• search

ಕಲ್ಲು ತುಂಬಿಸುವವ ಮ್ಯಾನೇಜರ್ ಆದ ಹಿಂದಿನ ಯಶಸ್ಸಿನ ಕಥೆ

By ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಊರಿನ ಆಝ್ಮಿರ್ ಲಾರಿಯಲ್ಲಿ ಕಲ್ಲು ಲೋಡ್ ಮಾಡುತ್ತಿದ್ದ ಈ ವ್ಯಕ್ತಿ ಕಲಿತದ್ದು ನಾಲ್ಕನೇ ಕ್ಲಾಸು, ಬಡತನದ ಕಾರಣ ತನ್ನ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದ. (ಈ ಲೇಖನದ ಕಥಾನಾಯಕ ತನ್ನ ಭಾವಚಿತ್ರ, ಹೆಸರು ಪ್ರಕಟಿಸ ಬಾರದೆಂದು ಮನವಿ ಮಾಡಿಕೊಂಡಿದ್ದಾರೆ)

  ಆದರೆ ಈತನಿಗೆ ಅಕ್ಷರದ ಬಗ್ಗೆ ಅಪಾರ ಪ್ರೀತಿ. ಕನ್ನಡ ಮಾಧ್ಯಮಗಳಲ್ಲಿ ಇಂಗ್ಲಿಷ್ ಪಾಠಗಳು ಪ್ರಾರಂಭವಾಗುತಿದ್ದದ್ದು 5ನೇ ತರಗತಿಯ ನಂತರ. ಆದರೆ ನಾಲ್ಕನೇ ತರಗತಿವರೆಗೆ alphabetಗಳನ್ನು ಕಲಿಸಲಾಗುತಿತ್ತು.

  ಇದೇ ವಿದ್ಯೆಯನ್ನು ಉಪಯೋಗಿಸಿಕೊಂಡು ತಾನು ಚಹಾ ಕುಡಿಯಲು ಹೋದಾಗ ಹೋಟೇಲಿನಲ್ಲಿ ಸಿಗುತ್ತಿದ್ದ ಇಂಗ್ಲಿಷ್ ಪತ್ರಿಕೆಗಳನ್ನು ಅರ್ಥವಾಗದಿದ್ದರೂ ಓದುತ್ತಿದ್ದ. ಚಹಾ ಕುಡಿಯುವಾಗ ಕ್ಯಾಂಟೀನ್ ನಲ್ಲಿ ಅವಲಕ್ಕಿ ಹಾಕಿ ಕೊಡುತ್ತಿದ್ದ ಪತ್ರಿಕೆಯ ತುಂಡನ್ನು ಜೇಬಿನಲ್ಲಿ ಇಟ್ಡು ಕೊಳ್ಳುತ್ತಿದ್ದ.

  ಕೆಲಸ ಮುಗಿದ ನಂತರ, ಅದರಲ್ಲಿ ಬರೆದಿರುವ ಇಂಗ್ಲಿಷ್ ವಾಕ್ಯಗಳನ್ನು ಶಾಲೆಗೆ ಹೋಗುವ ಮಕ್ಕಳ ಬಳಿ ತಿಳಿದುಕೊಳ್ಳುತ್ತಿದ್ದ. ಹಾಗೂ ಊರಿನ ಶಾಲಾ ಮಕ್ಕಳ ಜೊತೆಗೆ ಇಂಗ್ಲಿಷ್ ನಲ್ಲಿ ಮಾತಾಡಲು ಪ್ರಯತ್ನಿಸುತ್ತಿದ್ದ, ಈತನ ಇಂಗ್ಲಿಷ್ ಎಲ್ಲರಿಗೂ ತಮಾಷೆಯ ವಸ್ತುವಾದರೂ ಆತ ಮಾತನಾಡುತ್ತಲೇ ಇದ್ದ.

  ಸಿಕ್ಕಿದ ಜನರಿಗೆಲ್ಲ ಗುಡ್ ಮಾರ್ನಿಂಗ್, ಹೌವ್ ಅರ್ ಯೂ ಎನ್ನುತ್ತಲೇ ಈತನ ದಿನಚರಿ ಶುರುವಾಗುತಿತ್ತು. ಯಾರು ಏನೇ ಅಂದರೂ ಈತ ಮಾತ್ರ ಕಲಿಯುತ್ತಲೇ ಇದ್ದ. ಒಂದು ದಿನ ಎಂದಿನಂತೆ ಕಲ್ಲು ಅನ್ಲೋಡ್ ಮಾಡಲು ಹೋದ ಮನೆಯಲ್ಲಿ(ಸೌದಿ ಅರೇಬಿಯಾದ ದಮಾಮ್) ಆಪರೇಟರು ಹುದ್ದೆಗೆ ಜನ ಬೇಕಂತೆ ನೀವು ಹೋಗ್ತೀರಾ ಎಂದು ಆ ಮನೆಗೆ ಬಂದಿದ್ದ ಸೌದಿಯಲ್ಲಿರುವ ಅನಿವಾಸಿ ಭಾರತೀಯರೊಬ್ಬರು ಕೇಳಿದರು.

