ಎಂಥ ಸುಂದರ ಘಳಿಗೆ
ನವ ಜೀವ ಸೃಷ್ಟಿಗೆ
ಸೃಷ್ಟಿಕರ್ತನೆಂದೋ ಬೆಸೆದ
ರವಿ-ಭುವಿಯ ಬೆಸುಗೆ
ಕಣ್ತೆರೆದು ನೋಡು ಗೆಳೆಯ
ತಾಪ ಹೆಚ್ಚಿದ ಇಳೆಯ
ಬಿರುಕು ಬಿಡುತಿದೆ ಇಂದು
‘ಓರೆkೂೕನ್’ನ ವಲಯ
ಏಳು ಎದ್ದೇಳು ಓ ಮನುವೇ
ಅಜ್ಞಾನದ ಅರಿವಿಂದ, ವಿಜ್ಞಾನದ ಮದದಿಂದ
ಹೊತ್ತು ಹೊತ್ತಿಗೂ ಚಿತ್ತ
ಭೀಕರ ಪ್ರಳಯದ ಕುತ್ತ
ಕಂಡೂ ಕಾಣದ, ಕೇಳಿ ಕೇಳದ
ಭವಿಷ್ಯದಾಳದ ಸುತ್ತ
ಅಧ್ಯಾತ್ಮದ ಅಡಿಯಾಳಗೆ
ವಿಜ್ಞಾನದ ಹಿಡಿಯಾಳಗೆ
ಪಾಪದ ‘ನುಡಿ’ಗೋ,ಪುಣ್ಯದ‘ಮಡಿ’ಗೋ
ಸಿಲುಕಿ ನಲುಗುವ ಮುನ್ನ
ಏಳು ಎದ್ದೇಳು, ಓ ಮನುವೇ
ಅಜ್ಞಾನದ ಅರಿವಿಂದ, ವಿಜ್ಞಾನದ ಮದದಿಂದ
ಹಸಿರೇ ಸೃಷ್ಟಿಯ ಉಸಿರು
ಕ್ರಾಂತಿ ಕಹಳೆಯನೂದು
ದೈವ ಶಕ್ತಿಯ ನೆನೆದು
ಸೃಷ್ಟಿಕರ್ತನ ಬಲದಿ