ಕಾಲಾತೀತ
ಸಂದಿದೆ ವರುಷ ಇಂದಿಗೆ ಒಲವೆ,
ಬಂಧನ ಕಳಚಿದ ಮೇಲೆ;
ಮುಂದಿದೆ ಬದುಕು ಹಿಂದಿನ ಬೆದಕು,
ಹೊಂದಿಸುತಿರುವುದು ಲೀಲೆ.
ನಡೆಯುವ ಬೀದಿ ಕೆಡೆದಿದೆ ಮುಂದೆ,
ಪಡೆದೆವು ಪಣ ಪಾಥೇಯ;
ಒಡೆಯದ ಒಗಟು ಕಡೆದಿಹ ಶಿಲ್ಪಿ,
ತಡೆಯುತ ನಿಂತಿದೆ ಹೃದಯ.
ಎಲ್ಲೋ ಒಳಗೆ ಸೊಲ್ಲು ಕೇಳಿದೆ,
ನಿಲ್ಲದು ನಮ್ಮೀ ಪಯಣ;
ಗುಲ್ಲು ಇರದೆಡೆ ಹುಲ್ಲುಹಾಸಿದೆ,
ಅಲ್ಲಿರಲೀ ನಿನಗೆ ಋಣ.












Click it and Unblock the Notifications