  ಸಂಬಳದ ಬಗ್ಗೆ ವಿಚಾರಿಸಿದ ಈ ವ್ಯಕ್ತಿ, ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಂಡು ಸೌದಿಗೆ ಹೊರಟ. ತನ್ನ ಇಂಗ್ಲಿಷ್ ಮಾತಾಡುವ ಹುಚ್ಚು ಬಿಟ್ಟಿರದ ಆತ ಕೆಲಸಕ್ಕೆ ಸೇರಿದ ಕಂಪೆನಿಯಲ್ಲೂ ಹಾಗೆಯೇ ಮಾತು ಮುಂದುವರಿಸಿದ್ದ, ಫಿಲಿಪೈನ್ ದೇಶದ ಸಹೋದ್ಯೋಗಿಗಳ ಜೊತೆ ಮಾತಾಡಿ ಮಾತಾಡಿ ಈತನ ಇಂಗ್ಲಿಷ್ ಉತ್ತಮ ಎನ್ನುವ ಮಟ್ಟಕ್ಕೆ ತಲುಪಿತ್ತು.

  ಇವರ ಯಶಸ್ಸಿನ ಕಥೆಯನ್ನು ಸ್ಲೈಡಿನಲ್ಲಿ ಓದಿ..

  ಜರ್ಮನ್ ದೇಶದ ತಾಂತ್ರಿಕರಿಗೆ ಸಹಾಯಕನಾಗಿ

  ಜರ್ಮನ್ ದೇಶದ ತಾಂತ್ರಿಕರಿಗೆ ಸಹಾಯಕನಾಗಿ

  ಹೀಗೆ ದಿನ ಕಳೆಯಬೇಕಾದರೆ, ಹೊಸ ಮೆಷಿನನ್ನು ಜೋಡಿಸಲು ಬಂದ ಜರ್ಮನ್ ದೇಶದ ತಾಂತ್ರಿಕರಿಗೆ ಇವನನ್ನು ಸಹಾಯಕನಾಗಿ ನೇಮಿಸಲಾಗುತ್ತೆ. ಅವರು ಆ ಯಂತ್ರ ಜೋಡಿಸುವ ವಿಧಾನವನ್ನು ನೋಡಿ, ತನಗೆ ಸಂದೇಹ ಬಂದಾಗಲೆಲ್ಲ ಅದರ ಬಗ್ಗೆ ವಿಚಾರಿಸುತ್ತಾ, ಪ್ರಶ್ನೆ ಮಾಡುತ್ತಾ ಕೆಲಸ ಮಾಡುತ್ತಿದ್ದ, ತನ್ನ ಇಂಗ್ಲಿಷ್ ಕಲಿಕೆಯ ವ್ಯಾಮೋಹ ಆತನಿಗೆ ಅಲ್ಲೂ ವರದಾನವಾಗಿತ್ತು.

  ಇಂಗ್ಲಿಷ್ ಭಾಷಾ ವ್ಯಾಮೋಹ

  ಇಂಗ್ಲಿಷ್ ಭಾಷಾ ವ್ಯಾಮೋಹ

  ತಾಂತ್ರಿಕ ಅಭಿಯಂತರರ ಜೊತೆ ಮಾತಾಡಲು ಅನುಕೂಲವಾಗಿದ್ದು ಈತನ ಇಂಗ್ಲಿಷ್ ಭಾಷಾ ವ್ಯಾಮೋಹ. ಹೀಗೆ ಮುಂದುವರಿದು ಯಂತ್ರ ಪೂರ್ತಿ ಕಾರ್ಯಾರಂಭಗೊಳಿಸಿದ ನಂತರ ಜರ್ಮನ್ ತಾಂತ್ರಿಕರು ಮರಳಿ ಹೋದರು. ಒಟ್ಟು 160 ಯಂತ್ರಗಳನ್ನು ಅಳವಡಿಸಲಾಗಿತ್ತು. ಆ ಯಂತ್ರದ ನಕ್ಷೆಯನ್ನು ಮೆಕಾನಿಕ್ ಗಳಿಗೆ ಕೊಡಲಾಗಿತ್ತು ಯಾಕಂದ್ರೆ ಮುಂದೆ ಯಾವುದಾದರೂ ಸಮಸ್ಯೆ ಬಂದರೆ ಬೇಕಾಗಬಹುದೆಂದು.

  ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಎದುರಾದಾಗ

  ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಎದುರಾದಾಗ

  ಹೀಗೆ ದಿನ ಕಳೆದಂತೆ ಆ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಎದುರಾಯಿತು, ಯಾವೊಬ್ಬ ಮೆಕ್ಯಾನಿಕ್ ಸಮಸ್ಯೆ ಕಂಡು ಹಿಡಿಯುವಲ್ಲಿ ಸಫಲನಾಗಲಿಲ್ಲ. ಕೊನೆಗೆ ಜರ್ಮನ್ ತಾಂತ್ರಿಕ ಅಧಿಕಾರಿಗಳನ್ನೇ ಕರೆಯಬೇಕೆಂದು ಆಡಳಿತ ಮಂಡಳಿ ನಿರ್ಧರಿಸಿದಾಗ, ಲೇಖನದ ಕಥಾನಾಯಕ ತನ್ನ ಮ್ಯಾನೇಜರ್ ಬಳಿ ಕೇಳಿದ, ನಾನೊಮ್ಮೆ ಪ್ರಯತ್ನಿಸಲೇ ಎಂದು. ಅಲ್ಲಿದ್ದ ಮೆಕ್ಯಾನಿಕುಗಳು ಈತನ ಕುರಿತು ಕೊಂಕು ಮಾತಾಡಲು ಶುರು ಮಾಡಿದರು. ಆದರೆ ಮ್ಯಾನೇಜರ್, ಆಗಲಿ ಪ್ರಯತ್ನ ಮಾಡು ಎಂದು ಅನುಮತಿ ನೀಡಿದರು.

  ಪ್ರಶ್ನೆ ಮಾಡುತ್ತಿದ್ದದ್ದು ಸಹಾಯಕ್ಕೆ ಬಂತು

  ಪ್ರಶ್ನೆ ಮಾಡುತ್ತಿದ್ದದ್ದು ಸಹಾಯಕ್ಕೆ ಬಂತು

  ಯಂತ್ರ ಅಳವಡಿಕೆಯ ಸಮಯದಲ್ಲಿ ತಾನು ಕಲಿತಿದ್ದ ಇಂಗ್ಲಿಷ್ ಸಹಾಯದಿಂದ ಜರ್ಮನ್ ಅಧಿಕಾರಿಗಳಲ್ಲಿ ಪ್ರಶ್ಡೆ ಮಾಡುತ್ತಿದ್ದ ಆತ , ನಕ್ಷೆ ಹಾಗೂ ತನಗೆ ನೆನಪಿದ್ದ ಮಾರ್ಗಗಳ ಮೂಲಕ ಸಮಸ್ಯೆ ಕಂಡುಹಿಡಿದು ಯಂತ್ರ ಮತ್ತೆ ಚಾಲನೆ ಮಾಡುವಲ್ಲಿ ಯಶಸ್ಸನ್ನು ಪಡೆಯುತ್ತಾನೆ. ಆ ಮೂಲಕ ಎಲ್ಲರ ಶ್ಲಾಘನೆಗೆ ಒಳಗಾಗುತ್ತಾನೆ ಹಾಗೂ ಅಂದಿನಿಂದ ಮೆಕಾನಿಕಲ್ ಸೂಪರ್‌ ವೈಸರ್ ಆಗಿ ನೇಮಕಗೊಳ್ಳುತ್ತಾನೆ.

  ಈಗ ಈತ ಟೆಕ್ನಿಕಲ್ ಮ್ಯಾನೇಜರ್

  ಈಗ ಈತ ಟೆಕ್ನಿಕಲ್ ಮ್ಯಾನೇಜರ್

  ಇಂದಿಗೆ ಆತ ಆ ಕಂಪೆನಿಯಲ್ಲಿ ದುಡಿಯಲು ಶುರುಮಾಡಿ 21 ವರ್ಷಗಳಾಯಿತು. ಈಗ ಆತ ಟೆಕ್ನಿಕಲ್ ಮ್ಯಾನೇಜರ್. ತಮಾಷೆ ಏನಪ್ಪಾ ಅಂದ್ರೆ ಡಿಪ್ಲೊಮಾ ಇನ್ ಮೆಕಾನಿಕಲ್, ಬಾಚುಲರ್ ಆಪ್ ಇಂಜಿನಿಯರ್ ಇನ್ ಮೆಕಾನಿಕಲ್ ಕಲಿತವರು ಈತನ ಆದೇಶದ ಮೇರೆಗೆ ಕೆಲಸ ಮಾಡುತ್ತಿದ್ದಾರೆ. ಇಷ್ಟಕೆಲ್ಲಾ ಕಾರಣ ಈತನ ಇಂಗ್ಲಿಷ್ ಭಾಷೆ ಕಲಿಯುವ ಹುಚ್ಚು. ಇಲ್ಲದೇ ಇದ್ದಲ್ಲಿ ಆತ ಊರಿನಲ್ಲಿ ಈಗಲೂ ಅದೇ ವೃತ್ತಿಯಲ್ಲಿ ಇರುತ್ತಿದ್ದ. ಆತನ ಬೆಳವಣಿಗೆಗೆ ಕಾರಣವಾದದ್ದು ಕಲಿಯುವ ಹಾಗೂ ಪ್ರಶ್ನೆ ಮಾಡುವ ಉತ್ತಮ ಅಭ್ಯಾಸಗಳು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Success story of Kannadiga becomes Technical Manager in Saudi Arabia.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more