ಮುಸ್ಸಂಜೆ

ಜಿಡ್ಡು ತುಂಬಿದ ದಿಂಬಿಗೆ ಬೋರಲು ಮುಖದ ಕಂಬನಿ
ಎದೆಯಲ್ಲಿ ಇರದ ಛಾತಿ, ಕನಸು ತುಂಬಿದ ಮನಸು
ಸ್ಫೂರ್ತಿಯಿದ್ದಳು ಅಲ್ಲಿ ಬೆಳ್ಳಂಬೆಳಕಿನ ರಾಣಿ
ಲೂನಾ ಹುಡುಗಿಯ ಎಸಳ ಕತ್ತಲ್ಲಿ ಹಾರಾಡುವ ನವಿರು
ಹರಿದಾಡಿದ ಕೈಗಳಿಗೆ ಮೆತ್ತಿಕೊಳ್ಳುವ ಮತ್ತಿನ ಮದ
ಬಳಲಿಸಿದ ಬದುಕ ಕತ್ತು ಹಿಡಿವ ದ್ವೇಷದ ಹರಳು
ನೆಲ ಕುಟ್ಟಿದ ಧೂಳಿಗೆ ಸಾಕ್ಷಿ - ಮೌನವಾದ ಸ್ಫೂರ್ತಿ
ಗೂಡಿಗೆ ಹಿಂದಿರುಗಿ ಹಾರಿ ಹೋಗುವ ಹಕ್ಕಿಗಳ ಕಲ್ಲೋಲ
ತುಂಬಿಕೊಂಡಿರುವ ಓಕುಳಿಯ ರಂಗಿಗೆ ಗೋಧೂಳಿಯ ಮುಸುಕು
ಉಳಿದ ಎಣಿಕೆಯ ಬೆಳ್ಳಿ ಕೂದಲಿಗೆ ಕತೆಯಾಗುವ ಕೊರಗು
ಅಕಾಶಕೆ ತಿರುಗಿದ ಸುಕ್ಕಿನ ನೋಟಕೆ ಸಾಂತ್ವನದ ಭ್ರಮೆ
ಮರದ ಗೊಂಚಲೆಡೆಯಿಂದ ತೂರಿ ಬಿಟ್ಟ ರಕ್ತ ಕಾಂತಿ
ಸಾಯುವ ಬೆಳಕ ಎದೆಯ ಸೀಳುವ ನೀರ ಜುಳು ಜುಳು
ಜೀವ ಭಯಕೆ ಹಾರುವ ಕಪ್ಪೆ, ಹಿಡಿವ ಹಾವು
ಮೈಮೇಲೆ ಅಸಹ್ಯ ಹುಟ್ಟಿಸುವ ಹಳದಿ ಹಸಿರು ಗೀರುಗಳು











Click it and Unblock the Notifications