ಮಳೆರಾಯ: ಸುಗುಣ ಮಹೇಶ್ ಅವರ ಕವನ
*ಸುಗುಣ, ಕುವೈಟ್
ನನ್ನೂರಲ್ಲಿ ಭೂರ್ಗೆರೆವ ಮಳೆಯ ಕೇಳಿ ನಾ ಪುಳಕ
ಮಿಂಚು ಗುಡುಗಿನಾರ್ಭಟಕ್ಕೆ ನಮ್ಮಜನರೆಲ್ಲ ನಡುಕ
ಮಳೆರಾಯನಾರ್ಭಟಕ್ಕೆ ಬಲಿಪಶುವಾಗುವನು ತಿರುಕ
ತಿರುಕನ ಪರಿಸ್ಥಿತಿಗೆ ದಯೆ ತೋರನು ಧನಿಕ
ಆತ ತಿಳಿಯ ಧನಿಕತನ ಬಲು ಕ್ಷಣಿಕ
ಮಳೆರಾನೊಮ್ಮೆ ಮುನಿದರೆ ಎಲ್ಲವೂ ಕಂದಕ
ನಮ್ಮೊರಲ್ಲಿ ಇಂತಹ ಜೀವನ ದೈನಂದಿಕ
ಅಲ್ಲಿಯವರಿಗೆಲ್ಲ ಅದೆಲ್ಲ ದೈನಿಕ ನನಗೊ ಮಳೆಯೆಂದರೆ ಪುಳಕ
ಮಳೆ ನೀರಲ್ಲಿ ತೋಯ್ದು ಆಡುವ ತವಕ
ನಾನಿರುವಲ್ಲಿ ಕಾಣೆ ಮಳೆರಾಯನೆಂಬ ರಕ್ಷಕ
ಅವನಿಲ್ಲದೆ ಮರುಭೂಮಿಯಾಗಿದೆ ಬಿರುಗಾಳಿಯ ಭಕ್ಷಕ
ಭಕ್ಷಕನ ಕಂಡು ನನಗೇನೋ ಈ ಭೂ ಮಾತೆಯ ಮೇಲೆ ಮರುಕ
ದೇವರು
ಹಿಂದೂಗಳು ಕಂಡರು ನೂರಾರು ದೇವರ
ಯಾರು ಆ ದೇವನನ್ನು ಕಂಡರು ಬಲ್ಲಿರ!!!
ಎಲ್ಲರೂ ಹೇಳುವುದೂಂದೇ ಅವನು ಅಗೋಚರ
ಕೆಲವರೇಳುವರು ಅವನು ಭಕ್ತನ ಪರ
ಭಕ್ತನ ಕೆಳಿದರೆ ತೋರಿಸುವನು ದೇವಾಲಯದ ದ್ವಾರ
ಅಲ್ಲಿರುವುದು ದೇವರಲ್ಲ, ಅದವನ ಆಕಾರ!!!
ಆ ದೇವರಾಕ್ರುತಿಗೆ ನೂರೆಂಟು ಹಾರ
ಅಷ್ಟೂಂದು ಹಾರ ದೇವರಿಗಾಗದೆ ಭಾರ?
ಅವೆಲ್ಲದರ ಪರಿವಿಲ್ಲದೆ ಆಗಿದ್ದಾನೆ ಮರ
ಅವನನ್ನು ಬೇಡುವುದೂಂದೇ ವರ
ನೀಗಿಸೆಮ್ಮ ಭರತ ಭೂಮಿಯ ಬರ
ಬರ ನೀಗಿಸಿ ಕೊಡು ಬಡವರಿಗೆ ಆಹಾರ