ಲಂಡನ್ ನಲ್ಲಿ ಬಸವೇಶ್ವರ ಜಯಂತಿ, ಹೈ ಕಮಿಷನರ್ ರಿಂದ ಗೌರವ

Posted By:
Subscribe to Oneindia Kannada

ಲಂಡನ್, ಮೇ 2: ಬಸವೇಶ್ವರರ 883ನೇ ಜಯಂತಿಯನ್ನು ಈಚೆಗೆ ಲಂಡನ್ ನಲ್ಲಿ ಆಚರಿಸಲಾಯಿತು. ಭಾರತದ ಹೈ ಕಮಿಷನರ್ ವೈಕೆ ಸಿನ್ಹಾ ಅವರು ಲಂಡನ್ ನಲ್ಲಿರುವ ಬಸವೇಶ್ವರ ಪುತ್ಥಳಿಗೆ ಗೌರವ ಅರ್ಪಿಸಿದರು. ಅಲ್ಲಿ ಸೇರಿದ್ದ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.

ಬಸವೇಶ್ವರರ ಮೌಲ್ಯಗಳು ಹಾಗೂ ಬೋಧನೆಗಳನ್ನು ನಾವು ಸಂಭ್ರಮಿಸಬೇಕು. ಏಕೆಂದರೆ ಈ ಆಧುನಿಕ ಜಗತ್ತಿನಲ್ಲಿ ಯಾವುದೇ ಭೇದ-ಭಾವಕ್ಕೂ ಅವಕಾಶ ಇಲ್ಲ ಎಂದರು. ಇದೇ ವೇಳೆ ಬುದ್ಧ ಹಾಗೂ ಅಂಬೇಡ್ಕರ್ ಗೂ ಗೌರವ ಸಲ್ಲಿಸಲಾಯಿತು. ಈ ಕಾರ್ಯಕ್ರಮವನ್ನು ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಅವರು ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ಪರವಾಗಿ ಆಯೋಜಿಸಿದ್ದರು.[ಬಸವಣ್ಣ, ರಾಮಾನುಜರ ನೆನೆದು ಬೇಸಿಗೆಗೆ ತಂಪೆರೆದ ಮನ್ ಕೀ ಬಾತ್]

Buddha & Ambedkar remembered on the 883rd birth anniversary of Basaveshwara in London

ಇದೇ ವೇಳೆ ಮಾತನಾಡಿದ ಪಾಟೀಲ್, ಬಸವೇಶ್ವರರ ಜಯಂತಿ ಅಚರಿಸುವ ವೇಳೆಯೇ ಬುದ್ಧ ಹಾಗೂ ಅಂಬೇಡ್ಕರ್ ಗೂ ಗೌರವ ಸಲ್ಲಿಸುತ್ತಿದ್ದೇವೆ. ಈ ಮೂವರ ಮಧ್ಯೆ ಆಲೋಚನೆ ವಿಚಾರದಲ್ಲಿ ಸಂಬಂಧ ಏರ್ಪಟ್ಟಿದೆ. ಜಾತೀಯತೆ ಆಧಾರದಲ್ಲಿ ಮಾಡುವ ಭೇದ-ಭಾವದ ವಿರುದ್ಧ ಮೂವರೂ ಹೋರಾಟ ನಡೆಸಿದವರು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The 883rd Birth Anniversary of Basaveshwara was celebrated in London. The High commissioner of India Mr. Y.K. Sinha paid tribute to Basaveshwara statue at Albert embankment in London.
Please Wait while comments are loading...