ರೂಪಳಿಗೋಸ್ಕರ ಪವನ್‌ನಿಂದ ದೀಪಕ್‌ನ ಕೊಲೆ


ಫೋನು ಶಬ್ದ ಮಾಡಿತು.

‘‘ಸಿದ್ಧವಾಗಿದ್ದೀಯ, ಅನು? ನಾವು ಲಾಬ್ಬಿಯಲ್ಲಿ ಭೇಟಿಯಾಗೋಣವೆ?’’

ಅನು ಬಾಗಿಲಿಗೆ ಬೀಗ ಹಾಕಿಕೊಂಡು ಲಾಬ್ಬಿಯತ್ತ ನಡೆದಳು.

‘‘ಸರ್‌, ಮ್ಯಾಮ್‌, ಟಾಕ್ಸಿ ಸಿದ್ಧವಾಗಿದೆ,’’ ದ್ವಾರಪಾಲಕ ಬಾಗಿಲನ್ನು ತೆರೆಯುತ್ತ ಹೇಳಿದ.

ಅನು ಪವನ್‌ನತ್ತ ನೋಡಿದಳು. ‘‘ನಾವು ಟ್ಯಾಕ್ಸಿಯಲ್ಲಿ ಹೋಗುವುದು ಬೇಡ. ನನಗೆ ಸೈಕಲ್‌ ರಿಕ್ಷಾದಲ್ಲಿ ಹೋಗಬೇಕು.’’

ಪವನ್‌ ಮುಗುಳ್ನಕ್ಕ. ‘‘ಆಗಲಿ.’’

ನಗರದ ಪುರಾತನ ರಹಸ್ಯಗಳನ್ನು ಅನಾವರಣ ಮಾಡುತ್ತ ಅವರ ಸೈಕಲ್‌ ರಿಕ್ಷಾ ನಿಧಾನವಾಗಿ ಚಲಿಸುತ್ತಿತ್ತು. ದಿನಕ್ಕೆ ಸುಮಾರು 5 ಲಕ್ಷ ಜನ ತೀರ್ಥಯಾತ್ರಿಕರು ಕಾಶಿಗೆ ಬಂದು ಹೋಗುತ್ತಿರಬಹುದು ಎಂದುಕೊಂಡಳು.

ಬಿದಿರಿನ ಚಟ್ಟದ ಮೇಲಿದ್ದ ಶವವನ್ನು ನದಿತೀರದಲ್ಲಿ ಸುಡಲು ನಾಲ್ಕು ಜನ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದದ್ದನ್ನು, ದಾರಿಯಲ್ಲಿ ಹೆಜ್ಜೆಗೊಂದೊಂದು ಇದ್ದ ಸಿಹಿಮಿಠಾಯಿ ಅಂಗಡಿಗಳನ್ನು ಅನು ಗಮನಿಸಿದಳು. ಅವಳು ಎತ್ತ ನೋಡಿದರೂ ರಸ್ತೆಗಳು ಜನರಿಂದ ತುಂಬಿ ತುಳುಕುತ್ತಿದ್ದವು.

ನದಿತಟದ ಕಡಿದಾದ ಮೆಟ್ಟಿಲುಗಳನ್ನು ಇಳಿದು ಪ್ರಶಾಂತವಾಗಿ ಹರಿಯುತ್ತಿದ್ದ ನದಿಯನ್ನು ನೋಡುತ್ತ ಮೆಟ್ಟಿಲ ಮೇಲೆ ಕುಳಿತರು. ಆಗ ತಾನೆ ಸೂರ್ಯಾಸ್ತವಾಗಲು ಆರಂಭವಾಗಿತ್ತು. ಉಷ್ಣಾಂಶ 40 ಡಿಗ್ರಿ ಸೆಂಟಿಗ್ರೇಡ್‌ನಿಂದ ಕೆಳಗೆ ಇಳಿಯುತ್ತ ಸ್ವಲ್ಪ ತಣ್ಣನೆಯ ಗಾಳಿ ಬೀಸಲಾರಂಭಿಸಿತ್ತು.

‘‘ಪವನ್‌, ನೀನು ಹೇಗಿದ್ದೀಯ, ಹೇಳು?’’

‘‘ನಾನು ನನ್ನ ತಾಯಿಯನ್ನು ನಿಜವಾಗಲೂ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ.’’

‘‘ನನಗೆ ಗೊತ್ತು. ಅದು ಬಹಳ ದುಃಖದ ವಿಷಯ! ನೀನು ನಿಮ್ಮ ತಂದೆಯನ್ನು ಹೋಗಿ ನೋಡುತ್ತೀದ್ದೀಯ? ಅವರು ಇಲ್ಲಿ ಬನಾರಸ್‌ನಲ್ಲಿಯೆ ಇದ್ದಾರಾ?’’

‘‘ಇಲ್ಲ, ಅವನನ್ನು ನೋಡಲು ನಾನು ಯಾವತ್ತೂ ಹೋಗುವುದಿಲ್ಲ. ನನ್ನಲ್ಲಿ ಅವನ ಬಗ್ಗೆ ಯಾವುದೆ ಒಳ್ಳೆಯ ನೆನಪುಗಳು ಇಲ್ಲ. ಈಗಲೂ ಇಲ್ಲಿ ಐಐಟಿಯಲ್ಲಿಯೆ ಪಾಠ ಮಾಡುತ್ತಿದ್ದಾನೆ. ಶಿಷ್ಯರು ಈಗಲೂ ಆರಾಧಿಸುತ್ತಾರೆ. ಈಗಲೂ ಬಹಳ ಜನಪ್ರಿಯ.’’

