಕ್ಕಿಂತ ಭಾರ
ನಿಂತೆ ! ಕುಸಿದಂತೆ ಭೂಮಿ !
ಮತ್ತದೇ ತವಕ,ಹೋಗಲಾರೆನೋ ಎಂದು
ಸಾವರಿಸಿ ಓಡಿದ್ದ ನನಗೆ
ಕಾಣಿಸಿದ್ದು ಮಾತ್ರ ಕಿರುಬೆರಳ ಉಂಗುರ
ಮುಸುಕಿದ್ದು ಧೂಳು,ಚಲಿಸಿದ್ದು ರೈಲು
ಅಲ್ಲೆಲ್ಲ ನೀರವತೆ, ನಿಶ್ಯಬ್ದ !
ಮರೆಯಾದರೂ ನಿನ್ನದೇ ನೆನಪು
ಮತ್ತೆಲ್ಲ ಸ್ತಬ್ಧ!












Click it and Unblock the Notifications