ಅ.29, 30ರಂದು ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ

By: ವೆಂಕಟ್, ಸಿಂಗಪುರ
Subscribe to Oneindia Kannada

ಕನ್ನಡ ಸಂಘ (ಸಿಂಗಪುರ) ತನ್ನ ತನ್ನ ಇಪ್ಪತ್ತನೇ ವರ್ಷದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದೆ. ಎರಡು ದಶಕಗಳ ನಿರಂತರ ಯಾತ್ರೆ, "ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ"ದ ಜಾತ್ರೆಯಾಗಿ ಮೆರೆಯಲಿದೆ.

ಅಕ್ಟೋಬರ್ 29 ಹಾಗೂ 30ರಂದು ಆಯೋಜಿಸಿರುವ ಸಿಂಗಪುರ ಕನ್ನಡಿಗರ ಸಮ್ಮಿಲನದ ಸಮಾವೇಶವು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಂಗೊಳಿಸಲಿದೆ. 'ಸಿಂಗಪುರ ಪಾಲಿಟೆಕ್ನಿಕ್ ಕನ್ವೆನ್ಷನ್ ಸೆಂಟರ್'ನ ಸಭಾಂಗಣ, ಶ್ರೀಗಂಧದ ಕಂಪಿನಿಂದ ಆವೃತಗೊಂಡು, ಕನ್ನಡದ ದಿವ್ಯ ಬೆಳಕಿನಲ್ಲಿ ಬೆಳಗಲಿದೆ. [ಸಿಂಗಪುರದ 'ಸಿಂಚನ'ದಿಂದ ಕಥೆ ಮತ್ತು ಕವನ ಸ್ಪರ್ಧೆ]

Singapore Kannada Cultural conference

Landomus ಸಹಭಾಗಿತ್ವದಲ್ಲಿ ನಡೆಯಲಿರುವ ಈ ಅಮೋಘ ಸಮ್ಮೇಳನವು ಕನ್ನಡ ಸಂಘ (ಸಿಂಗಪುರ)ದ ಇತಿಹಾಸದಲ್ಲಿ ಮರೆಯಲಾಗದ ಕಾರ್ಯಕ್ರಮವಾಗಲಿದೆ.

ನಮ್ಮ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅನೇಕಾನೇಕ ಕಾರ್ಯಕ್ರಮಗಳು ಈ ಸಮ್ಮೇಳನದಲ್ಲಿ ಅನಾವರಣಗೊಳ್ಳಲಿವೆ. ಸುಮಾರು 250ಕ್ಕೂ ನುರಿತ ಮತ್ತು ಉದಯೋನ್ಮುಖ ಕಲಾವಿದರ ಸಮಾಗಮಕ್ಕೆ ಆ ಎರಡು ದಿನಗಳು ಸಾಕ್ಷಿಯಾಗಲಿವೆ. [ಇಪ್ಪತ್ತರ ಹರೆಯದ ಹೊಸ್ತಿಲಲ್ಲಿ ಸಿಂಗಪುರ ಕನ್ನಡ ಸಂಘ]

Singapore Kannada Cultural conference

ಸಂಗೀತ, ಸಾಹಿತ್ಯ, ನೃತ್ಯ, ಹಾಸ್ಯ, ನಾಟಕ ಹಾಗೂ ಜನಪದ ಕಲೆಗಳ ಸಂಗಮ ಮೇಳೈಸಲಿದೆ. ಕರ್ನಾಟಕದಿಂದ ಆಗಮಿಸಲಿರುವ ಕಲಾವಿದರಿಂದ ನಮ್ಮ ಜನಪ್ರಿಯ ಜನಪದ ಕಲೆಗಳಾದ ಡೊಳ್ಳು ಕುಣಿತ, ವೀರಗಾಸೆ ಹಾಗೂ ಜನಪದ ಗೀತೆಗಳು ನಮ್ಮ ಪರಂಪರೆಯ ಸೊಬಗನ್ನು ಸಾರಲಿವೆ.

ರಾಜಕೀಯ ನಾಯಕರು, ಉದ್ಯಮಿಗಳು, ಕವಿವರ್ಯರು, ಸಿನಿಮಾ ಲೋಕದ ಗಂಧರ್ವರು ಮತ್ತು ವಿವಿಧ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭಾಂಗಣದ ಹೊರ ಆವರಣದಲ್ಲಿ ಪ್ರಾಯೋಜಕರ ಮಳಿಗೆಗಳು, ವೈವಿಧ್ಯಮಯ ಚಟುವಟಿಕೆಗಳು, ತಿಂಡಿ-ತಿನಿಸುಗಳು ಹಬ್ಬದ ವಾತಾವರಣವನ್ನು ಸೃಷ್ಟಿಸುವಲ್ಲಿ ಸಂದೇಹವಿಲ್ಲ.

ಎಲ್ಲರಿಗೆ ಸ್ವಾಗತ, ಬನ್ನಿ ಭಾಗವಹಿಸಿ!

ಕನ್ನಡ ಸಂಘ (ಸಿಂಗಪುರ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Singapore Kannada Samskruti Sammelana 2016 will be held on 29, 30th October, 2016 as part of 20th anniversary celebration of Kannada Sangha Singapore, in association with Landomus. Many artists, politicians will take part in this 2 days cultural extravaganza.
Please Wait while comments are loading...