ಗಂಗೆಯಲ್ಲಿ ತೇಲಿಬಿಡಲು ತಂದಿದ್ದ ಮಣ್ಣಿನ ಹಣತೆ ಹಾಗು ಚೆಂಡುಹೂವಿನ ಹಾರಗಳೊಂದಿಗೆ ನದಿಯ ದಡದಲ್ಲಿ ಜನ ಪೂಜೆ ಮಾಡುತ್ತಿದ್ದರು. ಶವಗಳು ಉರಿಯುತ್ತಿದ್ದವು. ಅವುಗಳ ಚಿತೆಯಿಂದ ಎದ್ದ ಬೆಂಕಿ ಆಕಾಶಕ್ಕೆ ತಮ್ಮ ಕೆನ್ನಾಲಗೆಯನ್ನು ಚಾಚುತ್ತಿದ್ದವು. ತಮ್ಮ ಸರದಿಗಾಗಿ ಇನ್ನೂ ಹತ್ತಾರು ಶವಗಳು ಸಾಲುಗಟ್ಟಿ ಕಾಯುತ್ತಿದ್ದವು.

‘‘ಪವನ್‌, ದೀಪಕ್‌ ಸತ್ತ ಆ ರಾತ್ರಿ ಏನು ನಡೆಯಿತು? ನೀನು ಯಾಕೆ ಅವನ ಜೊತೆ ಇದ್ದೆ? ಎಲ್ಲಕ್ಕಿಂತ ಮುಖ್ಯವಾಗಿ ಅವನು ನಿನಗೆ ಹೇಗೆ ಪರಿಚಯವಾದ?’’

ಪವನ್‌ ಚಿಕ್ಕಂದಿನಲ್ಲಿ ಮಾಡುತ್ತಿದ್ದಂತೆ ಏನೊಂದನ್ನೂ ಮಾತನಾಡದೆ ಬಹಳ ಹೊತ್ತು ಮೌನವಾಗಿದ್ದ.

‘‘ಅವತ್ತು ನಿನ್ನ ಮನೆಯಲ್ಲಿ ಡ್ಯಾನ್‌ನ ಜೊತೆ ನಿನ್ನನ್ನು ನೋಡಿದ ಬಳಿಕ ನನಗೆ ಬಹಳ ಅಸಮಾಧಾನವಾಯಿತು, ಅನು. ಆತ ಬಹಳ ಸ್ನೇಹಮಯಿಯಾಗಿ, ಹರ್ಷ ಸ್ವಭಾವದ, ಚುರುಕಾದ ವ್ಯಕ್ತಿಯಂತೆ ಕಾಣಿಸಿದ. ನಾನು ದೀಪಕ್‌ನನ್ನು ಮೊದಲ ಸಲ ನಿನ್ನ ಮದುವೆಯಲ್ಲಿ ನೊಡಿದಾಗಲೂ ಹಾಗೆಯೆ ಅನ್ನಿಸಿತ್ತು. ಅವನು ಎಷ್ಟೊಂದು ಆಕರ್ಷಕವಾಗಿ, ಯಶಸ್ವಿಯಂತೆ ಕಾಣಿಸಿದ್ದ; ನನಗೂ ಅವನ ತರಹವೆ ಆಗಬೇಕು ಅನಿಸಿತ್ತು. ನಾನು ಡ್ಯಾನ್‌ನನ್ನು ಭೇಟಿ ಮಾಡಿ ನಿನ್ನ ಮನೆಯಿಂದ ಹೊರಟ ಮೇಲೆ ನನ್ನ ಮನಸ್ಸನ್ನು ಇವರೆ ಆಕ್ರಮಿಸಿಕೊಂಡುಬಿಟ್ಟರು. ನಾನು ಅವರ ಹಾಗೆ...ಅವರ ಹಾಗೆಯೇ ಆಗಬೇಕು ಎನ್ನಿಸಿತು. ಹೆಂಗಸರು ಅಂತಹ ಗಂಡಸರ ಕಡೆಗೆ ಆಕರ್ಷಿತರಾಗುತ್ತಾರೆ, ನನ್ನಂತಹ ಸರಳ ವ್ಯಕ್ತಿಗಳ ಕಡೆಗೆ ಅಲ್ಲ. ಅವರು ಬಹಳ ಅಪಾಯಕಾರಿ. ಹಾಗು ರಿಸ್ಕ್‌ ತೆಗೆದುಕೊಳ್ಳುವವರು ಸಹ. ಆದರೆ ಅವರು ಜನರನ್ನು ತಮ್ಮಡೆಗೆ ಆಕರ್ಷಿಸುವ ಬಲವುಳ್ಳವರು. ಜನ ಅವರ ಸುತ್ತಲೆ ಗುಂಪುಗೂಡುತ್ತಾರೆ. ಜನ ಕಲೆತಾಗ ಅಂತಹವರೆ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+