ಫಾಲ್ ಫಾಲ್ ಕಲರ್ ಫಾಲ್!

* ಎ.ಎಸ್.ಎನ್.ಹೆಬ್ಬಾರ್, ಬ್ರಿಡ್ಜ್ ವಾಟರ್, ನ್ಯೂಜೆರ್ಸಿ
ಯಾರು ಎರಚಿದರು ಇಷ್ಟು
ಅರಸಿನವ, ಕುಂಕುಮವ
ಅಮೆರಿಕದ ಮರಗಳ ಮೇಲೆ?
ಹಸಿರುಡುಗೆ ಉಟ್ಟ ಈ ಇಳೆಯ ಮೇಲೆ?
ಹರಿದ್ರಾಕುಂಕುಮ ಶೋಭಿತೆ
ಈ ಅಮೇರಿಕಾದ ವನಿತೆ
ಈಗ ರಾಗರಂಜಿತೆ.
ಚಿಗುರೆಲೆಯ ತಾಂಬೂಲ ತಿಂದ
ತುಟಿಗಳ ಕೆಂಪು ಬಣ್ಣ
ಎಲೆಗಳ ಅಂಚಿನಲ್ಲೆಲ್ಲ
ತಾಮ್ರವರ್ಣ!
ಲಜ್ಜೆ ಬಂದಂತಾಗಿ
ಕೆಂಪಾಗಿಹುದು ಗಲ್ಲ-
ಫಾಲ್ ಕಲರುಗಳಲ್ಲೀಗ
ಇಲ್ಲಿ ರಂಗುರಂಗಿನ ರಸಗುಲ್ಲ!












Click it and Unblock the Notifications