ಸಿಂಧು - ಬಿಂದು : ನಮ್ಮ ಮನೆಯ ಬೆಕ್ಕುಗಳು
| ಸಿಂಧು - ಬಿಂದು : ನಮ್ಮ ಮನೆಯ ಬೆಕ್ಕುಗಳು | |
| (ನಮ್ಮ ಮನೆಯಲ್ಲಿ ಎರಡು ಬೆಕ್ಕುಗಳನ್ನು ಸಾಕಿದ್ದೇವೆ. ಅವೆರಡೂ ಮುದ್ದಾದ ಬೆಕ್ಕುಗಳು. ಸಿಂಧು ಮತ್ತು ಬಿಂದು ಎಂದು ಅವುಗಳ ಹೆಸರು. ಈ ಬೆಕ್ಕುಗಳೆಂದರೆ ನಮಗೆ, ನಮ್ಮ ಮನೆಯಲ್ಲಿ ಎಲ್ಲರಿಗೂ ತುಂಬ ಪ್ರೀತಿ. ಬೆಕ್ಕುಗಳು ನಮ್ಮಿಂದ ಪ್ರೀತಿ ಮಾಡಿಸಿಕೊಳ್ಳುತ್ತವೆ. ಹಾಲು ಹಾಕದಿದ್ದರೆ ಮಿಯಾಂವ್ ಮಿಯಾಂವ್ ಎಂದು ಕೂಗುತ್ತಲೇ ಇರುತ್ತವೆ. ಹಾಗೊಮ್ಮೆ ಅವು ಕೂಗಿದರೆ ನಾವೇನಾದರೂ ಅವಕ್ಕೆ ಕಾಟ ಕೊಟ್ಟೆವೇನೊ ಅಂತ ಅಮ್ಮನಿಗೆ ಕಾಳಜಿ. ಯಾಕೆಂದರೆ ಬೆಕ್ಕುಗಳೆಂದರೆ ಅವಳಿಗೂ ತುಂಬ ಇಷ್ಟ. ಈ ಬೆಕ್ಕುಗಳ ಮೇಲೆ ನಾವು ಒಂದು ಪದ್ಯ ರಚಿಸಿದ್ದೇವೆ. ಇದು ನಮ್ಮಮ್ಮ ಶಾಲೆಯಲ್ಲಿ ಕಲಿತ ಪದ್ಯದಂತೆಯೇ ಇದೆ. ಈ ಪದ್ಯ ರಚಿಸಲು ಅಮ್ಮನೂ ನಮಗೆ ನೆರವಾಗಿದ್ದಾಳೆ. ಈ ಪದ್ಯವನ್ನು ನಾವು ಕಾವೇರಿ ಕನ್ನಡ ಸಂಘದ ಫಂಕ್ಷನ್‌ನಲ್ಲಿ ಹಾಡಿದ್ದೆವು. ಮತ್ತೆ ಅದು ಸಂಘದ ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ಈಗ ನೀವೂ ಓದಿ.) | |
![]() ![]() |
ಎತ್ತಿಕೊಳದೆ ಹೋದರವಕೆ ಕೋಪ ಬರುವುದು ಕೋಪ ಬರಲು ಗಟ್ಟಿಯಾಗಿ ಮಿಯಾಂವ್‌ಗುಡುವವು ಮಿಯಾಂವ್‌ಗೊಂಡು ನಮ್ಮ ಮೈಯ ಪರಚಿಬಿಡುವವು ನಮ್ಮ ಪರಚಿಕೊಂಡು ಬೆಕ್ಕು ಓಡಿ ಹೋಗುವುವು ಓಡಿ ಹೋಗಿ ಸೋಫಾ ಹಿಂದೆ ಅಡಗಿಕೊಳುವವು ಬೆಕ್ಕು ಮಿಯಾಂವ್‌ಗುಡಲು ಅಮ್ಮ ಎದ್ದು ಬರುವಳು ಬಂದು ನಮ್ಮ ಬೆನ್ನಿಗೊಂದು ಗುದ್ದು ಕೊಡುವಳು ಬೆಕ್ಕುಗಳನು ಎತ್ತಿಕೊಂಡು ಮುದ್ದು ಕೊಡುವಳು ಅಯ್ಯೋಪಾಪ ಎಂದು ಅವಕೆ ಹಾಲು ಇಡುವಳು ಕಳ್ಳ ಬೆಕ್ಕು ಆಡಿದ ನಾಟಕ ಸಾರ್ಥಕವಾಯಿತು ಮಿಯಾಂವ್ ಮಿಯಾಂವ್ಗುಡುವುದೆಲ್ಲ ಅರ್ಥವಾಯಿತು! |














Click it and Unblock the Notifications