ಮುಸಲಧಾರೆ ಒಳಗೂ ಹೊರಗೂ..
- ಶ್ರುತಿ ಕೀರ್ತಿ, ನ್ಯೂಜೆರ್ಸಿ
ಮುಸಲಧಾರೆಗೆ ಮುಸಿಮುಸಿ ನಗು ಒಳಗೂ ಹೊರಗೂ..
ಮುಂಗಾರ ಮಳೆಯಂತೆ ನಿನ್ನ ನೆನಪು ಇನಿಯ
ಬಿಡದೆ ಸುರಿಯುತಿದೆ, ತಡೆಯಿರದೆ
ಭೂರಮೆಗೆ ಮುದ ಮುಂಗಾರ ಮಳೆಯಿಂದ
ನನ್ನ ಮನಸಿಗೆ ಮುದ ನಿನ್ನ ನೆನಪಿಂದ.
ಮುತ್ತಿನಹಾರ ಮರಗಿಡಗಳಲ್ಲಿ
ಪಿಸುಮಾತಿನ ಕಚಗುಳಿ ನನ್ನಲ್ಲಿ.
ಅರಳಿದವು ಹೂಬಳ್ಳಿಗಳು ಮಳೆಯ ಸ್ಪರ್ಶದಿಂದ
ಅರಳಿಸಿದೆ ನೀ ನನ್ನ ಪ್ರೇಮಸ್ಪರ್ಶದಿಂದ.
ಏನೆಂದು ಅರಿವ ಮೊದಲೆ ಮೋಡಿ ಮಾಡಿದೆ.
ನಾ ನಿನ್ನ ಗಾಳಕ್ಕೆ ಸಿಕ್ಕ ಮೀನಾದೆ.
ಆ ಮೊದಲ ನೋಟ ಮಿಂಚಿನಂತೆ.
ನಾ ಕರಗಿದೆ ಕತ್ತಲಂತೆ.
ನರ್ತಿಸುತಿದೆ ನವಿಲು ಗರಿಗೆದರಿ.
ನನ್ನೆದೆ ಆಗಿದೆ ನಗಾರಿ.
ರಂಗುರಂಗಿನ ಕಾಮನಬಿಲ್ಲು ಬಾನಲ್ಲಿ.
ಕೆನ್ನೆಯಲಿ ಕೆಂಪು ಚುಂಬನದ ನೆನಪಲ್ಲಿ.
ಹನಿಹನಿಯು ತೋಯಿಸುತ್ತಿದೆ ಈ ಇಳೆಯನ್ನು
ಬಯಸುತಿರುವೆ ನಾ ನಿನ್ನ ಸನಿಹವನ್ನು.
ಭೋರ್ಗರೆಯುತಿದೆ ಆಕಾಶ ಹಗಲಿರುಳು.
ಚಿತ್ತಭಿತ್ತಿಯಲಿ ಸವಿನೆನಪು ಮನ ಮರಳು












Click it and Unblock the Notifications